ಡಾಲಿ ಬಾಳಿಗೆ ಧನ್ಯತಾ ಬಂದಿದ್ದೇಗೆ? – Actor Weds Doctor ಲವ್‌ ಕಹಾನಿ!

ಡಾಲಿ ಬಾಳಿಗೆ ಧನ್ಯತಾ ಬಂದಿದ್ದೇಗೆ? – Actor Weds Doctor ಲವ್‌ ಕಹಾನಿ!

ಕನ್ನಡದ ನಟ ರಾಕ್ಷಸ ಅಂದ್ರೆ ಅದು ಒನ್ ಅಂಡ್ ಓನ್ಲಿ ಡಾಲಿ ಧನಂಜಯ್‌.. ಇದೀಗ ಡಾಲಿ ಧನ್ಯತಾರನ್ನ ಮದುವೆಯಾಗುತಿದ್ದಾರೆ.. ಇದೇ ತಿಂಗಳು 15 ಹಾಗೂ 16 ರಂದು ಮದುವೆ ಆಗ್ತಿದ್ದಾರೆ. ಮದುವೆಗೆ ಕ್ಷಣಗಣನೆ ಶುರುವಾಗ್ತಿದ್ದಂತೆ ಡಾಲಿ ತಮ್ಮ ಲವ್‌ ಸ್ಟೋರಿ ರಿವೀಲ್‌ ಮಾಡಿದ್ದಾರೆ..  ಅಂದು ಅಭಿಮಾನಿಯಾಗಿ ಮಾತನಾಡಿ, ಇಂದು ಆಕೆಯನ್ನೇ ಬಾಳ ಸಂಗಾತಿಯಾಗಿ ಡಾಲಿ ಆಯ್ಕೆ ಮಾಡಿದ್ದಾರೆ. ಅಷ್ಟಕ್ಕೂ ಧನ್ಯತಾ ಡಾಲಿ ಭೇಟಿಯಾಗಿದ್ದು ಎಲ್ಲಿ? ಲವ್‌ ಶುರುವಾಗಿದ್ದು ಹೇಗೆ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಡಿಸಿಎಂ ಡಿಕೆಶಿ ನಿವಾಸಕ್ಕೆ ಕಿಚ್ಚ ಸುದೀಪ್‌ ಧಿಡೀರ್‌ ಭೇಟಿ – ಕಾರಣ ಏನು?  

ಸ್ಯಾಂಡಲ್​ವುಡ್​ ನಟರಾಕ್ಷಸ ಡಾಲಿ ಧನಂಜಯ್ ಇತ್ತೀಚಿಗಷ್ಟೇ ತಮ್ಮ ಮದುವೆ ಬಗ್ಗೆ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ರು.. ಡಾಕ್ಟರ್​ ಜೊತೆ ಸಪ್ತಪದಿ ತುಳಿಯೋದಕ್ಕೆ   ಈ ಆಕ್ಟರ್ ಸಜ್ಜಾಗಿದ್ದಾರೆ. ಫೆಬ್ರವರಿ 15 ಹಾಗೂ 16ರಂದು ಧನು ಹಾಗೂ ಧನ್ಯ ಮದುವೆ ನಡೆಯಲಿದೆ. ಮೈಸೂರಿನ ಅರಮನೆ ಮುಂಭಾಗದ ವಸ್ತುಪ್ರದರ್ಶನ ಮೈದಾನದಲ್ಲಿ ಅದ್ಧೂರಿಯಾಗಿ ಮದುವೆ ವೇದಿಕೆ ಸಿದ್ಧವಾಗುತ್ತಿದೆ. ಮದುವೆಗೆ ತಮ್ಮ ಆಪ್ತರನ್ನೆಲ್ಲಾ ಧನಂಜಯ್ ಆಹ್ವಾನಿಸುತ್ತಿದ್ದಾರೆ. ರಾಜಕೀಯ ಮುಖಂಡರು, ಸ್ವಾಮಿಜಿಗಳು, ಸಿನಿಮಾ ತಾರೆಯರು ಹೀಗೆ ಸಾಕಷ್ಟು ಜನರಿಗೆ ಮದುವೆ ಆಮಂತ್ರಣ ನೀಡಿದ್ದಾರೆ. ಇದೀಗ ಡಾಲಿ ಧನ್ಯತಾ ಮಾಧ್ಯಮಗಳ ಮುಂದೆ ತಮ್ಮ ಪ್ರೇಮ್‌ ಕಹಾನಿಯನ್ನ ಹಂಚಿಕೊಂಡಿದ್ದಾರೆ.

ನಟ ಧನಂಜಯ್ ಧನ್ಯತಾ ಪರಿಯಚಯ ಆಗಿದ್ದು ಹೇಗೆ? ಯಾವಾಗ ಪ್ರೀತಿ ಚಿಗುರಿತು ಅನ್ನೋ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಮನಸ್ಸಿಗೆ ಇಷ್ಟ ಆಗುವವರು ಸಿಕ್ಕರೆ ಮದುವೆ ಆಗ್ತೀನಿ ಎನ್ನುತ್ತಿದ್ದೆ. ಇವರನ್ನು ನೋಡಿದಾಗ ಹಾಗೆ ಅನ್ನಿಸಿತು.  ಮೊದಲಿಗೆ ಒಬ್ಬ ಅಭಿಮಾನಿ ಆಗಿ ಧನ್ಯತಾ ಅವರನ್ನು ಭೇಟಿ ಮಾಡಿದ್ದೆ. ಆಗ ಅವರು ಇನ್ನು ಓದುತ್ತಿದ್ದರು. ಜಯನಗರ 4ನೇ ಬ್ಲಾಕ್‌ನಲ್ಲಿ ಮೊದಲಿಗೆ ಭೇಟಿ ಆಗಿದ್ದೆವು. ಅವತ್ತು ಉತ್ತರ ಕರ್ನಾಟಕ ಹೋಟೆಲ್‌ನಲ್ಲಿ ಊಟ ಮಾಡಿಸಿ ಮಾತನಾಡಿಸಿ ಕಳುಹಿಸಿದ್ದೆ ಎಂದು ಧನಂಜಯ್ ನೆನಪಿಸಿಕೊಂಡಿದ್ದಾರೆ. ಬಳಿಕ ಇನ್‌ಸ್ಟಾಗ್ರಾಂ ನಲ್ಲಿ ಮೆಸೆಜ್‌ ಮಾಡ್ತಿದ್ರು.. ನನ್ನ ಸಿನಿಮಾ ಬಿಡುಗಡೆ ಆದಾಗ, ಪ್ರಶಸ್ತಿ ಬಂದಾಗ ಕಂಗ್ರಾಟ್ಸ್ ಹೇಳುತ್ತಿದ್ದರು. ನಾನು “ಚೆನ್ನಾಗಿದ್ದೀನಿ ಡಾಕ್ಟ್ರೇ” ಎಂದು ರಿಪ್ಲೇ ಮಾಡಿ ಸುಮ್ಮನಾಗ್ತಿದ್ದೆ.. ಯಾವಾಗ್ಲೂ ಒಬ್ಬನೇ ಇರ್ಬೇಕು ಅನ್ನಿಸ್ತಿತ್ತು.. ಫಾರ್‌ ದಿ ಫಸ್ಟ್‌ ಟೈಮ್‌ ನನಗೂ ಯಾರಾದ್ರೂ ಬೇಕು ಅಂತಾ ಅನ್ನಿಸ್ತು.. ಬಳಿಕ ವರ್ಷದ ಹಿಂದೆ ಮತ್ತೆ ಭೇಟಿ ಮಾಡೋಣ ಅಂತ ಅನ್ನಿಸಿ ಭೇಟಿ ಮಾಡಿದ್ದೆ. ಅವರ ಸಿಂಪ್ಲಿಸಿಟಿ, ವೃತ್ತಿ ಧರ್ಮ ತುಂಬಾ ಇಷ್ಟವಾಯ್ತು. ಹೀಗಾಗಿ ಅವರೊಟ್ಟಿಗೆ ಜೀವನ ಪೂರ್ತಿ ಇರಬೇಕು ಎಂದು ಬಯಸಿದ್ರಂತೆ ಆ ಬಳಿಕ ಜರ್ನಿ ಶುರುವಾಯಿತು. ಬಳಿಕ ಸ್ನೇಹಿತರಿಗೆ ಪರಿಚಯ ಮಾಡಿಸಿದೆ. ಅವ್ರು ನಮ್ಮ ತಂದೆ ತಾಯಿಗೆ ಪರಿಚಯಿಸಿದ್ರು ಎಂದು ಧನಂಜಯ್ ಲವ್ ಸ್ಟೋರಿ ಹೇಳಿದ್ದಾರೆ.

ತಂದೆಗೆ ಧನ್ಯತಾ ಪರಿಯಚಯ ಆಗ್ತಿದ್ದಂತೆ ನನ್ನ ಅಪ್ಪ ನನ್ನ ಹಿಂದೆ  ಬಿದ್ರು. ಅವರ ಮನೆಯಲ್ಲಿ ಮಾತನಾಡಬೇಕು ಅಂದ್ರು. ಹಾಗೆ ಮದುವೆವರೆಗೂ ಬಂದು ನಿಂತಿದೆ. ನಮ್ಮ ಅಜ್ಜಿಗೆ ಧನ್ಯಾ ಅವರನ್ನು ಭೇಟಿ ಮಾಡಿಸಿದ್ದೆ. ಅದು ಖುಷಿ ಇದೆ. ಈಗ ಅವರು ಇಲ್ಲ ಎಂದು ಧನಂಜಯ್ ಹೇಳಿದ್ದಾರೆ.

ಇನ್ನು  ಧನ್ಯತಾ  ಕೂಡ ಡಾಲಿ ಬಗ್ಗೆ ಮಾತನಾಡಿದ್ರು.. ಡಾಲಿ ಅವರನ್ನ ಭೇಟಿಯಾದ ಬಳಿಕ ಅವರ ಆಲೋಚನೆ ರೀತಿ ಬಹಳ ಇಷ್ಟ ಆಯಿತು, ನಮ್ಮಿಬ್ಬರದ್ದು ಒಂದೇ ರೀತಿ ಇದೆ. ಧನಂಜಯ್ ಸಿಂಪ್ಲಿಟಿಸಿ ನನಗಿಷ್ಟ .. ಧನಂಜಯ್ ನನಗೆ ಹತ್ತಿರವಾದಂತೆ ಅವರ ಕುಟುಂಬ ಸದಸ್ಯರು ನನಗೆ ಹತ್ತಿರವಾದರು. ಇನ್ನು ಸಿನಿಮಾ ಬಗ್ಗೆ ಅಷ್ಟೇನು ಆಸಕ್ತಿ ಇಲ್ಲ ಅನ್ನೋದನ್ನು ಒಪ್ಪಿಕೊಂಡಿದ್ದಾರೆ. ಆದರೂ, ಡಾಲಿ ಧನಂಜಯ್‌ ನಟಿಸಿದ ‘ರತ್ನನ್ ಪ್ರಪಂಚ’ ಸಿನಿಮಾ ಅಂದರೆ ಬಲು ಇಷ್ಟ ಎಂದು ಹೇಳಿಕೊಂಡಿದ್ದಾರೆ. ಡಾಲಿ ಧನಂಜಯ್ ಪರಿಚಯ ಆದ ದಿನಗಳಿಂದ ಸಿನಿಮಾ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.

ಅಂದ್ಹಾಗೆ ಡಾಲಿ ಭಾವಿ ಪತ್ನಿ ಧನ್ಯತಾ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ  ಮಲ್ಲಾಡಿಹಳ್ಳಿಯ ಶಿವಪುರ ಗ್ರಾಮವರು. ವೈದ್ಯಕೀಯ ಶಿಕ್ಷಣವನ್ನೆಲ್ಲ ಪಡೆದಿದ್ದು ಚಿತ್ರದುರ್ಗದಲ್ಲಿಯೇ. ಅಲ್ಲಿನ ಬಸವೇಶ್ವರ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ವೈದ್ಯಕೀಯ ಶಿಕ್ಷಣವನ್ನು ಪಡೆದಿದ್ದಾರೆ. ಸದ್ಯ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಪ್ರಸೂತಿ ತಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ಇದೂವರೆಗೂ ಸುಮಾರು 500 ಕ್ಕೂ ಅಧಿಕ ಹೆರಿಗೆಗಳನ್ನು ಮಾಡಿಸಿದ್ದಾರೆ. ಇದೀಗ ಡಾಲಿ ಜೊತೆ ಧನ್ಯತಾ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ.. ಈ ಜೋಡಿ ಒಟ್ಟಿಗೆ ಸುಖವಾಗಿ ಬಾಳಲಿ ಅಂತಾ ಅಭಿಮಾನಿಗಳು ಹಾರೈಸುತ್ತಿದ್ದಾರೆ.

Shwetha M

Leave a Reply

Your email address will not be published. Required fields are marked *