‘ಹೆಚ್‌.ಡಿ ಕುಮಾರಸ್ವಾಮಿ ಯಾರಿಗೆಲ್ಲಾ ಕಾಲ್‌ ಮಾಡಿ ಧಮ್ಕಿ ಹಾಕಿದ್ದಾರೆ ಗೊತ್ತಿದೆʼ – ಡಿ.ಕೆ ಶಿವಕುಮಾರ್‌ ಸ್ಪೋಟಕ ಹೇಳಿಕೆ!

 ‘ಹೆಚ್‌.ಡಿ ಕುಮಾರಸ್ವಾಮಿ ಯಾರಿಗೆಲ್ಲಾ ಕಾಲ್‌ ಮಾಡಿ ಧಮ್ಕಿ ಹಾಕಿದ್ದಾರೆ ಗೊತ್ತಿದೆʼ – ಡಿ.ಕೆ ಶಿವಕುಮಾರ್‌ ಸ್ಪೋಟಕ ಹೇಳಿಕೆ!

ರಾಜ್ಯಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ನಾಯಕರ ಆರೋಪ ಪ್ರತ್ಯಾರೋಪಗಳು ಕೇಳಿಬರುತ್ತಲೇ ಇದೆ. ಇದೀಗ ಉಪಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್‌ ಅವರು ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕುಮಾರಸ್ವಾಮಿ ಅವರು ಯಾರ್ ಯಾರಿಗೆ ಕಾಲ್ ಮಾಡ್ತಿದ್ದಾರೆ. ಯಾರ್ ಯಾರಿಗೆ ಧಮ್ಕಿ ಹಾಕ್ತಿದ್ದಾರೆ ಅಂತಾ ಎಲ್ಲಾ ಬಂದು ನನಗೆ ಹೇಳ್ತಿದ್ದಾರೆ. ಬಿಜೆಪಿ ಸ್ಟ್ರಾಟಜಿ ಏನು ಅನ್ನೋದು ಎಲ್ಲಾ ಗೊತ್ತಾಗ್ತಿದೆ ಎಂದು ಡಿಕೆಶಿ ಗುಡುಗಿದ್ದಾರೆ.

ಇದನ್ನೂ ಓದಿ: ‘ಕಿತ್ತೋದ್ ನನ್ಮಗ’ ಅನ್ನೋ ಮಾತು ಜಗ್ಗೇಶ್ ಆಡಿದ್ದು ಎಷ್ಟು ಸರಿ? – ವರ್ತೂರು ಸಂತೋಷ್ ಬಗ್ಗೆ ಕೀಳು ಮಾತಿಗೆ ಅಭಿಮಾನಿಗಳ ಬೇಸರ

ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನಗಳು ನಡೆಯೋ ಸಾಧ್ಯತೆಗಳಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿರುವ ವೇಳೆ ಹೆಚ್‌ಡಿಕೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕುಮಾರಸ್ವಾಮಿ ಏನೇನೋ ಹೇಳಿದ್ದಾರಲ್ಲ.. ಎಲ್ಲಾ ನನಗೆ ಗೊತ್ತಿದೆ. ಕುಮಾರಸ್ವಾಮಿ ಅವರು ಕಾಲ್ ಮಾಡಿ ಮಾತನಾಡಿದ್ದಾರೆ. ಧಮ್ಕಿ ಕೂಡ ಹಾಕಿದ್ದಾರೆ. ನಮಗೆ ಯಾರ ಅಗತ್ಯವೂ ಇಲ್ಲ. ವಿಧಾನಸಭಾ ಚುನಾವಣೆಯಲ್ಲಿ ನಾವು 136 ಸೀಟು ಗೆದ್ದಿದ್ದೇವೆ. ಇಬ್ಬರು ಪಕ್ಷೇತರರು ನಮ್ಮ ಜೊತೆಗೆ ಇದ್ದಾರೆ. ಇದು ಅಲ್ಲದೇ ಇನ್ನೂ ಯಾರ್ ಯಾರೋ ಇದ್ದಾರೆ. ಎಲ್ಲವನ್ನೂ ತೋರಿಸಿ ಆಮೇಲೆ ಮಾತಾಡ್ತೀನಿ. ಫೆಬ್ರವರಿ 27ಕ್ಕೆ ನೋಡೋಣ ಏನ್‌ ಆಗುತ್ತೆ ಎಂದು ಡಿಕೆಶಿ ಹೇಳಿದ್ದಾರೆ.

ಇದೇ ವೇಳೆ ಬಿಜೆಪಿ ಯಶವಂತಪುರ ಶಾಸಕ ಎಸ್‌.ಟಿ ಸೋಮಶೇಖರ್ ಅವರ ಜೊತೆ ಒಟ್ಟಿಗೆ ವಿಮಾನದಲ್ಲಿ ಪ್ರಯಾಣ ಮಾಡಿದ್ದಕ್ಕೂ ಡಿಕೆಶಿ ಸ್ಪಷ್ಟನೆ ನೀಡಿದ್ದಾರೆ. ನಂದು ಶಾಸಕ ಗೋಪಾಲಯ್ಯ, ಎಸ್‌.ಟಿ ಸೋಮಶೇಖರ್ ಅವರದ್ದು ವೈಯಕ್ತಿಕ ಸಂಬಂಧ ಇದೆ. ಸೋಮಶೇಖರ್ ಅವರು ಅವರು ಮೂರು ವರ್ಷ ಆ ಕಡೆ ಹೋಗಿದ್ದಾರೆ ಅಷ್ಟೇ. 35 ವರ್ಷ ಜೊತೆಯಲ್ಲೇ ಸಂಸಾರ ಮಾಡಿದ್ದೇವೆ ಎಂದು ಡಿಕೆ ಶಿವಕುಮಾರ್ ಅವರು ಸ್ಫೋಟಕ ಸುಳಿವು ನೀಡಿದ್ದಾರೆ.

Shwetha M