ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ – ಆಸ್ಟ್ರೇಲಿಯಾ ತಂಡ ತೊರೆದು ತವರು ಸೇರಿದ್ದೇಕೆ ಕ್ಯಾಪ್ಟನ್?

ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ – ಆಸ್ಟ್ರೇಲಿಯಾ ತಂಡ ತೊರೆದು ತವರು ಸೇರಿದ್ದೇಕೆ ಕ್ಯಾಪ್ಟನ್?

ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಮೊದಲ ಎರಡೂ ಪಂದ್ಯಗಳಲ್ಲೂ ಟೀಮ್ ಇಂಡಿಯಾ ಎದುರು ಆಸ್ಟ್ರೇಲಿಯಾ ಸೋತು ಸುಣ್ಣವಾಗಿದೆ. ಈ ಸೋಲಿನ ಬೆನ್ನಲ್ಲೇ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌ ಅವರು ತಂಡ ತೊರೆದು ತವರಿಗೆ ಮರಳಿದ್ದಾರೆ. ಮೊದಲೇ ಸೋಲಿನ ಭೀತಿಯಲ್ಲಿದ್ದ ಆಸ್ಟ್ರೇಲಿಯಾ ತಂಡ ಶಾಕ್‌ಗೊಳಾಗಿದೆ. ಆದರೆ, ಆಸ್ಟ್ರೇಲಿಯಾ ಟೆಸ್ಟ್ ತಂಡದ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ತವರಿಗೆ ಮರಳಿದ್ದು ಕೌಟುಂಬಿಕ ವಿಚಾರಕ್ಕಾಗಿ ಅನ್ನೋದು ತಿಳಿದುಬಂದಿದೆ. ಕುಟುಂಬದಲ್ಲಿ ಅನಾರೋಗ್ಯ ಸಮಸ್ಯೆ ಕಂಡುಬಂದಿದ್ದರಿಂದ ಕಮಿನ್ಸ್ ತವರಿಗೆ ತೆರಳಿದ್ದಾರೆ. ಮಾರ್ಚ್ 1ರಿಂದ ಇಂದೋರ್‌ನ ಹೋಳ್ಕರ್ ಸ್ಟೇಡಿಯಂನಲ್ಲಿ ಮೂರನೇ ಟೆಸ್ಟ್ ಪಂದ್ಯ ನಡೆಯಲಿದೆ. ಆಗ ಪ್ಯಾಟ್ ಕಮಿನ್ಸ್ ತಂಡಕ್ಕೆ ವಾಪಸ್ ಆಗಬಹುದು ಎನ್ನಲಾಗಿದೆ.

ಇದನ್ನೂ ಓದಿ:  ಕೊಹ್ಲಿಗೆ ತುಂಟಾಟ, ಗಿಲ್‌ಗೆ ಪ್ರಾಣಸಂಕಟ – ಇನ್‌ಸೈಡ್ ‘ಪಂಚ್’ಗೆ ತಾಳಲಾರೆ.. ಹೇಳಲಾರೆ..!

ಪ್ಯಾಟ್‌ ಕಮಿನ್ಸ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡ ಪ್ರಸ್ತುತ ನಡೆಯುತ್ತಿರುವ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ಈಗಾಗಲೇ ಆಸ್ಟ್ರೇಲಿಯಾ ತಂಡಕ್ಕೆ ಡೇವಿಡ್ ವಾರ್ನರ್ ಅವರ ಅನುಪಸ್ಥಿತಿ  ಕಾಡುತ್ತಿದೆ. ವಾರ್ನರ್​ ಎರಡನೇ ಟೆಸ್ಟ್ ಪಂದ್ಯ ಆಡುವಾಗ ಚೆಂಡು ಅವರ ಹೆಲ್ಮೆಟ್​ಗೆ ಬಡಿದು ಗಾಯಗೊಂಡಿದ್ದರು. ಹೀಗಾಗಿ ಅವರು ಸೆಕೆಂಡ್ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಕೂಡ ಮಾಡಲಿಲ್ಲ. ತೃತೀಯ ಟೆಸ್ಟ್​ನಲ್ಲಿ ಇವರು ಕಣಕ್ಕಿಳಿಯುತ್ತಾರಾ, ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಕೂಡಾ ತಂಡ ಸೇರಿಕೊಳ್ಳುತ್ತಾರಾ ಅನ್ನೋ ಪ್ರಶ್ನೆ ಆಸ್ಟ್ರೇಲಿಯಾ ತಂಡವನ್ನು ಕಾಡುತ್ತಿದೆ.

suddiyaana