DKD ಫೈರ್‌ಬ್ರ್ಯಾಂಡ್ ಪೂಜಾ.. ಜೂ. ಅಪ್ಪು ಜೊತೆ ಗೆಲ್ಲೋದು ಇವಳೇನಾ?
ಶಿವಣ್ಣನಿಗೂ ಸರ್ಕಾರಿ ಶಾಲಾ ಹುಡ್ಗಿನೇ ಫೆವರಿಟ್!

ವೈರಲ್ ಗರ್ಲ್ ಪೂಜಾ.. ಸದ್ಯ ಡಿಕೆಡಿಯಲ್ಲಿ ಈ ಸರ್ಕಾರಿ ಶಾಲೆ ಪ್ರತಿಭೆ ಮಿಂಚುತ್ತಿದ್ದಾಳೆ. ಈಕೆ ಸ್ಟೇಜ್‌ಗೆ ಬಂದು ಹೆಜ್ಜೆ ಹಾಕಿದ್ಲು ಅಂದ್ರೆ ಎಲ್ಲರೂ ಮೈರೆತು ಬಿಡ್ತಾರೆ. ಅಷ್ಟರ ಮಟ್ಟಿಗೆ ಪೂಜಾ ತನ್ನ ಡ್ಯಾನ್ಸ್ ಮೂಲಕವೇ ಎಲ್ಲರನ್ನೂ ಮೋಡಿ ಮಾಡಿದ್ದಾಳೆ. ವಾರದಿಂದ ವಾರಕ್ಕೆ ಪೂಜಾ ಭರ್ಜರಿ ಪರ್ಫಾಮೆನ್ಸ್ ನೀಡುತ್ತಾ ಬಂದಿದ್ದು, ಶಿವಣ್ಣನ ಪೂಜಾ ಡ್ಯಾನ್ಸ್ ಗೆ ಫುಲ್ ಥ್ರಿಲ್ ಆಗಿದ್ದಾರೆ.
ಇದನ್ನೂ ಓದಿ: ಯಶ್ ʼಟಾಕ್ಸಿಕ್ʼಗೆ ಕಾನೂನು ಸಂಕಷ್ಟ! – ಟೀಸರ್ ಟೀಕೆ ಮಾಡಿದವರಿಗೆ ನಿರ್ದೇಶಕಿ ತಿರುಗೇಟು
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಭರ್ಜರಿ ಮನರಂಜನೆ ನೀಡ್ತಾ ಇದೆ. ವಾರದಿಂದ ವಾರಕ್ಕೆ ಸ್ಪರ್ಧಿಗಳ ಮಧ್ಯೆ ಟಫ್ ಫೈಟ್ ನಡಿತಾ ಇದೆ. ಈ ಶೋನಲ್ಲಿ ಸರ್ಕಾರಿ ಶಾಲೆ ಹುಡುಗಿ ಪೂಜಾ ಹಾಗೂ ಅನೂಪ್ ಸಖತ್ ಹೈಲೈಟ್. ಪೂಜಾ ತನ್ನ ಡ್ಯಾನ್ಸ್ ಮೂಲಕ ಮೋಡಿ ಮಾಡಿದ್ದಾಳೆ. ಪ್ರತಿ ವಾರ ಹೊಸ ಹೊಸ ಕಾನ್ಸೆಪ್ಟ್ ಮೂಲಕ ಜಬರ್ದಸ್ತ್ ಪರ್ಫಾಮೆನ್ಸ್ ನೀಡುತ್ತಾ ಬಂದಿದ್ದಾಳೆ. ಆಕೆಯ ಟ್ಯಾಲೆಂಟ್ ನೋಡಿ ಜಡ್ಜಸ್ ಮಾತ್ರವಲ್ಲ, ಇಡೀ ಕರುನಾಡೇ ಫಿದಾ ಆಗಿದೆ. ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಪೂಜಾಳನ್ನ ಹಾಡಿಹೊಗಳಿದ್ದಾರೆ.
ಪೂಜಾ ಹಾಗೂ ಅನೂಪ್ ಕಳೆದ ವಾರ ಶಿವರಾಜ್‌ಕುಮಾರ್, ರಮೇಶ್ ಅರವಿಂದ್ ಹಾಗೂ ಪ್ರೇಮ ನಟನೆಯ ನಮ್ಮೂರ ಮಂದಾರ ಹೂವೆ ಸಿನಿಮಾದ ಹಳ್ಳಿ ಲಾವಣಿಯಲಿ ಸಾಂಗ್‌ಗೆ ಡ್ಯಾನ್ಸ್ ಮಾಡಿದ್ರು. ಪೂಜಾ ಹಾಡಿನ ಪ್ರತಿ ಸಾಲಿಗೂ ಒಂದೊಂದು ಎಕ್ಸ್‌ಪ್ರೆಷನ್ ಕೊಡ್ತಾ, ಜಬರ್ದಸ್ತ್ ಸ್ಟೆಪ್ಟ್ ಹಾಕಿದ್ದಾಳೆ. ಪೂಜಾ ಡ್ಯಾನ್ಸ್ ನೋಡುತ್ತಾ ಜಡ್ಜಸ್ ಕೂಡ ಕುಳಿತಲ್ಲೇ ಡ್ಯಾನ್ಸ್ ಮಾಡಿದ್ರು. ಪರ್ಫಾಮೆನ್ಸ್ ಮುಗಿದ ಕೂಡ್ಲೇ ಶಿವಣ್ಣ ಇಬ್ಬರನ್ನ ಹಾಡಿ ಹೊಗಳಿದ್ದಾರೆ. ಪೂಜಾ ಎಕ್ಸ್ಪೆಷನ್ ನೋಡಿ ಕಳೆದುಹೋದೆ. ಅನೂಪ್ ಹೀರೋನೇ ಅಂತ ಹೇಳಿದ್ದಾರೆ. ಇದೇ ವೇಳೆ ರಾಘು, ಇವರಿಬ್ಬರ ಪಾರ್ಫಾಮೆನ್ಸ್ ನೋಡಿ ನಾನು ಕಳೆದು ಹೋದೆ. ಎಷ್ಟು ಮುದ್ದಾಗಿತ್ತು ಎಂದು ಹೇಳಿದ್ದಾರೆ. ಇದೇ ವೇಳೆ ಡಿಕೆಡಿಯ ಜೂನಿಯರ್ ಅಪ್ಪುಗೆ ಪೂಜಾ ಬಿಗ್ ಸರ್‌ಪ್ರೈಸ್ ನೀಡಿದ್ದಾಳೆ. ಈ ವೇಳೆ ಅನೂಪ್ ಭಾವುಕನಾಗಿದ್ದಾನೆ.
ಅನೂಪ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ದೊಡ್ಡ ಅಭಿಮಾನಿ. ಅನೂಪ್ ಅಪ್ಪು ಫೋಟೋ ಇಷ್ಟುಕೊಂಡೇ ಡ್ಯಾನ್ಸ್ ಮಾಡುತ್ತಾನೆ. ಇದಿಷ್ಟೇ ಅಲ್ಲದೇ ಡಿಕೆಡಿಯಲ್ಲಿ ಅನೂಪ್‌ನ ಪ್ರೀತಿಯಿಂದ ಅಪ್ಪು ಅಂತ ಕರೆಯಲಾಗುತ್ತೆ. ಇದೀಗ ಪೂಜಾ ಅನೂಪ್‌ಗೆ ಪುನೀತ್ ರಾಜ್ ಕುಮಾರ್ ಅವರ ಮೂರ್ತಿಯೊಂದನ್ನ ಕೊಟ್ಟಿದ್ದಾಳೆ. ಈ ವೇಳೆ ಅನೂಪ್ ಮಾತ್ರವಲ್ಲ. ಶಿವಣ್ಣ ಕೂಡ ಭಾವುಕರಾಗಿದ್ದಾರೆ.
ಇನ್ನು ಈ ವಾರ ಕೂಡ ಅನೂಪ್ ಹಾಗೂ ಪೂಜಾ ಭರ್ಜರಿ ಪಾರ್ಫಾಮೆನ್ಸ್ ನೀಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ಅಪ್ಪು ಸಿನಿಮಾದ ತಾಲಿಬಾನ್ ಅಲ್ಲ ಅಲ್ಲ ಸಾಂಗ್‌ಗೆ ಡ್ಯಾನ್ಸ್ ಮಾಡಿದ್ದಾರೆ. ಅನೂಪ್ ಹಾಗೂ ಪೂಜಾ ಡ್ಯಾನ್ಸ್‌ಗೆ ಶಿವಣ್ಣ ಫುಲ್ ಫಿದಾ ಆಗಿದ್ದಾರೆ. ಪುಣ್ಯ ಮಾಡ್ಬೇಕು ಇಂಥ ಅಭಿಮಾನಿ ಪಡೆಯೋಕೆ ಎಂದು ಹೇಳಿದ್ದಾರೆ. ಇದೇ ವೇಳೆ ಪೂಜಾಗೆ ಜೀ ಕನ್ನಡ ಬಿಗ್ ಸರ್‌ಪ್ರೈಸ್ ನೀಡಿದೆ. ಪೂಜಾ ಸ್ಕೂಲ್ ಫ್ರೆಂಡ್ಸ್ ಹಾಗೂ ಟೀಚರ್ ವೇದಿಕೆಗೆ ಆಗಮಿಸಿದ್ದಾರೆ. ಈ ವೇಳೆ ಪೂಜಾ ಎಮೋಷನಲ್ ಆಗಿದ್ದಾರೆ.
ಒಟ್ಟಾರೆ ಸಣ್ಣ ಹಳ್ಳಿಯಲ್ಲಿ ಬೆಳದ ಪೂಜಾ ಈಗ ದೊಡ್ಡ ವೇದಿಕೆಯಲ್ಲಿ ಮಿಂಚುತ್ತಿದ್ದಾಳೆ. ಸಿಕ್ಕ ಅವಕಾಶವನ್ನ ಸರಿಯಾಗಿ ಬಳಸಿಕೊಳ್ಳುತ್ತಿದ್ದಾಳೆ. ಈಕೆ ಡ್ಯಾನ್ಸ್ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡ್ಲಿ, ಸಾಕಷ್ಟು ಅವಕಾಶ ಹುಡುಕಿಕೊಂಡು ಬರ್ಲಿ. ಪೂಜಾ ಬದುಕು ಬಂಗಾರ ಆಗ್ಲಿ ಅನ್ನೋದೇ ಎಲ್ಲರ ಆಶಯ.

ನೋಡಿರಿ

