ಪಾಕಿಸ್ತಾನಕ್ಕೆ ‘ಕರೆಂಟ್ ಶಾಕ್’ – ವಿದ್ಯುತ್ ಇಲ್ಲದೇ ಇಡೀ ದಿನ ಪರದಾಡಿದ ಜನ

ಪಾಕಿಸ್ತಾನಕ್ಕೆ ‘ಕರೆಂಟ್ ಶಾಕ್’ – ವಿದ್ಯುತ್ ಇಲ್ಲದೇ ಇಡೀ ದಿನ ಪರದಾಡಿದ ಜನ

ಪಾಕಿಸ್ತಾನ: ಆರ್ಥಿಕ ಬಿಕ್ಕಿಟ್ಟಿನಿಂದ ಪರಿತಪಿಸುತ್ತಿರುವ ಪಾಕಿಸ್ತಾನ, ಸೋಮವಾರ ಇಡೀ ದಿನ ‘ರಾಷ್ಟ್ರೀಯ ವಿದ್ಯುತ್ ಕಡಿತ ದಿನ’ ವನ್ನು ಎದುರಿಸಿದೆ. ಇದರ ಪರಿಣಾಮ ಸೋಮವಾರ ಪೂರ್ತಿ ಪಾಕಿಸ್ತಾನ ಕತ್ತಲಲ್ಲಿ ಕಳೆದಿದೆ. ಇಸ್ಲಾಮಾಬಾದ್‌, ಲಾಹೋರ್‌ ಮತ್ತು ಕರಾಚಿಯ ಪ್ರಮುಖ ಭಾಗಗಳಲ್ಲಿ ವಿದ್ಯುತ್‌ ಕಡಿತವಾಗಿದೆ. ಇಡೀ ದಿನ ವಿದ್ಯುತ್‌ ಇಲ್ಲದೇ ನಾಗರೀಕರು ಪರದಾಡಿದ್ದಾರೆ.

ಇದನ್ನೂ ಓದಿ:  ಜೆಸಿಂಡಾ ಅರ್ಡೆರ್ನ್ ರಾಜೀನಾಮೆ – ನ್ಯೂಜಿಲೆಂಡ್ ನೂತನ ಪ್ರಧಾನಿಯಾಗಿ ಕ್ರಿಸ್ ಹಿಪ್ಕಿನ್ಸ್ ಆಯ್ಕೆ!

ಸೋಮವಾರ ಬೆಳಗ್ಗೆ 7.34ಕ್ಕೆ ಪಾಕಿಸ್ತಾನದ ರಾಷ್ಟ್ರೀಯ ವಿದ್ಯುತ್‌ ಗ್ರಿಡ್‌ ವ್ಯವಸ್ಥೆ ಸ್ಥಗಿತವಾಗಿರುವ ಕಾರಣ ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ಕರಂಟೇ ಇರಲಿಲ್ಲ. ಪ್ರಸರಣ ಮಾರ್ಗಗಳಲ್ಲಿನ ಸಮಸ್ಯೆಯಿಂದಾಗಿ ವಿದ್ಯುತ್‌ ಕಡಿತವಾಗಿದೆ ಎಂದು ಪಾಕಿಸ್ತಾನದ ಪವರ್ ಯುಟಿಲಿಟಿ ಕೆ-ಎಲೆಕ್ಟ್ರಿಕ್ ಲಿಮಿಟೆಡ್‌ನ ವಕ್ತಾರ ಇಮ್ರಾನ್ ರಾಣಾ ಹೇಳಿದ್ದಾರೆ.  ಆರ್ಥಿಕ ಬಿಕ್ಕಟ್ಟಿನಿಂದ ಜರ್ಜರಿತವಾಗಿರುವ ಪಾಕಿಸ್ತಾನ ತನ್ನ ಪರಿಸ್ಥಿತಿಯನ್ನು ಸುಧಾರಿಸಲು ಹೊಸ ಇಂಧನ ಸಂರಕ್ಷಣಾ ನೀತಿಯನ್ನು ಜಾರಿಗೆ ತಂದಿತ್ತು. ಇದರ ಮಧ್ಯೆ ವಿದ್ಯುತ್ ಸಮಸ್ಯೆ ಪಾಕ್ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

suddiyaana