ದಿತ್ವಾಹ್ ಚಂಡಮಾರುತ ಎಫೆಕ್ಟ್‌! – ಮುಂದಿನ 48 ಗಂಟೆಗಳಲ್ಲಿ ತಮಿಳುನಾಡು, ಆಂಧ್ರ ಕರಾವಳಿಯಲ್ಲಿ ಭಾರೀ ಮಳೆ!

ದಿತ್ವಾಹ್ ಚಂಡಮಾರುತ ಎಫೆಕ್ಟ್‌! – ಮುಂದಿನ 48 ಗಂಟೆಗಳಲ್ಲಿ ತಮಿಳುನಾಡು, ಆಂಧ್ರ ಕರಾವಳಿಯಲ್ಲಿ ಭಾರೀ ಮಳೆ!

ನೈಋುತ್ಯ ಬಂಗಾಳಕೊಲ್ಲಿಯಲ್ಲಿ ಮತ್ತು ಶ್ರೀಲಂಕಾ ಕರಾವಳಿಯ ಸಮೀಪ ವಾಯುಭಾರ ಕುಸಿತವಾಗಿದ್ದು, ಇದು ತೀವ್ರತೆ ಪಡೆದುಕೊಳ್ತಿದೆ.  ಇನ್ನು ಮುಂದಿನ ಕೆಲ ಗಂಟೆಗಳಲ್ಲಿ ಇದು ಚಂಡಮಾರುತವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಇದೆ. ತಮಿಳುನಾಡು ಕರಾವಳಿಗೆ ದಿತ್ವಾಹ್ ಚಂಡಮಾರುತ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಇದನ್ನೂ ಓದಿ: ನನ್ನ – ಡಿಕೆ ನಡುವೆ ಭಿನ್ನ ಇಲ್ಲ.. ನಾವು ಒಟ್ಟಾಗಿದ್ದೇವೆ! – ಪವರ್‌ ಶೇರಿಂಗ್‌ ಫೈಟ್‌ಗೆ ತೆರೆ ಎಳೆದ ಸಿಎಂ, ಡಿಸಿಎಂ

ದಿತ್ವಾಹ್ ಚಂಡಮಾರುತದ ಎಫೆಕ್ಟ್‌ ಕರಾವಳಿ ಪ್ರದೇಶಗಳಿಗೆ ಹೆಚ್ಚಾಗಿರಲಿದೆ. ಇದೀಗ ತಮಿಳುನಾಡಿನಲ್ಲಿ ಭಾರಿ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ತಮಿಳುನಾಡಿನಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆ ಹಾಗೂ ಬಲವಾದ ಗಾಳಿ ಬೀಸುವ ಮುನ್ಸೂಚನೆಯಿರುವ ಕಾರಣ ಚೆನ್ನೈನ ವಿಮಾನಯಾನ ಅಧಿಕಾರಿಗಳು 54 ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದ್ದಾರೆ. ಪರಿಣಾಮ ಮಧುರೈ, ತಿರುಚಿರಾಪಳ್ಳಿ, ತೂತುಕುಡಿ, ಸೇಲಂ, ಬೆಂಗಳೂರು, ಹೈದರಾಬಾದ್ ಮತ್ತು ಜಾಫ್ನಾ ಮುಂತಾದ ಸ್ಥಳಗಳಿಗೆ ಸಂಚರಿಸಬೇಕಿದ್ದ ವಿಮಾನಗಳು ರದ್ದುಗೊಂಡಿವೆ. ನಿರ್ಗಮನ ಮತ್ತು ಆಗಮನ ಎರಡು ಮಾರ್ಗದ ವಿಮಾನಗಳನ್ನು ರದ್ದುಗೊಳಿಸಲಾಗಿದ್ದು, ಭಾರೀ ಮಳೆ ಹಾಗೂ ಗಾಳಿಯಿಂದ ಉಂಟಾಗುವ ಅಪಾಯಗಳನ್ನು ತಡೆಯಲು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಭಾನುವಾರ (ನ.30) ಬೆಳಗಿನ ಜಾವ `ದಿತ್ವಾಹ್ ಚಂಡಮಾರುತ’ ಉತ್ತರ-ವಾಯ್ಯುವ ದಿಕ್ಕಿಗೆ ಚಲಿಸುವ ಸಾಧ್ಯತೆಯಿದ್ದು, ಉತ್ತರ ತಮಿಳುನಾಡು, ಪುದುಚೇರಿ ಹಾಗೂ ದಕ್ಷಿಣ ಆಂಧ್ರಪ್ರದೇಶದ ಕರಾವಳಿಗೆ ತಲುಪಲಿದೆ. ಚೆಂಗಲ್ಪಟ್ಟು, ವಿಲ್ಲುಪುರಂ, ಕಡಲೂರು ಮತ್ತು ಮೈಲಾಡುತುರೈ, ಚೆನ್ನೈ, ಕಾಂಚಿಪುರಂ, ತಿರುವಲ್ಲೂರು, ರಾಣಿಪೇಟೆ, ತಿರುವಣ್ಣಾಮಲೈ, ಸೇಲಂ, ಕಲ್ಲಕುರಿಚಿ, ಪೆರಂಬಲೂರು, ತಿರುಚಿ, ಅರಿಯಲೂರು, ತಂಜಾವೂರು, ಪುದುಕೊಟ್ಟೈ, ತಿರುವರೂರು, ನಾಗಪಟ್ಟಣಂನಂತಹ ಡೆಲ್ಟಾ, ವೆಲ್ಲೂರು, ತಿರುಪತ್ತೂರು, ಕೃಷ್ಣಗಿರಿ, ಧರ್ಮಪುರಿ, ನಾಮಕ್ಕಲ್ ಮತ್ತು ಕರೂರ್‌ಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇನ್ನೂ ತಮಿಳುನಾಡು ಕರಾವಳಿಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾಗಿದ್ದು, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ತಂಜಾವೂರಿನ ಕರಾವಳಿ ಪ್ರದೇಶಗಳಲ್ಲಿ ಮೀನುಗಾರರು ದೋಣಿಗಳಿಗೆ ಸುರಕ್ಷಿತವಾಗಿ ಲಂಗರು ಹಾಕಿದ್ದಾರೆ.

Shwetha M