ಭಾರತಕ್ಕೆ RCB ಸ್ಟಾರ್ಸ್ ವಿಲನ್ – ಡೇವಿಡ್ & ಹೇಜಲ್ ವುಡ್ ಟೆನ್ಷನ್
ಗೇಮ್ ಚೇಂಜಿಂಗ್ ಸ್ಟ್ರೆಂಥ್ ಹೇಗಿದೆ?

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ-20ಐ ಪಂದ್ಯ ಮಳೆಯಿಂದಾಗಿ ವಾಶ್ ಔಟ್ ಆಗಿದೆ. ಎರಡನೇ ಪಂದ್ಯ ನಾಳೆ ಅಂದ್ರೆ ಶುಕ್ರವಾರ ಮೆಲ್ಬೊರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ಶೆಡ್ಯೂಲ್ ಆಗಿದೆ. ಮೊದಲನೇ ಮ್ಯಾಚ್ ರಿಸಲ್ಟ್ ಬರದೇ ಇರೋದ್ರಿಂದ ಉಳಿದಿರೋ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನ ಗೆದ್ದವ್ರೇ ಸರಣಿ ಕೈವಶ ಮಾಡಿಕೊಳ್ತಾರೆ. ಸದ್ಯಕ್ಕೆ ಟಿ-20ಐ ಫಾರ್ಮೆಟ್ನಲ್ಲಿ ಧೂಳೆಬ್ಬಿಸ್ತಿರೋ ಭಾರತ ತಂಡಕ್ಕೆ ಮುಂದಿನ ಪಂದ್ಯಗಳಲ್ಲಿ ಆರ್ಸಿಬಿ ಆಟಗಾರರೇ ವಿಲನ್ ಆಗೋ ಥರ ಕಾಣ್ತಿದೆ. 18ನೇ ಸೀಸನ್ನಲ್ಲಿ ಬೆಂಗಳೂರು ತಂಡ ಕಪ್ ಗೆಲ್ಲೋಕೆ ಮೇನ್ ಪಿಲ್ಲರ್ಸ್ನಂತಿದ್ದ ಆ ಇಬ್ಬರೇ ಭಾರತ ತಂಡಕ್ಕೆ ಥ್ರೆಟ್ ಆಗ್ಬೋದು. ಟಿ-20ಐ ಫಾರ್ಮೆಟ್ನಲ್ಲಿ ಸ್ಟ್ರಾಂಗೆಸ್ಟ್ ಟೀಂಗಳಂದ್ರೆ ಭಾರತ ಮತ್ತು ಆಸ್ಟ್ರೇಲಿಯಾ. ಈ ಮಾದರಿಯಲ್ಲಿ ಭಾರತ ನಂಬರ್ 1ಸ್ಥಾನದಲ್ಲಿದ್ರೆ ಆಸೀಸ್ ತಂಡ ಸೆಕೆಂಡ್ ಪ್ಲೇಸ್ನಲ್ಲಿದೆ. 2024ರ ಟಿ-20 ವಿಶ್ವಕಪ್ ಬಳಿಕ ಇಬ್ರೂ ಕೂಡ ಮತ್ತಷ್ಟು ಸ್ಟ್ರಾಂಗ್ ಆಗಿದ್ದಾರೆ. ಪ್ರಸ್ತುತ ಸರಣಿಯಲ್ಲಿ ಗೆದ್ದ ತಂಡ 2024ರ ಟಿ-20 ವಿಶ್ವಕಪ್ನಲ್ಲೂ ಡಾಮಿನೇಟ್ ಮಾಡೋದ್ರಲ್ಲಿ ಡೌಟೇ ಇಲ್ಲ. ಎರಡೂ ಟೀಮ್ಗಳಲ್ಲೂ ದಿ ಬೆಸ್ಟ್ ಪ್ಲೇಯರ್ಸ್ ಇರೋದ್ರಿಂದ ಯಾವುದೇ ಕ್ಷಣದಲ್ಲೂ ಮ್ಯಾಚ್ ಟರ್ನಿಂಗ್ ಮಾಡೋ ಕೆಪಾಸಿಟಿ ಇದೆ. ಈ ಪೈಕಿ ಆರ್ಸಿಬಿ ತಂಡದಲ್ಲಿರೋ ಆಸೀಸ್ ಆಟಗಾರರಾದ ಟಿಮ್ ಡೇವಿಡ್ ಮತ್ತು ಜೋಶ್ ಹೇಜಲ್ ವುಡ್ ಅಂತೂ ಇನ್ನೂ ಡೇಂಜರಸ್.
ಇದನ್ನೂ ಓದಿ : ಮಳೆಗೆ ಕೊಚ್ಚಿಹೋಯ್ತು ಮ್ಯಾಚ್ – ಪಂದ್ಯ ರದ್ದಾದ್ರೂ ಭಾರತಕ್ಕೆ ಪ್ಲಸ್
ಮಿಡಲ್ ಆರ್ಡರ್ ನಲ್ಲಿ ಪವರ್ ಹಿಟ್ಟರ್ ಟಿಮ್ ಡೇವಿಡ್!
ಟಿ-20ಐ ಫಾರ್ಮೆಟ್ನಲ್ಲಿ ಜಗತ್ತಿನಲ್ಲಿ ಒನ್ ಆಫ್ ದಿ ಮೋಸ್ಟ್ ಡೇಂಜರಸ್ ಬ್ಯಾಟರ್ ಅಂದ್ರೆ ಅದು ಟಿಮ್ ಡೇವಿಡ್. ಸಿಂಗಾಪುರ ಮೂಲದ ಈ ಪವರ್ ಹಿಟ್ಟರ್ ಸದ್ಯ ಆಸ್ಟ್ರೇಲಿಯಾ ಪರ ಆಡ್ತಿದ್ದಾರೆ. ಪ್ರಸ್ತುತ ಆಸೀಸ್ ತಂಡದ ಮಿಡಲ್ ಆರ್ಡರ್ನ ಪಿಲ್ಲರ್ ಅಂದ್ರೂ ತಪ್ಪಾಗಲ್ಲ. ಓಪನಿಂಗ್ನಲ್ಲಿ ಟ್ರಾವಿಡ್ ಹೆಡ್, ಮಿಚೆಲ್ ಮಾರ್ಷ್, ಜೋಶ್ ಇಂಗ್ಲಿಶ್ರಂಥ ಟಫ್ ಕ್ವಾಲಿಟಿ ಪ್ಲೇಯರ್ಸ್ ಇದ್ರೂ ಮಿಡಲ್ ಆರ್ಡರ್ನಲ್ಲಿ ಫಿನಿಶಿಂಗ್ ರೋಲ್ ಪ್ಲೇ ಮಾಡೋ ಟಿಮ್ ಡೇವಿಡ್ ಎದುರಾಳಿ ತಂಡಗಳಿಗೆ ಮಾರಕವಾಗಿ ಬಿಡ್ತಾರೆ.
ಡೇಂಜರಸ್ ಟಿಮ್ ಡೇವಿಡ್!
ಮಿಡಲ್ ಆರ್ಡರ್ ಬ್ಯಾಟಿಂಗ್ ನ ಬೆಸ್ಟ್ ಫಿನಿಶರ್
170+ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟಿಂಗ್ ಪವರ್
ಬಿಗ್ ಹಿಟ್ ಮೂಲಕವೇ ವೇಗವಾಗಿ ರನ್ಸ್ ಕಲೆ
ಡೆತ್ ಓವರ್ ಗಳಲ್ಲಿ 10-20 ಎಕ್ಸ್ ಟ್ರಾ ರನ್ಸ್
64 ಪಂದ್ಯ, 55 ಇನ್ನಿಂಗ್ಸ್, 1507 ರನ್ಸ್, 168 SR
ಸೋ ಇದೆಲ್ಲಾ ಆಸ್ಟ್ರೇಲಿಯಾ ಪರ ಟಿಮ್ ಡೇವಿಡ್ ಕೊಡುಗೆ. ಇನ್ನು 2025ರ ಐಪಿಎಲ್ನಲ್ಲಿ ಆರ್ಸಿಬಿ ಪರ ಕಣಕ್ಕಿಳಿದಿದ್ದ ಡೇವಿಡ್ ಬೆಂಗಳೂರು ತಂಡ ಫಸ್ಟ್ ಟೈಂ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಮಿಡಲ್ ಆರ್ಡರ್ ನಲ್ಲಿ ಸ್ಫೋಟಕ ಇನ್ನಿಂಗ್ಸ್ ಕಟ್ಟಿದ್ರು. 12 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದ ಡೇವಿಡ್ 185ಪ್ಲಸ್ ಸ್ಟ್ರೈಕ್ ರೇಟ್ ನಲ್ಲಿ 187 ರನ್ಸ್ ಕಲೆ ಹಾಕಿದ್ರು. ಅದರಲ್ಲೂ 16 ಫೋರ್, 14 ಸಿಕ್ಸರ್ಗಳು ಬಂದಿದ್ವು. ಇದಾದ ಮೇಲೆ ಆಸೀಸ್ ಟಿ-20 ತಂಡದ ಖಾಯಂ ಪ್ಲೇಯರ್ ಆಗಿದ್ದಾರೆ. ಟಿ-20ಐ ಸರಣಿಗಳಲ್ಲಿ ರೆಕಾರ್ಡ್ ಬ್ರೇಕಿಂಗ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಹೀಗಾಗಿ ಭಾರತ ವಿರುದ್ಧದ ಪಂದ್ಯದಲ್ಲೂ ಟಿಮ್ ಡೇವಿಡ್ ಮಾರಕ ಆಗ್ಬಹುದು. ಇನ್ನು ಬೌಲಿಂಗ್ ಥ್ರೆಟ್ ಅಂದ್ರೆ ಒನ್ ಆಫ್ ದಿ ಬೆಸ್ಟ್ ವರ್ಲ್ಡ್ ಕ್ಲಾಸ್ ಬೌಲರ್ ಆಗಿರೋ ಜೋಶ್ ಹೇಜಲ್ ವುಡ್.
ಬೌಲಿಂಗ್ ನಲ್ಲಿ ಜೋಶ್ ಹೇಜಲ್ ವುಡ್ ಡಾಮಿನೇಷನ್!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್ ಬ್ರಹ್ಮಾಸ್ತ್ರವಾಗಿರೋ ಜೋಶ್ ಹೇಜಲ್ ವುಡ್ ಸದ್ಯ ಆಸ್ಟ್ರೇಲಿಯಾ ತಂಡದ ಆಲ್ ಫಾರ್ಮೆಟ್ ಪ್ಲೇಯರ್. ಟಿ-20ಐನಲ್ಲೂ ಸಾಲಿಡ್ ಫಾರ್ಮ್ನಲ್ಲಿದ್ದಾರೆ. ಭಾರತ ವಿರುದ್ಧದ ಟಿ-20ಐ ಸರಣಿಯಲ್ಲೂ ಡಾಮಿನೇಟ್ ಮಾಡೋ ಕ್ವಾಲಿಟೀಸ್ & ಸ್ಟ್ರೆಂಥ್ ಅವ್ರಲ್ಲಿದೆ. ಆಸ್ಟ್ರೇಲಿಯಾ ಪಾಲಿಗೆ ಸದ್ಯಕ್ಕೆ ಹೇಜಲ್ ಗಾಡ್ ಆಗಿದ್ದಾರೆ.
ಆಸ್ಟ್ರೇಲಿಯಾ ಪಾಲಿಗೆ ಹೇಜಲ್‘ಗಾಡ್’!
ಬೌಲಿಂಗ್ ನಲ್ಲಿ accuracy & consistency ಬೌಲರ್
ಬೌನ್ಸ್ & ಅಗ್ರೆಸ್ಸಿವ್ ಮೂಲಕ ಎದುರಾಳಿ ತಂಡಕ್ಕೆ ಹೊಡೆತ
ಪವರ್ ಪ್ಲೇ & ಡೆತ್ ಓವರ್ ಗಳಲ್ಲಿ ಬ್ರಹ್ಮಾಸ್ತ್ರ
ವಿಕೆಟ್ ಟೇಕರ್ ಆಗಿರೋ ಜೊತೆಗೆ ರನ್ ಕಂಟ್ರೋಲ್
58 ಇನ್ನಿಂಗ್ಸ್, 76 ವಿಕೆಟ್, 4/12 ಬೆಸ್ಟ್, 7.55 ಎಕಾನಮಿ
ಇನ್ನು 18ನೇ ಆವೃತ್ತಿಯಲ್ಲಿ ಆರ್ಸಿಬಿ ಪರ ಬೌಲ್ ಮಾಡಿದ್ದ ಹೇಜಲ್ ವುಡ್ ಬೆಂಗಳೂರು ಪರ ಪವರ್ ಪ್ಳೇ ಮತ್ತು ಡೆತ್ ಓವರ್ಗಳ ಹೀರೋ ಆಗಿದ್ರು. 12 ಪಂದ್ಯಗಳಿಂದ 22 ವಿಕೆಟ್ ತೆಗೆದು ಆರ್ಸಿಬಿಯ ಹೈಯೆಸ್ಟ್ ವಿಕೆಟ್ ಟೇಕರ್ ಆಗಿದ್ರು. ಸದ್ಯ ಆಸೀಸ್ ಪರ ಮೂರೂ ಫಾರ್ಮೆಟ್ನಲ್ಲಿ ದಿ ಬೆಸ್ಟ್ ಬೌಲರ್ ಆಗಿದ್ದಾರೆ. ಲೈನ್ ಌಂಡ್ ಲೆಂಗ್ತ್ ಅಕ್ಯುರೆಸಿಯಿಂದ್ಲೇ ಬ್ಯಾಟರ್ಗಳನ್ನ ಕಟ್ಟಿ ಹಾಕ್ತಾರೆ.

ನೋಡಿರಿ

