ಮುಂಬೈ ಇಂಡಿಯನ್ಸ್ Vs ಚೆನ್ನೈ ಸೂಪರ್ ಕಿಂಗ್ಸ್ – ಐಪಿಎಲ್ ನಲ್ಲಿ ಯಾರು ಸ್ಟ್ರಾಂಗ್?

ಮುಂಬೈ ಇಂಡಿಯನ್ಸ್ Vs ಚೆನ್ನೈ ಸೂಪರ್ ಕಿಂಗ್ಸ್ – ಐಪಿಎಲ್ ನಲ್ಲಿ ಯಾರು ಸ್ಟ್ರಾಂಗ್?

ಐಪಿಎಲ್​ ಇತಿಹಾಸದಲ್ಲೇ ಮೋಸ್ಟ್ ಸಕ್ಸಸ್​ಫುಲ್ ಟೀಮ್ಸ್ ಅಂದ್ರೆ ಅದು ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್. ರೋಹಿತ್ ಶರ್ಮಾ ಕ್ಯಾಪ್ಟನ್ಸಿಯಲ್ಲಿ ಐದು ಬಾರಿ ಚಾಂಪಿಯನ್ ಆಗಿರೋ ಮುಂಬೈ ಇಂಡಿಯನ್ಸ್ ಹಾಗೇ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಐದು ಸಲ ಟ್ರೋಫಿ ಎತ್ತಿ ಹಿಡಿದಿರೋ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್​ನ ಬಲಿಷ್ಠ ತಂಡಗಳು. ಇದೀಗ 18ನೇ ಸೀಸನ್​ನಲ್ಲಿ ಮತ್ತೊಮ್ಮೆ ಜಿದ್ದಾಜಿದ್ದಿನ ಪೈಪೋಟಿಗೆ ರೆಡಿಯಾಗಿದ್ದಾರೆ. ಈ ಪಂದ್ಯಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ನಲ್ಲಿ ಒಂದಷ್ಟು ಬದಲಾವಣೆಗಳೂ ಆಗಿವೆ.

ಇದನ್ನೂ ಓದಿ : ಭಾರತ ಅತೀ ಹೆಚ್ಚು ಸುಂಕ ವಿಧಿಸುತ್ತೆ.. ಈ ಕ್ರಮವನ್ನ ನಾನು ಒಪ್ಪಲ್ಲವೆಂದ ಟ್ರಂಪ್

2024ರ ಸೀಸನ್​ನಲ್ಲಿ ರೋಹಿತ್ ಶರ್ಮಾರನ್ನ ಕ್ಯಾಪ್ಟನ್ಸಿಯಿಂದ ಇಳಿಸಿ ಹಾರ್ದಿಕ್ ಪಾಂಡ್ಯರನ್ನ ಕ್ಯಾಪ್ಟನ್ ಮಾಡ್ಲಾಗಿತ್ತು. ಸೋ ಈ ಸಲವೂ ಅವ್ರೇ ಟೀಮ್ ಲೀಡ್ ಮಾಡ್ತಾರೆ. ಬಟ್ ಮೊದಲನೇ ಪಂದ್ಯದಿಂದ ಅವ್ರಿಗೆ ನಿಷೇಧ ಹೇರಿರೋದ್ರಿಂದ ಮುಂಬೈ ತಂಡದ ನಾಯಕತ್ವವನ್ನ ಸೂರ್ಯಕುಮಾರ್ ಯಾದವ್​ಗೆ ವಹಿಸಲಾಗಿದೆ. ಅಲ್ದೇ ಇಂಜುರಿಯಿಂದ ಬಳಲ್ತಿರೋ ಜಸ್ಪ್ರೀತ್ ಇನ್ನೂ ಕೂಡ ಕಂಪ್ಲೀಟ್ ಆಗಿ ಫಿಟ್ ಆಗಿಲ್ಲ. ಹೀಗಾಗಿ ಬುಮ್ರಾ ಕೂಡ ಮೊದಲ ಪಂದ್ಯವನ್ನ ಮಿಸ್ ಮಾಡಿಕೊಳ್ತಿದ್ದಾರೆ. ಇನ್ನು 2013ರಲ್ಲಿ ಮೊದಲ ಬಾರಿಗೆ ಚಾಂಪಿಯನ್ ಆಗಿದ್ದ ಮುಂಬೈ ಟೀಂ ಆ ನಂತ್ರ 2015, 2017, 2019 ಮತ್ತು 2020ರಲ್ಲಿ ಟ್ರೋಫಿಗೆ ಮುತ್ತಿಕ್ಕಿತ್ತು. ಬಟ್ ವಿಪರ್ಯಾಸ ಅಂದ್ರೆ ಕಳೆದ 12 ವರ್ಷಗಳಿಂದ ಮುಂಬೈ ತಂಡ ಬೇಡದ ದಾಖಲೆ ಬರೆದಿದೆ. 2012ರ ಬಳಿಕ ಮುಂಬೈ ಇಂಡಿಯನ್ಸ್ ಆಡಿರುವ ಪ್ರತೀ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲಿ ಗೆದ್ದೇ ಇಲ್ಲ. ಕಳೆದ ವರ್ಷವಂತೂ 14 ಪಂದ್ಯಗಳ ಪೈಕಿ ಗೆದ್ದಿದ್ದು ನಾಲ್ಕೇ ಮ್ಯಾಚ್​ಗಳನ್ನ.

ಚೆನ್ನೈ ವಿರುದ್ಧದ ಪಂದ್ಯಕ್ಕೆ ಮುಂಬೈ ಪರ ಮಾಜಿ ನಾಯಕ ರೋಹಿತ್ ಶರ್ಮಾ ಜೊತೆಗೆ ರಿಯಾನ್ ರಿಕಲ್ಟನ್ ಓಪನರ್ ಆಗಿ ಬರುವ ಸಾಧ್ಯತೆ ಇದೆ. ಆ ನಂತರ 3ನೇ ಸ್ಥಾನದಲ್ಲಿ ತಿಲಕ್ ವರ್ಮಾ, 4ನೇ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್ ಬ್ಯಾಟ್ ಬೀಸ್ತಾರೆ. ಮಿಡಲ್ ಆರ್ಡರ್‌ನಲ್ಲಿ ವಿಲ್ ಜಾಕ್ಸ್ ಮ್ಯಾಚ್ ಫಿನಿಶರ್ ಜವಾಬ್ದಾರಿ ನಿಭಾಯಿಸ್ತಾರೆ. ಹಾಗೇ ಮಿಚೆಲ್ ಸ್ಯಾಂಟ್ನರ್ ಕೂಡ ತಂಡದಲ್ಲಿದ್ದು, ಅವರೂ ಕೂಡ ಬಾಟಮ್ ಆರ್ಡರ್ ನಲ್ಲಿ ಬ್ಯಾಟಿಂಗ್ ಮಾಡಬಲ್ಲರು. ಟ್ರೆಂಟ್ ಬೌಲ್ಟ್, ದೀಪಕ್ ಚಹರ್ ಪವರ್​ಪ್ಲೇ ಬೌಲಿಂಗ್ ಗೆ ಬಂದ್ರೆ  ನಂತರದಲ್ಲಿ ರೀಸ್ ಟಾಪ್ಲಿ ಅಥವಾ ಅರ್ಜುನ್ ತೆಂಡೂಲ್ಕರ್‌ಗೆ ಅವಕಾಶ ಇದೆ. ಮಿಚೆಲ್ ಸ್ಯಾಂಟ್ನರ್, ಮುಜೀಬ್ ಉರ್ ರೆಹಮಾನ್, ಕರಣ್ ಶರ್ಮಾ ಕೂಡ ಇದ್ದಾರೆ. ಆದ್ರೆ ಮೊದಲ ಪಂದ್ಯದ ಬಳಿಕ ಪಾಂಡ್ಯ ಮತ್ತು ಬುಮ್ರಾ ತಂಡವನ್ನ ಕೂಡಿಕೊಳ್ತಾರೆ. ಇದು ಮುಂಬೈ ಕಥೆಯಾದ್ರೆ ಚೆನ್ನೈ ಟೀಮ್​ನಲ್ಲಿ ಧೋನಿಯೇ ಹೀರೋ.

ಕಳೆದ ಮೂರ್ನಾಲ್ಕು ವರ್ಷಗಳಿಂದ ಐಪಿಎಲ್​ ಅಂದ್ರೆ ಧೋನಿ ಪಾಲಿಗೆ ಇದೇ ಕೊನೆ ಆವೃತ್ತಿ ಎಂದೇ ಚರ್ಚೆಯಾಗ್ತಿದೆ. ಅದ್ರಲ್ಲೂ ಕಳೆದ ವರ್ಷವೇ ಲಾಸ್ಟ್ ಆಗ್ಬೋದು ಅನ್ನೋ ನಿರೀಕ್ಷೆ ಇತ್ತು. ಬಟ್ ಧೋನಿ ನಿವೃತ್ತಿ ಘೋಷಣೆ ಮಾಡ್ಲಿಲ್ಲ. ಹೀಗಾಗಿ ಈ ಬಾರಿಯೂ ಮೈದಾನಕ್ಕಿಳಿದು ಬ್ಯಾಟ್ ಬೀಸೋಕೆ ಈಗಾಗ್ಲೇ ಭರ್ಜರಿ ಪ್ರಾಕ್ಟೀಸ್ ಕೂಡ ಮಾಡಿದ್ದಾರೆ. ನೆಟ್ ಪ್ರ್ಯಾಕ್ಟೀಸ್‌ ವೇಳೆ ಹೆಲಿಕಾಪ್ಟರ್ ಶಾಟ್ ಹೊಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಇನ್ನು ಮಹೇಂದ್ರ ಸಿಂಗ್ ಧೋನಿ ಕಳೆದ 17 ಆವೃತ್ತಿಗಳನ್ನು ಆಡಿದ್ದು, 18ನೇ ಆವೃತ್ತಿ ಆಡಲು ಸಜ್ಜಾಗಿದ್ದಾರೆ. ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ ತಂಡ 5 ಬಾರಿ (2010, 2011, 2018, 2021 ಮತ್ತು 2023) ಪ್ರಶಸ್ತಿ ಗೆದ್ದುಕೊಂಡಿದೆ. ಈ ಮೂಲಕ ಧೋನಿ ಐಪಿಎಲ್‌ನಲ್ಲೂ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ. ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ಸಿಎಸ್ಕೆ ಫ್ರಾಂಚೈಸಿ 2 ವರ್ಷ ನಿಷೇಧ ಶಿಕ್ಷೆ ಅನುಭವಿಸಿದ ಸಂದರ್ಭದಲ್ಲಿ ಧೋನಿ ಪುಣೆ ಸೂಪರ್ಜೈಂಟ್ಸ್ ತಂಡದ ಪರ ಆಡಿದ್ದರು.
ಚೆನ್ನೈ ಟೀಂ ಕೂಡ ಬಲಿಷ್ಠವಾಗಿದ್ದು ಅದ್ರಲ್ಲೂ ಮೂವರ ಮೇಲೆ ಎಲ್ಲರ ಕಣ್ಣಿದೆ. ನ್ಯೂಜಿಲೆಂಡ್‌ನ ಸ್ಟಾರ್ ಬ್ಯಾಟರ್ ರಚಿನ್ ರವೀಂದ್ರ ಪ್ರಸ್ತುತ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಇದರೊಂದಿಗೆ ಅವರು ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ರು. ಹಾಗೇ ಚೆನ್ನೈನ ಮತ್ತೊಬ್ಬ ಆಲ್​ರೌಂಡರ್ ರವೀಂಧ್ರ ಜಡೇಜಾ. 2025 ರ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಅಭಿಯಾನದಲ್ಲಿ ಜಡೇಜಾ ಅದ್ಭುತ ಪ್ರದರ್ಶನ ನೀಡಿದ್ದರು. 5 ಇನ್ನಿಂಗ್ಸ್‌ಗಳಲ್ಲಿ, ಅವರು 36.60 ಸರಾಸರಿಯಲ್ಲಿ 5 ವಿಕೆಟ್‌ಗಳನ್ನು ಪಡೆದಿದ್ದರು. ಈಗ ಐಪಿಎಲ್ 2025ರಲ್ಲಿ ಜಡೇಜಾ ಅವರ ಪ್ರದರ್ಶನದ ಮೇಲೆ ಎಲ್ಲರ ಕಣ್ಣಿದೆ.  ಮುಂಬೈನ ಬ್ಯಾಟಿಂಗ್ ಆಲ್‌ರೌಂಡರ್ ಶಿವಂ ದುಬೆ ಕೂಡ ಚೆನ್ನೈ ಸೂಪರ್ ಕಿಂಗ್ಸ್ ಪರ ಅಬ್ಬರಿಸಲು ಸಜ್ಜಾಗಿದ್ದಾರೆ.

ಇನ್ನು ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಮತ್ತು ಮುಂಬೈ  ತಂಡಗಳು ಪರಸ್ಪರ 37 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ 17 ಪಂದ್ಯಗಳಲ್ಲಿ ಚೆನ್ನೈ ಗೆದ್ದಿದ್ರೆ 20 ಮ್ಯಾಚ್​ಗಳಲ್ಲಿ ಮುಂಬೈ ಇಂಡಿಯನ್ಸ್ ಗೆಲುವು ದಾಖಲಿಸಿದೆ. ಈ ಸ್ಟ್ಯಾಟ್ಸ್ ನೋಡಿದ್ರೆ ಮುಂಬೈ ಲೀಡ್​ನಲ್ಲಿದೆ. ಬಟ್ ಮೊದಲ ಮ್ಯಾಚ್​​ನಲ್ಲಿ ಕಳೆದ 12 ವರ್ಷಗಳಿಂದ ಸೋಲ್ತಾ ಇರೋದನ್ನ ನೋಡಿದ್ರೆ ಚೆನ್ನೈ ಪರ ಗೆಲುವಿನ ನಿರೀಕ್ಷೆ ಇದೆ.

Shantha Kumari

Leave a Reply

Your email address will not be published. Required fields are marked *