DKD ಪ್ರೀತಮ್ ಅಭಿಮಾನಿ ಶಿವಣ್ಣ! – ಡ್ಯಾನ್ಸ್‌ ಕಿಲಾಡಿ ಈಗ ಸೀರಿಯಲ್‌ ನಟ!

DKD ಪ್ರೀತಮ್ ಅಭಿಮಾನಿ ಶಿವಣ್ಣ! – ಡ್ಯಾನ್ಸ್‌ ಕಿಲಾಡಿ ಈಗ ಸೀರಿಯಲ್‌ ನಟ!

ಪ್ರೀತಮ್..‌ ಡಿಕೆಡಿಯಲ್ಲಿ ಸದ್ಯ ಈತನದ್ದೇ ದರ್ಬಾರ್‌.. ವಯಸ್ಸು ಜಸ್ಟ್‌ ಏಳು ವರ್ಷ ಆದ್ರೂ, ಆತನ ಪ್ರತಿಭೆ ಮಾತ್ರ ವಯಸ್ಸಿಗೂ ಮೀರಿದ್ದು. ಈತನ ಡ್ಯಾನ್ಸ್‌ಗೆ ಸೆಲೆಬ್ರಿಟಿಗಳು ಕೂಡ ಫುಲ್‌ ಫಿದಾ ಆಗಿದ್ದಾರೆ. ಇನ್ನು ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅವರಿಗಂತೂ ಪ್ರೀತಮ್‌ ಅಂದ್ರೆ ತುಂಬಾ ಇಷ್ಟ. ಡಿಕೆಡಿ ಸೆಟ್‌ಗೆ ಬಂದ್ರೆ ಶಿವಣ್ಣ ಮಗುವಾಗಿ ಬಿಡ್ತಾರೆ. ಪ್ರೀತಮ್‌ ಡ್ಯಾನ್ಸ್‌ ನೋಡ್ತಾ ಮೈ ಮರೆತು ಬಿಡ್ತಾರೆ. ಕಳೆದ ವೀಕ್‌ನಲ್ಲಂತೂ ಶಿವಣ್ಣ ಫುಲ್‌ ಎಮೋಷನಲ್‌ ಆಗಿದ್ರು. ಪ್ರೀತಮ್ ಕವಿರತ್ನ ಕಾಳಿದಾಸ ಸಿನಿಮಾದ ಹಾಡಿಗೆ ಡ್ಯಾನ್ಸ್‌ ಮಾಡಿದ್ದು, ಇದನ್ನು ನೋಡಿ ಶಿವರಾಜ್​​ಕುಮಾರ್ ಅವರು ಭಾವುಕರಾದ್ರು. ಇವೆಲ್ಲದ್ರ ಮಧ್ಯೆ ಪ್ರೀತಮ್‌ ಸೀರಿಯಲ್‌ಗೂ ಎಂಟ್ರಿಕೊಟ್ಟಿದ್ದಾನೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ 10ನೇ ತರಗತಿ ಬಾಲಕನ ಹ*ತ್ಯೆ ಕೇಸ್! -‌ ಸರ್ಕಾರದಿಂದ 15 ಲಕ್ಷ ರೂ ಪರಿಹಾರ ಘೋಷಣೆ

ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ವೀಕ್ಷಕರಿಗೆ ಜಬರ್‌ದಸ್ತ್‌ ಮನರಂಜನೆ ನೀಡ್ತಿದೆ. ವಾರದಿಂದ ವಾರಕ್ಕೆ ಸ್ಪರ್ಧಿಗಳ ನಡುವೆ ಟಫ್‌ ಫೈಟ್‌ ಏರ್ಪಟ್ಟಿದೆ. ಆದ್ರೆ ಈ ಗದಗ ಪ್ರೀತಮ್‌ ಮಾತ್ರ ಶೋನಲ್ಲಿ ಸಖತ್‌ ಹೈಲೈಟ್‌ ಆಗಿದ್ದಾನೆ. ವಯಸ್ಸಿಗೂ ಮೀರಿದ ಪ್ರತಿಭೆ ಅವನದ್ದು. ಸ್ಟೇಜ್‌ಗೆ ಬಂದು ಹೆಜ್ಜೆ ಹಾಕ್ಲಿಕ್ಕೆ ಶುರು ಮಾಡಿದ ಅಂದ್ರೆ ಎಲ್ಲರೂ ಮೈರೆತು ಬಿಡ್ತಾರೆ. ಅಷ್ಟರ ಮಟ್ಟಿಗೆ ಪ್ರೀತಮ್ ತನ್ನ ಡ್ಯಾನ್ಸ್‌ ಮೂಲಕವೇ ಎಲ್ಲರನ್ನೂ ಮೋಡಿ ಮಾಡಿದ್ದಾನೆ. ಇನ್ನು ಆತನ ಆಟ, ತುಂಟಾಟ, ಮಾತು ಕೂಡ ಎಲ್ಲರಿಗೂ ಇಷ್ಟ. ಹ್ಯಾಟ್ರಿಕ್‌ ಹೀರೋ ಶಿವಣ್ಣ ಅಂತೂ ಶೂಟಿಂಗ್‌ ಸೆಟ್‌ನಲ್ಲಿ ಆತನೊಂದಿಗೆ ಮೈಮರೆತು ಬಿಡ್ತಾರೆ. ಈಗಾಗಲೇ ಶಿವಣ್ಣ, ಪ್ರೀತಮ್‌ ಬಾಂಧವ್ಯದ ಸಾಕಷ್ಟು ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಕಳೆದ ವಾರದ ಎಪಿಸೋಡ್‌ನಲ್ಲಂತೂ ಶಿವಣ್ಣ ಪ್ರೀತಮ್‌ ಡ್ಯಾನ್ಸ್‌ ನೋಡಿ ಭಾವುಕರಾಗಿದ್ರು. ವೇದಿಕೆಯಲ್ಲಿ ಅಣ್ಣಾವ್ರನ್ನ ನೆನಪಿಸಿಕೊಂಡ್ರು ಕಣ್ಣೀರು ಹಾಕಿದ್ರು.

ಹೌದು, ಪ್ರೀತಮ್‌ ಕಳೆದ ವಾರ ಡಾ. ರಾಜ್‌ಕುಮಾರ್‌ ನಟನೆಯ ಕವಿರತ್ನ ಕಾಳಿದಾಸ ಸಿನಿಮಾದ ಬೆಳ್ಳಿ ಮೂಡಿತು. ಕೋಳಿ ಕೂಗಿತೋ ಹಾಡಿಗೆ ಹೆಜ್ಜೆ ಹಾಕಿದ್ದ. ಪ್ರೀತಮ್‌ ಇದ್ರಲ್ಲಿ ಕಾಳಿದಾಸ ಪಾತ್ರಕ್ಕೆ ಡ್ಯಾನ್ಸ್‌ ಮಾಡುತ್ತಾ, ಡೈಲಾಗ್‌ಗೆ  ತಕ್ಕಂತೆ ಆಕ್ಟ್‌ ಮಾಡುತ್ತಾ ಪರ್ಫಾಮೆನ್ಸ್‌ ನೀಡಿದ್ದಾನೆ. ಆತನ ಡ್ಯಾನ್ಸ್‌ ನೋಡುತ್ತಾ ಎಲ್ಲರೂ ಕಳೆದು ಹೋಗಿದ್ರು. ಶಿವಣ್ಣ ಮಾತ್ರ ಪ್ರೀತಮ್‌ ಪರ್ಫಾಮೆನ್ಸ್‌ ನೋಡುತ್ತಾ ಭಾವುಕರಾಗಿದ್ದಾರೆ. ಡ್ಯಾನ್ಸ್‌ ಮುಗಿಯುತ್ತಿದ್ದಂತೆ ಎಲ್ಲರೂ ನಿಂತು ಚಪ್ಪಾಳೆ ತಟ್ಟಿದ್ದಾರೆ.

ಪ್ರೀತಮ್‌ ಪರ್ಫಾಮೆನ್ಸ್‌ ನೋಡಿದ ಬಳಿಕ ಶಿವಣ್ಣ ಭಾವುಕರಾಗಿ ಮಾತನಾಡಿದ್ರು. ಅಪ್ಪಾಜಿಯನ್ನು ನೆನಪು ಮಾಡಿಕೊಂಡ್ರು. ಪ್ರೀತಮ್‌ಗೆ ದೇವರ ಅನುಗ್ರಹ ಇದೆ. ಹೆಸರಲ್ಲೇ ಪ್ರೀತಿ ಇದೆ. ಅದಕ್ಕೆ ಎಲ್ಲವನ್ನ ಪ್ರೀತಿಯಿಂದ ಮಾಡ್ತಾನೆ. ಹೀ ಟಚ್‌ ಮೈ ಹಾರ್ಟ್‌ ಅಂತ ಹಗ್‌ ಮಾಡ್ತೀದ್ದಂತೆ ಪ್ರೀತಮ್‌ ಬೆನ್ನು, ತಲೆ ಸವರುತ್ತಾ ಶಿವಣ್ಣನ ಸಮಾಧಾನ ಮಾಡಿದ್ದಾನೆ. ಆಗ ಗೀತಾ ಶಿವರಾಜ್‌ ಕುಮಾರ್‌ ಕೂಡ ಆಶ್ಚರ್ಯದಿಂದ ನೋಡಿದ್ರೆ, ಶಿವಣ್ಣ ಪ್ರೀತಿಯಿಂದ ಮುತ್ತು ನೀಡಿದ್ದಾರೆ.

ಇನ್ನು ಪ್ರೀತಮ್‌ ಅಂದ್ರೆ ಗೀತಾ ಶಿವರಾಜ್‌ಕುಮಾರ್‌ ಅವರಿಗೂ ತುಂಬಾ ಇಷ್ಟ. ಮನೆಯಲ್ಲೂ ಅವನ ಬಗ್ಗೆಯೇ ಮಾತು. ಆತ ಡ್ಯಾನ್ಸ್‌ ನೋಡ್ಲಿಕ್ಕೆ ಸೆಟ್‌ಗೆ ಬರ್ತಾರೆ ಎಂದು ಶಿವಣ್ಣ ಹೇಳಿದ್ದಾರೆ. ಪ್ರೀತಮ್ ಹೋದ ಜನ್ಮದಲ್ಲಿ ತಂದೆಯೋ, ಅಣ್ಣನೋ ಆಗಿದ್ದ ಅನ್ಸುತ್ತೆ ಅಂತ ಹೇಳಿದ್ದಾರೆ. ಬಳಿಕ ಶಿವಣ್ಣ ಪ್ರೀತಮ್‌ ಹಾಗೂ ಸ್ಪರ್ಧಿಗಳಿಗೆ ಬಿಗ್‌ ಸರ್‌ಪ್ರೈಸ್‌ ಕೊಟ್ಟಿದ್ದಾರೆ. ಶಿವರಾಜ್‌ ಕುಮಾರ್‌ ಅವರು ಪ್ರೀತಮ್‌ ಹಾಗೂ ಡಿಕೆಡಿಯ ಎಲ್ಲಾ ಸ್ಪರ್ಧಿಗಳನ್ನ ಗಾಜನೂರಿಗೆ ಕರ್ಕೊಂಡು ಹೋಗ್ತೀನಿ ಎಂದಿದ್ದಾರೆ. ಇದನ್ನ ನೋಡಿ ಸ್ಪರ್ಧಿಗಳು ಫುಲ್‌ ಖುಷಿಯಾಗಿದ್ದಾರೆ.

ಇನ್ನು ಡಿಕೆಡಿಯಲ್ಲಿ ಡ್ಯಾನ್ಸ್‌ ಮೂಲಕ ಮೋಡಿ ಮಾಡ್ತಿರೋ ಪ್ರೀತಮ್‌ಗೆ ಆಕ್ಟಿಂಗ್‌ ಫೀಲ್ಡ್‌ನಲ್ಲೂ ಚಾನ್ಸ್‌ ಸಿಕ್ಕಿದೆ. ಇದೀಗ ಜನಪ್ರೀಯ ಸೀರಿಯಲ್‌ನಲ್ಲಿ ನಟಿಸಲು ಚಾನ್ಸ್‌ ಸಿಕ್ಕಿದೆ. ಅಣ್ಣಯ್ಯ ಸೀರಿಯಲ್‌ನಲ್ಲಿ ಬಾಲ ನಟನಾಗಿ ಕಾಣಿಸಿಕೊಂಡಿದ್ದಾನೆ. ರಾಣಿ, ಪರಶು, ಮದುವೆ ವೇಳೆ ಪ್ರೀತಮ್‌ ಎಂಟ್ರಿಕೊಟ್ಟಿದ್ದಾನೆ. ಪ್ರೀತಮ್‌ಗೆ ಪರಶು ಮಗನಾಗಿ ನಟಿಸಲು ಚಾನ್ಸ್‌ ಸಿಕ್ಕಿದೆ.

ಇನ್ನು ಸೋಶಿಯ್‌ ಮೀಡಿಯಾ ಓಪನ್‌ ಮಾಡಿದ್ರೂ  ಪ್ರೀತಮ್‌ ದೇ ಹವಾ.. ಆತನ ಸಾಕಷ್ಟು ವಿಡಿಯೋಗಳು ವೈರಲ್‌ ಆಗ್ತಿವೆ. ಇತ್ತೀಚೆಗೆ ಶಿವಣ್ಣ ಪ್ರೀತಮ್‌ ಜೊತೆ ಡಿಕೆಡಿ ಸೆಟ್‌ನಲ್ಲಿ ಮಲಗಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಈ ವಿಡಿಯೋದಲ್ಲಿ ಪ್ರೀತಮ್‌ ಜೊತೆ ಶಿವಣ್ಣ ಮಗುವಾಗಿದ್ರು. ಆತನನ್ನು ಜೋಗುಳ ಹಾಡಿ ಮಲಗಿಸುತ್ತಿರುವ ವಿಡಿಯೋ ವೈರಲ್‌ ಆಗಿತ್ತು.

ಇನ್ನು ಶಿವಣ್ಣ ಎಲ್ಲಿರ್ತಾರೋ ಅಲ್ಲಿ ಪ್ರೀತಮ್‌ ಇದ್ದೇ ಇರ್ತಾನೆ. ಶಿವಣ್ಣ ಕೂಡ ಆತನನ್ನ ತನ್ನ ಜೊತೆ ಕೂರಿಸಿಕೊಂಡಿರ್ತಾರೆ. ಕಲ್ಟ್‌ ಸಿನಿಮಾ ತಂಡದ ಜೊತೆ ಮಾತನಾಡ್ತಿರುವಾಗ ಶಿವಣ್ಣ ಪ್ರೀತಮ್‌ನ ತಮ್ಮ ತೊಡೆ ಮೇಲೆ ಕೂರಿಸಿಕೊಂಡಿರುವ ವಿಡಿಯೋ ವೈರಲ್‌ ಆಗಿದೆ.

ಇನ್ನು ಗಿಲ್ಲಿನಟನಿಗೂ ಪ್ರೀತಮ್‌ ಅಂದ್ರೆ ತುಂಬಾ ಇಷ್ಟ.. ಇತೀಚೆಗೆ ರುದ್ರ ಮಾಸ್ಟರ್‌ ಮದುವೆಗೆ ಹೋಗಿದ್ದಾಗ, ಗಿಲ್ಲಿ ಪ್ರೀತಮ್‌ನ ಸ್ಟೇಜ್‌ನಲ್ಲೇ ಎತ್ತಿಕೊಂಡಿದ್ರು. ಪ್ರೀತಮ್‌ ಕೂಡ ಗಿಲ್ಲಿ ಜೊತೆ ಸಮಯ ಕಳೆದಿದ್ದ.

ಡಿಕೆಡಿ ಮೂಲಕ ಫೇಮಸ್‌ ಆದ ಪ್ರೀತಮ್‌ಗೆ ಈಗ ದೊಡ್ಡ ಅಭಿಮಾನಿ ಬಳಗವೇ ಇದೆ. ಎಲ್ಲ ಕಡೆ ಆತನ ಬ್ಯಾನರ್‌ಗಳು ಕಾಣಿಸ್ತಿವೆ. ಈ ವಿಡಿಯೋ ವೈರಲ್‌ ಆಗಿದ್ದು, ನಮ್ಮ ಅಧ್ಯಕ್ಷ  ಅಂತ ಆ ವಿಡಿಯೋಗೆ ಕ್ಯಾಪ್ಟನ್‌ ಹಾಕಲಾಗಿದೆ.

ಒಟ್ಟಾರೆ ಗದಗದ ಈ ಪುಟ್ಟ ಪೋರ ಈಗ ಡ್ಯಾನ್ಸ್‌ ಜೊತೆಗೆ ಮುಗ್ದತೆಯಿಂದ ಎಲ್ಲರ ಮನಗೆದ್ದಿದ್ದಾನೆ. ಪ್ರೀತಮ್‌ಗೆ ಇನ್ನಷ್ಟು ಅವಕಾಶಗಳು ಹುಡುಕಿಕೊಂಡು ಬರಲಿ. ಮುಂದೊಂದು ದಿನ ದೊಡ್ಡ ಸೂಪರ್‌ಸ್ಟಾರ್‌ ಆಗ್ಲಿ ಅನ್ನೋದೇ ಎಲ್ಲರ ಆಶಯ.

Shwetha M

Leave a Reply

Your email address will not be published. Required fields are marked *