ಹಾರಾಡುವ ಹಕ್ಕಿಗೆ ಎಷ್ಟು ಕಷ್ಟ.. ಸರ್ಕಾರಿ ಶಾಲೆ ಹುಡ್ಗಿಗೆ ದುಬಾರಿ ಗಿಫ್ಟ್!- ವೈರಲ್ ಗರ್ಲ್ ಪೂಜಾ DKD ಸಾಹಸ

ವೈರಲ್ ಗರ್ಲ್ ಪೂಜಾ.. ಸದ್ಯ ಜೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಈ ಕುರುಗೋಡಿನ ಸರ್ಕಾರಿ ಶಾಲೆ ಹುಡುಗಿ ಸಖತ್ ಹೈಲೈಟ್. ಈಕೆ ಸ್ಟೇಜ್‌ಗೆ ಎಂಟ್ರಿ ಕೊಟ್ಲು ಅಂದ್ರೆ ಹೊಸ ಲೋಕವೇ ಸೃಷ್ಠಿಯಾಗುತ್ತೆ. ಆಕೆ ಹಾಕೋ ಪ್ರತಿ ಸ್ಟೆಪ್ಸ್, ಎಕ್ಸ್‌ಪ್ರೆಷನ್ ಎಲ್ಲರನ್ನ ಕಳೆದುಹೋಗುವಂತೆ ಮಾಡುತ್ತೆ. ಈಕೆಯ ಟ್ಯಾಲೆಂಟ್‌ಗೆ ಮನಸೋಲದವರೇ ಇಲ್ಲ. ಸ್ಟೇಜ್‌ನಲ್ಲಿ ನಗು ನಗುತ್ತಾ ಡ್ಯಾನ್ಸ್ ಮಾಡೋ ಪೂಜಾ ಬದುಕು ಮಾತ್ರ ಕತ್ತಲೆಯಿಂದ ಕೂಡಿದೆ. ಪ್ರತಿ ಹೆಜ್ಜೆಯಲ್ಲೂ ಸಾಲು ಸಾಲು ಕಷ್ಟಗಳನ್ನ ಫೇಸ್ ಮಾಡ್ತಾ ಬಂದಿರೋ ಈ ಪುಟ್ಟ ಹುಡುಗಿ ಈಗ ಕರುನಾಡಿನ ಮನೆಮಗಳಾಗಿದ್ದಾಳೆ.
ಇದನ್ನೂ ಓದಿ: ಇವ್ರು ಸ್ಪರ್ಧಿಗಳೋ, ಎಲಿಮೆಂಟ್ಗಳೊ?.. ನನ್ನನ್ನ ಟಾರ್ಗೆಟ್ ಮಾಡ್ತಿದ್ದಾರೆ – ಕಿಚ್ಚನ ಮುಂದೆ ಅಶ್ವಿನಿ ಗೌಡ ಗರಂ
ಡಿಕೆಡಿಯಲ್ಲಿ ಕುರುಗೋಡಿನ ಪೂಜಾ ತನ್ನ ಡ್ಯಾನ್ಸ್ ಮೂಲಕ ಮೋಡಿ ಮಾಡಿದ್ದಾಳೆ. ಪ್ರತಿ ವಾರ ಹೊಸ ಹೊಸ ಕಾನ್ಸೆಪ್ಟ್ ಮೂಲಕ ಜಬರ್ದಸ್ತ್ ಪರ್ಫಾಮೆನ್ಸ್ ನೀಡುತ್ತಾ ಬಂದಿದ್ದಾಳೆ. ಆಕೆಯ ಟ್ಯಾಲೆಂಟ್ ನೋಡಿ ಜಡ್ಜಸ್ ಮಾತ್ರವಲ್ಲ, ಇಡೀ ಕರುನಾಡೇ ಫಿದಾ ಆಗಿದೆ. ಸೋಶಿಯಲ್ ಮೀಡಿಯಾದಲ್ಲೂ ಈಕೆ ಡ್ಯಾನ್ಸ್ ವಿಡಿಯೋ ಸಖತ್ ಟ್ರೆಂಡ್ ಸೆಟ್ ಮಾಡಿದೆ. ಹೀಗೆ ಸ್ಟೇಜ್‌ನಲ್ಲಿ ಖುಷಿ ಖುಷಿಯಿಂದ ಡ್ಯಾನ್ಸ್ ಮಾಡೋ ಪೂಜಾ ಬದುಕು ಮಾತ್ರ ಕತ್ತಲಿನಿಂದ ಕೂಡಿದೆ. ಪೂಜಾ ಜೀವನದ ಕಣ್ಣೀರ ಕತೆಯನ್ನ ಜೀ ಕನ್ನಡ ವಾಹಿನಿ ಜನರ ಮುಂದೆ ಅನಾವರಣ ಮಾಡಿದೆ.
ಪೂಜಾ ಬಳ್ಳಾರಿ ಜಿಲ್ಲೆಯ ಕುರುಗೋಡಿನ ನಿವಾಸಿ. ಈಕೆ ಬಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಳೆ. ಪೂಜಾ ಮನೆಯಲ್ಲಿ ಕಿತ್ತು ತಿನ್ನೋ ಬಡತನ. ಸ್ವಂತ ಸೂರಿಲ್ಲ. ಪೂಜಾ ಕುಟುಂಬ ಸದ್ಯ ಬಾಡಿಗೆ ಮನೆಯಲ್ಲೇ ವಾಸ ಮಾಡ್ತಿದ್ದಾರೆ. ತಂದೆ ತಾಯಿ ಇಬ್ರು ಕೆಲಸಕ್ಕೆ ಹೋದ್ರೆ ಮಾತ್ರ ಮೂರ್ಹೊತ್ತು ಊಟ. ತಂದೆ ಕಲ್ಲು ಹೊಡೆಯೋ ಕೆಲಸಕ್ಕೆ ಹೋದ್ರೆ, ತಾಯಿ ತೋಟದ ಕೆಲಸಕ್ಕೆ ಹೋಗಿ, ಮೂವರು ಮಕ್ಕಳನ್ನ ಓದಿಸುತ್ತಿದ್ದಾರೆ. ಇನ್ನು ಪೂಜಾ ತಂದೆಗೂ ಡ್ಯಾನ್ಸ್ ಅಂದ್ರೆ ಪ್ರಾಣ. ತಾನು ಡ್ಯಾನ್ಸ್‌ನಲ್ಲಿ ಸಾಧನೆ ಮಾಡಲು ಸಾಧ್ಯ ಆಗಿಲ್ಲ. ತನ್ನ ಮಗಳಾದ್ರೂ ಡ್ಯಾನ್ಸ್ ಕಲಿಬೇಕು ಅಂತ ಪೂಜಾಳನ್ನ ಡ್ಯಾನ್ಸ್ ಕ್ಲಾಸ್‌ಗೆ ಸೇರಿಸಿದ್ದಾರೆ. ಪ್ರತಿದಿನ ನಾಲ್ಕು ಕಿಲೋಮೀಟರ್ ನಡೆದುಕೊಂಡು ಪೂಜಾ ಡ್ಯಾನ್ಸ್ ಕ್ಲಾಸ್ ಗೆ ಹೋಗ್ತೀನಿ ಅಂತಾ ವಿಟಿಯಲ್ಲಿ ಹೇಳಿಕೊಂಡಿದ್ದಾಳೆ. ಅಷ್ಟೇ ಅಲ್ಲ, ತಾನು ಭವಿಷ್ಯದಲ್ಲಿ ಕೊರಿಯೋಗ್ರಾಫರ್ ಆಗ್ಬೇಕು. ತಂದೆ ತಾಯಿಗೆ ಒಂದೊಳ್ಳೆ ಮನೆ ಕಟ್ಟಿಸಿಕೊಡಬೇಕು ಅನ್ನೋ ಆಸೆ ಇದೆ ಎಂದು ಪೂಜಾ ಹೇಳಿಕೊಂಡಿದ್ದಾಳೆ. ಬಳಿಕ ಆಕೆ ತಾಯಿ ಮಾತನಾಡಿ, ನಮ್ಮ ಮನೆಯಲ್ಲಿ ತುಂಬಾ ಕಷ್ಟ. ಮಗಳು ಟಿವಿಯಲ್ಲಿ ಬಂದ್ರೂ ನಾವು ಟಿವಿ ನೋಡಲು ಪಕ್ಕದ ಮನೆಗೆ ಹೋಗಿದ್ವಿ ಎಂದು ಹೇಳಿದ್ದಾರೆ. ಪೂಜಾ ಹಾಗೂ ಆಕೆಯ ತಾಯಿ ಮಾತು ಕೇಳಿ ಎಲ್ಲರೂ ಭಾವುಕರಾಗಿದ್ದಾರೆ. ಹಾರಾಡುವ ಹಕ್ಕಿಗೆ ಎಷ್ಟೊಂದು ಕಷ್ಟ ಅಂತ ಎಲ್ಲರೂ ಹೇಳೀದ್ದಾರೆ. ವಿಟಿ ನೋಡ್ತಿದ್ದಂತೆ ಅನುಶ್ರೀ ಒಂದು ಮಾತನ್ನ ಹೇಳ್ತಾರೆ. ಅಪ್ಪ ಬಳ್ಳಾರಿಯಲ್ಲಿ ಕಲ್ಲು ಕೆತ್ತಿದ್ರೆ, ಇಲ್ಲಿ ಶಿಲೆ ರೂಪುಗೊಳ್ತಿದೆ ಎಂದು ಪೂಜಾ ಪ್ರತಿಭೆ ಬಗ್ಗೆ ಅದ್ಭುತ ಮಾತುಗಳನ್ನಾಡಿದ್ದಾರೆ. ಅಷ್ಟೇ ಅಲ್ಲ ಆಂಕರ್ ಅನುಶ್ರೀ ಇದೇ ವೇಳೆ ಪೂಜಾಗೆ ಸರ್‌ಪ್ರೈಸ್ ಕೊಟ್ಟಿದ್ದಾರೆ. ಪೂಜಾ ಮನೆಗೆ ನಾನು ಟಿವಿ ಕೊಡಿಸುತ್ತೇನೆ ಎಂದು ಶೋನಲ್ಲಿ ಹೇಳಿಕೊಂಡಿದ್ದಾರೆ.
ಇನ್ನು ಪೂಜಾಗೆ ಯಾವುದೇ ಡ್ಯಾನ್ಸ್ ಕೊಟ್ರು ನೀರು ಕುಡಿದಷ್ಟೇ ಈಜಿಯಾಗಿ ಮಾಡ್ತಾಳೆ. ಮೆಘಾ ಆಡಿಷನ್‌ನಲ್ಲಿ ಸುಂಟರಗಾಳಿ ಹಾಡಿಗೆ ಭರ್ಜರಿ ಪರ್ಫಾಮೆನ್ಸ್ ನೀಡಿ ಶೋಗೆ ಸೆಲೆಕ್ಟ್ ಆಗಿದ್ಲು. ಅದಾದ ಬಳಿಕ ಪೂಜಾಗೆ ಅನೂಪ್ ಜೋಡಿಯಾಗಿದ್ದಾನೆ. ಪೂಜಾ ಅನೂಪ್ ಜೋಡಿ ಕಳೆದ ವಾರ ದರ್ಶನ್ ನಟನೆಯ ಯಜಮಾನ ಸಿನಿಮಾ ಒಂದು ಮುಂಜಾನೆ ಹಂಗೆ ಸುಮ್ಮನೆ ನಾವು ಹೋಗುವ ಬಾರೆ ಸಾಂಗ್ ಭರ್ಜರಿ ಡ್ಯಾನ್ಸ್ ಮಾಡಿದ್ದಾಳೆ. ರೊಮ್ಯಾಂಟಿಕ್ ಸಾಂಗ್‌ಗೆ ಪೂಜಾ ಹಾಗೂ ಅನೂಪ್ ಭರ್ಜರಿ ಸ್ಟೆಪ್ಸ್ ಹಾಕಿದ್ರು. ಪ್ರಕೃತಿಯಲ್ಲಿ ಪರಿಶುದ್ಧ ಪಕ್ಷಿಗಳ ಪ್ರೇಮ ಕತೆಯನ್ನ ಡ್ಯಾನ್ಸ್ ಮೂಲಕ ತೋರಿಸಿದ್ರು. ಆಕೆಯ ಡಿಟೇಲ್ಡ್ ಎಕ್ಸ್‌ಪ್ರೆಷನ್, ಸ್ಟೆಪ್ಸ್ ನ ನೋಡಿ ಜಡ್ಜಸ್ ಫಿದಾ ಆದ್ರು. ಪೂಜಾ ಅನೂಪ್ ಪರ್ಫಾಮೆನ್ಸ್ ಜಡ್ಜಸ್ ಸ್ಟ್ಯಾಂಡಿಂಗ್ ಅವೇಷನ್ ನೀಡಿದ್ರು. ಅಷ್ಟೇ ಅಲ್ಲ ವಿಜಯ್ ರಾಘವೇಂದ್ರ ಎದ್ದು ನಿಂತು ಏನ್ ಕಪ್ ಬೇಕು ತಾನೇ.. ಇನ್ನೂ ತುಂಬಾ ಟೈಮ್ ಇದೆ ತಾನೇ. ತುಂಬಾ ರಿಸ್ಕೀ ಡ್ಯಾನ್ಸ್ ಮಾಡಿದ್ದೀರಾ. ನೀವು ನಿಜವಾಗಿಯೂ ಪಕ್ಷಿಗಳ ಹಾಗೇ ಡ್ಯಾನ್ಸ್ ಮಾಡಿದ್ರಿ ಅಂತ ಹೇಳಿದ್ರು. ಇನ್ನು ಶಿವಣ್ಣ ಕೂಡ ಇವರಿಬ್ಬರ ಕ್ಯೂಟ್ ಡ್ಯಾನ್ಸ್ ನೋಡಿ ಖುಷಿ ಪಟ್ಟಿದ್ದು, ಅವರಿಬ್ಬರನ್ನ ಹಾಡಿ ಹೊಗಳಿದ್ದಾರೆ.
ಒಟ್ಟಾರೆ ಸಣ್ಣ ಹಳ್ಳಿಯಲ್ಲಿ ಹುಟ್ಟಿ ಬೆಳದ ಪೂಜಾ ಈಗ ಡಿಕೆಡಿ ಶೋ ಮೂಲಕ ಕರುನಾಡಿನ ಮನೆ ಮಗಳಾಗಿದ್ದಾರೆ. ಮನೆಯಲ್ಲಿ ಬಡತನ ಇದ್ರೂ, ತನ್ನ ಕೈಯಲ್ಲಿ ಏನೂ ಆಗಲ್ಲ ಅಂತ ಸುಮ್ನೆ ಕೂತಿಲ್ಲ. ಇರುವ ಸೌಲಭ್ಯಗಳನ್ನ ಬಳಸಿಕೊಂಡು ಸಿಕ್ಕ ಅವಕಾಶಗಳನ್ನ ಎರಡೂ ಕೈಗಳಲ್ಲಿ ಬಾಚಿಕೊಂಡು ತಾನೇನು ಅನ್ನೋದನ್ನ ಫ್ರೂವ್ ಮಾಡಿದ್ದಾಳೆ. ಸಾಧನೆ ಮಾಡಲು ಹಣ ಬೇಕಾಗಿಲ್ಲ. ಪ್ರತಿಭೆ ಇದ್ರೆ ಸಾಕು ಅನ್ನೋದನ್ನ ಪೂಜಾ ಫ್ರೂವ್ ಮಾಡಿದ್ದಾಳೆ.

ನೋಡಿರಿ

