ಅತಿಯಾದ ಸೋಶಿಯಲ್ ಮೀಡಿಯಾ ಬಳಕೆ ಡೇಂಜರ್ – ದಿನಕ್ಕೆ ಎಷ್ಟು ಹೊತ್ತು Social Media ಬಳಸಬೇಕು?

ಸ್ಮಾರ್ಮ್ ಫೋನ್ ಬಳಕೆದಾರರು ಸೋಶಿಯಲ್ ಮೀಡಿಯಾದಲ್ಲೇ ಫುಲ್ ಬ್ಯುಸಿ ಇರ್ತಾರೆ. ಯುವಜನತೆಯಂತೂ ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟ್ಟರ್ ಅಂತಾ ಟೈಂ ಪಾಸ್ ಮಾಡ್ತಾರೆ. ಈ ಬಗ್ಗೆ ವಿಶ್ವವಿದ್ಯಾನಿಲಯವೊಂದು ಅಧ್ಯಯನ ನಡೆಸಿದ್ದು, ಶಾಕಿಂಗ್ ಮಾಹಿತಿ ನೀಡಿದೆ.
ಸಾಮಾಜಿಕ ಜಾಲತಾಣಗಳ ಹೆಚ್ಚು ಬಳಕೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಅನ್ನೋದು ಗೊತ್ತಾಗಿದೆ. ಯುವಜನತೆ ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟ್ಟರ್ ನಲ್ಲೇ ಟೈಂ ಪಾಸ್ ಮಾಡ್ತಾರೆ. ಆದರೆ ವಿಶ್ವವಿದ್ಯಾನಿಲಯವೊಂದರಲ್ಲಿ ಇತ್ತೀಚೆಗೆ ನಡೆಸಲಾದ ಒಂದು ಅಧ್ಯಯನದ ಪ್ರಕಾರ, ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆಯಿಂದಾಗಿ ದೀರ್ಘಕಾಲೀನ ಅನಾರೋಗ್ಯ ಉಂಟಾಗುತ್ತದೆ. ಮಧುಮೇಹ, ಕೆಲವು ವಿಧವಾದ ಕ್ಯಾನ್ಸರ್ಗಳು ಮತ್ತು ಹೃದಯಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚುತ್ತವೆ. ಈ ಅಧ್ಯಯನದಲ್ಲಿ ಪಾಲ್ಗೊಂಡ ಸಾಮಾಜಿಕ ಮಾಧ್ಯಮಗಳನ್ನು ಹೆಚ್ಚು ಉಪಯೋಗಿಸುವ ವ್ಯಕ್ತಿಗಳು ಹೆಚ್ಚು ತಲೆನೋವು, ಎದೆ ಮತ್ತು ಬೆನ್ನುನೋವಿನ ತೊಂದರೆಗಳನ್ನು ಹೊಂದಿರುವುದಾಗಿಯೂ ಹೇಳಿದ್ದಾರೆ.
ಇದನ್ನೂ ಓದಿ : ಚಪ್ಪಲಿ ಅಥವಾ ಶೂ ಕಚ್ಚಿ ಕಾಲಿಗೆ ಗಾಯವಾಗಿದ್ಯಾ? – ಕಡೆಗಣಿಸಿದ್ರೆ ಕಾಡುತ್ತೆ ಗಂಭೀರ ಸಮಸ್ಯೆ!
ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆಯಿಂದ ಹದಿಹರಯದವರು ಮತ್ತು ಯುವಜನರಲ್ಲಿ ನಿದ್ರಾಹೀನತೆ, ಭಾವನಾತ್ಮಕ ಏರಿಳಿತಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ. ಈ ವಯಸ್ಸಿನವರಲ್ಲಿ ಆಲೋಚನೆಗಳು ಅಸ್ಥಿರವಾಗಿರುತ್ತವೆ; ಹೀಗಾಗಿ ಸಾಮಾಜಿಕ ಮಾಧ್ಯಮಗಳ ಅತಿ ಬಳಕೆಯಿಂದ ಅನಾರೋಗ್ಯಗಳು ಉಂಟಾಗಬಹುದು. ಸಾಕಷ್ಟು ಹೊತ್ತು ಉತ್ತಮ ಗುಣಮಟ್ಟದ ನಿದ್ದೆ ಮಾಡುವುದು ವ್ಯಕ್ತಿಯೊಬ್ಬನ ಹೃದಯ ಮತ್ತು ಮೆದುಳಿನ ಆರೋಗ್ಯಕ್ಕೆ ಅತ್ಯಗತ್ಯ. 16ರಿಂದ 24 ವರ್ಷ ವಯೋಮಾನದವರಲ್ಲಿ ನಡೆಸಲಾದ ಒಂದು ಅಧ್ಯಯನದ ಪ್ರಕಾರ, ದಿನಕ್ಕೆ 7.5 ತಾಸುಗಳಿಗಿಂತ ಹೆಚ್ಚು ಕಾಲ ಎಲೆಕ್ಟ್ರಾನಿಕ್ ಮಾಧ್ಯಮ ಉಪಕರಣ ಬಳಕೆ (ಇಎಂಡಿಯು) ಮಾಡುವವರಲ್ಲಿ ನಿದ್ದೆ ಬರುವ ತೊಂದರೆ, 15 ನಿಮಿಷಗಳಿಗಿಂತ ಹೆಚ್ಚು ಕಾಲದ ಸುಪ್ತ ನಿದ್ರೆ ಮತ್ತು ಒಟ್ಟು ನಿದ್ದೆಯ ಅವಧಿ 6 ತಾಸುಗಳಿಗಿಂತ ಕಡಿಮೆ ಇರುವುದು ಕಂಡುಬಂದಿದೆ. ನಿರಂತರವಾದ ನಿದ್ರಾಭಂಗವು ಪ್ರತಿಕೂಲವಾದ, ಸತತವಾದ ದೈಹಿಕ ಪರಿವರ್ತನೆಗಳನ್ನು ಉಂಟುಮಾಡಬಲ್ಲದಾಗಿದ್ದು, ಅಂತಿಮವಾಗಿ ಹೃದಯ ಅನಾರೋಗ್ಯಗಳು ಉದ್ಭವಿಸಲು ಪೂರಕ ಸ್ಥಿತಿಯನ್ನು ಸೃಷ್ಟಿಸುತ್ತದೆ. ಅಸಮರ್ಪಕ ಪ್ರಮಾಣ ಮತ್ತು ಕಳಪೆ ಗುಣಮಟ್ಟದ ನಿದ್ದೆ ಹಾಗೂ ಬೊಜ್ಜು ಮತ್ತು ಮಧುಮೇಹಕ್ಕೂ ನಿಕಟ ಸಂಬಂಧ ಇರುವುದನ್ನು ರೋಗಶಾಸ್ತ್ರೀಯ ದತ್ತಾಂಶಗಳು ಸಾಬೀತು ಪಡಿಸಿದ್ದು, ಇವೆರಡೂ ಕಾಯಿಲೆಗಳು ಹೃದ್ರೋಗಗಳು ತಲೆದೋರಲು ಅನುಕೂಲಕರ ಪರಿಸ್ಥಿತಿಯನ್ನು ಸೃಷ್ಟಿಸುತ್ತವೆ.
ದೈಹಿಕ ಚಟುವಟಿಕೆಯ ಕೊರತೆ, ಆಲಸ್ಯ ಮತ್ತು ಕಡಿಮೆ ದೈಹಿಕ ಸಾಮರ್ಥ್ಯಗಳಿಂದ ಬೊಜ್ಜು ಮತ್ತು ಹೃದ್ರೋಗಗಳು ತೀರಾ ಸಣ್ಣ ವಯಸ್ಸಿನಲ್ಲಿಯೇ ಆರಂಭವಾಗುತ್ತವೆ. ಅಧಿಕ ಸಮಯ ಸಾಮಾಜಿಕ ಮಾಧ್ಯಮಗಳನ್ನು ಉಪಯೋಗಿಸುವವರಲ್ಲಿ ಬೇಕಾಬಿಟ್ಟಿ ತಿಂಡಿ ತಿನಿಸು ಸೇವನೆಯ ಅಭ್ಯಾಸವೂ ಇರುತ್ತದೆ. ಸಾಮಾಜಿಕ ಮಾಧ್ಯಮಗಳನ್ನು ತೀವ್ರವಾಗಿ ಬಳಸುವವರಲ್ಲಿ ರಾತ್ರಿ ಸಮಯ ರಕ್ತದೊತ್ತಡ ಅಧಿಕವಾಗುತ್ತದೆ. ಜರ್ನಲ್ ಆಫ್ ಸೋಶಿಯಲ್ ಆಯಂಡ್ ಕ್ಲಿನಿಕಲ್ ಸೈಕಾಲಜಿಯ ಪ್ರಕಾರ, ದಿನಕ್ಕೆ 30 ನಿಮಿಷಗಳಷ್ಟು ಸಮಯವನ್ನು ಮಾತ್ರವೇ 3 ಆಯಪ್ಗ್ಳಲ್ಲಿ ವಿಭಜಿಸಿ ವಿನಿಯೋಗಿಸಬೇಕು. ಸಾಮಾಜಿಕ ಮಾಧ್ಯಮಗಳ ನೊಟಿಫಿಕೇಶನ್ಗಳನ್ನು ಮ್ಯೂಟ್ ಮಾಡುವುದು, ಸ್ಕ್ರೀನ್ ಸಮಯವನ್ನು ಕಡಿಮೆ ಮಾಡುವಂತಹ ಸಾಮಾಜಿಕ ಮಾಧ್ಯಮ ವ್ಯಸನವನ್ನು ನಿಯಂತ್ರಿಸುವ ವಿಧಾನಗಳು ಇದಕ್ಕೆ ಸಹಕಾರಿ.

ನೋಡಿರಿ

