ಭಾರತೀಯ ಕ್ರಿಕೆಟ್‌ನಲ್ಲಿ ರಹಾನೆ ಯುಗಕ್ಕೆ ತೆರೆ – ವಿದೇಶಿ ಲೀಗ್‌ನತ್ತ ಅಜಿಂಕ್ಯ ಪಯಣ

ಕೋಲ್ಕತ್ತಾ ನೈಟ್ ರೈಡರ್ಸ್ ಕ್ಯಾಪ್ಟನ್ ಆಗಿರುವ ಅಜಿಂಕ್ಯ ರಹಾನೆ ತನ್ನ ನಾಯಕತ್ವಕ್ಕೆ ಗುಡ್‌ಬೈ ಹೇಳಿದ್ದಾರೆ. ಇಂಡಿಯಾ ಕ್ರಿಕೆಟರ್ ಅಜಿಂಕ್ಯ ರಹಾನೆ ಕೆಲ ದಿನಗಳ ಹಿಂದೆಯಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಆದರೆ, ಐಪಿಎಲ್ ನಲ್ಲಿ ಮುಂದುವರೆಯಲಿದ್ದಾರೆ ಎನ್ನಲಾಗಿತ್ತು. ಇದೀಗ ಐಪಿಎಲ್‌ಗೂ ರಹಾನೆ ಗುಡ್ ಬೈ ಹೇಳಿದ್ದಾರೆ.
ಇದನ್ನೂ ಓದಿ:ನನಗೆ ಮನೆ ಕಟ್ಟೋಕೆ ಜಾಗ ಕೊಡಿ- ಅಂಗಲಾಚಿ ಬೇಡಿಕೊಂಡ ರಿಷಭ್ ಪಂತ್
ಟೀಮ್ ಇಂಡಿಯಾ ಮಾಜಿ ಆಟಗಾರ ಅಜಿಂಕ್ಯ ರಹಾನೆ, ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ ಸೇರಿದಂತೆ ಭಾರತೀಯ ಕ್ರಿಕೆಟ್‌ನ ಎಲ್ಲಾ ಫಾರ್ಮ್ಯಾಟ್‌ಗಳಿಗೂ ಅಧಿಕೃತವಾಗಿ ಗುಡ್ ಬೈ ಹೇಳಿದ್ದಾರೆ. ಕೆಕೆಆರ್ ತಂಡದ ನಾಯಕನಾಗಿ ಅಜಿಂಕ್ಯ ರಹಾನೆ ತಮ್ಮ ಕೊನೆಯ ಐಪಿಎಲ್ ಸೀಸನ್‌ನಲ್ಲಿ ತಂಡವನ್ನು ಮುನ್ನಡೆಸಿದ್ದರು. ಇದೀಗ, ಅಜಿಂಕ್ಯ ರಹಾನೆ ಅವರು ಐಪಿಎಲ್‌ಗೂ ವಿದಾಯ ಹೇಳಿದ್ದಾರೆ. ಹೀಗಾಗಿ ಕೆಕೆಆರ್ ಫ್ರಾಂಚೈಸಿಗೆ ನಾಯಕನ ಹುಡುಕಾಟ ನಡೆಸುವ ಅವಶ್ಯಕತೆ ಎದುರಾಗಿದೆ.
ಅಜಿಂಕ್ಯ ರಹಾನೆ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಒಟ್ಟು 6 ತಂಡಗಳ ಪರ ಕಣಕ್ಕಿಳಿದಿದ್ದಾರೆ. ಅದರಲ್ಲಿ ಎರಡು ತಂಡಗಳ ಕ್ಯಾಪ್ಟನ್ ಆಗಿ ಕಾಣಿಸಿಕೊಂಡಿದ್ದರು. ರಹಾನೆ ರಾಜಸ್ಥಾನ್ ರಾಯಲ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಾಯಕನಾಗಿ ಕಣಕ್ಕಿಳಿದಿದ್ದರು. ಅದರಲ್ಲೂ ಕೆಕೆಆರ್ ತಂಡದ ನಾಯಕನಾಗಿಯೇ ಕೊನೆಯ ಐಪಿಎಲ್ ಪಂದ್ಯವಾಡಿದ್ದರು.
ಬಿಸಿಸಿಐ ನಿಯಮಾವಳಿಗಳ ಪ್ರಕಾರ ನಿವೃತ್ತರಾದ ಆಟಗಾರರು ವಿದೇಶಿ ಲೀಗ್‌ಗಳಲ್ಲಿ ಆಡಬಹುದು. ಹೀಗಾಗಿ ಆಗಸ್ಟ್ 26 ರಿಂದ ಆರಂಭವಾಗಲಿರುವ ಚೊಚ್ಚಲ ಆವೃತ್ತಿಯ ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್ (ETPL) ಟೂರ್ನಿಯಲ್ಲಿ ರಹಾನೆ ಅವರು ‘ಆಮ್‌ಸ್ಟರ್ಡ್ಯಾಮ್ ಫ್ಲೇಮ್ಸ್’ ತಂಡದ ಪರ ಪ್ರಮುಖ (ಮಾರ್ಕ್ಯೂ) ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ.

ನೋಡಿರಿ

