ಮೊಸರಿನ ಜೊತೆ ಇದನ್ನ ಬೆರೆಸಿ ತಿಂದ್ರೆ ಹೊಟ್ಟೆಯ ಬೊಜ್ಜು ಬೇಗ ಕರಗುತ್ತೆ!

ಮೊಸರಿನ ಜೊತೆ ಇದನ್ನ ಬೆರೆಸಿ ತಿಂದ್ರೆ ಹೊಟ್ಟೆಯ ಬೊಜ್ಜು ಬೇಗ ಕರಗುತ್ತೆ!

ಮೊಸರು ಇಲ್ಲದೆ ಹಲವರಿಗೆ ಊಟ ಸೇರುವುದಿಲ್ಲ. ಕೊನೆಯ ತುತ್ತು ಮೊಸರಿನ ಜೊತೆಗೆ ಆಗಬೇಕು. ಮಧ್ಯಾಹ್ನದ ಊಟವಾಗಲಿ, ರಾತ್ರಿಯ ಭೋಜನವಾಗಲಿ, ಕೆಲವರಿಗೆ ಮೊಸರು ಬೇಕೇಬೇಕು. ಮೊಸರು ತಿನ್ನೋದ್ರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಇದು ತೂಕ ಇಳಿಸಲು ಕೂಡ ಸಹಾಯಕವಾಗಿದೆ.

ಇದನ್ನೂ ಓದಿ: 4 ದಿನದ ಕಾರ್ಯಾಚರಣೆ.. ಆಪರೇಷನ್‌ ಕಾಡಾನೆ ಸಕ್ಸಸ್!‌ – ನಾಲೆಗೆ ಬಿದ್ದು ಒದ್ದಾಡುತ್ತಿದ್ದ ಆನೆಮರಿ ಕಡೆಗೂ ಸೇಫ್!

ಅನೇಕರು ತೂಕ ಇಳಿಸಲು ನಾನಾ ಸರ್ಕಸ್‌ ಮಾಡ್ತಾರೆ. ಆದರೆ ಅವರು ಎಷ್ಟೇ ಪ್ರಯತ್ನಿಸಿದರೂ ಅಪೇಕ್ಷಿತ ಫಲಿತಾಂಶ ಸಿಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವ್ಯಾಯಾಮದ ಜೊತೆಗೆ ಹೊಟ್ಟೆ ಮತ್ತು ಸೊಂಟದ ಸುತ್ತಲಿನ ಕೊಬ್ಬನ್ನ ಕಡಿಮೆ ಮಾಡುವ ಕೆಲವು ಆಹಾರ ಸೇವಿಸಲು ಪ್ರಾರಂಭಿಸುವುದು ಬಹಳ ಮುಖ್ಯ. ಮೊಸರಿನ ಸಹಾಯದಿಂದ ನೀವು ತೂಕ ಇಳಿಸಿಕೊಳ್ಳುವುದು ಮಾತ್ರವಲ್ಲದೆ ದೇಹದ ಇತರ ಅನೇಕ ಸಮಸ್ಯೆಗಳನ್ನ ಸಹ ಗುಣಪಡಿಸಬಹುದು.

ಮೊಸರು ತಿನ್ನುವುದರಿಂದ ಕರುಳು ಶುದ್ಧವಾಗುತ್ತದೆ. ಮಲಬದ್ಧತೆಯಿಂದ ಬಳಲುತ್ತಿದ್ದರೆ ಮೊಸರು ತಿನ್ನುವುದರಿಂದ ಕರುಳಿನ ಚಲನೆ ಸುಲಭವಾಗುತ್ತದೆ. ಮೊಸರಿನಲ್ಲಿ ಪ್ರೋಬಯಾಟಿಕ್‌ಗಳಿವೆ. ಇದು ಒಳ್ಳೆಯ ಬ್ಯಾಕ್ಟೀರಿಯಾಗಳನ್ನ ಹೆಚ್ಚಿಸುವ ಮೂಲಕ ಜೀರ್ಣಾಂಗ ವ್ಯವಸ್ಥೆಯನ್ನ ಬಲಪಡಿಸುತ್ತದೆ.

ಅಗಸೆ ಬೀಜಗಳು ತುಂಬಾ ಚಿಕ್ಕದಾಗಿ ಕಾಣಿಸಬಹುದು, ಆದರೆ ಅವು ಸೂಪರ್‌ಫುಡ್‌ಗಳಂತೆ ಕಾರ್ಯನಿರ್ವಹಿಸುತ್ತವೆ. ಅವು ನಮ್ಮ ದೇಹದ ಬೆಳವಣಿಗೆಗೆ ಸಹ ಅತ್ಯಗತ್ಯ. ಈ ಬೀಜಗಳಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ಅವು ದೇಹಕ್ಕೆ ಎಲ್ಲಾ ರೀತಿಯಲ್ಲೂ ಪ್ರಯೋಜನವನ್ನ ನೀಡುತ್ತವೆ. ಅಗಸೆ ಬೀಜಗಳು ಫೈಬರ್, ಒಮೆಗಾ -3 ಕೊಬ್ಬಿನಾಮ್ಲಗಳು, ಆರೋಗ್ಯಕರ ಪ್ರೋಟೀನ್‌ಗಳು, ಫೀನಾಲಿಕ್ ಸಂಯುಕ್ತಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ. ಅಗಸೆ ಬೀಜಗಳನ್ನ ದೈನಂದಿನ ಆಹಾರದಲ್ಲಿ ಸುಲಭವಾಗಿ ಸೇರಿಸಿಕೊಳ್ಳಬಹುದು.

ತೂಕ ಇಳಿಸಿಕೊಳ್ಳಲು ಅಗಸೆ ಬೀಜಗಳು ಸಹಕಾರಿ

ಹೆಚ್ಚುತ್ತಿರುವ ತೂಕವನ್ನ ಕಡಿಮೆ ಮಾಡಲು ಅಗಸೆ ಬೀಜಗಳು ತುಂಬಾ ಉಪಯುಕ್ತವಾಗಿವೆ. ಇದು ಹೆಚ್ಚುವರಿ ಕೊಬ್ಬನ್ನ ತ್ವರಿತವಾಗಿ ಬರ್ನ್‌ ಮಾಡುತ್ತವೆ. ಹೊಟ್ಟೆ ಮತ್ತು ಸೊಂಟದ ಸುತ್ತಲಿನ ಕೊಬ್ಬು ಕಡಿಮೆಯಾಗುತ್ತದೆ. ತೂಕ ಇಳಿಸುವ ಪೋಷಕಾಂಶಗಳು ಈ ಬೀಜಗಳಲ್ಲಿ ಕಂಡುಬರುತ್ತವೆ.

ಅಗಸೆ ಬೀಜಗಳು ಹಸಿವು ನಿಯಂತ್ರಿಸಲು ಸಹಾಯ ಮಾಡುತ್ತದೆ. ನಾವು ಕಡಿಮೆ ತಿಂದರೆ ನಮ್ಮ ತೂಕವೂ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಈ ಬೀಜಗಳು ದೇಹದಲ್ಲಿ ಉರಿಯೂತವನ್ನ ಕಡಿಮೆ ಮಾಡಲು ಪ್ರಾರಂಭಿಸುತ್ತವೆ. ಉತ್ತಮ ಜೀರ್ಣಕ್ರಿಯೆಯಿಂದ ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

ಅಗಸೆ ಬೀಜಗಳನ್ನ ಹೇಗೆ ತಿನ್ನಬೇಕು?

ರಾತ್ರಿ ಮಲಗುವ ಮುನ್ನ ಅಗಸೆ ಬೀಜಗಳನ್ನ ಒಂದು ಕಪ್ ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ಅವುಗಳನ್ನ ಬ್ಲೆಂಡರ್‌ನಲ್ಲಿ ಪುಡಿಮಾಡಿ. ನೀವು ಬಯಸಿದರೆ ನೀವು ಅದಕ್ಕೆ ಹಣ್ಣುಗಳನ್ನ ಸೇರಿಸಬಹುದು. ಈ ಪುಡಿಮಾಡಿದ ಮಿಶ್ರಣವನ್ನ ಒಂದು ಕಪ್ ಮೊಸರಿನೊಂದಿಗೆ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಕೆಲವೇ ವಾರಗಳಲ್ಲಿ ನೀವು ತೂಕ ಇಳಿಸಿಕೊಳ್ಳಲು ಪ್ರಾರಂಭಿಸುತ್ತೀರಿ. ಹೊಟ್ಟೆ ಮತ್ತು ಸೊಂಟದ ಸುತ್ತಲಿನ ಕೊಬ್ಬು ಸಹ ಕರಗುತ್ತದೆ.

Shwetha M