LSG ಏಟಿಗೆ ಹಾದಿ ತಪ್ಪಿದ ಚೆನ್ನೈ – ಆಕಾಶ್ ಚೀಟಿ, ಮಾರ್ಷ್ ಏಟಿಗೆ ಪಲ್ಟಿ
RCB ಕೈಯಲ್ಲಿ CSK ಭವಿಷ್ಯ

LSG ಏಟಿಗೆ ಹಾದಿ ತಪ್ಪಿದ ಚೆನ್ನೈ – ಆಕಾಶ್ ಚೀಟಿ, ಮಾರ್ಷ್ ಏಟಿಗೆ ಪಲ್ಟಿRCB ಕೈಯಲ್ಲಿ CSK ಭವಿಷ್ಯ

ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್ ಹಾದಿಗೆ ಲಕ್ನೋ ಸೂಪರ್ ಜೇಂಟ್ಸ್ ಮುಳ್ಳಾಗಿದೆ. ಆಕಾಶ್ ಸಿಂಗ್ ಬೌಲಿಂಗ್ ಹಾಗೂ ಮಿಚ್ ಮಾರ್ಷ್ ಬ್ಯಾಟಿಂಗ್ ಮುಂದೆ ಸಿಎಸ್​ಕೆ ಬಳಿ ಉತ್ತರವೇ ಇರಲಿಲ್ಲ. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಚೆನ್ನೈ ಎಲ್ಲಿಯೂ ಫೈಟ್ ಕೊಡ್ಲೇ ಇಲ್ಲ. ಈ ಸೋಲಿನ ಬಳಿಕ ಚೆನ್ನೈ ಪ್ಲೇ ಆಫ್ಸ್ ಹಾದಿ ಕಗ್ಗಂಟಾಗಿದ್ದೇಗೆ? ಕ್ರೂಶಿಯಲ್ ಸ್ಟೇಜಲ್ಲಿರೋ ಚೆನ್ನೈಗೆ ಬೆಂಗಳೂರೇ ಈಗ ದಾರಿ.

ಇದನ್ನೂ ಓದಿ : ಇಶಾನ್ ಕಿಶನ್‌ಗೆ ಬಂಪರ್ ಬಹುಮಾನ – 1 ಕೋಟಿ ರೂಪಾಯಿ ನೀಡಿದ ಬಿಹಾರ ಮುಖ್ಯಮಂತ್ರಿ

ಏಕನಾ ಸ್ಟೇಡಿಯಮ್​ನಲ್ಲಿ ನಡೆದ ಮ್ಯಾಚಲ್ಲಿ ಟಾಸ್ ಸೋತು ಫಸ್ಟ್ ಬ್ಯಾಟಿಂಗ್ ಮಾಡಿದ ಚೆನ್ನೈ ಓಪನರ್ಸ್ ಕಡೆಯಿಂದ ರನ್ಸ್ ಬರ್ಲಿಲ್ಲ. ಸಂಜು ಸ್ಯಾಮ್ಸನ್ ಮತ್ತು ರುತುರಾಜ್ ಗಾಯಕ್ವಾಡ್ ಬೇಗ ಔಟ್ ಆದ್ರು. ಹೀಗಿದ್ರೂ ಕಾರ್ತಿಕ್ ಶರ್ಮಾ ಒಳ್ಳೆಯ 42 ಬಾಲ್ ಗೆ 71 ಹೊಡೆದ್ರೂ ಲಕ್ನೋ ಬೌಲರ್ ಆಕಾಶ್ ಸಿಂಗ್ ಬೌಲಿಂಗ್ ಮುಂದೆ ಉಳಿದವರ ಆಟ ನಡೀಲಿಲ್ಲ.  ಟಾಪ್ 3 ವಿಕೆಟ್ ಕಿತ್ತು ಚೀಟಿ ಸೆಲೆಬ್ರೇಷನ್ ಮಾಡಿದ್ದು ವಿಶೇಷವಾಗಿತ್ತು. ಹೀಗಾಗಿ ಚೆನ್ನೈ ಕಡೆಯಿಂದ 187 ರನ್ಸ್ ಅಷ್ಟೇ ಬಂತು. ಈ ಟಾರ್ಗೆಟ್ ಬೆನ್ನತ್ತಿದ ಲಕ್ನೋ ಪರ ಮಿಚ್ ಮಾರ್ಷ್ ಸುನಾಮಿಯನ್ನೇ ಎಬ್ಬಿಸಿದ್ರು. 38 ಬಾಲ್‌ನಲ್ಲಿ 90 ರನ್. ಜೋಶ್ ಇಂಗ್ಲಿಸ್ ಜೊತೆ ಸೇರಿ 135 ರನ್ ಪಾರ್ಟ್ನರ್‌ಶಿಪ್ ಬಂದಾಗ್ಲೇ ಲಕ್ನೋ ಗೆದ್ದಾಗಿತ್ತು. ಆಮೇಲೆ ನಿಕೋಲಸ್ ಪೂರನ್ 32 ರನ್ಸ್ ಹೊಡೆದಯ ಮ್ಯಾಚ್ ಫಿನಿಶ್ ಮಾಡಿದ್ರು.16. 4 ಓವರ್​ಗಳಲ್ಲೇ ಲಕ್ನೋ ಗೆದ್ದಾಗಿತ್ತು. ಈ ಸೋಲಿನ ಬಳಿಕ ಚೆನ್ನೈ ಪ್ಲೇ ಆಫ್ಸ್ ಹಾದಿ ಕಗ್ಗಂಟಾಗಿದೆ. ಪ್ಲೇ ಆಫ್ಸ್ ಜರ್ನಿ ಈಗ ಬೆಂಗಳೂರು ಕೈಯಲ್ಲಿದೆ.

ಬೆಂಗಳೂರು ಕೈಯಲ್ಲಿ ಚೆನ್ನೈ ಭವಿಷ್ಯ!

ಲಕ್ನೋ ವಿರುದ್ಧ ಸೋತ ಮೇಲೆ 6ನೇ ಸ್ಥಾನಕ್ಕೆ ಜಾರಿದ ಚೆನ್ನೈ ತಂಡ

12 ಪಂದ್ಯ, 6 ಗೆಲುವು, 6 ಸೋಲು, ಒಟ್ಟು 12 ಅಂಕ. +0.027 ರನ್ ರೇಟ್‌

ಉಳಿದ ಎರಡು ಪಂದ್ಯಗಳನ್ನ ಗೆದ್ದರೆ ಮಾತ್ರ 16 ಅಂಕ.. ಪ್ಲೇ ಆಫ್ಸ್ ಕನಸು

ಹೈದ್ರಾಬಾದ್ & ಗುಜರಾತ್ ವಿರುದ್ಧ ಗೆದ್ರೂ ಆರ್ ಸಿಬಿ ಗೆಲುವಿಗಾಗಿ ಪ್ರಾರ್ಥನೆ

ಪಂಜಾಬ್ & ಹೈದರಾಬಾದ್ ಮುಂದಿನ ಪಂದ್ಯಗಳನ್ನ ಗೆದ್ರೆ 17 & 18 ಅಂಕ

ಬೆಂಗಳೂರು ಇವ್ರಿಬ್ಬರ ವಿರುದ್ಧ ಗೆದ್ರೆ ಹೈದ್ರಾಬಾದ್ ವಿರುದ್ಧ ಚೆನ್ನೈ ಗೆಲ್ಲಲೇಬೇಕು

ಹೈದ್ರಾಬಾದ್ 14 ಅಂಕ, ಪಂಜಾಬ್ ಕೊನೆಯಲ್ಲಿ ಗೆದ್ರೂ 15 ಅಂಕ.. ಚೆನ್ನೈಗೆ ಟಿಕೆಟ್

ಬೆಂಗಳೂರು, ಗುಜರಾತ್ ಪಕ್ಕಾ.. ರಾಜಸ್ಥಾನ ಜೊತೆ ಪ್ಲೇ ಆಫ್ಸ್ ಗೆ ಚೆನ್ನೈಗೆ ಲಕ್

Shantha Kumari

Leave a Reply

Your email address will not be published. Required fields are marked *