ನಾಲಗೆಗೆ ಮುತ್ತಿಡುವಂತೆ ಬಾಲಕನಿಗೆ ಹೇಳಿದ ದಲೈ ಲಾಮಾ!  – ಟೀಕೆ ಬೆನ್ನಲ್ಲೇ ಕ್ಷಮಾಪಣೆ

ನಾಲಗೆಗೆ ಮುತ್ತಿಡುವಂತೆ ಬಾಲಕನಿಗೆ ಹೇಳಿದ ದಲೈ ಲಾಮಾ!  – ಟೀಕೆ ಬೆನ್ನಲ್ಲೇ ಕ್ಷಮಾಪಣೆ

ಬಾಲಕನ ಬಳಿ ತನ್ನ ನಾಲಗೆಗೆ ಮುತ್ತಿಕ್ಕುವಂತೆ ಹೇಳಿ ವಿವಾದದ ಸುಳಿಯಲ್ಲಿ ಸಿಲುಕಿದ್ದ ಬೌದ್ಧರ ಧರ್ಮಗುರು ದಲೈ ಲಾಮಾ ತಮ್ಮ ವರ್ತನೆಗೆ ಕ್ಷಮೆಯಾಚಿಸಿದ್ದಾರೆ.

ಇದನ್ನೂ ಓದಿ: ನೆರೆಮನೆಯಾತನ ಮೇಲೆ ಸೇಡು – 1,100 ಕೋಳಿಗಳನ್ನು ಬೆದರಿಸಿ ಕೊಂದಿದ್ದು ಹೇಗೆ ಗೊತ್ತಾ?  

ದಲೈ ಲಾಮಾ ಅಪ್ರಾಪ್ತ ಬಾಲಕನೊಬ್ಬನಿಗೆ ತಮ್ಮ ನಾಲಿಗೆಗೆ ಮುತ್ತಿಟ್ಟು, ನೆಕ್ಕುವಂತೆ ಸೂಚಿಸಿದ್ದರು. ಇದರ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಅಷ್ಟೇ ಅಲ್ಲದೇ ಸಾರ್ವಜನಿಕ ವಲಯದಲ್ಲಿ ಭಾರಿ ಟೀಕೆಗೆ ಒಳಗಾಗಿದ್ದರು. ಇದೀಗ ಬೌದ್ಧ ಧರ್ಮ ಗುರು ತನ್ನ ವರ್ತನೆ ಬಗ್ಗೆ ಬಾಲಕ ಹಾಗೂ ಆತನ ಕುಟುಂಬಕ್ಕೆ ಕ್ಷಮೆಯಾಚಿಸಿದ್ದಾರೆ.

ಕ್ಷಮೆಕೋರಿ ಟ್ವೀಟ್ ಮಾಡಿರುವ ಧರ್ಮಗುರು ದಲೈ ಲಾಮಾ, ನಾನು ಭೇಟಿಯಾಗುವ ಜನ ಹಾಗೂ ಮಕ್ಕಳೊಂದಿಗೆ ಮುಗ್ಧ ರೀತಿಯಲ್ಲಿ ಮತ್ತು ತಮಾಷೆಗಾಗಿ ಈ ರೀತಿ ವರ್ತಿಸುತ್ತೇನೆ. ಆದರೆ ನನ್ನ ವರ್ತನೆಗೆ ಬಾಲಕ ಹಾಗೂ ಆತನ ಕುಟುಂಬಕ್ಕೆ ನೋವಾಗಿದೆ. ಹೀಗಾಗಿ ನಾನು ಕ್ಷಮೆಕೋರುತ್ತಿದ್ದೇನೆ ಅಂತಾ ಹೇಳಿದ್ದಾರೆ.

suddiyaana