ಬಕುಂಗ್ ಚಂಡಮಾರುತ ಭೀತಿ – ಬೆಂಗಳೂರನ್ನು ಕಾಡಲಿದೆ ಶೀತಗಾಳಿ !

ಬಕುಂಗ್ ಚಂಡಮಾರುತ ಭೀತಿ –  ಬೆಂಗಳೂರನ್ನು ಕಾಡಲಿದೆ ಶೀತಗಾಳಿ !

ದಿತ್ವಾ ಅಬ್ಬರ ಮುಗಿಯುತ್ತಾ ಬರುತ್ತಿದ್ದಂತೆ ಮತ್ತೊಂದು ಚಂಡಮಾರುತ ರೆಡಿಯಾಗಿದೆ. ಈಗಾಗಲೇ ಚಳಿಯಿಂದ ನಡುಗುತ್ತಿರುವ ಬೆಂಗಳೂರಿಗೆ ಹೊಸ ಚೆಂಡಮಾರುತ ಕೊಡಬಾರದ ಕಾಟ ಕೊಡಲಿದೆ. ಬಕುಂಗ್ ಚಂಡಮಾರುತ ಈಗಾಗಲೇ ಇಂಡೋನೇಷ್ಯಾ ಕಡೆಗೆ ಚಲಿಸಿದ್ದು, ಇದರ ಎಫೆಕ್ಟ್ ಇನ್ನೆರೆಡು ದಿನಗಳಲ್ಲಿ ಗೊತ್ತಾಗಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ:ಟೀ, ಕಾಫಿ ಕುಡಿಯುವಾಗ ಈ ಆಹಾರ ಸೇವಿಸ್ತೀರಾ? – ಎಚ್ಚರ ನಿಮ್ಮ ಆರೋಗ್ಯ ಹಾಳಾಗೋ ಮುನ್ನ ಈ ವಿಚಾರ ತಿಳಿದುಕೊಳ್ಳಿ!

ಬಕುಂಗ್ ಚಂಡಮಾರುತವು ಗಂಟೆಗೆ 85 ಕಿಲೋಮೀಟರ್ ವೇಗದಲ್ಲಿ ಇಂಡೋನೇಷ್ಯಾದಿಂದ ಪಶ್ಚಿಮಕ್ಕೆ ಚಲಿಸುತ್ತಿದೆ. ಇದು ಸಾಗರದಲ್ಲಿ ಎದ್ದಿದ್ದು, ಸಾಗರದಲ್ಲೇ ಕೊನೆಗೊಳ್ಳುವ ಸಾಧ್ಯತೆಯಿದೆ. ಬಕುಂಗ್ ಚಂಡಮಾರುತವು ಪ್ರಸ್ತುತ ಗರಿಷ್ಠ 35 ನಾಟ್‌ ಗಳ (ಗಂಟೆಗೆ ಸುಮಾರು 65 ಕಿಲೋಮೀಟರ್) ವೇಗದಲ್ಲಿ ಗಾಳಿ ಬೀಸುತ್ತಿದೆ. ಬಕುಂಗ್ ಇಂಡೋನೇಷ್ಯಾದಿಂದ ದೂರದಲ್ಲಿ ಚಲಿಸುತ್ತಿದ್ದರೂ, ಮುಂದಿನ ಒಂದು ಅಥವಾ ಎರಡು ದಿನಗಳಲ್ಲಿ ಹವಾಮಾನ ಪರಿಸ್ಥಿತಿಗಳು ಬದಲಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಂದಿನ 24 ಗಂಟೆಗಳಲ್ಲಿ, ಬಕುಂಗ್ ಚಂಡಮಾರುತದ ಗರಿಷ್ಠ ಗಾಳಿಯ ವೇಗ ಗಂಟೆಗೆ ಸುಮಾರು 100 ಕಿಲೋಮೀಟರ್‌ಗೆ ಹೆಚ್ಚಾಗಬಹುದು ಎಂದು ಬಿಎಂಕೆಜಿ ಮುನ್ಸೂಚನೆ ನೀಡಿದೆ. ಇದು 2 ನೇ ವರ್ಗದ ಉಷ್ಣವಲಯದ ಚಂಡಮಾರುತವಾಗಿ ಪರಿಣಮಿಸುತ್ತದೆ. ಕರ್ನಾಟಕ, ಆಂಧ್ರ, ತಮಿಳುನಾಡಿನ ಮೇಲೆ ಎಫೆಕ್ಟ್ ಆಗಲಿದೆ. ಮಳೆ ಬರುವ ಸಾಧ್ಯತೆ ಇಲ್ಲ. ಗಂಟೆಗೆ 10 ರಿಂದ 12 ಕಿಲೋಮೀಟರ್ ವೇಗದಲ್ಲಿ ಶೀತಗಾಳಿ ಬೀಸಲಿದೆ. ಶೀತಗಾಳಿಯಲ್ಲಿ ಕೇವಲ ಒಂದು ಗಂಟೆ ನಡೆದರೆ ರೋಗನಿರೋಧಕ ಶಕ್ತಿ ಶೇಕಡಾ 20 ರಷ್ಟು ಕಡಿಮೆಯಾಗುತ್ತದೆ. ಶನಿವಾರ ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳಲ್ಲಿ ಅಲೆಗಳು ಏಳುತ್ತವೆ. ಐಎಂಡಿ ಪ್ರಕಾರ, ಚಂಡಮಾರುತವು ಪ್ರಸ್ತುತ ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ಕೇಂದ್ರೀಕೃತವಾಗಿದ್ದು, ಪಶ್ಚಿಮದ ಕಡೆಗೆ ಸ್ಥಿರವಾಗಿ ಚಲಿಸುತ್ತಿದೆ. ಶನಿವಾರ, ಇದು ಪೋರ್ಟ್ ಬ್ಲೇರ್‌ನಿಂದ 460 ಕಿಮೀ ಪಶ್ಚಿಮ-ನೈಋತ್ಯ, ಚೆನ್ನೈನಿಂದ 950 ಕಿಮೀ ಪೂರ್ವ-ಆಗ್ನೇಯ ಮತ್ತು ಕಾಕಿನಾಡದಿಂದ 970 ಕಿಮೀ ಆಗ್ನೇಯದಲ್ಲಿತ್ತು.

ಬೆಂಗಳೂರಿನಲ್ಲಿ ಮತ್ತೆ ತೀವ್ರ ಚಳಿಯ ವಾತಾವರಣವಿದೆ. ಮುಂದಿನ ಒಂದು ವಾರ ಇದೇ ರೀತಿ ಚಳಿ ಮುಂದುವರೆಯುವ ಮುನ್ಸೂಚನೆ ಇದೆ. ಕನಿಷ್ಟ ತಾಪಮಾನ 12-14 ಡಿಗ್ರಿ ಸೆಲ್ಸಿಯಸ್‌ಗೆ ತಲುಪುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.  ಗಾಳಿಯ ಗುಣಮಟ್ಟದಲ್ಲೂ ತೀವ್ರ ಕುಸಿತ ಕಂಡುಬಂದಿದೆ.

Sulekha