ಬಂಟ್ವಾಳದ ಬಿ.ಸಿ. ರೋಡ್‌ ಬಸ್ ನಿಲ್ದಾಣದಲ್ಲಿ ಯುವತಿಯ ಬರ್ಬರ ಹ*ತ್ಯೆ – ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿ ಹುಚ್ಚಾಟ

ಬಂಟ್ವಾಳದ ಬಿ.ಸಿ. ರೋಡ್‌ ಬಸ್ ನಿಲ್ದಾಣದಲ್ಲಿ ಯುವತಿಯ ಬರ್ಬರ ಹ*ತ್ಯೆ – ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿ ಹುಚ್ಚಾಟ

ಲವ್ ಮಾಡಲು ಒಪ್ಪದ ಯುವತಿಯನ್ನ ಭೀಕರವಾಗಿ ಚುಚ್ಚಿ ಹತ್ಯೆ ಮಾಡಿದ ಘಟನೆ ಗುರುವಾರ ಸಂಜೆ ಬಿ.ಸಿ.ರೋಡ್‌ನಲ್ಲಿರುವ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ಕಕ್ಯಪದವು ನಿವಾಸಿ ಲಾವಣ್ಯ (23) ಮೃತಪಟ್ಟ ಯುವತಿ. ಬೆಳ್ತಂಗಡಿ ಒಡಿಲ್ನಾಳ ನಿವಾಸಿ ಚೇತನ್‌ (22) ಕೊಲೆ ಮಾಡಿದ ಪಾಪಿ. ಕೊಲೆ ಮಾಡಿ ಚೇತನ್ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.

ಕಲ್ಲಡ್ಕದ ಖಾಸಗಿ ನರ್ಸಿಂಗ್‌ ಹೋಂನಲ್ಲಿ ಕೆಲಸ ಮಾಡುತ್ತಿದ್ದ ಕಕ್ಯಪದವು ಮೈರ ನಿವಾಸಿ ಬಾಳಪ್ಪ ಗೌಡ ಎಂಬವರ ಪುತ್ರಿ ಲಾವಣ್ಯ ಅಲ್ಲಿಂದ ಬಿ.ಸಿ.ರೋಡ್‌ನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಬಂದು, ಬಳಿಕ ಕಕ್ಯಪದವಿಗೆ ಹೋಗುವ ಬಸ್‌ ಹತ್ತಿ ಕುಳಿತಿದ್ದಾಳೆ. ಈ ವೇಳೆ ಆರೋಪಿ ಯುವಕ ಅಲ್ಲಿಗೆ ಬಂದಿದ್ದು, ಆತನನ್ನು ಕಂಡು ಬೆದರಿದ ಯುವತಿ ಬಸ್‌ನಿಂದ ಇಳಿದ ವೇಳೆ, ಆ ಯುವಕ ಬೆನ್ನಟ್ಟಿ ಬಂದು ಆಕೆಯ ಮೇಲೆ ಹರಿತವಾದ ಆಯುಧದಿಂದ ದಾಳಿ ಮಾಡಿದ್ದಾನೆ. ಬಳಿಕ ಬಸ್‌ ನಿಲ್ದಾಣದ ಇನ್ನೊಂದು ಭಾಗದಿಂದ ಹೆದ್ದಾರಿ ಕಡೆಗೆ ಆಯುಧ ಹಿಡಿದುಕೊಂಡೇ ಓಡಿ, ಅಲ್ಲಿಂದ ವಾಹನವೊಂದರಲ್ಲಿ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ಅಣ್ಣನಿಗೆ ಕೈ ಕೊಟ್ಟ ಹುಡುಗಿ ಜೀವ ತೆಗೆದ ತಮ್ಮ – ಬೆಂಗಳೂರಿನಲ್ಲಿ ನಡು ರಸ್ತೆಯಲ್ಲಿ ನೆ*ತ್ತರು ಹರಿಸಿದ ಪಾಪಿ

ಈ ಭೀಕರ ಹತ್ಯೆ ನಡೆದ ಬಳಿಕ, ದಕ್ಷಿಣ ಕನ್ನಡ ಜಿಲ್ಲಾಪೊಲೀಸ್‌ ಅಧೀಕ್ಷಕ ಡಾ.ಅರುಣ್‌ ಕುಮಾರ್‌ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಈ ಘೋರ ಕೃತ್ಯ ಎಸಗಿದ ಆರೋಪಿಯನ್ನು ಪತ್ತೆಹಚ್ಚಲು ಈಗಾಗಲೇ ವಿಶೇಷ ಪೊಲೀಸ್‌ ತಂಡ ರಚಿಸಿ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೊ*ಲೆ ಆರೋಪಿ ಚೇತನ್‌ ಲಾವಣ್ಯನನ್ನ ಒನ್‌ ಸೈಡ್‌ ಲವ್‌ ಮಾಡುತ್ತಿದ್ದ, ಆದ್ರೆ ಲಾವಣ್ಯ ಪ್ರೀತಿ ನಿರಾಕರಿಸಿದರೂ ಪ್ರೀತಿಸುವಂತೆ ಆರೋಪಿ ಚೇತನ್ ಒತ್ತಾಯಿಸುತ್ತಿದ್ದನಂತೆ. ಕೊನೆಗೆ ಪ್ರೀತಿಗೆ ಒಪ್ಪದ  ಲಾವಣ್ಯನನ್ನ ಕೊಚ್ಚಿ  ಚೇತನ್ ಕೊಲೆ ಮಾಡಿದ್ದಾನೆ. ಇವರಿಬ್ಬರು ಸಂಬಂಧಿಕರು ಎನ್ನಲಾಗ್ತಿದೆ.

Kishor KV