ʼಬಿಪರ್‌ ಜಾಯ್‌ʼ ಹೊಡೆತಕ್ಕೆ ಗುಜರಾತ್‌ ಗಢಗಢ! –  ಚಂಡಮಾರುತಕ್ಕೆ ತಂದೆ ಮಗ ಸಾವು

ʼಬಿಪರ್‌ ಜಾಯ್‌ʼ ಹೊಡೆತಕ್ಕೆ ಗುಜರಾತ್‌ ಗಢಗಢ! –  ಚಂಡಮಾರುತಕ್ಕೆ ತಂದೆ ಮಗ ಸಾವು

ಬಿಪರ್ ಜಾಯ್‌ ಚಂಡಮಾರುತದ ತೀವ್ರತೆ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಆಳೆತ್ತರದ ಅಲೆಗಳು ಸಮುದ್ರತೀರದಲ್ಲಿ ಆರ್ಭಟಿಸುತ್ತಿದೆ. ಈ ಚಂಡಮಾರುತ ಕರಾವಳಿಯ ಸಮುದ್ರತೀರಗಳಲ್ಲಿ ಕೋಲಾಹಲ ಸೃಷ್ಟಿಸಿದೆ. ಗುಜರಾತ್‌ನಲ್ಲಿ ಬಿಪರ್‌ ಜಾಯ್‌ ಚಂಡಮಾರುತದ ಅಬ್ಬರಕ್ಕೆ ಇಬ್ಬರು ಬಲಿಯಾಗಿದ್ದಾರೆ.

ಗುಜರಾತ್​ನ ಭಾವ್​ನಗರದಲ್ಲಿ ಭಾರಿ ಮಳೆಯಲ್ಲಿ ಸಿಲುಕಿ ತಂದೆ-ಮಗ ಮೃತಪಟ್ಟಿದ್ದಾರೆ. ನೀರಿನಲ್ಲಿ ಸಿಲುಕಿದ್ದ ಜಾನುವಾರುಗಳ ರಕ್ಷಣೆಗೆ ತೆರಳಿದ್ದ ವೇಳೆ ತಂದೆ-ಮಗ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸತ್ತವರನ್ನು ಗೌರವಿಸಿ ಸತ್ತವರ ಪಕ್ಕದಲ್ಲಿಯೇ ಊಟ ಮಾಡಿ – ಈ ರೆಸ್ಟೋರೆಂಟ್‌ಗ ಬರಲು ‘ಗುಂಡಿಗೆ’ ಗಟ್ಟಿಯಿರಬೇಕು..!

ಸಿಹೋರ್ ಪಟ್ಟಣದ ಬಳಿಯ ಭಂಡಾರ್ ಗ್ರಾಮದ ಮೂಲಕ ಹಾದುಹೋಗುವ ಕಮರಿಯಲ್ಲಿ ನೀರು ಹರಿಯಲು ಪ್ರಾರಂಭಿಸಿದೆ. ಹಠಾತ್ ನೀರಿನ ಒಳಹರಿವಿನಿಂದಾಗಿ ಜಾನುವಾರುಗಳ ಹಿಂಡು ಕಂದರದಲ್ಲಿ ಸಿಲುಕಿಕೊಂಡಿತ್ತು. ಅವುಗಳನ್ನು ರಕ್ಷಿಸಲು ತಂದೆ ರಾಮ್ಜಿ ಪರ್ಮಾರ್ ಮತ್ತು ಅವರ ಮಗ ರಾಕೇಶ್ ಪರ್ಮಾರ್ (22) ಹೋಗಿದ್ದಾರೆ. ಈ ವೇಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಜರಾತ್‌ನಲ್ಲಿ ಬಿಪರ್‌ಜಾಯ್‌ ಚಂಡಮಾರುತದ ಅಬ್ಬರ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಈಗಾಗಲೇ ಕಡಲತೀರದಲ್ಲಿ ವಾಸಿಸುತ್ತಿರುವ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ. ಜನರು ವಸತಿ ಪ್ರದೇಶದಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ಗುರುವಾರ ರಾತ್ರಿಯಿಂದ ಗಾಳಿಯ ವೇಗ ಹೆಚ್ಚಾಗಿದೆ. ಜನರಲ್ಲಿ ಆತಂಕ ಮನೆ ಮಾಡಿದೆ. ಇದು ಈಶಾನ್ಯಕ್ಕೆ ಚಲಿಸುವ ನಿರೀಕ್ಷೆಯಿದೆ ಮತ್ತು ಜೂನ್ 16 ರಂದು ಮುಂಜಾನೆ ಸೈಕ್ಲೋನಿಕ್ ಚಂಡಮಾರುತವಾಗಿ ದುರ್ಬಲಗೊಳ್ಳುತ್ತದೆ ಮತ್ತು ಅದೇ ವೇಳೆಗೆ ದಕ್ಷಿಣ ರಾಜಸ್ಥಾನದ ಮೇಲೆ ಕಡಿಮೆ ಒತ್ತಡಕ್ಕೆ ಒಳಗಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಚಂಡಮಾರುತವು ಈಶಾನ್ಯಕ್ಕೆ ಚಲಿಸಿದೆ ಮತ್ತು ಸೌರಾಷ್ಟ್ರ-ಕಚ್ ಪಕ್ಕದ ಪಾಕಿಸ್ತಾನ ಕರಾವಳಿಯನ್ನು ಗುಜರಾತ್ ಜಖೌ ಬಂದರಿನ ಹತ್ತಿರ ದಾಟಿದೆ. ಚಂಡಮಾರುತದ ತೀವ್ರತೆಯು ಗಂಟೆಗೆ 105-115 ಕಿ.ಮೀಗೆ ಕಡಿಮೆಯಾಗಿದೆ. ಅತ್ಯಂತ ತೀವ್ರ ಸೈಕ್ಲೋನಿಕ್ ಚಂಡಮಾರುತದಿಂದ (ವಿಎಸ್‌ಸಿಎಸ್) ತೀವ್ರ ಸೈಕ್ಲೋನಿಕ್ ಚಂಡಮಾರುತಕ್ಕೆ (ಎಸ್‌ಸಿಎಸ್) ಬದಲಾಗಿದೆ. ಇಂದು ರಾಜಸ್ಥಾನದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ.

ಚಂಡಮಾರುತದಿಂದಾಗಿ ಗುಜರಾತ್‌ನ ಕರಾವಳಿ ಪ್ರದೇಶಗಳಲ್ಲಿ ಭೂಕುಸಿತ  ಉಂಟಾಗಿದೆ. ಗುಜರಾತಿನ ಬೇರೆ ಬೇರೆ ಸ್ಥಳಗಳಲ್ಲಿ 524 ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಸುಮಾರು 940 ಹಳ್ಳಿಗಳಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ಚಂಡಮಾರುತದಿಂದ ಭೂಕುಸಿತ ಪ್ರಕ್ರಿಯೆಯು ಪ್ರಾರಂಭವಾದಾಗ, ಗಂಟೆಗೆ 120 ಕಿಮೀ ವೇಗದಲ್ಲಿ ಬಿರುಗಾಳಿ ಬೀಸಿತು ಮತ್ತು ರಾಜ್ಯದ ಸೌರಾಷ್ಟ್ರ ಮತ್ತು ಕಚ್ ಕರಾವಳಿಯಲ್ಲಿ ಭಾರೀ ಮಳೆ ಸುರಿಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

suddiyaana