ಅಪ್ಪ ಮಾರಾಟಕ್ಕಿದ್ದಾರೆ..! – 2 ಲಕ್ಷ ರೂಪಾಯಿಗೆ ತಂದೆಯನ್ನೇ ಮಾರಾಟ ಮಾಡಲು ಮುಂದಾದ ಮಗಳು!

ಅಪ್ಪ ಮಾರಾಟಕ್ಕಿದ್ದಾರೆ..! – 2 ಲಕ್ಷ ರೂಪಾಯಿಗೆ ತಂದೆಯನ್ನೇ ಮಾರಾಟ ಮಾಡಲು ಮುಂದಾದ ಮಗಳು!

ಅಪ್ಪನ ಪುಟ್ಟ ರಾಜಕುಮಾರಿ ಅಂದ್ರೆ ಅದು ಮಗಳು. ಹೆಣ್ಣುಮಕ್ಕಳ ಜೀವನದಲ್ಲಿ ಅಪ್ಪನ ಕೊಡುಗೆ ಅಪಾರ. ತಂದೆಗೆ ಹೆಚ್ಚಾಗಿ ಹೆಣ್ಣು ಮಕ್ಕಳ ಮೇಲೆಯೇ ಪ್ರೀತಿ ಜಾಸ್ತಿ. ಅವರು ಏನೇ ಕೇಳಿದರೂ, ಇಲ್ಲ ಎನ್ನದೇ ಎಲ್ಲವನ್ನು ಕೊಡಿಸುತ್ತಾರೆ. ಹೆಣ್ಣು ಮಕ್ಕಳಿಗೂ ಅಪ್ಪ ಅಂದ್ರೆ ಅಚ್ಚು ಮೆಚ್ಚು. ಅವರಿಗೆ ತಂದೆಯೇ ಪ್ರಪಂಚ ಅಂತಾ ಹೇಳಬಹುದು. ತಂದೆಗೋಸ್ಕರ ಮಗಳು ಏನು ಬೇಕಾದರೂ ಮಾಡಲು ಸಿದ್ದಳಾಗಿರುತ್ತಾಳೆ. ಆದ್ರೆ ಇಲ್ಲೊಬ್ಬಳು ಅಪ್ಪನನ್ನೇ ಮಾರಾಟ ಮಾಡಲು ಮುಂದಾಗಿದ್ದಾಳೆ!

ಸಾಮಾನ್ಯವಾಗಿ ಮಕ್ಕಳು ತಪ್ಪು ಮಾಡಿದಾಗ ತಂದೆ ಗದರಿಸೋದು ಸಾಮಾನ್ಯ. ಈ ವೇಳೆ ಮಕ್ಕಳು ಕೋಪ ಮಾಡಿಕೊಳ್ಳುತ್ತಾರೆ. ಕೆಲವೊಂದು ಬಾರಿ ಮಾತು ಬಿಡಿವುದೂ ಇದೆ. ಆದರೆ ಇಲ್ಲೊಬ್ಬಳು ತಂದೆ ಮೇಲಿನ ಸಿಟ್ಟಿಗೆ ಆತನನ್ನೇ ಮಾರಾಟ ಮಾಡಲು ಮುಂದಾಗಿದ್ದಾಳೆ. ಆಕೆ “ಫಾದರ್ ಆನ್ ಸೇಲ್” ಅಂತಾ ಪೇಪರ್‌ನಲ್ಲಿ ಬರೆದು ಎಲ್ಲರಿಗೂ ಹಂಚಿದ್ದಾಳೆ. ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ: ಅಪರಿಚಿತನಾಗಿಯೇ ಉಳಿದ ಕಳ್ಳತನದ ಆರೋಪಿ! – ಸತ್ತು 128 ವರ್ಷಗಳ ಬಳಿಕ ಅಂತ್ಯಕ್ರಿಯೆಗೆ ಡೇಟ್‌ ಫಿಕ್ಸ್‌!

ಏನಿದು ಘಟನೆ? 

ತಂದೆ ಜತೆಗೆ 8 ವರ್ಷದ ಮಗಳಿಗೆ ಕೆಲವು ಭಿನ್ನಾಭಿಪ್ರಾಯಗಳಿದ್ದವು. ಹೀಗಾಗಿ ಆಕೆ ಅಪ್ಪನ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾಳೆ. ಏನು ಮಾಡಬೇಕು ಅಂತಾ ಆಕೆ ತೋಚದೆ ತಂದೆಯನ್ನೇ ಮಾರಾಟ ಮಾಡಲು ಮುಂದಾಗಿದ್ದಾಳೆ. ಆಕೆ  “ಫಾದರ್ ಆನ್ ಸೇಲ್” ಎಂದು ಬರೆದು ಮನೆಯ ಬಾಗಿಲಿಗೆ ನೋಟಿಸ್ ಅಂಟಿಸಿದ್ದಾಳೆ. ಅಷ್ಟೇ ಅಲ್ಲದೇ.. ತಂದೆಯನ್ನು 2 ಲಕ್ಷ ರೂ.ಗೆ ಮಾರಾಟ ಮಾಡಲಾಗುತ್ತಿದೆ ಎಂದು ನೋಟಿಸ್‌ನಲ್ಲಿ ಬರೆದಿದ್ದಾಳೆ.

ಸದ್ಯ ಆಕೆ ಬರೆದ ನೋಟಿಸ್‌ ಭಾರಿ ವೈರಲ್‌ ಆಗಿದೆ. ಈ ಪೋಸ್ಟ್‌ಗೆ ಸೋಶಿಯಲ್‌ ಮೀಡಿಯಾ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಈ ಟಿಪ್ಪಣಿ ನೋಡಿದ ನಂತರ ನಿಮ್ಮ ಮಗು ನಿನ್ನನ್ನು ತುಂಬಾ ಪ್ರೀತಿಸುತ್ತಿದೆ. ಮಕ್ಕಳ ಅರಿವಿಲ್ಲದ ಚೇಷ್ಟೆಗಳು ಕೆಲವೊಮ್ಮೆ ಮನರಂಜನೆ ನೀಡುತ್ತವೆ. ಆದರೆ ನಿಮ್ಮ ತಂದೆಯೊಂದಿಗೆ ಜಗಳವಾಡಿದರೆ, ಈ ತಮಾಷೆಯಾಗಿ ಸೇಡು ತೀರಿಸಿಕೊಂಡಿದ್ದಾಳೆ ಎಂದು ಹೇಳಿದ್ದಾರೆ.

Shwetha M