ಖಾತೆ ತೆರೆಯುವ ಹುಮ್ಮಸ್ಸಲ್ಲಿ ಧೋನಿ ಟೀಮ್ ಸಿಎಸ್‌ಕೆ- ಟಾಪರ್ ಆಗೋ ಉತ್ಸಾಹದಲ್ಲಿ ಎಲ್ಎಸ್‌ಜಿ

ಖಾತೆ ತೆರೆಯುವ ಹುಮ್ಮಸ್ಸಲ್ಲಿ ಧೋನಿ ಟೀಮ್ ಸಿಎಸ್‌ಕೆ- ಟಾಪರ್ ಆಗೋ ಉತ್ಸಾಹದಲ್ಲಿ ಎಲ್ಎಸ್‌ಜಿ

ಇಂಡಿಯನ್ ಪ್ರೀಮಿಯರ್ ಲೀಗ್​ನ ಆರನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಇವತ್ತು ಲಖನೌ ಸೂಪರ್ ಜೇಂಟ್ಸ್ ತಂಡವನ್ನು ಎದುರಿಸಲಿದೆ. ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೆಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೇಂಟ್ಸ್ ತಂಡ ಮುಖಾಮುಖಿ ಆಗುತ್ತಿರುವುದನ್ನ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್ – ರಾತ್ರಿ 1.30ರವರೆಗೂ ಮೆಟ್ರೋ ಸಂಚಾರ!

ಚೆನ್ನೈ ತಂಡದಲ್ಲಿ ಅನುಭವಿ ಸ್ಟಾರ್ ಆಟಗಾರರಿದ್ದಾರೆ. ಆದರೂ ಕೂಡಾ ಕಳೆದ ಪಂದ್ಯದಲ್ಲಿ ಗುಜರಾತ್ ವಿರುದ್ಧ ತಕ್ಕ ಪ್ರದರ್ಶನ ತೋರದೇ ಇರುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಇವತ್ತು ಚೆನ್ನೈನ ಎಮ್​ಎ ಚಿದಂಬರಂ ಸ್ಟೇಡಿಯಂನಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಲಖನೌ ಸೂಪರ್ ಜೇಂಟ್ಸ್ ವಿರುದ್ಧ ಕಣಕ್ಕಿಳಿಯಲಿದ್ದು, ಅಭಿಮಾನಿಗಳು ಸಿಎಸ್‌ಕೆ ಗೆಲುವಿಗಾಗಿ ಕಾಯುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಗುಜರಾತ್ ವಿರುದ್ಧ ಸೋತು ಹಿನ್ನಡೆ ಅನುಭವಿಸಿರುವ ಸಿಎಸ್​ಕೆ ಈ ಪಂದ್ಯದಲ್ಲಿ ಖಾತೆ ತೆರೆಯುವ ಹುಮ್ಮಸ್ಸಿನಲ್ಲಿದೆ.

ಇತ್ತ ಲಖನೌ ಸೂಪರ್ ಜೇಂಟ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಗೆದ್ದು ಆತ್ಮವಿಶ್ವಾಸದಲ್ಲಿದ್ದು ಇಂದಿನ ಮ್ಯಾಚ್​ನಲ್ಲಿ ಕೂಡ ಗೆಲುವು ಸಾಧಿಸಿ ಟೇಬಲ್ ಟಾಪರ್ ಆಗುವ ಯೋಜನೆ ಹಾಕಿಕೊಂಡಿದೆ. ಲಖನೌ ತಂಡದ ಪರ ನಾಯಕ ಕೆಎಲ್ ರಾಹುಲ್ ಕಳಪೆ ಫಾರ್ಮ್​ನಲ್ಲಿದ್ದರೂ ಮಧ್ಯಮ ಕ್ರಮಾಂಕ ಬಲಿಷ್ಠವಾಗಿದೆ. ನಿಕೋಲಸ್ ಪೂರನ್, ಮಾರ್ಕಸ್ ಸ್ಟೋಯಿನಿಸ್, ಆಯುಷ್ ಬದೋನಿ, ಕ್ರುನಾಲ್ ಪಾಂಡ್ಯ, ದೀಪಕ್ ಹೂಡ, ಖೈಲ್ ಮೇಯರ್ಸ್ ತಂಡದಲ್ಲಿದ್ದಾರೆ. ಬೌಲಿಂಗ್​ನಲ್ಲಿ ಮಾರ್ಕ್ ವುಡ್ ಅಪಾಯಕಾರಿ ಆಗಿದ್ದಾರೆ. ಜಯದೇವ್ ಉನಾದ್ಕಟ್, ರವಿ ಬಿಷ್ಟೋಯಿ ಹಾಗೂ ಆವೇಶ್ ಖಾನ್ ಪ್ರಮುಖ ಬೌಲರ್​ಗಳಾಗಿದ್ದಾರೆ. ಚೆನ್ನೈ ಹಾಗೂ ಲಖನೌ ನಡುವಣ ಪಂದ್ಯ ಸಂಜೆ 7;30ಕ್ಕೆ ಶುರುವಾಗಲಿದೆ. 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್​ವರ್ಕ್​ನಲ್ಲಿ ನೇರಪಪ್ರಸಾರ ಕಾಣಲಿದೆ. ಆನ್​ಲೈನ್ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಇರಲಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ: ಡೆವೋನ್ ಕಾನ್ವೆ, ರುತುರಾಜ್ ಗಾಯಕ್ವಾಡ್, ಮೊಯೀನ್ ಅಲಿ, ಬೆನ್ ಸ್ಟೋಕ್ಸ್, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ), ಶಿವಂ ದುಬೆ, ಮಿಚೆಲ್ ಸ್ಯಾಂಟನರ್, ದೀಪಕ್ ಚಹರ್, ಆರ್‌ಎಸ್ ಹಂಗರ್ಗೇಕರ್, ತುಷಾರ್ ದೇಶಪಾಂಡೆ, ಸುಭ್ರಾಂಶು ಸೇನಾಪತಿ, ಶೇಕ್ ರಶೀದ್, ಅಜಿಂಕ್ಯ ರಹಾನೆ, ನಿಶಾಂತ್ ಸಿಂಧು, ಡ್ವೈನ್ ಪ್ರಿಟೋರಿಯಸ್, ಅಜಯ್ ಜಾದವ್ ಮಂಡಲ್, ಪ್ರಶಾಂತ್ ಸೋಲಂಕಿ, ಸಿಮರ್ಜೀತ್ ಸಿಂಗ್, ಆಕಾಶ್ ಸಿಂಗ್, ಭಗತ್ ವರ್ಮಾ.

ಲಖನೌ ಸೂಪರ್ ಜೈಂಟ್ಸ್ ತಂಡ: ಕೆಎಲ್ ರಾಹುಲ್ (ನಾಯಕ), ಖೈಲ್ ಮೇಯರ್ಸ್, ದೀಪಕ್ ಹೂಡಾ, ಕ್ರುನಾಲ್ ಪಾಂಡ್ಯ, ಮಾರ್ಕಸ್ ಸ್ಟೋಯಿನಿಸ್, ನಿಕೋಲಸ್ ಪೂರನ್,, ಆಯುಷ್ ಬದೋನಿ, ಮಾರ್ಕ್ ವುಡ್, ಜಯದೇವ್ ಉನಾದ್ಕಟ್, ರವಿ ಬಿಷ್ಣೋಯ್, ಅವೇಶ್ ಖಾನ್, ಕೃಷ್ಣಪ್ಪ ಗೌತಮ್, ಪ್ರೇರಕ್ ಮಂಕಡ್, ಸ್ವಪ್ನಿಲ್ ಸಿಂಗ್, ನವೀನ್-ಉಲ್-ಹಕ್, ಯಶ್ ಠಾಕೂರ್, ಡೇನಿಯಲ್ ಸಾಮ್ಸ್, ರೊಮಾರಿಯೋ ಶೆಫರ್ಡ್, ಯುದ್ವೀರ್ ಸಿಂಗ್ ಚರಕ್, ಮಯಾಂಕ್ ಯಾದವ್, ಅಮಿತ್ ಮಿಶ್ರಾ, ಮನನ್ ವೋಹ್ರಾ.

 

suddiyaana