CSKಯಲ್ಲಿ ಸದ್ದೇ ಮಾಡ್ತಿಲ್ಲ ಸಂಜು – 3 ಮ್ಯಾಚ್.. 22 ರನ್ಸ್.. ಏನಾಯ್ತು?
ತಾಳ ತಪ್ಪಿತಾ ಚೆನ್ನೈ ಲೆಕ್ಕಾಚಾರ?

CSKಯಲ್ಲಿ ಸದ್ದೇ ಮಾಡ್ತಿಲ್ಲ ಸಂಜು – 3 ಮ್ಯಾಚ್.. 22 ರನ್ಸ್.. ಏನಾಯ್ತು?ತಾಳ ತಪ್ಪಿತಾ ಚೆನ್ನೈ ಲೆಕ್ಕಾಚಾರ?

ಐಪಿಎಲ್ ಅನ್ನೋದೇ ಹಾಗೇ.. ಜೀರೋದಿಂದ ಹೀರೋ ಆಗ್ಬೋದು ಇಲ್ಲ ಹೀರೋದಿಂದ ಜೀರೋ ಆಗ್ಬೋದು. ರಾತ್ರಿ ಕಳೆದು ಬೆಳಗಾಗುವಷ್ಟ್ರಲ್ಲೇ ಒಬ್ಬ ಪ್ಲೇಯರ್ ಕ್ರಿಕೆಟ್ ಲೋಕದಲ್ಲೇ ಸದ್ದು ಮಾಡ್ಬೋದು ಅದು ಐಪಿಎಲ್​ಗೆ ಇರೋ ತಾಕತ್ತು. ಹೀಗೆ ಟಿ-20 ವಿಶ್ವಕಪ್​ನಲ್ಲಿ ಜಗತ್ತೇ ಮೆಚ್ಚಿಕೊಂಡಿದ್ದ ಸಂಜು ಸ್ಯಾಮ್ಸನ್ ಅದ್ಯಾಕೋ ಏನೋ ಈ ಸಲ ಸಿಎಸ್​ಕೆನಲ್ಲಿ ಸದ್ದೇ ಮಾಡ್ತಿಲ್ಲ. ಮೂರಕ್ಕೆ ಮೂರೂ ಮ್ಯಾಚ್​ಗಳಲ್ಲೂ ಫೇಲ್ಯೂರ್.

ಇದನ್ನೂ ಓದಿ : RCB ಈಗ IPLನ ರಿಯಲ್ OG – ಬ್ಯಾಟಿಂಗ್ & ಬೌಲಿಂಗ್ ಕೆಮ್ಮಂಗಿಲ್ಲ!

ಐಪಿಎಲ್ ಆರಂಭಕ್ಕೂ ಮುನ್ನ ನಡೆದಿದ್ದ ಟ್ರೇಡ್ ಡೀಲ್​ಗಳಲ್ಲಿ ಸಾಕಷ್ಟು ಸದ್ದು ಮಾಡಿದ್ದು ಸಂಜು ಸ್ಯಾಮ್ಸನ್ ಡೀಲ್.. ಚೆನ್ನೈನಲ್ಲಿ ಧೋನಿ ಉತ್ತರಾಧಿಕಾರಿ ಅಂತಾನೇ ತಂಡಕ್ಕೆ ಕರೆತರಲಾಗಿತ್ತು. ಆದ್ರೆ ಅದ್ಯಾಕೋ ಏನೋ ಅಂದುಕೊಂಡಂತ ಸ್ಟಾರ್ಟ್ ಸಿಕ್ಕಿಲ್ಲ. ಆರಂಭದ ಪಂದ್ಯಗಳಲ್ಲೇ ಸಾಕಷ್ಟು ಸ್ಟ್ರಗಲ್ ಕಾಣ್ತಿದೆ. ಅದೆಲ್ಲಕ್ಕಿಂತ ಜಾಸ್ತಿ ಯೆಲ್ಲೋ ಜೆರ್ಸಿಯಲ್ಲಿ ಸಂಜುಗೆ ಅದ್ಯಾಕೋ ಇನ್ನೂ ಅಡ್ಜಸ್ಟ್ ಆಗಿಲ್ವಾ ಅನ್ನೋ ಅನುಮಾನ ಶುರುವಾಗಿದೆ.

ಸಿಎಸ್ ಕೆ ಪರ 3 ಪಂದ್ಯಗಳಲ್ಲೂ ಸಂಜು ಸೈಲೆಂಟ್!

ಈ ಸಲ ತುಂಬಾ ಹೋಪ್ಸ್ ಇಟ್ಕೊಂಡು ಸಿಎಸ್​ಕೆ ಚೇಟಾರನ್ನ ತಂಡಕ್ಕೆ ಕರೆಸಿಕೊಂಡಿತ್ತು. ಆದರೆ, ಸಂಜು ಚೆನ್ನೈ ಫ್ರಾಂಚೈಸಿಯ ಭರವಸೆಯನ್ನೇ ಹುಸಿಗೊಳಿಸಿದ್ದಾರೆ. ಸತತ ಮೂರು ಪಂದ್ಯಗಳಲ್ಲಿ ಅವ್ರ ಕಳಪೆ ಫಾರ್ಮ್​ ಸಿಎಸ್‌ಕೆ ತಂಡದ ಮ್ಯಾನೇಜ್ಮೆಂಟ್​​ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. 2026ರ ಟಿ-20 ವಿಶ್ವಕಪ್​ನಲ್ಲಿ ಭಾರತ ಚಾಂಪಿಯನ್ ಆಗುವಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಸಂಜು ಈಗ ಚೆನ್ನೈ ಪರ ಮೊದಲ ಮ್ಯಾಚಲ್ಲಿ 6, ಎರಡನೇ ಮ್ಯಾಚಲ್ಲಿ 7 ಮತ್ತು ಮೂರನೇ ಮ್ಯಾಚಲ್ಲಿ 9 ರನ್ ಗಳಿಗೆ ಔಟ್ ಆಗಿದ್ದಾರೆ.  ಮೂರು ಇನ್ನಿಂಗ್ಸ್‌ಗಳಲ್ಲಿ ಕೇವಲ 22 ರನ್ ಗಳಿಸಿದ್ದರು. ವಿಶ್ವಕಪ್ ಗೆಲುವಿನ ನಂತರ ಐಪಿಎಲ್ನಲ್ಲಿ ಅಬ್ಬರಿಸಬಹುದು ಅನ್ಕೊಂಡಿದ್ದ ಫ್ಯಾನ್ಸ್ ನಿರಾಸೆಗೊಂಡಿದ್ದಾರೆ. ರಾಜಸ್ಥಾನ ರಾಯಲ್ಸ್‌ನಲ್ಲಿ ಕ್ಯಾಪ್ಟನ್ ಆಗಿದ್ದ ವೇಳೆ ಸಂಜುನಲ್ಲಿದ್ದ ಸ್ಪಿರಿಟ್ ಕೂಡ ಈಗ ಕಾಣ್ತಿಲ್ಲ.

ರಾಜಸ್ಥಾನ ಪರ ರಾರಾಜಿಸಿದ್ದ ಸಂಜು!

ರಾಜಸ್ಥಾನ ರಾಯಲ್ಸ್ ಪರ ಕ್ಯಾಪ್ಟನ್ ಆಗಿ ಸಂಜು ಕಡೆಯಿಂದ ಒಳ್ಳೆ ಇನ್ನಿಂಗ್ಸ್ ಬಂದಿವೆ.  2021 ರಲ್ಲಿ ಸ್ಯಾಮ್ಸನ್ ಅವರನ್ನು ಮೊದಲ ಬಾರಿಗೆ ಆರ್‌ಆರ್ ನಾಯಕರನ್ನಾಗಿ ನೇಮಿಸಲಾಯಿತು ಮತ್ತು 2025 ರ ಆವೃತ್ತಿಯವರೆಗೆ ಈ ಜವಾಬ್ದಾರಿ ನಿಭಾಯಿಸಿದ್ರು. ಒಟ್ಟು 67 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿ 33 ಪಂದ್ಯಗಳನ್ನು ಗೆದ್ದು 32 ಪಂದ್ಯಗಳನ್ನು ಸೋತರು. ಅವರ ಗೆಲುವಿನ ಶೇಕಡಾವಾರು 49.25 ರಷ್ಟಿತ್ತು. ಹಾಗೇ 2022 ರ ಆವೃತ್ತಿಯಲ್ಲಿ, ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ಫೈನಲ್‌ಗೆ ಮುನ್ನಡೆಸಿದರು. ಬಟ್  ಗುಜರಾತ್ ಟೈಟಾನ್ಸ್ ವಿರುದ್ಧ ಸೋತು ರನ್ನರ್-ಅಪ್ ಆಗಿದ್ರು. ಅದೆಲ್ಲಕ್ಕಿಂತ ಇಂಪಾರ್ಟೆಂಟ್ ಅಂದ್​ರೆ ಸಂಜು ಆರ್​ಆರ್​ ಪರ ಓಪನರ್ ಆಗಿ ಸತತ 6 ಸೀಸನ್​ಗಗಳಲ್ಲಿ  ಮೊದಲ ಮ್ಯಾಚಲ್ಲಿ ಯಾವತ್ತೂ 50ಕ್ಕಿಂತ ಕಡಿಮೆ ಮೊತ್ತಕ್ಕೆ ಔಟ್ ಆಗಿದ್ದೇ ಇಲ್ಲ.

ರಾಜಸ್ಥಾನ ಪರ ಫಸ್ಟ್ ಮ್ಯಾಚಲ್ಲೇ ಅಬ್ಬರ!

ವರ್ಷ                         ಎದುರಾಳಿ                               ರನ್ಸ್

2021                         ಪಂಜಾಬ್                              119(63)

2022                           ಹೈದ್ರಾಬಾದ್                         55(27)

2023                          ಹೈದ್ರಾಬಾದ್                            55(32)

2024                           ಲಕ್ನೋ                                82*(52)

2025                           ಹೈದ್ರಾಬಾದ್                          66(37)

ಕಳೆದ ಐದು ಸೀಸನ್​ಗಳಲ್ಲಿ ಸಂಜು ಸ್ಯಾಮ್ಸನ್ ಐಪಿಎಲ್​ನಲ್ಲಿ ತಾವು ಆಡಿದ ಮೊದಲ ಮ್ಯಾಚಲ್ಲಿ ಯಾವತ್ತೂ 50ಕ್ಕಿಂತ ಒಳಗೆ ಔಟ್ ಆಗಿದ್ದೇ ಇಲ್ಲ. ಆದ್ರೆ ಸಿಎಸ್​ಕೆಗೆ ಬಂದ್ಮೇಲೆ ಮೊದಲ ಮೂರು ಮ್ಯಾಚ್​ಗಳಲ್ಲೂ ಒಂದಂಕಿಗೆ ಔಟ್ ಆಗಿದ್ದಾರೆ. ಹೀಗಾಗಿ ಸಂಜು ಮುಂದಿನ ಪಂದ್ಯಗಳಲ್ಲಿ ಕಂ ಬ್ಯಾಕ್ ಮಾಡಲೇಬೇಕಿದೆ. ಇಲ್ಲದಿದ್ರೆ ಸಂಜುಗೂ ಹೊಡೆತ ತಂಡಕ್ಕೂ ದೊಡ್ಡ ಹೊಡೆತ.

Shantha Kumari