ಝೂನಿಂದಲೇ ಉದ್ದಮೀಸೆಯ ಕೋತಿಗಳನ್ನ ಕದ್ದೊಯ್ದ ಕಳ್ಳರು – ಅಧಿಕಾರಿಗಳೇ ನೀಡಿದ್ರಾ ಸಾಥ್..!?

ಝೂನಿಂದಲೇ ಉದ್ದಮೀಸೆಯ ಕೋತಿಗಳನ್ನ ಕದ್ದೊಯ್ದ ಕಳ್ಳರು – ಅಧಿಕಾರಿಗಳೇ ನೀಡಿದ್ರಾ ಸಾಥ್..!?

ಝೂ ಅಂದ್ರೆ ಕೇಳ್ಬೇಕಾ. ಹತ್ತಾರು ಬಗೆಯ ಪ್ರಾಣಿ, ಪಕ್ಷಿಗಳು ಇರುತ್ತೆ. ಅಪರೂಪವೆನಿಸುವ ವನ್ಯಜೀವಿಗಳು ಪ್ರವಾಸಿಗರ ಗಮನ ಸೆಳೆಯುತ್ತೆ. ಅದ್ರಲ್ಲೂ ಈ ಝೂನಲ್ಲಿರೋ ಉದ್ದಮೀಸೆಯ ಮಂಗಣ್ಣಗಳಂದ್ರೆ ಜನರಿಗೆ ಅಚ್ಚುಮೆಚ್ಚು. ಇವುಗಳನ್ನ ನೋಡಬೇಕೆಂದೇ ಮಕ್ಕಳು ಕೂಡ ಹೆಚ್ಚೆಚ್ಚು ಬರುತ್ತಿದ್ದರು. ಆದ್ರೆ ಈ ಉದ್ದಮೀಸೆಯ ಕೋತಿಗಳನ್ನೇ ಕದ್ದೊಯ್ದಿದ್ದಾರೆ.

ಇದನ್ನೂ ಓದಿ :

ಹೌದು. ಇತ್ತೀಚೆಗೆ ಟೆಕ್ಸಾಸ್​ನ ಡಲ್ಲಾಸ್ ಮೃಗಾಲಯದಿಂದ ಎರಡು ಎಂಪರರ್ ತಮರಿನ್ ಕೋತಿಗಳು ನಾಪತ್ತೆಯಾಗಿದ್ದು, ಮೃಗಾಲಯದ ಮುಖ್ಯಸ್ಥರು ಅವುಗಳನ್ನು ಕದ್ದಿದ್ದಾರೆಂದು ಶಂಕಿಸಲಾಗಿತ್ತು. ಕೋತಿಗಳು ತಮ್ಮ ಆವಾಸಸ್ಥಾನದಿಂದ ಕಣ್ಮರೆಯಾಗಿರುವುದು ಗೊತ್ತಾದ ಬಳಿಕ ಅಲ್ಲಿನ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.

ಎಂಪರರ್ ತಮರಿನ್ ಕೋತಿಗಳು ತಮ್ಮ ಆವಸಸ್ಥಾನದ ಬಳಿಯೇ ಇರುತ್ತಿದ್ದವು. ಆದರೆ ಜನವರಿ 30ರಂದು ಎರಡು ನಾಪತ್ತೆಯಾಗಿದ್ದು, ಹುಡುಕಾಡಿದ್ರೂ ಪತ್ತೆಯಾಗಿಲ್ಲ. ಟ್ವಿಟರ್​ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ಮೃಗಾಲಯ, ಸೋಮವಾರ ಬೆಳಗ್ಗೆ (ಜನವರಿ 30) ಪ್ರಾಣಿಗಳ ಆರೈಕೆ ತಂಡವು ನಮ್ಮ ಎಂಪರರ್ ತಮರಿನ್ ಕೋತಿಗಳಲ್ಲಿ ಎರಡು ನಾಪತ್ತೆಯಾಗಿರುವುದನ್ನು ಪತ್ತೆ ಹೆಚ್ಚಿದೆ. ಈ ಬಗ್ಗೆ ಡಲ್ಲಾಸ್ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದೆ.

ನಿರಂತರ ಹುಡುಕಾಟದ ಬಳಿಕ ನಾಪತ್ತೆಯಾಗಿದ್ದ ಕೋತಿಗಳು ಡಲ್ಲಾಸ್ ಮೃಗಾಲಯದಿಂದ 15 ಮೈಲುಗಳಷ್ಟು ದೂರದ ಲ್ಯಾಂಕಾಸ್ಟರ್ ಬಳಿಯ ಮನೆಯೊಂದರಲ್ಲಿ ಇರುವ ಮಾಹಿತಿ ಸಿಕ್ಕಿದೆ. ಹೀಗಾಗಿ ಡಲ್ಲಾಸ್ ಪೊಲೀಸರು ಮತ್ತು ಲ್ಯಾಂಕಾಸ್ಟರ್ ಪೊಲೀಸರು ಜಂಟಿ ಕಾರ್ಯಾಚರಣೆ ಮೂಲಕ ಮನೆಯ ಬಳಿ ತೆರಳಿದ್ದರು. ಈ ವೇಳೆ ಮನೆಯಲ್ಲಿ ಯಾರೂ ಪತ್ತೆಯಾಗಿಲ್ಲ. ಆದರೆ ಮನೆಯೊಳಗಿನ ವಾರ್ಡ್ ರೋಬ್​ನಲ್ಲಿ ತಮರಿನ್ ಕೋತಿಗಳು ಪತ್ತೆಯಾಗಿವೆ.

ತಮರಿನ್ ಕೋತಿಗಳನ್ನ ಉದ್ದೇಶಪೂರ್ವಕವಾಗಿಯೇ ಕದ್ದೊಯ್ಯಲಾಗಿದೆ ಎಂದು ಮೃಗಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೋತಿಗಳು ಪತ್ತೆಯಾಗಿದ್ರೂ ಕೂಡ ಪ್ರಕರಣ ಸಂಬಂಧ ಯಾವೊಬ್ಬ ಆರೋಪಿಯೂ ಸಿಕ್ಕಿಲ್ಲ. ಹೀಗಾಗಿ ಕೋತಿಗಳನ್ನ ಕದ್ದೊಯ್ದವರ ಬಗ್ಗೆ ಮಾಹಿತಿ ನೀಡಿದವರಿಗೆ 25 ಸಾವಿರ ರೂಪಾಯಿ ಬಹುಮಾನ ಕೊಡೋದಾಗಿ ಘೋಷಣೆ ಮಾಡಿದ್ದಾರೆ.

ಡಲ್ಲಾಸ್ ಮೃಗಾಲಯದಲ್ಲಿ ಈ ರೀತಿಯಾಗಿದ್ದು ಇದೇ ಮೊದಲೇನಲ್ಲ. ಇದು ನಾಲ್ಕನೇ ಘಟನೆಯಾಗಿದ್ದು, ಮೃಗಾಲಯದ ಅಧಿಕಾರಿಗಳು ಹೊರಗಿನವರ ಜೊತೆ ಕೈ ಜೋಡಿಸಿರುವ ಅನುಮಾನ ವ್ಯಕ್ತವಾಗಿದೆ. ಜನವರಿ ತಿಂಗಳ ಆರಂಭದಲ್ಲಿ, ನೋವಾ ಎಂಬ ಚಿರತೆ ಆವಾಸಸ್ಥಾನದಿಂದ ತಪ್ಪಿಸಿಕೊಂಡಿತ್ತು. ಇನ್ನು ನೋವಾ ಪತ್ತೆಗಾಗಿ ಸಿಬ್ಬಂದಿ ವ್ಯಾಪಕ ಹುಡುಕಾಟ ನಡೆಸಿದ್ದರು. ಹಲವು ದಿನಗಳ ಬಳಿಕ ಚಿರತೆ ಪತ್ತೆಯಾಗಿತ್ತು. ಮಾತ್ರವಲ್ಲದೆ ಕಳೆದ ವಾರವಷ್ಟೇ, ಪಿನ್ ಎಂಬ ಲ್ಯಾಪೆಟ್ ಮುಖದ ರಣಹದ್ದು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿತ್ತು.

suddiyaana