ದೇವರ ಮಗ ಸೂಪರ್ ಸ್ಟಾರ್.. ತ್ರಿಮೂರ್ತಿಗಳ ಮನಗೆದ್ದ ಪ್ರೀತಮ್ – ಅರ್ಜುನನ ಹಾರವೇ ಆಶೀರ್ವಾದ!

ಮಕ್ಕಳು ಏನ್ ಮಾಡಿದರೂ ಚೆಂದ. ಕುಣಿದ್ರೂ ಚೆಂದ, ಹಾಡಿದ್ರೂ ಚೆಂದ, ಓಡಾಡಿದ್ರೂ ಚೆಂದ, ಆಟವಾಡಿದ್ರೂ ಚೆಂದ. ಅದರಲ್ಲೂ ಈಗಿನ ಮಕ್ಕಳು ಈ ಕಾಲದಲ್ಲಿ ಸಿಕ್ಕಾಪಟ್ಟೆ ಟ್ಯಾಲೆಂಟ್ ಇಟ್ಕೊಂಡೇ ಬೆಳೀತಿರ್ತಾರೆ. ಅದ್ರಲ್ಲೊಬ್ಬ ಈ ಸೂಪರ್‌ಸ್ಟಾರ್. ಹೌದು. 7 ವರ್ಷದ ಪೋರ ಪ್ರೀತಮ್ ಬಗ್ಗೆ ನಾವು ಹೇಳಲೇಬೇಕು. ಶಿವ ಮೆಚ್ಚಿದ ಮಗ, ಅರ್ಜುನನ ಮನಗೆದ್ದ ಕಂದ, ಅಷ್ಟೇ ಏಕೆ, ಇಡೀ ಕರ್ನಾಟಕವೇ ಮೆಚ್ಚಿದ ಈ ಪೋರ ತ್ರಿಮೂರ್ತಿಗಳನ್ನೇ ಬೆರಗು ಮಾಡಿದ್ದಾನೆ.
ಇದನ್ನೂ ಓದಿ: ಪೈರಸಿ ವಿರುದ್ಧ ಕಿಚ್ಚನ ಯುದ್ಧ – ಕಾಲ್ಕೆರೆದು ಬಂದ್ರಾ ಸೆಲೆಬ್ರಿಟಿಸ್?
ಉತ್ತರಕರ್ನಾಟಕದ ಗದಗ್‌ನ ಲಿಟ್ಲ್ ಮಾಸ್ಟರ್ ಈ 7 ವರ್ಷದ ಪ್ರೀತಮ್. ಡಿಕೆಡಿ ಸ್ಟೇಜ್‌ನಲ್ಲಿ ಪ್ರೀತಮ್‌ನದ್ದೇ ಹವಾ. ನಿಜ ಹೇಳ್ಬೇಕೆಂದರೆ, ಈತನೇ ಇಲ್ಲಿನ ಸೂಪರ್‌ಸ್ಟಾರ್. ಪ್ರತಿವಾರ ಪ್ರೀತಮ್ ಡ್ಯಾನ್ಸ್ ನೀವೆಲ್ಲಾ ನೋಡೇಇರ್ತೀರಾ. ಈ ವೀಕೆಂಡ್ ಮಾತ್ರ ಪ್ರೀತಮ್ ಡ್ಯಾನ್ಸ್ ಎಕ್ಷ್ಚಾ ಆರ್ಡನರಿಯಾಗಿತ್ತು. ಈ ವಾರ ಡಿಕೆಡಿ ಸ್ಟೇಜ್‌ಗೆ ರಿಯಲ್‌ಸ್ಟಾರ್ ಉಪೇಂದ್ರ, ಟ್ಯಾಲೆಂಟೆಡ್ ಡೈರೆಕ್ಟರ್ ಕಮ್ ಆಕ್ಟರ್ ರಾಜ್.ಬಿ ಶೆಟ್ಟಿ ಬಂದಿದ್ರು. ಇವರನ್ನು ವೆಲ್‌ಕಮ್ ಮಾಡಿದ ಕೂಡ್ಲೇ ಶುರುವಾಗಿದ್ದು ಪ್ರೀತಮ್ ಡ್ಯಾನ್ಸ್. ಸು ಫ್ರಮ್ ಸೋ ಸಿನಿಮಾದ ರವಿಯಣ್ಣನ ಥರಾ ಗೆಟಪ್.. ಥೇಟ್ ಜ್ಯೂನಿಯರ್ ರವಿಯಣ್ಣ. ಬಂದರೋ ಬಂದರೋ ಭಾವ ಬಂದರೋ ಹಾಡಿಗೆ ಪ್ರೀತಮ್ ಹಾಕಿರೋ ಸ್ಟೆಪ್ ನೋಡಿ ರಾಜ್ ಬಿ ಶೆಟ್ಟಿ ಕುಂತಲ್ಲೇ ಕುಣಿಯುತ್ತಿದ್ರು. ಉಪ್ಪಿಯಂತೂ ಸಖತ್ ಥ್ರಿಲ್ ಆಗಿದ್ರು. ಶಿವಣ್ಣ ಅಂತೂ ಪ್ರೀತಮ್ ಡ್ಯಾನ್ಸ್ ಗೆ ಹೆಜ್ಜೆ ಹಾಕ್ತಿದ್ರು. ರಚ್ಟು ಮತ್ತು ರಾಘು ಕೂಡಾ ಎಂಜಾಯ್ ಮಾಡ್ತಿದ್ರು. ಇನ್ನು ಸು ಪ್ರಮ್ ಸೋ ಡಿಜೆ ಸಾಂಗ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೇ ಸ್ಟೆಪ್ ಪ್ರೀತಮ್ ಹಾಕಿದಾಗ ಇಡೀ ಡಿಕೆಡಿ ಸ್ಟೇಜೇ ಅಲ್ಲಾಡುವಂತೆ ಎಲ್ರೂ ಶಿಳ್ಳೆ, ಚಪ್ಪಾಳೆ, ಕುಣಿಯುವ ಮೂಲಕ ಎಂಜಾಯ್ ಮಾಡಿದ್ರು. ಇನ್ನೊಂದು ಡೈಲಾಗ್ ಬೇರೆ ಪುಟಾಣಿ ಬಾಯಲ್ಲಿ ಬಂದಿದ್ದು ಮತ್ತಷ್ಟು ಸರ್‌ಪ್ರೈಸ್ ಆಗಿತ್ತು. ಯಾಕ್ ರವಿಯಣ್ಣ ಬಿದ್ರಾ..? ಅಂತಾ ಕೇಳಿದ್ರೆ, ಇಲ್ಲಾ ಮಾರಾಯ, ಅದು ಸ್ಟೆಪ್ಪು ಅಂತಾ ಪ್ರೀತಮ್ ಮುದ್ದಾಗಿ ಹೇಳಿದ್ದು ಇನ್ನೂ ಸ್ಪೆಷಲ್ ಆಗಿತ್ತು. ಇದ್ರ ಮಧ್ಯೆ ಪ್ರಭುದೇವ ಸ್ಟೆಪ್ ಅಂತೂ ಸೂಪರ್.. ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ಪೋರನ ಕುಣಿತಕ್ಕೆ ಖುಷಿಪಟ್ಟ ರೀತಿ ನೋಡಿ ವೀಕ್ಷಕರು ಕೂಡಾ ಸಂಭ್ರಮಿಸಿದ್ದಾರೆ. ನಂತರ ರಾಜ್ ಶೆಟ್ಟಿ ಪ್ರೀತಮ್‌ಗೆ ನೀನು ದೇವರು ಕೊಟ್ಟ ವರ ಅಂತಾ ಹೇಳಿದ್ರೆ, ಉಪ್ಪಿಯಂತೂ ನೀನೇ ದೇವರು ಅಂತಾ ಹೇಳಿದ್ರು. ಶಿವಣ್ಣ ಅಂತೂ ತನ್ನ ತೊಡೆ ಮೇಲೆ ಕೂರಿಸಿಕೊಂಡು ಮನಸಾರೆ ಮುದ್ದಾಡಿದ್ರು. ಇನ್ನು ಅರ್ಜುನ್ ಜನ್ಯ ಅಂತೂ ಪ್ರೀತಮ್ ಡ್ಯಾನ್ಸ್‌ಗೆ ತನ್ನ ಕೊರಳಿನ ಹಾರವನ್ನೇ ಉಡುಗೊರೆಯಾಗಿ ನೀಡಿದ್ರು. ನೀನು ಯಾವಾಗಲೂ ಸೂಪರ್ ಸ್ಟಾರ್. ಹೀಗಾಗಿ ನನ್ನ ಫೆವರೇಟ್ ಚೈನ್ ಸ್ಟಾರ್ ನಿನ್ನ ಕೊರಳಲ್ಲಿ ಇರಬೇಕು ಎಂದು ಹೇಳಿದ ಅರ್ಜುನ್ ಜನ್ಯ ಪ್ರೀತಮ್ ಕೊರಳಿಗೆ ಸ್ಟಾರ್ ಚೈನ್ ಹಾಕಿದ್ರು.
ಎಷ್ಟೋ ಮಕ್ಕಳಿಗೆ ಟ್ಯಾಲೆಂಟ್ ಇರುತ್ತೆ ನಿಜ. ಆದರೆ, ಪ್ರತಿಭೆ ಜೊತೆಗೆ ಮುಗ್ಧತೆಯಲ್ಲೇ ಮನಗೆದ್ದಿದ್ದಾನೆ ಪ್ರೀತಮ್. ಮಾತು ಕೂಡಾ ಅಷ್ಟೇ. ತನ್ನೆದುರು ಕುಳಿತ ಜಡ್ಜ್‌ಗಳನ್ನು ಮಾಸ್ಟರ್ ಅಂತಾನೇ ಕರೀತಾನೆ. ಈತನ ಮುಗ್ಧತೆ, ಮುಖದಲ್ಲಿ ಕಾಣಿಸುವ ದೈವಿಕ ಕಳೆಯೇ, ಮುಂದೊಂದು ದಿನ ಪ್ರೀತಮ್ ನನ್ನು, ಸೂಪರ್ ಸ್ಟಾರ್ ಮಾಡಿಸುತ್ತೆ ಅನ್ನೋ ತ್ರಿಮೂರ್ತಿಗಳ ಆಶೀರ್ವಾದ, ನಿಜವಾಗಲಿ ಅನ್ನೋದೇ ನಮ್ಮ ಹಾರೈಕೆ.

ನೋಡಿರಿ

