ಹಾರ್ಟನ್ನೇ ತೋರಿಸಿ ಗಿಲ್ಲಿ ಲವ್‌ ಪ್ರಪೋಸ್‌ – ನಾಚಿ ನೀರಾದ ಗಗನಾ.. 

ಹಾರ್ಟನ್ನೇ ತೋರಿಸಿ ಗಿಲ್ಲಿ ಲವ್‌ ಪ್ರಪೋಸ್‌ – ನಾಚಿ ನೀರಾದ ಗಗನಾ.. 

ಜೀ ಕನ್ನಡದಲ್ಲಿ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ರಿಯಾಲಿಟಿ ಶೋ ವೀಕ್ಷಕರಿಗೆ ಸಖತ್‌ ಮನರಂಜನೆ ನೀಡುತ್ತಿದೆ. ಈ ಬಾರಿ ಶೋ ದಲ್ಲಿ ಡ್ಯಾನ್ಸರ್‌ ಗಳ ಜೊತೆ ನಾನ್‌ ಡ್ಯಾನ್ಸರ್‌ ಗಳಿಗೂ ಅವಕಾಶ ಕೊಡಲಾಗಿದೆ. ಈ ಬಾರಿಯ ಶೋ ನಲ್ಲಿ ಸಖತ್‌ ಮನರಂಜನೆ ನೀಡ್ತಾ ಇರೋದು ಅಂದ್ರೆ ಮಾತಿನ ಮಲ್ಲಿ ಗಗನಾ ಹಾಗೂ ಗಿಲ್ಲಿನಟ.. ಹೌದು.. ಪಂಚ್‌ ಡೈಲಾಗ್ಸ್‌ ಮೂಲಕ ಗಗನಾ ಹಾಗೂ ಗಿಲ್ಲಿನಟ ಬಾರಿ ಮನರಂಜನೆ ನೀಡುತ್ತಿದ್ದಾರೆ. ಇದೀಗ ಗಗನಾಗೆ ಗಿಲ್ಲಿನಟ ಡಿಫ್ರೆಂಟ್‌ ಆಗಿ ಪ್ರಪೋಸ್‌ ಮಾಡಿದ್ದಾರೆ.. ಗಗನಾ ವೇದಿಕೆಯಲ್ಲೇ ನಾಚಿ ನೀರಾಗಿದ್ದಾರೆ.

ಇದನ್ನೂ ಓದಿ: ಭಾರತ U-19 ತಂಡಕ್ಕೆ ಸಮಿತ್ ದ್ರಾವಿಡ್ – ಆಸಿಸ್ ಸರಣಿಗೆ ನಾಲ್ವರು ಕನ್ನಡಿಗರಿಗೆ ಚಾನ್ಸ್

ಮಹಾನಟಿ ರಿಯಾಲಿಟಿ ಶೋ ಮೂಲಕ ಜನರ ಗಮನ ಸೆಳೆದ ನಟಿ ಗಗನ ಚಿತ್ರದುರ್ಗ, ಇದೀಗ ಡಾನ್ಸ್‌ ಕರ್ನಾಟಕ ಡಾನ್ಸ್‌ ರಿಯಾಲಿಟಿ ಶೋ ಮೂಲಕವೂ ಸದ್ದು ಮಾಡ್ತಿದ್ದಾರೆ. ಮಹಾನಟಿ ರಿಯಾಲಿಟಿ ಶೋದಲ್ಲಿ ಟಾಪ್‌ ಐದರಲ್ಲಿ ಕಾಣಿಸಿಕೊಂಡು ಮೂರನೇ ಸ್ಥಾನ ಪಡೆದು ಮಿಂಚಿದ್ದರು. ಪಟ ಪಟ ಅಂತ ಮಾತನಾಡುವ ಗಗನಾ ಎಲ್ಲರನ್ನ ನಗಿಸೋದ್ರಲ್ಲೂ ಎಕ್ಸಪರ್ಟ್‌.. ಇದೀಗ ಈ ಮಾತಿನ ಮಲ್ಲಿಯನ್ನ ಗಿಲ್ಲಿನಟ ಸಖತಾಗಿ ಕಾಲೇಳಿತಿದ್ದಾರೆ.. ಮನಸಲೂ ನೀನೇ..  ಹಾರ್ಟಲೂ ನೀನೇ ಅಂತಾ ಹಾರ್ಟ್‌ ಎಕ್ಸ್ ರೇ  ರಿಪೋರ್ಟ್‌ ಅನ್ನೇ ತಗೊಂಡು ಬಂದಿದ್ದಾರೆ..

ಗಿಲ್ಲಿನಟ ಪಂಚಿಂಗ್‌ ಡೈಲಾಗ್ಸ್‌ ಹೊಡೆಯೋದ್ರಲ್ಲಿ ಎಕ್ಸಪರ್ಟ್..‌ ಹುಡುಗಿರನ್ನ ಇಂಪ್ರೆಸ್‌ ಮಾಡೊದ್ರಲ್ಲಿ ಎತ್ತಿದ ಕೈ.. ಹೀಗಾಗಿ ಹೊಸ ಹೊಸ ಡೈಲಾಗ್ಸ್‌ ನೊಂದಿಗೆ ವೇದಿಕೆ ಮೇಲೆ ಎಂಟ್ರಿ ಕೊಡ್ತಾರೆ.. ಈ ವಾರ ಕೂಡ ತುಂಬಾ ಚೆನ್ನಾಗೆ ಪ್ರಿಪೇರ್‌ ಅಗಿ ಬಂದಿದ್ದಾರೆ ಗಿಲ್ಲಿನಟ.. ಮಾತಿನ ಮಲ್ಲಿಗೆ ಡಿಫ್ರೆಂಟ್‌ ಆಗಿ ಪ್ರಪೋಸ್‌ ಮಾಡಿದ್ದಾರೆ..

ಗಗನಾ ಡ್ಯಾನ್ಸ್‌ ಫರ್ಫಾಮೆನ್ಸ್‌ ಬಳಿಕ ಗಿಲ್ಲಿನಟ ಸ್ಟೇಜ್‌ ಗೆ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ಆಂಕರ್‌ ಅನುಶ್ರೀ ಯಾಕೆ ಬಂದೆ ಅಂತಾ ಹೇಳಿದ್ದಾರೆ. ಇದಕ್ಕೆ ಹೂಗಳು ಎಲ್ಲಿ ಇರ್ತಾವೋ.. ಅಲ್ಲಿ ದುಂಬಿ ಇರ್ತಾವೆ ಅಂತಾ ಮಸ್ತ್‌ ಡೈಲಾಗ್‌ ಹೊಡೆದಿದ್ದಾರೆ ಗಿಲ್ಲಿ ನಟ.. ಬಳಿಕ ಗಗನಾ ನೀನ್ಯಾಕೆ ನನ್ನ ಹಾರ್ಟಲ್ಲಿ ಇದ್ಯಾ ಅಂತಾ ಕೇಳಿದ ಗಿಲ್ಲಿನಟ ಬಳಿಕ ಹಾರ್ಟ್‌ ಎಕ್ಸ್ರೆನಾ ಸ್ಟೇಜ್‌ ಗೆ ತಗೊಂಡು ಬಂದಿದ್ದಾರೆ.

ಹೌದು, ಗಿಲ್ಲಿ ನಟ ತಂದ ಹಾರ್ಟ್‌ ಎಕ್ಸ್ರೆ ರಿಪೋರ್ಟ್‌ನಲ್ಲಿ ಇಬ್ಬರ ಫೋಟೋ ಇದೆ.. ರಕ್ಷಿತಾ ಇದ್ರಲ್ಲಿ ಎರಡು ಫೋಟೋ ಇದ್ಯಲ್ಲ.. ಒಂದು ಬ್ಲರ್‌ ಆಗಿದೆ ಅಂತಾ ಕೇಳಿದ್ದಾರೆ.  ಒಂದು ಗಗನಾ.. ಬ್ಲರ್‌ ಆಗಿರೋದು ಯಶು.. ಯಶು ಮಿಸ್‌ ಆದ್ಲು.. ಗಗನಾ ಫಿಕ್ಸ್‌ ಆದ್ಲು.. ಅಂತಾ ಹೇಳಿದ್ದಾರೆ. ಆಗ ಲಾಸ್ಟ್‌ ಟೈಮ್‌ ಲವ್‌ ಆಧಾರ್‌ ಕಾರ್ಡ್‌ ಇದ್ದಂಗೆ.. ಈಗ ಮೊಬೈಲ್‌ ನಂಬರ್‌ ತರ ಚೇಂಜ್‌ ಆಗೋಯ್ತಾ ಅಂತಾ ಯಶಸ್ವಿನಿ ಕೇಳಿದ್ದಾರೆ.. ಆಗ ಕೃಷ್ಣ ಲವ್‌ ಮಾಡಿದ್ದು ರಾಧೆನಾ.. ಮದುವೆ ಆಗಿದ್ದು ರುಕ್ಮಿಣಿನಾ.. ಪರಮಾತ್ಮನೇ ಪ್ರೀತಿಗಾಗಿ ಲವ್‌ ಮಾಡಿದಾಗ, ನಾವೆಲ್ಲಾ ಯಾವ ಲೆಕ್ಕಾ ಅಂತಾ ಗಿಲ್ಲಿ ಹೇಳಿದ್ದಾರೆ. ಬಳಿಕ ನನಗೆ ಲವ್‌ ಎಲ್ಲಾ ಇಷ್ಟ ಇಲ್ಲಾ ಅಂತಾ ಗಗನಾ ಹೇಳಿದ್ದಾರೆ.. ಆಗ ಗಿಲ್ಲಿ ಡೈರೆಕ್ಟ್‌ ಆಗಿ ಮದುವೆ ಆಗೋಣ ಅಂತಾ ಹೇಳಿದ್ದಾರೆ. ಆಗ ಗಗನಾ ನಾಚಿ ನೀರಾಗಿದ್ದಾರೆ.. ಇವರಿಬ್ಬರ ಮಾತುಕತೆ ಎಲ್ಲರನ್ನ ನಗುವಂತೆ ಮಾಡಿದೆ.. ಅಷ್ಟಕ್ಕೂ ಇದು ತಮಾಷೆಗಾಗಿ ಮಾತ್ರ ಮಾಡಲಾಗಿದೆ.. ಸೀರಿಯಸ್‌ ಆಗಿ ಅಲ್ಲ.. ಶೋನಲ್ಲಿ ಏನೋ ಪ್ರಸಾರ ಆಗ್ಬೇಕಂದ್ರೂ ಮೊದಲೇ ನಿರ್ಧಾರ ಮಾಡಿ ಆಗಿರುತ್ತೆ. ಇದು ಜಸ್ಟ್‌ ಟಿಆರ್‌ ಪಿ ಗಿಮಿಕ್‌ .. ಆದ್ರೂ ಗಿಲ್ಲಿನಟ ಗಗನಾಗೆ ಸಖತ್‌ ಆಗೇ ಕಾಲೆಳೆದಿದ್ದಾರೆ.

Shwetha M

Leave a Reply

Your email address will not be published. Required fields are marked *