ಎಸ್‌ಆರ್‌ಹೆಚ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಸಿಎಸ್‌ಕೆ – ಋತುರಾಜ್‌ ಅಬ್ಬರದ ಆಟಕ್ಕೆ ಮಂಕಾದ ಸನ್ ರೈಸರ್ಸ್!

ಎಸ್‌ಆರ್‌ಹೆಚ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಸಿಎಸ್‌ಕೆ – ಋತುರಾಜ್‌ ಅಬ್ಬರದ ಆಟಕ್ಕೆ ಮಂಕಾದ ಸನ್ ರೈಸರ್ಸ್!

ಸನ್ ರೈಸರ್ಸ್ ಹೈದರಾಬಾದ್ ಹಾಗೂ  ಚೆನ್ನೈ ಸೂಪರ್ ಕಿಂಗ್ಸ್ ನಡೆದ ಪಂದ್ಯದಲ್ಲಿ ಸಿಎಸ್‌ಕೆ 78 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ತನ್ನ ಭದ್ರಕೋಟೆ ಚೆಪಾಕ್‌ ಕ್ರೀಡಾಂಗಣ ಹಾಲಿ ಚಾಂಪಿಯನ್‌ ಚೆನ್ನೈ ಮತ್ತೆ ಅಧಿಪತ್ಯ ಸಾಧಿಸಿದೆ.

ಚೈನ್ನೆನ ಚೆಪಾಕ್‌ ಕ್ರೀಡಾಂಗಣ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್, ಋತುರಾಜ್‌ ಹಾಗೂ ಡ್ಯಾರಿಲ್‌ ಮಿಚೆಲ್‌ ಅಬ್ಬರದ ಆಟದಿಂದಾಗಿ 3 ವಿಕೆಟ್‌ಗೆ 212 ರನ್‌ ಕಲೆಹಾಕಿತು. 200+ ರನ್‌ ಬೆನ್ನತ್ತುವಾಗ ಮತ್ತೆ ತನ್ನ ದೌರ್ಬಲ್ಯ ಸಾಬೀತುಪಡಿಸಿದ ಸನ್‌ರೈಸರ್ಸ್‌ 18.5 ಓವರಲ್ಲಿ 134 ರನ್‌ಗೆ ಆಲೌಟಾಗಿ ಸೋಲೊಪ್ಪಿಕೊಂಡಿತು.

ಇದನ್ನೂ ಓದಿ: ಗುಜರಾತ್ ಟೈಟಾನ್ಸ್‌ ಗೆ ರೋಚಕ ಸೋಲು – – 9 ವಿಕೆಟ್ ಗಳಿಂದ ಗೆದ್ದು ಬೀಗಿದ ಆರ್ ಸಿಬಿ!

ತಂಡ ಹೆಚ್ಚಿನ ಭರವಸೆ ಇಟ್ಟುಕೊಂಡಿದ್ದ ಸ್ಫೋಟಕ ಬ್ಯಾಟರ್‌ಗಳೆಲ್ಲಾ ಚೆನ್ನೈ ಬೌಲರ್‌ಗಳ ಮುಂದೆ ನಿರುತ್ತರರಾದರು. ಟ್ರ್ಯಾವಿಡ್‌ ಹೆಡ್‌(13), ಅಭಿಷೇಕ್‌ ಶರ್ಮಾ(15), ನಿತೀಶ್‌ ರೆಡ್ಡಿ(15) ಹಾಗೂ ಏಡನ್‌ ಮಾರ್ಕ್‌ರಮ್‌(32) ತಂಡದ ಮೊತ್ತ 85 ಆಗುವಷ್ಟರಲ್ಲೇ ಪೆವಿಲಿಯನ್‌ ಸೇರಿದ್ದರು. ಅದಾಗಲೇ ತಂಡದ ಸೋಲು ಬಹುತೇಕ ಖಚಿತವಾಗಿತ್ತು. ಹೀಗಾಗಿ ಕ್ಲಾಸೆನ್‌(20), ಸಮದ್‌(19)ಗೂ ಯಾವುದೇ ಮ್ಯಾಜಿಕ್‌ ಮಾಡಲು ಸಾಧ್ಯವಾಗಲಿಲ್ಲ. ಬಹುತೇಕ ಎಲ್ಲಾ ಪಂದ್ಯಗಳಲ್ಲಿ ಸಿಕ್ಸರ್‌, ಬೌಂಡರಿಗಳ ಸುರಿಮಳೆ ಸುರಿಸುವ ಹೈದ್ರಾಬಾದ್‌ಗೆ ಈ ಪಂದ್ಯದಲ್ಲಿ ಕೇವಲ 9 ಬೌಂಡರಿ, 4 ಸಿಕ್ಸರ್‌ ಸಿಡಿಸಲು ಸಾಧ್ಯವಾಯಿತು.

ಇನ್ನು ಈ ಪಂದ್ಯದಲ್ಲೂ ಋುತುರಾಜ್‌ ತಂಡವನ್ನು ಉತ್ತಮವಾಗಿ ಮುನ್ನಡಿಸಿಕೊಂಡು ಹೋಗಿದ್ದಾರೆ.  ಚೆಂಡನ್ನು ಮೈದಾನದ ಮೂಲೆಮೂಲೆಗೆ ಅಟ್ಟಿದ ಋತುರಾಜ್‌(54 ಎಸೆತಗಳಲ್ಲಿ 98) ಟೂರ್ನಿಯ 2ನೇ ಶತಕ ಬಾರಿಸುವ ನಿರೀಕ್ಷೆಯಲ್ಲಿದ್ದರೂ ಅಲ್ಪದರಲ್ಲೇ ಅದರಿಂದ ವಂಚಿತರಾದರು. ಡ್ಯಾರಿಲ್‌ ಮಿಚೆಲ್‌ 52, ಶಿವಂ ದುಬೆ 39 ರನ್‌ ಗಳಿಸಿದ್ದರಿಂದ ತಂಡದ ಸ್ಕೋರ್‌ 210 ದಾಟಿತು.

Shwetha M

Leave a Reply

Your email address will not be published. Required fields are marked *