Tattoo ಹಾಕಿಸಿಕೊಳ್ಳುವಾಗ ಈ ತಪ್ಪು ಮಾಡಬೇಡಿ – ಟ್ಯಾಟೂ ಕ್ರೇಜ್ ಆರೋಗ್ಯಕ್ಕೆ ಎಷ್ಟು Danger?  

Tattoo ಹಾಕಿಸಿಕೊಳ್ಳುವಾಗ ಈ ತಪ್ಪು ಮಾಡಬೇಡಿ – ಟ್ಯಾಟೂ ಕ್ರೇಜ್ ಆರೋಗ್ಯಕ್ಕೆ ಎಷ್ಟು Danger?  

ನೀವೇನಾದ್ರೂ ಟ್ಯಾಟೂ ಹಾಕಿಸಿಕೊಂಡಿದ್ದೀರಾ, ಇಲ್ಲ ಹಾಕಿಸಿಕೊಳ್ಬೇಕು ಅಂತಾ ಪ್ಲ್ಯಾನ್ ಮಾಡಿದ್ದೀರಾ. ಹಾಗಾದ್ರೆ ನಿಮ್ಮ ಹೆಲ್ತ್ ಬಗ್ಗೆ ಕೇರ್ ಮಾಡಲೇಬೇಕು. ಯಾಕಂದ್ರೆ ಚೂರು ಯಾಮಾರಿದ್ರೂ ನಿಮಗೆ ಸಾಂಕ್ರಾಮಿಕ ರೋಗ ಹರಡಬಹುದು.

ಇದನ್ನೂ ಓದಿ : ಜಗತ್ತಿನ ಅತ್ಯಂತ ಶ್ರೀಮಂತ ದೇಶ ದಿವಾಳಿ ಎದ್ದ ಕಥೆ – ಶೇಕಡಾ 95 ರಷ್ಟು ಅಲ್ಲಿನ ಜನರಿಗೆ ಕಾಡುತ್ತಿದೆ ಬೊಜ್ಜಿನ ಸಮಸ್ಯೆ..!

ಹಿಂದೆಲ್ಲ ಕೈಗೆ ಹಚ್ಚೆ ಹಾಕಿಸಿಕೊಳ್ತಿದ್ರು. ಈಗ ಟ್ಯಾಟೂ ಹೆಸ್ರಲ್ಲಿ ಅದೇ ಫ್ಯಾಷನ್ ಆಗ್ಬಿಟ್ಟಿದೆ. ಸಾಮಾನ್ಯರಿಂದ‌ ಹಿಡಿದು ಸೆಲೆಬ್ರಿಟಿಗಳವರೆಗೂ ಟ್ಯಾಟೂ ಹಾಕಿಸಿಕೊಳ್ತಾರೆ. ಇನ್ನೂ ಕೆಲವ್ರು ಚಿತ್ರ ವಿಚಿತ್ರವಾಗಿ ಮೈತುಂಬಾ ಚಿತ್ತಾರ ಬಿಡಿಸಿಕೊಳ್ತಾರೆ. ಇದ್ರಲ್ಲಿ ಆದಾಯ ಇರೋದ್ರಿಂದ ಇದೊಂಥರಾ ದಂಧೆ ಕೂಡ ಆಗೋಗಿದೆ. ಗಲ್ಲಿ-ಗಲ್ಲಿಯಲ್ಲಿ ಟ್ಯಾಟೂ ಆರ್ಟಿಸ್ಟ್ ಗಳು‌ ಸಿಗ್ತಾರೆ. ಜಾತ್ರೆಗಳಲ್ಲೂ ಹಚ್ಚೆ ಹಾಕ್ತಾರೆ. ಆದ್ರೆ ನೀವು ಟ್ಯಾಟೂವನ್ನ ವೃತ್ತಿಪರರ ಕೈಯಲ್ಲಿ ಹಾಕಿಸಿಕೊಳ್ಳಬೇಕು. ಯಾಕಂದ್ರೆ ನಿಮ್ಮ ದೇಹದ ಮೇಲೆ ಚಿತ್ತಾರ ಮೂಡಲು ನೂರಾರು ಬಾರಿ ಸೂಜಿಯಿಂದ ಚುಚ್ಚಲಾಗುತ್ತೆ. ಸೂಜಿ ಚುಚ್ಚುವಾಗ ಟ್ಯಾಟೂ ಹಾಕಿಸಿಕೊಳ್ಳುವವರ ರಕ್ತದೊಂದಿಗೆ ಸಂಪರ್ಕ ಹೊಂದುತ್ತದೆ. ಕೆಲವೊಮ್ಮೆ ಅದೇ ಸೂಜಿ ಬಳಸುವ ಸಾಧ್ಯತೆ ಇರುತ್ತೆ. ಇದ್ರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ಹೀಗಾಗಿ ಟ್ಯಾಟೂ ಹಾಕಿಸಿಕೊಳ್ಳೋ ಮುನ್ನ ನಿಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ.

Shantha Kumari