ಫಿನಾಲೆಗೂ ಮೊದ್ಲೇ ವಿನ್ನರ್ ಫಿಕ್ಸ್..! – ರುದ್ರ ಮಾಸ್ಟರ್‌ಗಾಗಿ ಕಂಠಿಗೆ ಮೋಸ?
ಕಾವ್ಯಾ ಜೋಡಿಗೆ ಅಪ್ಪು ಟ್ರೋಫಿ
ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಡಾನ್ಸ್ ಕರ್ನಾಟಕ ಡಾನ್ಸ್ ಶೋಗೆ ತೆರೆ ಬಿದ್ದಿದೆ. ಹತ್ತಾರು ವಾರಗಳಿಂದ ಡ್ಯಾನ್ಸ್ ಮಾತ್ರವಲ್ಲದೆ, ಕಾಮಿಡಿ ಕಿಕ್ ಕೊಡ್ತಿರೋ ಡಿಕೆಡಿ ಫಿನಾಲೆ ಭರ್ಜರಿಯಾಗಿಯೇ ನಡೆದಿದೆ. ಮೂಲಕ ಫಿನಾಲೆಯಲ್ಲಿದ್ದ ಏಳು ಜೋಡಿಗಳ ಪೈಕಿ ಯಾರು ವಿಜೇತರು? ಅಪ್ಪು ಟ್ರೋಫಿಗೆ ಎತ್ತಿ ಹಿಡಿದವರು ಯಾರು ಎಂಬ ಕುತೂಹಲಕ್ಕೂ ತೆರೆ ಬಿದ್ದಿದೆ. ಅಷ್ಟಕ್ಕೂ ಈ ಸೀಸನ್‌ನ ವಿನ್ನರ್ ಪಟ್ಟ ನ್ಯಾಯವಾಗಿ ಸಿಕ್ತಾ? ನಿಜವಾದ ಪ್ರತಿಭೆಗೆ ಮೋಸ ಆಯ್ತಾ? ವೀಕ್ಷಕರು ಹೇಳ್ತಿರೋದೇನು? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಬೀನ್ ಬ್ಯಾಗ್ ಹಿಡಿದು ದೊಡ್ಮನೆಗೆ ಬಂದ ಸಂತು, ಪಂತು – ಚೈತ್ರಾಗೆ ಟಾಂಗ್ ಕೊಟ್ಟಿದ್ಯಾಕೆ ಡ್ರೋನ್?
ಈ ಬಾರಿಯ ಡಿಕೆಡಿ ವೀಕ್ಷಕರಿಗೆ ಸಖತ್ ಮನರಂಜನೆ ನೀಡಿತ್ತು.. ಡ್ಯಾನ್ಸ್ ಮಾತ್ರವಲ್ಲದೇ ಕಾಮಿಡಿ, ಸ್ಪರ್ಧಿಗಳ ಪಂಚಿಂಗ್ ಡೈಲಾಗ್ಸ್ ವೀಕ್ಷಕರನ್ನ ಮೋಡಿ ಮಾಡಿತ್ತು.. ಡ್ಯಾನ್ಸ್ ಅಂದ್ರೆ ಬರದವರು ಕೂಡ ಸ್ಟೇಜ್ ಮೇಲೆ ಹೆಜ್ಜೆ ಹಾಕಿ ತಾವೂ ಡ್ಯಾನ್ಸರ್ ಅಂತಾ ಪ್ರೂವ್ ಮಾಡಿದ್ರು.. ಡಿಕೆಡಿ ಶೋನಲ್ಲಿ ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್ ಈ ಕಾರ್ಯಕ್ರಮದ ಮಹಾಗುರು ಆಗಿದ್ರು. ಇನ್ನು ಕ್ರೇಜಿ ಕ್ವೀನ್ ರಕ್ಷಿತಾ, ಡಾನ್ಸ್ ಮಾಸ್ಟರ್ ಚಿನ್ನಿ ಪ್ರಕಾಶ್, ಚಿನ್ನಾರಿ ಮುತ್ತ ವಿಜಯ್ ರಾಘವೆಂದ್ರ ತೀರ್ಪುಗಾರರ ಸ್ಥಾನದಲ್ಲಿದ್ದರು. ವಿನ್ನರ್ ಯಾರು, ರನ್ನರ್ ಯಾರು ಅನ್ನೋ ಕುತೂಹಲಕ್ಕೆ ತೆರೆಬಿದ್ದಿದೆ..
ಇದೇ ಮೊದಲ ಬಾರಿಗೆ ಡಿಕೆಡಿಯಲ್ಲಿ ಏಳು ಫೈನಲಿಸ್ಟ್ಗಳನ್ನು ಆಯ್ಕೆ ಮಾಡಲಾಗಿತ್ತು. ಈಗಾಗಲೇ ಫೈನಲಿಸ್ಟ್ ಸ್ಥಾನದಲ್ಲಿ ಗಿಲ್ಲಿ ನಟ ಹಾಗೂ ಹನಿಷಾ, ಜಾಹ್ನವಿ ಹಾಗೂ ಕಂಠಿ, ಶಂಶಾಕ್ ಹಾಗೂ ಕಾವ್ಯಾ, ಗಗನಾ ಹಾಗೂ ಉಜ್ವಲ್, ನಿತಿನ್ ಹಾಗೂ ಶ್ರೀವಲ್ಲಿ, ಯಶಸ್ವಿನಿ ಹಾಗೂ ಚೆರಿ ಮತ್ತು ಶಂಶಾಕ್ ಹಾಗೂ ಪ್ರಿಯ ರೇಸ್ನಲ್ಲಿದ್ದರು. ಇವರ ಪೈಕಿ ಶಂಶಾಕ್ ಹಾಗೂ ಕಾವ್ಯಾ ವಿನ್ನರ್ ಪಟ್ಟ ಒಲಿದಿದ್ದು, ಅಪ್ಪು ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.ಈ ಮೂಲಕ ಡ್ಯಾನ್ಸ್ ಕೊರಿಯೋಗ್ರಾಫರ್ ರುದ್ರ ಮಾಸ್ಟರ್ ಮತ್ತೊಮ್ಮೆ ನಾವೊಬ್ಬ ಬೆಸ್ಟ್ ಕೊರಿಯೋಗ್ರಾಫರ್ ಅನ್ನೋದನ್ನೂ ತೋರಿಸಿಕೊಂಡಿದ್ದಾರೆ. ಇನ್ನೂ ಫಸ್ಟ್ ರನ್ನರ್ ಅಪ್ ಆಗಿ ನಿತಿನ್ ಹಾಗೂ ಶ್ರೀವಲ್ಲಿ ಹೊರಹೊಮ್ಮಿದ್ದಾರೆ. ಅಲ್ಲದೇ 2ನೇ ರನ್ನರ್ ಅಪ್ ಆಗಿ ಜಾಹ್ನವಿ ಹಾಗೂ ಕಂಠಿ ಹೊರಹೊಮ್ಮಿದ್ದಾರೆ.
ಇನ್ನು ಡಿಕೆಡಿ ಶೋನಲ್ಲಿ ವಿಜೇತರಾದ ಶಶಾಂಕ್ ಮತ್ತು ಕಾವ್ಯಾಗೆ ಪುನೀತ್ ರಾಜ್‌ಕುಮಾರ್ ಅವರ ಟ್ರೋಫಿ ಜತೆಗೆ 15 ಲಕ್ಷ ಮೌಲ್ಯದ ಚಿನ್ನದ ನಾಣ್ಯ ಸಿಕ್ಕಿದೆ. ಎರಡನೇ ರನ್ನರ್ ಅಪ್ ಆದವರಿಗೂ ನಗದು ಬಹುಮಾನದ ಜತೆಗೆ ನೆನಪಿನ ಕಾಣಿಕೆಯನ್ನೂ ನೀಡಲಾಗಿದೆ. ವೈಟ್ ಗೋಲ್ಡ್ ಕಡೆಯಿಂದ ಸಿಹಿ ಮತ್ತು ಸುಮುಖ ಜೋಡಿಗೂ ತಲಾ 50 ಸಾವಿರ ಬಹುಮಾನ ಘೋಷಣೆ ಜತೆಗೆ ಗಿಲ್ಲಿ ನಟ ಅವರಿಗೆ 1 ಲಕ್ಷ ಬಹುಮಾನವನ್ನು ಅನೌನ್ಸ್ ಮಾಡಲಾಯ್ತು. ಶಿವಣ್ಣ ಮತ್ತು ಗೀತಾ ಅವರಿಂದ ಎಲ್ಲ ಕೋರಿಯೋಗ್ರಾಫರ್‌ಗಳಿಗೆ ಒಂದು ಲಕ್ಷ ಬಹುಮಾನ ಕೂಡಾ ಸಿಕ್ಕಿದೆ.
ಇನ್ನು ವಿನ್ನರ್ ರನ್ನರ್ ಯಾರು ಅನ್ನೋದು ಅನೌನ್ಸ್ ಆಗ್ತಿದ್ದಂತೆ ಕೆಲ ವೀಕ್ಷಕರು ಅಸಮಧಾನ ಹೊರ ಹಾಕಿದ್ದಾರೆ.. ನಿಜವಾದ ಪ್ರತಿಭೆಗೆ ಮೋಸ ಆಯ್ತು ಅಂತಾ ಸೋಶಿಯಲ್ ಮೀಡಿಯಾದಲ್ಲಿ ಕಿಡಿ ಕಾರಿದ್ದಾರೆ. ಸರಿಯಾದ ತೀರ್ಪುಗಾರರು ಅಲ್ಲಿ ಇಲ್ಲಾ ಅಂದಮೇಲೆ ಸರಿಯಾದ ತೀರ್ಪು ಎಲ್ಲಿ ಸಿಗುತ್ತೆ ಹೇಳಿ.. ಕರ್ನಾಟಕ ಜನತೆ ಪ್ರಕಾರ ರಿಯಲ್ ವಿನ್ನರ್ ಜೋಡಿ ಕಂಠಿ ಮತ್ತು ಜಾಹ್ನವಿ.. ಇಲ್ಲಿ ಶಶಾಂಕ್ ಮತ್ತು ಕಾವ್ಯ ಗೆದ್ದಿರೋದು ಜಸ್ಟ್ ಒಂದು ಅಪ್ಪು ಸರ್ ಟ್ರೊಫಿ.. ಬಟ್ ಕಂಠಿ ಮತ್ತೆ ಜಾಹ್ನವಿ ಗೆದ್ದಿದ್ದು ಕೋಟಿ ಕೋಟಿ ಜನತೆಯ ಪ್ರೀತಿ.. ಅಂತಾ ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಈ ಟ್ರೋಫಿ ಗಿಲ್ಲಿ ಮತ್ತು ಕಂಠಿ ಗೆ ಸಿಗಬೇಕಿತ್ತು… ಇಡೀ DKD ಕಾರ್ಯಕ್ರಮ ನೋಡಿದ್ದೇ ಗಿಲ್ಲಿ ಕಾಮಿಡಿ ಗೋಸ್ಕರ… ನಿಜವಾಗ್ಲೂ ಗಿಲ್ಲಿ ಗೆ ಮೋಸವಾಯಿತು… ಇಲ್ಲಿ ಕಾಮೆಂಟ್ ಬಾಕ್ಸ್ ಅಲ್ಲಿ ತುಂಬಾ ಜನ ಕಂಠಿ ಹಾಗೂ ಗಿಲ್ಲಿಗೆ ಟ್ರೋಫಿ ಸಿಗಬೇಕಾಗಿತ್ತು ಅಂತ ಹೇಳಿದ್ದಾರೆ. ದಯವಿಟ್ಟು ಕಂಠಿ ಅವರ ಧಾರಾವಾಹಿಯ ಪಾಪ್ಯುಲರಿಟಿ ಹಾಗೂ ಗಿಲ್ಲಿಯ ಕಾಮಿಡಿ ಟೈಮಿಂಗ್ ನೋಡಿ ಕಾಮೆಂಟ್ ಮಾಡಬೇಡಿ. ಇದು ಡಾನ್ಸ್ ರಿಯಾಲಿಟಿ ಶೋ. ಇಲ್ಲಿ ಇಡೀ ಸೀಸನ್ ಈ ಜೋಡಿ ತುಂಬಾ ಚೆನ್ನಾಗಿ ಡಾನ್ಸ್ ಮಾಡಿದ್ದಾರೆ ಸರಿಯಾದ ಆಯ್ಕೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಈ ಬಾರಿ ಶೋ ನೋಡಿದವ್ರು ಗಿಲ್ಲಿ ಕಾಮಿಡಿನಾ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ. ಆದ್ರೆ, ಇದು ಕಾಮಿಡಿ ಶೋ ಅಂತೂ ಆಗಿರಲಿಲ್ಲ. ಇದು ಡ್ಯಾನ್ಸ್ ಮಾಡೋ ಪ್ರತಿಭೆಗಳಿಗೆ ಕೊಟ್ಟ ವೇದಿಕೆ ಅನ್ನೋದು ಎಲ್ಲಿರಗೆ ಗೊತ್ತಿದೆ. ಆದ್ರೆ, ಇಲ್ಲಿ ವೀಕ್ಷಕರಿಗೆ ಬೇಜಾರಾಗಿರೋದು ಶ್ರೀವಲ್ಲಿ ಕೂಡಾ ಬೆಸ್ಟ್ ಡ್ಯಾನ್ಸ್ ಫರ್ಫಾಮೆನ್ಸ್ ತೋರಿಸಿದ್ದಾರೆ. ಜೊತೆಗೆ ಡ್ಯಾನ್ಸ್ ಅಂತಾ ಬಂದಾಗ ಕಂಠಿ ಎಫರ್ಟ್ ಮೆಚ್ಚಲೇಬೇಕು. ಇಲ್ಲಿ ರುದ್ರಮಾಸ್ಟರ್‌ಗೆ ಎಲ್ಲೋ ಒಂದು ಕಡೆ ಫೇವರಿಸಂ ತೋರಿಸಿದ್ರಾ ಅನ್ನೋ ಅನುಮಾನವೂ ಇದೆ. ಅದೇನೇ ಇರಲಿ, ಕಾವ್ಯಾ ಮತ್ತು ಶಶಾಂಕ್ ಕೂಡಾ ಬೆಸ್ಟ್ ಡ್ಯಾನ್ಸರ್ಸೇ.. ಹೀಗಾಗಿ ವಿನ್ನರ್ ಪಟ್ಟ ಅವರ ಮುಡಿಗೇರಿದೆ.