ಬೆಂಗಳೂರಿಗರಲ್ಲಿ ಹೆಚ್ಚಾಗುತ್ತಿದೆ ಸೈಬರ್‌ಕಾಂಡ್ರಿಯಾಸಿಸ್ ಸಮಸ್ಯೆ!  

ಬೆಂಗಳೂರಿಗರಲ್ಲಿ ಹೆಚ್ಚಾಗುತ್ತಿದೆ ಸೈಬರ್‌ಕಾಂಡ್ರಿಯಾಸಿಸ್ ಸಮಸ್ಯೆ!  

ಬೆಂಗಳೂರು: ಇದು ಇಂಟರ್ ನೆಟ್ ಯುಗ. ನಮಗೆ ಬೇಕಾದ ಎಲ್ಲಾ ಮಾಹಿತಿಗಳನ್ನು ಆನ್ ಲೈನ್ ಮೂಲಕವೇ ಪಡೆಯುತ್ತಿದ್ದೇವೆ. ಯಾವುದೇ ಮಾಹಿತಿ ಬೇಕಿದ್ದರೂ ಕೆಲವೇ ಸೆಕೆಂಡುಗಳಲ್ಲಿ ನಮಗೆ ಲಭ್ಯವಾಗುತ್ತೆ. ಇನ್ನೂ ಕೊರೊನಾ ಬಂದ ಮೇಲಂತೂ ಎಲ್ಲರೂ ಮೊಬೈಲ್ ನಲ್ಲೇ ಕಾಲ ಕಳೆಯುತ್ತಾರೆ. ತಾವು ಧರಿಸೋ ಉಡುಪು, ದಿನಸಿ ಸಾಮಾಗ್ರಿ, ಆಹಾರ ಎಲ್ಲವೂ ಆನ್ ಲೈನ್ ನಲ್ಲೇ ಖರೀದಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಆರೋಗ್ಯದ ಮಾಹಿತಿಗಾಗಿ ಆನ್​​​ಲೈನ್​​​ನಲ್ಲಿ ಹೆಚ್ಚಿನ ಹುಡುಕಾಟ ನಡೆಸುತ್ತಿದ್ದಾರಂತೆ. ಇದೀಗ ಬೆಂಗಳೂರಿನ ಯುವಕ ಯುವತಿಯರು ಸೈಬರ್‌ಕಾಂಡ್ರಿಯಾಸಿಸ್ ಒಳಗಾಗುತ್ತಿದ್ದಾರೆ ಅನ್ನೋ ಆತಂಕಕಾರಿ ಮಾಹಿತಿಯೊಂದು ಅಧ್ಯಯನದಿಂದ ಹೊರಬಿದ್ದಿದೆ.

ಇದನ್ನೂ ಓದಿ: ಬೆಂಗಳೂರಿನ ಜನತೆಗೆ ನಿದ್ರೆಯೇ ಬರುತ್ತಿಲ್ವಂತೆ! – ಕಾರಣವೇನು ಗೊತ್ತಾ?

ಕೊರೊನಾ ನಂತರ ಜನರು ಹೆಚ್ಚು ಆನ್ ಲೈನ್ ನಲ್ಲೇ ಕಾಲಕಳೆಯುತ್ತಿರೋದು ಗೊತ್ತಿರೋ ವಿಚಾರ. ಇದೀಗ ಬೆಂಗಳೂರಿನ ಯುವಕ, ಯುವತಿಯರು  ಸೈಬರ್‌ಕಾಂಡ್ರಿಯಾಸಿಸ್ ಒಳಗಾಗುತ್ತಿದ್ದಾರೆ ಅಂತಾ ನಿಮ್ಹಾನ್ಸ್ ನಡೆಸಿದ ಅಧ್ಯಯನದಿಂದ ಗೊತ್ತಾಗಿದೆ. ಈ ಅಧ್ಯಯನಕ್ಕೆ ಬೆಂಗಳೂರಿನ ಸುಮಾರು 356 ವಿದ್ಯಾರ್ಥಿಗಳನ್ನು ಒಳಪಡಿಸಲಾಗಿದೆ. ಅಧ್ಯಯನ ಪ್ರಕಾರ ಶೇಕಡಾ 48.6 ವಿದ್ಯಾರ್ಥಿಗಳು ಸೈಬರ್‌ಕಾಂಡ್ರಿಯಾಸಿಸ್ ಒಳಗಾಗಿರುವುದು ಗೊತ್ತಾಗಿದೆ.

ಏನಿದು ಸೈಬರ್‌ಕಾಂಡ್ರಿಯಾಸಿಸ್?

ಸೈಬರ್‌ಕಾಂಡ್ರಿಯಾಸಿಸ್ ಎಂದರೆ ದೇಹದಲ್ಲಿ ಏನಾದರೂ ಅನಾರೋಗ್ಯ ಉಂಟಾದಾಗ ಅದರ ಬಗ್ಗೆ ಹೆಚ್ಚಾಗಿ ಅಂದರೆ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಬಗ್ಗೆ ಇಂಟರ್​ನೆಟ್​​​ನಲ್ಲಿ ಹುಡುಕಾಟ ನಡೆಸುವುದಾಗಿದೆ. ಆರೋಗ್ಯದ ಬಗ್ಗೆ ಅಗತ್ಯಕ್ಕಿಂತ ಹೆಚ್ಚಿನ ಸಮಯವನ್ನು ಗೂಗಲ್​​ ಅಥವಾ ಇತರ ಯಾವುದೇ ಅಂತರ್ಜಾಲಗಳಲ್ಲಿ ಕಳೆಯುವುದಾಗಿದೆ.

ನಿಮ್ಹಾನ್ಸ್ ಅಧ್ಯಯನದ ಪ್ರಕಾರ ಯಾವುದೇ ಆರೋಗ್ಯ ಸಮಸ್ಯೆಯನ್ನು ಇಲ್ಲದ್ದಿದ್ದರೂ ಕೂಡ ಅತಿಯಾದ ಸೈಬರ್‌ಕಾಂಡ್ರಿಯಾಸಿಸ್ ಗೆ ಒಳಗಾದವರಲ್ಲಿ ಶೇಕಡಾ 4.8 ರಷ್ಟು ಜನರು ವೈದ್ಯರನ್ನು ಸಂಪರ್ಕಿಸಿದಾಗ ಆರೋಗ್ಯ ಸಮಸ್ಯೆ ಕಂಡುಬಂದಿದೆ ಎಂದು ಅಧ್ಯಯನದಲ್ಲಿ ಗೊತ್ತಾಗಿದೆ.

ಈ ಅಧ್ಯಯನವು  ನಾಲ್ಕು ಅಂಶಗಳನ್ನು ಒಳಗೊಂಡಿವೆ. ಮಿತಿಮೀರಿದ ಅಥವಾ ಆನ್‌ಲೈನ್‌ನಲ್ಲಿ ಕಳೆದ ಸಮಯ, ಕಂಡುಬರುವ ಮಾಹಿತಿಯನ್ನು ಅಪನಂಬಿಕೆ ಮಾಡುವುದು, ಭರವಸೆಗಾಗಿ ಮತ್ತಷ್ಟು ಹುಡುಕಾಟವನ್ನು ನಡೆಸುವುದರ ಕುರಿತು ಅಧಗುಯನ ನಡೆಸಲಾಗಿದೆ.

ಅಧ್ಯಯನದಲ್ಲಿ ಭಾಗವಹಿಸಿದವರೆಲ್ಲರೂ 18 ರಿಂದ 25 ವರ್ಷ ವಯಸ್ಸಿನ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು. ಸೈಬರ್‌ಕಾಂಡ್ರಿಯಾಸಿಸ್ ಹರಡುವಿಕೆಯ ಕುರಿತು ಬೆಂಗಳೂರಿನಲ್ಲಿ ಇದು ಮೊದಲ ಅಧ್ಯಯನವಾಗಿದೆ ಎಂದು ಅಧ್ಯಯನಕ್ಕೆ ಮಾರ್ಗದರ್ಶನ ನೀಡಿದ ನಿಮ್ಹಾನ್ಸ್‌ನ ಮನೋವೈದ್ಯಕೀಯ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಡಾ.ಬಿ.ಪಿ ನಿರ್ಮಲಾ ಹೇಳಿದ್ದಾರೆ.

suddiyaana