ಭಾರತ ಸಿಡಿದೆದ್ರೆ ಪಾಕ್ ಸರ್ವನಾಶ – ಸತ್ಯ ಬಿಚ್ಚಿಟ್ಟ PCB ಮಾಜಿ ಅಧ್ಯಕ್ಷ
ICC ಆದಾಯ.. PAK ದಿವಾಳಿ!

ಭಾರತ ಸಿಡಿದೆದ್ರೆ ಪಾಕ್ ಸರ್ವನಾಶ – ಸತ್ಯ ಬಿಚ್ಚಿಟ್ಟ PCB ಮಾಜಿ ಅಧ್ಯಕ್ಷICC ಆದಾಯ.. PAK ದಿವಾಳಿ!

ಟಿ-20ವಿಶ್ವಕಪ್​ನಲ್ಲಿ ಆಕ್ಚುಲಿ ಮನಸ್ತಾಪ ಇದ್ದದ್ದು ಭಾರತ ಮತ್ತು ಪಾಕಿಸ್ತಾನ ನಡುವೆ. ಐಪಿಎಲ್​ನಿಂದ ಮುಸ್ತಫಿಜುರ್ ರೆಹಮಾನ್​ರನ್ನ ಕೈಬಿಟ್ಟಿದ್ದಕ್ಕೆ ಬಾಂಗ್ಲಾದೇಶ ಸಿಟ್ಟಾಗಿ ವಿಶ್ವಕಪ್ ಆಡೋಕೆ ನಾವು ಭಾರತಕ್ಕೆ ಬರಲ್ಲ ಅಂದ್ರು. ಕೊನೆಗೆ ಐಸಿಸಿ-ಬಿಸಿಬಿ ನಡುವೆ ಸಾಕಷ್ಟು ಮಾತುಕತೆಯಾಗಿ ಕೊನೆಗೆ ಬಾಂಗ್ಲಾ ಟೂರ್ನಿಯಿಂದಲೇ ಹೊರಗುಳೀತು. ಅಲ್ಲಿಗೆ ವಿವಾದ ತಣ್ಣಗಾಗ್ಬೇಕಿತ್ತು. ಆದ್ರೆ ಮಿಡ್ಲಲ್ಲಿ ಬಿಲ್ಡಪ್ ಕೊಟ್ಕೊಂಡು ಬಂದ ಪಾಕಿಸ್ತಾನ ಬೇಡದೇ ಇರೋ ಕಿರಿಕ್ ಮಾಡಿ ಈಗ ಬಾಯ್ಕಾಟ್ ಅಂತಾ ಬಾಯಿ ಬಡ್ಕೊಳ್ತಿದೆ. ಈ ಬಾಯ್ಕಾಟ್ ಬೆಂಕಿ ಅವ್ರಿಗೇ ಬ್ಯಾಕ್ ಫೈರ್ ಆಗ್ತಿದೆ. ಪಾಕಿಸ್ತಾನದ ಮಾಜಿ ಆಟಗಾರರೇ ಇದನ್ನ ಹೇಳಿ ಎಚ್ಚರಿಕೆ ಕೊಟ್ಟಿದ್ದಾರೆ.

ಇದನ್ನೂ ಓದಿ : RCB ಸೇಲ್‌ಗೆ ಜೋರಾದ ಪ್ರಕ್ರಿಯೆ – ಯಾರ ಪಲಾಗುತ್ತೆ ಬೆಂಗಳೂರು ತಂಡ?

ಬಿಸಿಸಿಐ.. ಕ್ರಿಕೆಟ್ ಲೋಕದ ಬಾಸ್.. ಎಲ್ಲಾ ಮಂಡಳಿಗಳ ವಾರ್ಷಿಕ ವಹಿವಾಟನ್ನ ಒಟ್ಟುಗೂಡಿಸಿದ್ರೂ ಭಾರತದ ಹತ್ತಿರಕ್ಕೂ ಸುಳಿಯೋಕ್ ಆಗಲ್ಲ. ಐಸಿಸಿಗೆ ಬಿಸಿಸಿಐನಿಂದಲೇ ಹಣದ ಹೊಳೆಯೇ ಹರಿದು ಬರುತ್ತೆ. ಅಂಥಾದ್ರಲ್ಲಿ ಭಾರತವನ್ನ ಎದುರು ಹಾಕಿಕೊಂಡ್ರೆ ನೆಕ್ಸ್​ಟ್ ಸರ್ವೈಸ್ ಆಗೋದೇ ಕಷ್ಟ. ಹೀಗಿದ್ರೂ ಪಾಕಿಸ್ತಾನ ಮಾತ್ರ ಮೊಂಡಾಟ ಮಾಡ್ಕೊಂಡು ಬರ್ತಾನೇ ಇದೆ. ಈಗ್ಲೂ ಕೂಡ ಫೆಬ್ರವರಿ 15ಕ್ಕೆ ಭಾರತದ ವಿರುದ್ಧ ಆಡಲ್ಲ ಅಂದಿದ್ದಾರೆ. ಆದ್ರೆ ಪಾಕಿಸ್ತಾನದ ಈ ಹುಚ್ಚಾಟಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತೆ. ಪಿಸಿಬಿಯ ಮಾಜಿ ಅಧ್ಯಕ್ಷ ರಮೀಜ್ ರಾಜಾ ಅವರ ವೀಡಿಯೊವೊಂದು ಇದಕ್ಕೆ ಕನ್ನಡಿ ಹಿಡಿದಂತಿದೆ. ಭಾರತದೊಂದಿಗಿನ ಕ್ರಿಕೆಟ್ ರಿಲೇಷನ್​ಶಿಪ್ ಹದಗೆಟ್ರೆ ಪಾಕಿಸ್ತಾನ ಕ್ರಿಕೆಟ್‌ ಮೇಲಾಗೋ ಭೀಕರ ಪರಿಣಾಮಗಳಿಗೆ ಸಾಕ್ಷಿಯಂತಿದೆ.

ಐಸಿಸಿ ಒಪ್ಪಂದವಿದ್ರೂ ಪಾಕಿಸ್ತಾನದ ಕುತಂತ್ರ!

ಭಾರತ ಮತ್ತು ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿಗಳು ನಡೆದು ದಶಕವೇ ಕಳೆದು ಹೋಗಿದೆ. ಌಂಡ್   2024ರ ಡಿಸೆಂಬರ್​ನಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳು ಐಸಿಸಿ-ಮಧ್ಯಸ್ಥಿಕೆಯ ಒಪ್ಪಂದಕ್ಕೆ ಸಹಿ ಮಾಡಿವೆ. ಅಂದ್ರೆ ತಟಸ್ಥ ಸ್ಥಳದಲ್ಲಿ ಐಸಿಸಿ, ಏಷ್ಯಾಕಪ್ ಪಂದ್ಯಗಳನ್ನ ಆಡೋದಾಗಿ ಸಹಿ ಹಾಕಿವೆ. ಹೀಗಿದ್ರೂ ಪಾಕಿಸ್ತಾನ ಈಗ ಬಾಯ್ಕಾಟ್ ಅಂತಿರೋದು ಐಸಿಸಿ ನಿಯಮಗಳಿಗೆ ವಿರುದ್ಧವಾಗಿದೆ ಎಂದರ್ಥ. ಹೀಗಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ ದೊಡ್ಡ ಮಟ್ಟದಲ್ಲೇ ಪರಿಣಾಮ ಎದುರಿಸಬೇಕಿದೆ. ಬಾಂಗ್ಲಾದೇಶ ಭಾರತಕ್ಕೆ ಕಾಲಿಡಲ್ಲ ಅಂದಾಗ ಅವ್ರಿಗೆ ಸಪೋರ್ಟ್ ಆಗಿ ನಿಂತಿದ್ದು ಪಾಕಿಸ್ತಾನ ಮಾತ್ರ. ಉಳಿದವ್ರೆಲ್ಲಾ ಭಾರತದ ಬೆನ್ನಿಗೇ ಇದ್ದಾರೆ. ಌಂಡ್ ನೆಕ್ಸ್​ಟ್ ಭಾರತ ವಿರುದ್ಧ ಪಂದ್ಯ ಆಡಲ್ಲ ಎನ್ನುವಂಥ ತಮ್ಮ ನಿರ್ಧಾರವನ್ನ ಬೆಂಬಲಿಸಬೇಕು ಅಂತಾ ಪಿಸಿಬಿ ಹಲವು ಮಂಡಳಿಗಳನ್ನ ಕೇಳಿದೆ. ಬಟ್ ಯಾರೂ ಸಪೋರ್ಟ್​​ಗೆ ಬಂದಿಲ್ಲ. ಒಂಟಿಯಾಗಿರೋ ಪಾಕಿಸ್ತಾನ ಎಂಥಾ ಪರಿಸ್ಥಿತಿ ಎದುರಿಸಬೇಕಾಗುತ್ತೆ ಅನ್ನೋದನ್ನ ರಮೀಜ್ ರಾಜಾ ಈ ಹಿಂದೆಯೇ ಹೇಳಿದ್ದಾರೆ.

ಭಾರತೀಯ ಮಾರ್ಕೆಟ್​ ನಿಂದಲೇ ಐಸಿಸಿಗೆ 90% ಆದಾರ!

ಪಾಕಿಸ್ತಾನದ ಆಯ್ಕೆ ಸಮಿತಿ ಮಾಜಿ ಮುಖ್ಯಸ್ಥ ಹಾಗೂ ಪಾಕ್ ಮಾಜಿ ಕ್ರಿಕೆಟಿಗ ರಮೀಜ್ ರಾಜಾ ನೀಡಿದ್ದ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಪಾಕ್‌ ಕ್ರಿಕೆಟ್ ಬೋರ್ಡ್‌ನ ಸರ್ವ ಸದಸ್ಯರ ಸಮ್ಮುಖದಲ್ಲೇ ಭಾರತವನ್ನು ಎದುರು ಹಾಕಿಕೊಂಡರೇ ಎದುರಾಗೋ ಅಪಾಯಗಳ ಎಚ್ಚರಿಕೆ ನೀಡಿದ್ರು. ಌಕ್ಚುಲಿ ಇದು 2021ರಲ್ಲಿ ಪಿಸಿಬಿ ಅಧ್ಯಕ್ಷರಾಗಿದ್ದಾಗ ನೀಡಿದ್ದ ಹೇಳಿಕೆ.  ಪಾಕಿಸ್ತಾನ ಕ್ರಿಕೆಟ್ ಮಂಡಳಿ ಐಸಿಸಿಯಿಂದ ಬರುವ ಶೇಕಡಾ 50 ರಷ್ಟು ಅನುದಾನದ ಮೇಲೇ ನಡೆಯುತ್ತೆ. ಐಸಿಸಿ ಪಂದ್ಯಾವಳಿಗಳನ್ನು ನಡೆಸುವ ಮೂಲಕ ಹಣವನ್ನು ಗಳಿಸಿ  ಸದಸ್ಯ ಮಂಡಳಿಗಳಿಗೆ ವಿತರಿಸುತ್ತದೆ. ಅದೆಲ್ಲಕ್ಕಿಂತ ಮುಖ್ಯವಾಗಿ ಐಸಿಸಿಗೆ ಬರುವ ಆದಾಯದಲ್ಲಿ ಶೇಕಡಾ 90ರಷ್ಟು ಆದಾಯ ಭಾರತೀಯ ಮಾರುಕಟ್ಟೆಗಳಿಂದಲೇ ಬರುತ್ತೆ. ಒಂದು ರೀತಿಯಲ್ಲಿ, ಭಾರತೀಯ ವ್ಯವಹಾರ ಸಂಸ್ಥೆಗಳು ಪಾಕಿಸ್ತಾನ ಕ್ರಿಕೆಟ್ ಲೀಡ್ ಮಾಡ್ತಿವೆ. ಮುಂದಿನ ದಿನಗಳಲ್ಲಿ ಭಾರತ ಪಾಕಿಸ್ತಾನಕ್ಕೆ ಹಣಕಾಸು ನೀಡದಿರಲು ನಿರ್ಧರಿಸಿದರೆ  ಪಾಕಿಸ್ತಾನ ಕ್ರಿಕೆಟ್ ಮಂಡಳಿಯೂ ಕುಸಿಯಬಹುದು ಎಂದಿದ್ದಾರೆ.

Shantha Kumari