ನೀ ಇರಲು ಜೊತೆಯಲ್ಲಿ ನಾ ಮಲಗುವೆ ನೆಮ್ಮದಿಯಲ್ಲಿ – ಆನೆ ಮರಿಯ ಪ್ರೀತಿಗೆ ಬೆಲೆಕಟ್ಟಲು ಸಾಧ್ಯವೇ?

ನೀ ಇರಲು ಜೊತೆಯಲ್ಲಿ ನಾ ಮಲಗುವೆ ನೆಮ್ಮದಿಯಲ್ಲಿ – ಆನೆ ಮರಿಯ ಪ್ರೀತಿಗೆ ಬೆಲೆಕಟ್ಟಲು ಸಾಧ್ಯವೇ?

ಪ್ರೀತಿ, ಬಾಂಧವ್ಯ ಮನುಷ್ಯರಂತೆ ಪ್ರಾಣಿಗಳಿಗೂ ಇವೆ. ಅದರಲ್ಲೂ ಸಾಕಾನೆಗಳಂತೂ ಮನುಷ್ಯರಿಗೆ ಬೇಗ ಆಪ್ತರಾಗಿ ಬಿಡುತ್ತವೆ. ಸಾಮಾನ್ಯವಾಗಿ ಸಾಕಾನೆಗಳು ಮನುಷ್ಯರಂತೆ ಭಾವನಾತ್ಮಕ ಜೀವಿಗಳು ಕೂಡಾ ಹೌದು. ಇಲ್ಲೊಂದು ಮುದ್ದಾದ ಆನೆ ಮರಿಯೊಂದಿದೆ. ತುಂಟ ಮರಿಯಾನೆಯಿದು. ಈ ಮರಿಯಾನೆಗೆ ಸುಮ್ಮನೆ ನಿದ್ದೆ ಬರೋದೇ ಇಲ್ಲ. ತನ್ನನ್ನು ಸಾಕುತ್ತಿದ್ದವರು ತನ್ನ ಜೊತೆಯಲ್ಲೇ ಇರಬೇಕು. ಅದರಲ್ಲೂ ನಿದ್ದೆ ಬಂದರಂತೂ ತನ್ನನ್ನು ಆರೈಕೆ ಮಾಡಿದವರು ಹತ್ತಿರವೇ ಇರಬೇಕು.

ಇದನ್ನೂ ಓದಿ: ‘ದಿ ಎಲಿಫೆಂಟ್​ ವಿಸ್ಪರರ್ಸ್​’ ಕಿರುಚಿತ್ರಕ್ಕೆ ‘ಆಸ್ಕರ್’ ಗರಿ – ಆನೆ ಮತ್ತು ದಂಪತಿ ನಡುವಿನ ಬಂಧಕ್ಕೆ ಶ್ರೇಷ್ಠ ಪ್ರಶಸ್ತಿ!

ಆರೈಕೆ ಮಾಡುವವರು ತನ್ನ ಜೊತೆಯಲ್ಲೇ ಇರಬೇಕು ಎಂದು ಬಯಸುವ ಆನೆ ಮರಿಯ ಮುದ್ದಾದ ವೀಡಿಯೋವಂದು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇಲ್ಲಿ ಪುಟಾಣಿ ಆನೆ ಮರಿ ತನ್ನನ್ನು ಸಾಕಿದವರ ಕೈಯನ್ನು ಸೊಂಡಿಲಿನಿಂದ ಹಿಡಿದುಕೊಂಡಿದೆ. ಆರೈಕೆ ಮಾಡುವವರು ಕೂಡಾ ಆನೆ ಮರಿ ಆಸೆಯಂತೆ ತನ್ನ ಕೈಯನ್ನು ಸೊಂಡಿಲಿನಲ್ಲಿಯೇ ಹಿಡಿದುಕೊಳ್ಳಲು ಬಿಟ್ಟಿದ್ದಾರೆ. ಮುದ್ದು ಮರಿಯ ಸಂತಸವನ್ನು ತಾನೂ ಕೂಡಾ ಅನುಭವಿಸುತ್ತಿದ್ದಾರೆ. ಈ ಭಾವನಾತ್ಮಕ ವಿಡಿಯೋಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಆನೆ ಮರಿ ತನ್ನನ್ನು ನೋಡಿಕೊಳ್ಳುವವರನ್ನು ಎಷ್ಟು ಹಚ್ಚಿಕೊಂಡಿದೆ ಅನ್ನೋದಕ್ಕೂ ಈ ವಿಡಿಯೋ ಸಾಕ್ಷಿಯಾಗಿದೆ.

suddiyaana