ಚಾಕೋಲೇಟ್ ತಿನ್ನೋ ಮುನ್ನ ಎಚ್ಚರ! – ಚಾಕೋಲೇಟ್​ಗಳಲ್ಲಿ ಅಪಾಯಕಾರಿ ಮಟ್ಟದಲ್ಲಿ ಸೀಸ​, ಕ್ಯಾಡ್ಮಿಯಂ ಪತ್ತೆ!

ಚಾಕೋಲೇಟ್ ತಿನ್ನೋ ಮುನ್ನ ಎಚ್ಚರ! – ಚಾಕೋಲೇಟ್​ಗಳಲ್ಲಿ ಅಪಾಯಕಾರಿ ಮಟ್ಟದಲ್ಲಿ ಸೀಸ​, ಕ್ಯಾಡ್ಮಿಯಂ ಪತ್ತೆ!

ಬಹುತೇಕರಿಗೆ ಚಾಕೋಲೇಟ್ ಅಂದರೆ ತುಂಬಾ ಇಷ್ಟ. ಅದರಲ್ಲೂ ಮಕ್ಕಳಂತೂ ಚಾಕೋಲೇಟ್ ಕಂಡರೆ ಬೇಕೇ ಬೇಕು ಅಂತಾ ಹಠ ಹಿಡಿತಾರೆ. ಆದ್ರೀಗ ಆತಂಕಕಾರಿ ವರದಿಯೊಂದು ಹೊರಬಿದ್ದಿದೆ. ಅದೇನೆಂದರೆ, ಚಾಕೋಲೇಟ್ ಉತ್ಪನ್ನಗಳಲ್ಲಿ ಮೂರನೇ ಒಂದು ಭಾಗದಷ್ಟು ಸೀಸ್​ ಮತ್ತು ಕ್ಯಾಡ್ಮಿಯಂ ಅಂಶ ಇರುವುದು ಅಧ್ಯಯನ ವರದಿಯಲ್ಲಿ ಬಹಿರಂಗವಾಗಿದೆ.

ಲಾಭೋದ್ದೇಶವಿಲ್ಲದ ಗ್ರಾಹಕ ವಕಾಲತ್ತು ಸಂಸ್ಥೆಯಾದ ಕನ್ಸ್ಯೂಮರ್​ ರಿಪೋರ್ಟ್ಸ್​ ಮಾಡಿದ ಅಧ್ಯಯನದಿಂದ ಗೊತ್ತಾಗಿದೆ.  ಡಾರ್ಕ್​ ಚಾಕೋಲೇಟ್ಸ್​ ಬಾರ್ಸ್​, ಮಿಲ್ಕ್​ ಚಾಕೋಲೇಟ್​ ಬಾರ್ಸ್​​, ಕೋಕೋ ಪೌಡರ್​, ಚಾಕೋಲೇಟ್​ ಚಿಪ್ಸ್​ ಮತ್ತು ಮಿಕ್ಸಸ್​ ಫಾರ್​ ಹಾಟ್​ ಕೊಕಾ, ಬ್ರೌನೀಸ್​ ಮತ್ತು ಚಾಕೋಲೇಟ್​ ಕೇಕ್​ ಒಳಗೊಂಡಂತೆ 7 ವರ್ಗಗಳಲ್ಲಿ ಸುಮಾರು 48 ಉತ್ಪನ್ನಗಳನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಇದರಲ್ಲಿ 16 ಉತ್ಪನ್ನಗಳಲ್ಲಿ ಸೀಸ, ಕ್ಯಾಡ್ಮಿಯಂ ಅಥವಾ ಎರಡರ ಸಂಭಾವ್ಯ ಹಾನಿಕಾರಕ ಅಂಶಗಳು ಪತ್ತೆಯಾಗಿದೆ.

ಇದನ್ನೂ ಓದಿ: ಚಳಿ ಇದೆ ಅಂತಾ ಪದೇ ಪದೆ ಕಾಫಿ ಕುಡಿಯುವುದು ಡೇಂಜರ್?

ವಾಲ್ಮಾರ್ಟ್​ ಕಂಪನಿಯ ಚಾಕೋಲೇಟ್​ ಬಾರ್​ ಮತ್ತು ಹಾಟ್​ ಚಾಕೋಲೇಟ್​ ಮಿಕ್ಸ್​, ಹರ್ಷೆ ಮತ್ತು ದ್ರೋಸ್ತೆ ಕಂಪನಿಯ ಕೋಕಾ ಪೌಡರ್​, ಟಾರ್ಗೆಟ್​ ಕಂಪನಿ ಸೆಮಿ ಸ್ವೀಟ್​ ಚಾಕೋಲೇಟ್​ ಚಿಪ್ಸ್​ ಮತ್ತು ಟ್ರೇಡರ್​ ಜೋ, ನೆಸ್ಲೇ ಮತ್ತು ಸ್ಟಾರ್​ಬಕ್ಸ್​ ಕಂಪನಿಗಳ ಹಾಟ್​ ಚಾಕೋಲೇಟ್​ ಮಿಕ್ಸಸ್​ಗಳಲ್ಲಿ ಭಾರೀ ಪ್ರಮಾಣ ಸೀಸ ಮತ್ತು ಕ್ಯಾಡ್ಮಿಯಂ ಒಳಗೊಂಡಿದೆ. ಮಿಲ್ಕ್​ ಚಾಕೋಲೇಟ್​ ಬಾರ್​ಗಳಲ್ಲಿ ಕೆಲವೇ ಪ್ರಮಾಣ ಕೋಕಾ ಸಾಲಿಡ್​ಗಳು ಪತ್ತೆಯಾಗಿದ್ದು, ಅತ್ಯಧಿಕ ಲೋಹದ ಅಂಶ ಪತ್ತೆಯಾದ ಒಂದೇ ಒಂದು ವರ್ಗ ಇದಾಗಿದೆ. ಅಂದಹಾಗೆ ಸೀಸ ಮತ್ತು ಕ್ಯಾಡ್ಮಿಯಂಗೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ ನರಮಂಡಲದ ಸಮಸ್ಯೆಗಳು, ಪ್ರತಿರಕ್ಷಣಾ ವ್ಯವಸ್ಥೆಯ ನಿಗ್ರಹ ಮತ್ತು ಮೂತ್ರಪಿಂಡದಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ಅಪಾಯಗಳು ವಿಶೇಷವಾಗಿ ಗರ್ಭಿಣಿಯರು ಮತ್ತು ಚಿಕ್ಕ ಮಕ್ಕಳಿಗೆ ಹೆಚ್ಚಿರಲಿದೆ ಅಂತಾ ಅಧ್ಯಯನದಿಂದ ಗೊತ್ತಾಗಿದೆ. ಹಾಗಾಗಿ‌‌ ಇನ್ಮುಂದೆ ಚಾಕೊಲೇಟ್ ಖರಿಸೋ ಮುನ್ನ ಚಾಕೊಲೇಟ್ ಗೆ ಯಾವ ಕೆಮಿಕಲ್ ಹಾಕಿದಾರೆ ಅಂತಾ ಪರೀಕ್ಷಿಸಿಕೊಳ್ಳೋದು ಉತ್ತಮ.

Shwetha M