ಟಿಕ್ ಟಾಕ್ ಚಾಲೆಂಜ್ – ನಿದ್ದೆ ಮಾತ್ರೆ ನುಂಗಿದ್ದ ಬಾಲಕ ಸಾವು

ಟಿಕ್ ಟಾಕ್ ಚಾಲೆಂಜ್ – ನಿದ್ದೆ ಮಾತ್ರೆ ನುಂಗಿದ್ದ ಬಾಲಕ ಸಾವು

ಇಂದಿನ ದಿನಗಳಲ್ಲಿ ಮಕ್ಕಳಿಂದ ವೃದ್ದರವರೆಗೂ ಸೋಶಿಯಲ್ ಮೀಡಿಯಾ ಬಳಸುತ್ತಿದ್ದಾರೆ. ಅದರಲ್ಲಿ ಹೆಚ್ಚು ಲೈಕ್ ಗಳಿಸಬೇಕು, ಫಾಲೋವರ್ಸ್ ಜಾಸ್ತಿ ಮಾಡಿಕೊಳ್ಳಬೇಕು, ಅದರಲ್ಲಿ ಜನಪ್ರಿಯತೆ ಪಡೆಯಬೇಕು ಅಂತಾ ಏನೇನೋ ಪೋಸ್ಟ್ ಗಳನ್ನು ಹಾಕುತ್ತಿರುತ್ತಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚಾಲೆಂಜ್ ಗಳನ್ನು ಹಾಕಲಾಗುತ್ತಿದೆ. ಇಂತಹ ಚಾಲೆಂಜ್ ನಲ್ಲಿ ಭಾಗವಹಿಸಿ ಸಾಕಷ್ಟು ಮಂದಿ ಜೀವವನ್ನೇ ಕಳೆದುಕೊಂಡಿದ್ದಾರೆ. ಇದೀಗ  ಅಮೆರಿಕದ ಓಹಿಯೋದಲ್ಲಿ ಬಾಲಕನೊಬ್ಬ ಟಿಕ್ ಟಾಕ್ ಸವಾಲು ಸ್ವೀಕರಿಸಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.

ಇದನ್ನೂ ಓದಿ: ಯಾರದೋ ತಪ್ಪಿಗೆ ಯಾರಿಗೋ ಶಿಕ್ಷೆ – ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ 2 ವರ್ಷದ ಮಗು ಬಲಿ

ಟಿಕ್‌ ಟಾಕ್‌ ಒಂದು ಜನಪ್ರೀಯ ಆ್ಯಪ್. ಇದರಲ್ಲಿ ಕೋಟ್ಯಾಂತರ ಜನ ಸಕ್ರಿಯರಾಗಿದ್ದಾರೆ. ಈ ಅಪ್ಲಿಕೇಷನ್ ನಲ್ಲಿ ಹಲವು ರೀತಿಯ ಟ್ರೆಂಡ್‌ ಗಳು ಇರುತ್ತವೆ. ಒಬ್ಬರು ಚಾಲೆಂಜ್‌ ಹಾಕಿದರೆ, ಆ ಚಾಲೆಂಜ್‌ ನ್ನು ಸ್ವೀಕರಿಸಿ ಗೆಲ್ಲಬೇಕು. ಈ ಪ್ರಕ್ರಿಯೆಯನ್ನೇ ವಿಡಿಯೋ ಮಾಡಿ ಟಿಕ್‌ ಟಾಕ್‌ ನಲ್ಲಿ ಹಾಕುವುದು ಒಂದು ಬಗೆಯ ಟ್ರೆಂಡ್ ಆಗೋಗಿದೆ. ಅಮೆರಿಕದ ಓಹಿಯೋ ಮೂಲದ ಜಾಕೋಬ್ ಸ್ಟೀವನ್ಸ್ (13) ಎಂಬಾತ ಇದೇ ರೀತಿಯ ಸವಾಲನ್ನು ಸ್ವೀಕರಿಸಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.

ಜಾಕೋಬ್ ಸ್ಟೀವನ್ಸ್ ಇತ್ತೀಚೆಗೆ ತನ್ನ ಸ್ನೇಹಿತರ ಜೊತೆ ಚಾಲೆಂಜ್‌ ಸ್ವೀಕರಿಸುವ ಟ್ರೆಂಡ್‌ ನಲ್ಲಿ ಭಾಗಿಯಾಗಿದ್ದಾನೆ. ಸ್ನೇಹೀತರು ಸವಾಲು ಹಾಕಿದ್ದರೆಂದು ಜಾಕೋಬ್ ಸ್ಟೀವನ್ಸ್ 12 -14 ಬೆನಾಡ್ರಿಲ್ ಮಾತ್ರೆ ( ನಿದ್ರೆ ಅಮಲು ಬರಿಸುವ ಮಾತ್ರೆ) ಯನ್ನು ಸೇವಿಸಿದ್ದಾನೆ. ಇದು ಆತನಿಗೆ ಓವರ್‌ ಡೋಸ್‌ ಆಗಿದೆ. ಕೂಡಲೇ ಆತನನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮೃತಪಟ್ಟಿದ್ದಾನೆ.

suddiyaana