ದಿನೇದಿನೆ ಹೆಚ್ಚುತ್ತಿದೆ ಸೈಬರ್ ಕ್ರೈಂ..!- ನೀವು ಎಷ್ಟು ಸೇಫ್..? ಹೇಗಿದೆ ದೋಖಾ..?
ಲಿಂಕ್.. ಮಾರ್ಫಿಂಗ್.. ಮಹಾಮೋಸ..!

ದಿನೇದಿನೆ ಹೆಚ್ಚುತ್ತಿದೆ ಸೈಬರ್ ಕ್ರೈಂ..!- ನೀವು ಎಷ್ಟು ಸೇಫ್..? ಹೇಗಿದೆ ದೋಖಾ..?ಲಿಂಕ್.. ಮಾರ್ಫಿಂಗ್.. ಮಹಾಮೋಸ..!

ಒಂದ್ ಕಾಲದಲ್ಲಿ ವಸ್ತುಗಳಿಗೆ ವಸ್ತು ಕೊಟ್ಟು ವ್ಯವಹಾರ ಮಾಡುತ್ತಿದ್ದರು.. ಹಾಸಿಗೆ ಇದ್ದಷ್ಟೇ ಕಾಲು ಚಾಚುತ್ತಿದ್ದರು.. ಆದ್ರೆ ಈಗ ಹಾಗಿಲ್ಲ. ಎಲ್ಲವೂ ಕಲರ್ ಫುಲ್.. ಮೊಬೈಲ್ ಬಂದ ಮೇಲೆ ಹಣಕ್ಕೆ ಬೆಲೆಯೇ ಇಲ್ಲದಂತಾಗಿದೆ.. ನೋಡ ನೋಡುತ್ತಿದ್ದಂತೆ ದುಡ್ಡು ಮಾಡ್ಬೇಕು ಅನ್ನೋ ಆಸೆ ಹೆಚ್ಚಾಗುತ್ತಿದೆ.. ದಿನದ 24 ಗಂಟೆಯಲ್ಲಿ ಅತೀ ಹೆಚ್ಚು ಸಮಯವನ್ನ ಮೊಬೈಲ್ ನೋಡುತ್ತಲೇ ಕಳೆಯುತ್ತೇವೆ.. ಇದೇ ವಿಕ್ನೇಸ್ ಕೆಲ ಕದೀಮರಿಗೆ ಪ್ಲೇಸ್ ಆಗಿದೆ.

ಇದನ್ನೂ ಓದಿ:  ಮುಡಾ ಶಾಕ್.. ಸಿದ್ದು ಕುರ್ಚಿ ಶೇಕ್ – ರಾಜೀನಾಮೆ ಕೊಡ್ತಾರಾ ಮಾಸ್ ಲೀಡರ್?

ಮೊಬೈಲ್ ಅನ್ನೋ ಮಾಯ ವಸ್ತು ಬಂದ ಮೇಲೆ ಎಲ್ಲವೂ ಅಲ್ಲೋಲ ಕಲ್ಲೋಲ ಆಗಿದೆ. ನಮ್ಮ ಎಲ್ಲಾ ಮಾಹಿತಿಗಳು ಬೇರೆಯವರ ಕೈಯಲ್ಲಿ ಸೇರಿವೆ.. ಮೊಬೈಲ್‌ನಿಂದ 100ರಲ್ಲಿ 10 ಜನರಿಗೆ ಒಳ್ಳೆಯದು ಆಗಿದ್ರೆ, ಇನ್ನೂ 90 ರಷ್ಟು ಜನಗಳಿಕೆ ಕೆಟ್ಟದ್ದೇ ಆಗಿದೆ.. ಮೊಬೈಲ್‌ಗೆ ಬರೋ ಕರೆಗಳು, ಲಿಂಕ್‌ಗಳು ನಮ್ಮ ಅಕೌಂಟ್‌ಗೆ ಕನ್ನ ಹಾಕುತ್ತಿವೆ..  ವ್ಯಕ್ತಿಗಳ ದುರ್ಬಲತೆ ಮತ್ತು ಅಗತ್ಯತೆಗಳನ್ನು ಬಂಡವಾಳವಾಗಿಸಿಕೊಂಡ ಸೈಬರ್​ ಅಪರಾಧಿಗಳು ಜನಗಳ ಜೇಬಿಗೆ ಒಂದು ರೂಪಾಯಿ ಕರ್ಚು ಮಾಡದೇ ಕತ್ತರಿ ಹಾಕುವ ಕೆಲಸ ಮಾಡುತ್ತಿದ್ದಾರೆ.  ಇತ್ತೀಚಿನ ದಿನದಲ್ಲಿ ಈ ಪ್ರಕರಣದಲ್ಲಿ ಭಾರೀ ಏರಿಕೆ ಕಂಡಿದ್ದು, ಸೈಬರ್​ ಕ್ರೈಂ ಪೊಲೀಸರು ಬಿಡುಗಡೆ ಮಾಡಿದ ವರದಿ ಶಾಕ್ ಆಗುವಂತೆ ಮಾಡಿದೆ. ಕಳೆದ 8 ತಿಂಗಳಿನಿಂದ ಈ ಸಂಬಂಧ 2,000 ಪ್ರಕರಣ ದಾಖಲಾಗಿದ್ದು, 205 ಕೋಟಿ ರೂ. ಸೈಬರ್​ ಅಪರಾಧ ನಡೆದಿದೆಯಂತೆ. ಒಂದೊಂದು ರೀತಿಯಲ್ಲಿ ಸೈಬರ್ ವಂಚಕರು ಕನ್ನ ಹಾಕುತ್ತಿದ್ದು,  ಟಾರ್ಗೆಟ್ ಮಾಡಿ ವಂಚಿಸುತ್ತಿದ್ದಾರೆ..

ಲಿಂಕ್ ಕ್ಲಿಕ್..  20 ಲಕ್ಷ ರೂ. ನಷ್ಟ..!

ಅದರಲ್ಲೂ ಕೆಲ ದಿನಗಳ ಹಿಂದೆ  ಸಿಕಂದರಾಬಾದ್‌ನಲ್ಲಿ ನಡೆದ ಘಟನೆ ಅಮಾಯಕರನ್ನು ಹೇಗೆ ಮೋಸ ಮಾಡಲಾಗುತ್ತೆ ಅನ್ನೋದಕ್ಕೆ  ತಾಜಾ ಉದಾಹರಣೆಯಾಗಿದೆ. ಪಾರ್ಟ್​ ಟೈಂ ಉದ್ಯೋಗವಕಾಶದ ಆಸೆಗೆ ಬಲಿಯಾದ ಯುವಕ ಮೊಬೈಲ್​ಗೆ ಬಂದ ಅನುಮಾನಾಸ್ಪದ ಲಿಂಕ್​ ಕ್ಲಿಕ್​ ಮಾಡಿದ್ದ.  ಕಡಿಮೆ ಅವಧಿಯಲ್ಲಿ 10 ಸಾವಿರ ಗಳಿಸಿದ. ದುಪ್ಪಟ್ಟು ಆದಾಯದ ಆಸೆಗೆ ಬಲಿಯಾಗಿ ಕಡೆಗೆ 20 ಲಕ್ಷ ನಷ್ಟ ಅನುಭವಿಸಿದ್ದಾನೆ.

ಇದೇ ರೀತಿಯ ಮತ್ತೊಂದು ವಂಚನೆ ಪ್ರಕರಣ ಬಂಜಾರ ಹಿಲ್ಸ್​ನಲ್ಲಿ ನಡೆದಿದೆ. ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ನಿಮ್ಮ ಮಗನನ್ನು ಕಿಡ್ನಾಪ್​ ಮಾಡಿದ್ದೇವೆ. ₹ 50 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದರು. ಇದನ್ನು ನಂಬಿ ಆತಂಕಕ್ಕೆ ಒಳಗಾದ ವ್ಯಕ್ತಿ ಮಗನ ರಕ್ಷಣೆಗಾಗಿ ₹ 50 ಲಕ್ಷ ನೀಡಿದ್ದಾರೆ.

ದುರ್ಬಲ ಗುಂಪುಗಳೇ ವಂಚಕರ ಟಾರ್ಗೆಟ್​​

ಸೈಬರ್​ ಅಪರಾಧಿಗಳು ಹೆಚ್ಚಾಗಿ ಹಿರಿಯರು ಮತ್ತು ಖಾಲಿ ಸಮಯದಲ್ಲಿ ಹೆಚ್ಚಾಗಿ ಸೋಷಿಯಲ್ ಮೀಡಿಯಾದಲ್ಲಿ  ನಿರತರಾಗಿರುವರನ್ನೇ ಗುರಿಯಾಗಿಸುತ್ತಾರೆ. ಕೆಲವು ಬಾರಿ ನಿವೃತ್ತ ನೌಕರರನ್ನು ಬಲೆಗೆ ಕೆಡವುತ್ತಾರೆ. ವಂಚಕರು ಇದಕ್ಕಾಗಿ ಮಾರ್ಫಿಂಗ್​ ಟೆಕ್ನಾಲಾಜಿ ಬಳಕೆ ಮಾಡಿಕೊಂಡು ಫೇಕ್ ವಿಡಿಯೋ, ಫೋಟೋವನ್ನು ಸೃಷ್ಟಿಸುತ್ತಿದ್ದು, ಕಟುಂಬಸ್ಥರನ್ನು ಬೆದರಿಸಿ ಹಣ ಕೀಳುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ವಂಚಕರು, ಸಿಬಿಐ, ಕಸ್ಟಮ್ಸ್​​, ಎನ್​ಐಎ ಮತ್ತು ಇಡಿ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ನಿಮ್ಮ ಹೆಸರಿನಲ್ಲಿ ಅಕ್ರಮ ಡ್ರಗ್ಸ್​, ಶಸ್ತ್ರಾಸ್ತ್ರ ಸಾಗಣೆಯಾಗುತ್ತಿದೆ ಎಂದು ಬೆದರಿಸುವ ಪ್ರಯತ್ನ ನಡೆಸುತ್ತಿದ್ದಾರೆ.

ಸೈಬರ್​ ಅಪರಾಧ ಸಂಬಂದ ಪೊಲೀಸರು ಪ್ರತಿನಿತ್ಯ 10 ರಿಂದ 15 ದೂರುಗಳನ್ನು ಸ್ವೀಕರಿಸುತ್ತಿದ್ದು, ಇದರಲ್ಲಿ ಹೆಚ್ಚಿನವು ನಕಲಿ ಹೂಡಿಕೆ ಯೋಜನೆ, ಷೇರು ಮಾರುಕಟ್ಟೆ ವಂಚನೆ, ಪಾರ್ಟ್​ ಟೈಂ ಕೆಲಸದ ಅವಕಾಶಗಳಾಗಿವೆ. ಇಂತಹ ಅಪರಾಧಗಳಿಂದಾಗಿ ನಗರದ ಜನರಲ್ಲಿ ತಿಂಗಳಿಗೆ 30-35 ಕೋಟಿ ನಷ್ಟ ಉಂಟಾಗುತ್ತಿದೆಯಂತೆ..

ಪೊಲೀಸರಿಂದ ಕೂಡ ಸೈಬರ್​ ಅಪರಾಧಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಕೆಲಸ ಆಗುತ್ತಿದೆ. ಜನರು ರಿಟರ್ನ್ಸ್​​ಗಳೊಂದಿಗೆ ಹೂಡಿಕೆ ಆಸೆ ಮತ್ತು ಅನಗತ್ಯ ಲಿಂಕ್​ಗಳನ್ನು ಕ್ಲಿಕ್​ ಮಾಡುವ ಆಮಿಷಗಳಿಗೆ ಬಲಿಯಾಗಬಾರದು.  ಯಾವುದಾದರೂ ಬೆದರಿಕೆ ಕರೆ ಅಥವಾ ಆರ್ಥಿಕ ನಷ್ಟದ ಅನುಭವ ಆಗುತ್ತಿದ್ದರೆ, ತಕ್ಷಣಕ್ಕೆ ಸೈಬರ್​ ಪೊಲೀಸರು ದೂರು ನೀಡುವುದು ಅವಶ್ಯವಾಗಿದೆ ಎಂದು ಸಲಹೆ ನೀಡುತ್ತಿದ್ದಾರೆ. ಆದ್ರೆ ಪೊಲೀಸರು ಜಾಪೆ ಕೆಳಗೆ ನುಗ್ಗಿದ್ರೆ, ಸೈಬರ್ ವಂಚರು ರಂಗೋಲಿ ಕಳಗೆ ನುಗ್ಗುತ್ತಿರೋದು ಮಾತ್ರ ನಿಜ..

ಸೈಬರ್ ಜಾಲದಲ್ಲಿ ಕೆೇವಲ  ಎಲ್ಲಾ ವರ್ಗದ ಜನರು ಕೂಡ ಸಿಲುಕಿ ಒದ್ದಾಡುತ್ತಿದ್ದಾರೆ.. ಡಬರ್ ಹಣಕ್ಕೆ ಆಸೆ  ಪಟ್ಟು ತಮ್ಮ ಬಳಿ ಇರೋ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ.. ಯಾವುದಕ್ಕೂ ನೀವು ಹುಷಾರ್‌.. ನಿಮ್ಮ ಮೊಬೈಲ್‌ಗೆ ಬರೋ ಲಿಂಕ್‌ಗಳನ್ನ ಓಪನ್ ಮಾಡೋ ಮುಂಚೆ ಸಾವಿರ ಸರಿ ಯೋಚನೆ ಮಾಡಿ.. ಹಾಗೇ ಬ್ಯಾಂಕ್ ಅಥವಾ ಅಧಿಕಾರಿಗಳ ಹೆಸರಲ್ಲಿ ಕರೆ ಬಂದ್ರೆ ಆದಷ್ಟು ಕನ್ನಡದಲ್ಲೇ ಮಾತನಾಡಿ.. ನಿಮ್ಮ ಎಚ್ಚರಿಕೆಯಲ್ಲಿ ನೀವು ಇರೋದು ಒಳ್ಳೆಯದು..

Kishor KV

Leave a Reply

Your email address will not be published. Required fields are marked *