ಬೆಂಗಳೂರಿನ ಪಿಜಿಯಲ್ಲಿ ಸಿಲಿಂಡರ್ ಬ್ಲಾ*ಸ್ಟ್ – ಓರ್ವ ಬಲಿ, ಮೂವರ ಸ್ಥಿತಿ ಗಂಭೀರ

ಬೆಂಗಳೂರಿನ ಪಿಜಿಯಲ್ಲಿ ಸಿಲಿಂಡರ್ ಬ್ಲಾ*ಸ್ಟ್ – ಓರ್ವ ಬಲಿ, ಮೂವರ ಸ್ಥಿತಿ ಗಂಭೀರ

ಪಿಜಿಯೊಂದರ ಅಡುಗೆ ಕೋಣೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಯುವಕನೋರ್ವ ಮೃತಪಟ್ಟು, ಮೂವರು ಗಾಯಗೊಂಡಿರು ಘಟನೆ ನಗರದ  ಬೆಂಗಳೂರಿನ ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಳ್ಳಾರಿ ಮೂಲದ ಅರವಿಂದ್ (23) ಮೃತ ಯುವಕ. ಘಟನೆಯಲ್ಲಿ ವೆಂಕಟೇಶ್, ವಿಶಾಲ್, ಗೋಯಲ್ ಎಂಬುವವರು ಗಾಯಗೊಂಡಿದ್ದು, ಮೂವರ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: NZ ವಿರುದ್ಧ ಯಾರು ಕ್ಯಾಪ್ಟನ್? – ಗೆಲ್ಲೋ KL ಸಾಕಾ.. ಸೋಲೋ ಗಿಲ್ ಬೇಕಾ?cylinder in kundalah

ಕುಂದಲಹಳ್ಳಿಯ ಸೆವೆನ್ ಹಿಲ್ಸ್ ಶ್ರೀಸಾಯಿ ಪಿ.ಜಿ.ಯ ಎರಡನೇ ಮಹಡಿಯಲ್ಲಿ ನಿನ್ನೆ ಸಂಜೆ 6.30ರ ಸುಮಾರಿಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಪಿ,ಜಿಯಲ್ಲಿ ಸುಮಾರು 52 ಮಂದಿ ವಾಸವಿದ್ದರು ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ತೆರಳಿ ಬೆಂಕಿ ನಂದಿಸಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸಿಲಿಂಡರ್ ಸ್ಫೋಟದ ತೀವ್ರತೆಗೆ ಕಟ್ಟಡದ ವಿವಿಧ ಕಡೆ ಬಿರುಕು ಬಿಟ್ಟಿದೆ. ಅಡುಗೆ ಅನಿಲ ಸೋರಿಕೆಯಾಗಿ ಈ ಸ್ಫೋಟ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಳ್ಳಾರಿ ಮೂಲದ ಅರವಿಂದ್ ಸಾಫ್ಟ್ ವೇರ್ ಇಂಜಿನಿಯರ್

ಮೃತ ಅರವಿಂದ್ ಇತ್ತೀಚೆಗಷ್ಟೇ ಈ ಪಿಜಿಗೆ ಸೇರಿಕೊಂಡಿದ್ದರು. ಸಾಫ್ಟ್‌ವೇರ್ ಎಂಜಿನೀಯರ್ ಆಗಿ ಕೆಲಸ ಗಿಟ್ಟಿಸಿಕೊಂಡಿದ್ದ ಅರವಿಂದ್ ಬಳ್ಳೂರಿ ಮೂಲದವನು. ಹಲವು ಕನಸುಗಳನ್ನು ಹೊತ್ತು ಬೆಂಗಳೂರಿಗೆ ಬಂದ ಅಱವಿಂದ್ ದುರಂತ ಅಂತ್ಯಕಂಡಿದ್ದಾನೆ. ಇನ್ನು ಕರ್ನೂಲ್ ಮೂಲದ 28 ವರ್ಷದ ವೆಂಕಟೇಶ್, ಉತ್ತರ ಖಂಡದ ಮೂಲದ 23 ವರ್ಷದ ವಿಶಾಲ್ ಹಾಗೂ 24 ವರ್ಷದ ಸಿವಿ ಗೋಯಲ್ ಗಾಯಗೊಂಡಿದ್ದಾರೆ.

ಪಿಜಿಯಲ್ಲಿ ಗ್ಯಾಸ್ ಲೀಕ್ ಅಗುತ್ತಿದ್ದರೂ ನಿರ್ಲಕ್ಷ್ಯ

ಅವಘಡ ಸಂಭವಿಸಿದ ಪಿಜಿಯಲ್ಲಿರುವ ಸಮನ್ವಯ ಘಟನೆ ಕುರಿತು ವಿವರಣೆ ನೀಡಿದ್ದಾರೆ. ರಾತ್ರಿ 8 ಗಂಟೆ ವೇಳೆಗೆ ಪಿಡಿಯಲ್ಲಿ ಗ್ಯಾಸ್ ಲೀಕ್ ಆಗುತ್ತಿದೆ ಅನ್ನೋ ವಿಚಾರ ಗೊತ್ತಾಗಿದೆ. ಎಲ್ಲರೂ ಗ್ಯಾಸ್ ಲೀಕ್ ಕುರಿತು ಮಾತನಾಡಿಕೊಳ್ಳುತ್ತಿದ್ದರು. ನೆಲ ಮಹಡಿಯಲ್ಲಿನ ಡೈನಿಂಗ್ ಹಾಲ್ ಹಾಗೂ ಕಿಚನ್ ಬಳಿ ಗ್ಯಾಸ್ ಲೀಕ್ ಆಗಿ ಸ್ಫೋಟಗೊಂಡಿದೆ. ನಾವು ಮೇಲ್ಗಡೆ ಮಹಡಿಯಲ್ಲಿ ಇದ್ದ ಕಾರಣ ಸುರಕ್ಷಿತವಾಗಿದ್ದೇವೆ ಎಂದು ಸಮನ್ವಯ್ ಹೇಳಿದ್ದಾರೆ. ನಲ ಮಹಡಿಯಲ್ಲಿದ್ದವರಿಗೆ ಗಾಯವಾಗಿದೆ ಎಂದಿದ್ದಾರೆ. ಗ್ಯಾಸ್ ಲೀಕ್ ಆಗುತ್ತಿದೆ ಎಂದು ಗೊತ್ತಾದರೂ ಪಿಜಿ ಮಾಲೀಕರ ನಿರ್ಲಕ್ಷ್ಯ ತೋರಿದ್ದಾರೆ ಅನ್ನೋ ಆರೋಪಗಳು ಕೇಳಿಬರುತ್ತಿದೆ. ಸುರಕ್ಷತೆ ವಿಚಾರದಲ್ಲಿನ ನಿರ್ಲಕ್ಷ್ಯ ಈ ಅವಘಡಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

Kishor KV