24 ಗಂಟೆಗಳಲ್ಲಿ ಮತ್ತಷ್ಟು ದುರ್ಬಲಗೊಳ್ಳಲಿದೆ ಬಿಪರ್‌ಜಾಯ್‌ ಚಂಡಮಾರುತ

24 ಗಂಟೆಗಳಲ್ಲಿ ಮತ್ತಷ್ಟು ದುರ್ಬಲಗೊಳ್ಳಲಿದೆ ಬಿಪರ್‌ಜಾಯ್‌ ಚಂಡಮಾರುತ

ಗುಜರಾತ್:‌ ಬಿಪರ್‌ ಜಾಯ್‌ ಚಂಡಮಾರುತ ಕಳೆದ ಒಂದು ವಾರದಿಂದ ಅಬ್ಬರಿಸುತ್ತಿದೆ. ಚಂಡಮಾರುತದಿಂದಾಗಿ ಕರಾವಳಿ ಪ್ರದೇಶಗಳಲ್ಲಿ ಭೂಕುಸಿತ, ಕಡಲ್ಕೊರೆತ ಸೇರಿದಂತೆ ಸಾಕಷ್ಟು ಹಾನಿ ಸಂಭವಿಸಿದೆ. ಇದೀಗ ಬಿಪರ್‌ಜಾಯ್‌ ನಿಧಾನಕ್ಕೆ ದುರ್ಬಲಗೊಳ್ಳುತ್ತಿದ್ದು ಮುಂದಿನ 24 ಗಂಟೆಗಳಲ್ಲಿ ಮತ್ತಷ್ಟು ದುರ್ಬಲಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ವಿದ್ಯುತ್‌ ದರ ಏರಿಕೆ ಬೆನ್ನಲ್ಲೇ ಜನಸಾಮಾನ್ಯರಿಗೆ ಮತ್ತೊಂದು ಶಾಕ್‌! – ಸೋಲಾರ್​ ಸಬ್ಸಿಡಿ ಕಟ್

ಈ ಬಗ್ಗೆ ಟ್ವೀಟ್‌ ಮಾಡಿರುವ ಐಎಂಡಿ, ಸೈಕ್ಲೋನಿಕ್ ಚಂಡಮಾರುತ ಬಿಪೊರ್ ಜೋಯ್ ನಿನ್ನೆ ಆಗ್ನೇಯ ಪಾಕಿಸ್ತಾನದ ನೈಋತ್ಯ ರಾಜಸ್ಥಾನ ಮತ್ತು ಕಚ್ ಧೋಲಾವಿರಾದಿಂದ ಸುಮಾರು 100 ಕಿಮೀ ಈಶಾನ್ಯದಲ್ಲಿ ದುರ್ಬಲಗೊಂಡಿದೆ. ಮುಂದಿನ 12 ಗಂಟೆಗಳಲ್ಲಿ ಮತ್ತಷ್ಟು ದುರ್ಬಲಗೊಳ್ಳಲಿದೆ ಎಂದು ಮಾಹಿತಿ ನೀಡಿದೆ.

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ತಮ್ಮ ಜಿಲ್ಲೆಗಳಲ್ಲಿನ ಹಾನಿಯನ್ನು ನಿರ್ಣಯಿಸಲು ಸಮೀಕ್ಷೆ ನಡೆಸುವಂತೆ ಸಂತ್ರಸ್ತ ಪ್ರದೇಶಗಳ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಬಿಪರ್‌ ಜಾಯ್‌ ಚಂಡಮಾರುತದಿಂದ ಭಾರೀ ಗಾಳಿ ಮತ್ತು ಮಳೆಯಿಂದಾಗಿ ಗುಜರಾತ್‌ನ ಜಾಮ್‌ನಗರ ಜಿಲ್ಲೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಸಮಸ್ಯೆಯನ್ನು ಸರಿಪಡಿಸಲು ಪಶ್ಚಿಮ ಗುಜರಾತ್ ವಿಜ್ ಕಂಪನಿ ಲಿಮಿಟೆಡ್ ತಂಡಗಳು ಸ್ಥಳಕ್ಕೆ ತೆರಳಿವೆ. ಹಾನಿಗೀಡಾದ ಆಸ್ತಿಗಳ ಪೈಕಿ 414 ಫೀಡರ್‌ಗಳು, 221 ವಿದ್ಯುತ್ ಕಂಬಗಳು ಮತ್ತು ಒಂದು ಟಿಸಿಯನ್ನು ತಕ್ಷಣವೇ ದುರಸ್ಥಿಗೊಳಿಸಲಾಗಿದೆ. ಜಾಮ್‌ನಗರ ಜಿಲ್ಲೆಯ 367 ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯನ್ನು ಪುನಃಸ್ಥಾಪಿಸಲಾಗಿದೆ.

suddiyaana