ಮಿಚಾಂಗ್‌ ಚಂಡಮಾರುತದ ಅಬ್ಬರಕ್ಕೆ ತಮಿಳುನಾಡು, ಆಂಧ್ರಪ್ರದೇಶ ತತ್ತರ – ಸಾವಿನ ಸಂಳ್ಯೆ 17ಕ್ಕೆ ಏರಿಕೆ

ಮಿಚಾಂಗ್‌ ಚಂಡಮಾರುತದ ಅಬ್ಬರಕ್ಕೆ ತಮಿಳುನಾಡು, ಆಂಧ್ರಪ್ರದೇಶ ತತ್ತರ – ಸಾವಿನ ಸಂಳ್ಯೆ 17ಕ್ಕೆ ಏರಿಕೆ

ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಮಿಚಾಂಗ್‌ ಚಂಡಮಾರುತವು ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ರೌದ್ರಾವತಾರ ತಾಳಿದೆ. ಕ್ಷಣ ಕ್ಷಣಕ್ಕೂ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ತಮಿಳುನಾಡು ಹಾಗೂ ಆಂಧ್ರದಲ್ಲಿ ಮಳೆ ಸಂಬಂಧಿ ಅನಾಹುತಗಳಿಂದ ಸಾವನ್ನಪ್ಪಿದವರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ.

ತಮಿಳುನಾಡಿನಲ್ಲಿ ಭಾರಿ ಮಳೆಗೆ ಕಾರಣವಾಗಿದ್ದ ಮಿಚೌಂಗ್ ಚಂಡಮಾರುತ ಮಂಗಳವಾರ ಆಂಧ್ರಪ್ರದೇಶದ ಬಾಪ್ಟಾಲಾ ಕರಾವಳಿಯನ್ನು ಅಪ್ಪಳಿಸಿದೆ. ಅದಕ್ಕೂ ಮುನ್ನ ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ತೀವ್ರ ಮಳೆಯಾಗಿದೆ. ಚೆನ್ನೈ ಮತ್ತು ಸುತ್ತಮುತ್ತ ಮಳೆಸಂಬಂಧಿ ಅನಾಹುತಗಳಿಗೆ ಬಲಿಯಾದವರ ಸಂಖ್ಯೆ 17ಕ್ಕೆ ಏರಿದೆ. 11 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಮಿಚಾಂಗ್‌ ಚಂಡಮಾರುತದ ರೌದ್ರಾವತಾರಕ್ಕೆ ಚೆನ್ನೈ ಜಲಾವೃತ – ಸಾವಿನ ಸಂಖ್ಯೆ 8 ಕ್ಕೆ ಏರಿಕೆ

ಮಂಗಳವಾರ ಮಧ್ಯಾಹ್ನ 12.30ರಿಂದ 2.30ರ ನಡುವೆ ಸುಮಾರು 100 ಕಿಮೀ ವೇಗದಲ್ಲಿ ಚಂಡಮಾರುತ ಬಾಪ್ಟಾಲಾ ಜಿಲ್ಲೆಯನ್ನು ಹಾದು ಹೋಯಿತು. ಜಿಲ್ಲಾ ವಿಪತ್ತು ಸ್ಪಂದನಾ ತಂಡಗಳು (ಡಿಡಿಆರ್​ಟಿ) ಮಳೆಸಂತ್ರಸ್ತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳನ್ನು ನಡೆಸುತ್ತಿವೆ. ಜನರನ್ನು ರಕ್ಷಿಸುವ ಕಾರ್ಯದಲ್ಲಿ ಮೀನುಗಾರಿಕೆ ದೋಣಿಗಳು ಮತ್ತು ಕೃಷಿ ಟ್ರಾ್ಯಕ್ಟರ್​ಗಳನ್ನು ಕೂಡ ಬಳಸಿಕೊಳ್ಳಲಾಗುತ್ತಿದೆ. ದಕ್ಷಿಣ ಆಂಧ್ರ ಪ್ರದೇಶದಲ್ಲಿ ಚಂಡಮಾರುತ ಅಪ್ಪಳಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಮಿಚೌಂಗ್ ಚಂಡಮಾರುತದ ಪರಿಣಾಮವಾಗಿ ಮಳೆಯಬ್ಬರದಿಂದ ತತ್ತರಿಸಿದ ಚೆನ್ನೈನಲ್ಲಿ ಜನರನ್ನು ರಕ್ಷಿಸಲು ನೌಕಾ ಪಡೆಯ ದೋಣಿಗಳನ್ನು (ತೆಪ್ಪ) ನಿಯೋಜಿಸಲಾಗಿದೆ. ಚೆನ್ನೈನ ಪೆರಿಯಾರ್ ನಗರ ಮತ್ತು ರಾಮ ನಗರದ ಪ್ರವಾಹ ಪೀಡಿತ ಜನರನ್ನು ಅವರ ಮನೆಗಳಿಂದ ನೇವಿ ನೌಕೆಗಳ ಸಿಬ್ಬಂದಿ ಸುರಕ್ಷಿತವಾಗಿ ತೆರವು ಮಾಡಿದರು. ನೇವಿ ಸಿಬ್ಬಂದಿ ಆಳವಾದ ತ್ಯಾಜ್ಯ ನೀರಿನಲ್ಲಿ ದೋಣಿಗಳನ್ನು ಚಲಾಯಿಸಿಕೊಂಡು ಜನರನ್ನು ರಕ್ಷಿಸಿದ್ದಾರೆ.

ಆಹಾರ ಪೊಟ್ಟಣ ವಿತರಣೆ

ನಗರದ ಕೆಲವು ಜಲಾವೃತ ಪ್ರದೇಶಗಳಲ್ಲಿ ನೇವಿ ಸಿಬ್ಬಂದಿ ದೋಣಿಗಳಲ್ಲಿ ಮನೆಬಾಗಿಲಿಗೆ ತೆರಳಿ ಆಹಾರ ಪೊಟ್ಟಣಗಳನ್ನು ವಿತರಿಸಲಾಗಿದೆ. ಜಲಾವೃತ ರಸ್ತೆಗಳ ಮೂಲಕ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆತರುತ್ತಿರುವ ದೃಶ್ಯಗಳು ಸಾಮಾನ್ಯವಾಗಿದ್ದವು.

ಆಂಧ್ರದಲ್ಲಿ ರೆಡ್ ಅಲರ್ಟ್ ಘೋಷಣೆ

ಮಿಚೌಂಗ್ ಚಂಡಮಾರುತ ಅಪ್ಪಳಿಸಲಿರುವ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ರ್ಚಚಿಸಿದರು. ತಿರುಪತಿ, ನೆಲ್ಲೂರು, ಪ್ರಕಾಶಂ, ಬಾಪ್ಟಾಲಾ, ಕೃಷ್ಣಾ, ಪಶ್ಚಿಮ ಗೋದಾವರಿ, ಕೋನಸೀಮಾ ಮತ್ತು ಕಾಕಿನಾಡ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ತಮಿಳುನಾಡು, ಆಂಧ್ರ ಮತ್ತು ಪುದುಚೇರಿ ಸಿಎಂಗಳೊಂದಿಗೆ ದೂರವಾಣಿ ಮೂಲಕ ರ್ಚಚಿಸಿ ಕೇಂದ್ರದ ಸಂಪೂರ್ಣ ಸಹಕಾರದ ಭರವಸೆ ನೀಡಿದರು.

Shwetha M