ಈ ಸಲ ಇಲಿ ಅಲ್ಲ.. ನನ್ನ ಸರದಿ! – ಗಣೇಶನ ಮೇಲೆ ಹಾಯಾಗಿ ನಿದ್ರಿಸಿದ ಬೆಕ್ಕು!

ಪ್ರತೀ ವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯಂದು ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಕೂಡ ದೇಶದಾದ್ಯಂತ ಗಣೇಶ ಚತುರ್ಥಿ ಹಬ್ಬ ಜೋರಾಗಿ ನಡೆಯುತ್ತಿದೆ. ಗಣಪತಿ ವಿಗ್ರಹವನ್ನ ಮನೆಗೆ ತಂದು ಪ್ರತಿಷ್ಠಾಪಿಸಲಾಗುತ್ತೆ. ಸಾಮಾನ್ಯವಾಗಿ ಗಣಪತಿ ಪಕ್ಕದಲ್ಲಿ ಮೂಷಿಕನನ್ನ ಕೂಡ ಇರಿಸಲಾಗಿರುತ್ತೆ. ಆದ್ರೆ ಇಲ್ಲೊಂದು ಕಡೆ ಗಣಪತಿ ಮೇಲೆ ಬೆಕ್ಕೊಂದು ಬಂದು ಕುಳಿತಿದೆ. ಇದ್ರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: 5,590 ಕೋಟಿ ಅಕ್ರಮ – ದೆಹಲಿ ಮಾಜಿ ಸಚಿವ ಸೌರಭ್ ಭಾರದ್ವಾಜ್ ನಿವಾಸದ ಮೇಲೆ ಇಡಿ ದಾಳಿ
ಗಣಪತಿ ಎಂದಾಗ ನೆನಪಾಗುವುದು ಅವನ ವಾಹನ ಮೂಷಿಕ. ಗಣೇಶ ಹಬ್ಬದ ಸಂದರ್ಭದಲ್ಲಿ ಗಣಪತಿ ಮೂರ್ತಿಯ ಬಳಿ ಇಲಿ ಕಾಣಿಸಿಕೊಂಡರೆ ಸಾಕಷ್ಟು ಸುದ್ದಿಯಾಗುತ್ತದೆ. ಆದರೆ ಇಲ್ಲೊಂದು ಕಡೆ ಗಣಪತಿ ಮೇಲೆಯೇ ಬೆಕ್ಕೊಂದು ಹಾಯಾಗಿ ನಿದ್ರಿಸಿದೆ. ಇದ್ರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವೈರಲ್ ಆಗಿರುವ ಈ ವಿಡಿಯೊದಲ್ಲಿ, ಗಣಪತಿ ವಿಗ್ರಹವು ಹಳದಿ ಉಡುಪಿನಲ್ಲಿ ಸುಂದರವಾಗಿ ಅಲಂಕರಿಸಲ್ಪಟ್ಟಿದೆ. ಆದರೆ, ಇಲ್ಲಿ ಗಮನ ಸೆಳೆದದ್ದು ಬೆಕ್ಕು ವಿಗ್ರಹದ ತೋಳುಗಳ ಮೇಲೆ ನಿದ್ರೆ ಮಾಡುತ್ತಿರುವುದು. ಬೆಕ್ಕು ವಿಶ್ರಾಂತಿ ಪಡೆಯುವ ರೀತಿ ಜನರನ್ನು ಆಶ್ಚರ್ಯಚಕಿತಗೊಳಿಸಿದೆ. ಕೆಲವರು ಇಲಿ ಸ್ವಲ್ಪ ಭಯಪಟ್ಟಿರಬಹುದೆಂದು ತಮಾಷೆ ಮಾಡಿದ್ದಾರೆ.
View this post on Instagram
ಈ ಪೋಸ್ಟ್‌ಗೆ ಪ್ರತಿಕ್ರಿಯಿಸುತ್ತಾ ಒಬ್ಬ ಬಳಕೆದಾರರು, ಬೆಕ್ಕು ಸುರಕ್ಷಿತ ಕೈಯಲ್ಲಿದೆ ಎಂದು ಬರೆದಿದ್ದಾರೆ. ಬೆಕ್ಕಿನ ಮನಸ್ಸಿನಲ್ಲಿ ಹೀಗಿರಬಹುದು- ಯಾವಾಗಲೂ ನಿಮ್ಮ ಹತ್ತಿರ ಇಲಿಯನ್ನು ಇಟ್ಟುಕೊಳ್ಳುತ್ತೀರಿ, ಇಂದು ನನ್ನ ಸರದಿ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಎಂತಹ ಸುಂದರ ಕ್ಷಣ. ದೇವರು ಎಂದಿಗೂ ತಾರತಮ್ಯ ಮಾಡುವುದಿಲ್ಲ, ಆದರೆ ಮನುಷ್ಯರು ಮಾತ್ರ ಮಾಡುತ್ತಾರೆ ಎಂದು ಮಗದೊಬ್ಬ ಬಳಕೆದಾರರು ಹೇಳಿದರು.

ನೋಡಿರಿ

