ರಾಜಕೀಯ ಪಕ್ಷಗಳ ದಲಿತ ಪ್ರೀತಿ – ಕಾವೇರಿದ ಕಾಂಗ್ರೆಸ್ & ಬಿಜೆಪಿ ಟ್ವೀಟ್ ವಾರ್
ಬೆಂಗಳೂರು : ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ದಲಿತ ಪ್ರೀತಿ ಜೋರಾಗಿದೆ. ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ನಿನ್ನೆ ದೊಡ್ಡ ಹೋರಾಟ ನಡೆದಿತ್ತು. ಆದ್ರೆ ಇಂದು ದಲಿತರ ವಿಷಯ ಮುಂದಿಟ್ಟು ಟ್ವೀಟ್ ಮೂಲಕ ಸಿದ್ದರಾಮಯ್ಯ ಅವರನ್ನು ತಿವಿಯುವ ಕೆಲಸಕ್ಕೆ ಬಿಜೆಪಿ ಮುಂದಾಗಿತ್ತು. ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯನವರು ಸದಾಶಿವ ಆಯೋಗದ ವರದಿ ಜಾರಿಗೆ ತರದಿರುವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿರುವ ಬಿಜೆಪಿ, ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ದಲಿತ ನಾಯಕರನ್ನು ತುಳಿದಿದ್ದಾರೆ ಎಂದು ಪಟ್ಟಿ ಮಾಡಿದೆ.
ಅಧಿಕಾರ ಇದ್ದಾಗ ಸಿದ್ದರಾಮಯ್ಯ ದಲಿತರ ಯಾವ ಬೇಡಿಕೆನೂ ಈಡೇರಿಸಿಲ್ಲ ಹಾಗೇ ಅವರಿಂದ ತುಳಿತಕ್ಕೆ ಒಳಗಾದ ದಲಿತ ನಾಯಕರ ಪಟ್ಟಿಗೂ ಕೊನೆಯಿಲ್ಲ.
√ ಮಲ್ಲಿಕಾರ್ಜುನ ಖರ್ಗೆ
√ ಡಾ.ಜಿ.ಪರಮೇಶ್ವರ್
√ ಮೋಟಮ್ಮ
√ ಶ್ರೀನಿವಾಸ್ ಪ್ರಸಾದ್@siddaramaiah ಅವರ ದಲಿತಪರ ಪ್ರೀತಿ ಯಾವತ್ತಿಗೂ ತೋರ್ಪಡಿಕೆಗೆ ಅಷ್ಟೇ— BJP Karnataka (@BJP4Karnataka) December 12, 2022
ಇದನ್ನೂ ಓದಿ: ವರುಣ ಕ್ಷೇತ್ರದಲ್ಲೇ ಸಿದ್ದರಾಮಯ್ಯ ಸ್ಪರ್ಧೆ ಫಿಕ್ಸ್?
ಬಿಜೆಪಿಯ ಈ ಟ್ವೀಟಾಸ್ತ್ರಕ್ಕೆ ಕಾಂಗ್ರೆಸ್ ಸುಮ್ಮನೆ ಕುಳಿತಿಲ್ಲ.. ಕಾಂಗ್ರೆಸ್ ಕೂಡ ಟ್ವೀಟ್ ಮಾರ್ಗವನ್ನೇ ಅನುಸರಿಸಿದ್ದು, ಶಾಂತಿಯಿಂದ ಪ್ರತಿಭಟಿಸಿದ ದಲಿತ ಹೋರಾಟಗಾರರ ಮೇಲೆ ಲಾಠಿ ಬೀಸಿದ ಸರ್ಕಾರದ ದೃಷ್ಟಿಯಲ್ಲಿ ದಲಿತರೆಂದರೆ ಕ್ರಿಮಿನಲ್‌ಗಳಾ ಎಂದು ಚುಚ್ಚಿದೆ. ದಲಿತರ ಮೇಲೆ ಯಾಕಿಂತಾ ದ್ವೇಷ ಎಂದೆಲ್ಲಾ ಬಿಜೆಪಿಯ ವಿರುದ್ಧ ಕಿಡಿಕಾರಿದೆ.
‘@BJP4Karnataka ಸರ್ಕಾರದಲ್ಲಿ
ಕೇಸರಿ ಶಾಲು ಹೊದ್ದು ಪುಂಡಾಟಿಕೆ ನಡೆಸುವವರಿಗೆ – ರಾಜಮರ್ಯಾದೆಭ್ರಷ್ಟಾಚಾರ, ಅಕ್ರಮ ನಡೆಸುವವರಿಗೆ – ರಾಜಮರ್ಯಾದೆ
ರೌಡಿಗಳಿಗೆ, ಕ್ರಿಮಿನಲ್ಗಳಿಗೆ – ರಾಜಮರ್ಯಾದೆ
ಆದರೆ
ಶಾಂತಿಯಿಂದ ಪ್ರತಿಭಟಿಸುವ ದಲಿತ ಹೋರಾಟಗಾರರಿಗೆ ಮಾತ್ರ – ಲಾಠಿಏಟುಬಿಜೆಪಿ ದೃಷ್ಟಿಯಲ್ಲಿ ದಲಿತರು ಕ್ರಿಮಿನಲ್ಗಳಂತೆ ಕಾಣುವರೇ?
— Karnataka Congress (@INCKarnataka) December 12, 2022