KL ರಾಹುಲ್ 2.O ಅವತಾರ – ಡೆಲ್ಲಿ ಪರ ಬ್ಯಾಟಿಂಗ್ ಬ್ರಹ್ಮಾಸ್ತ್ರ

ಕಳೆದ ಐಪಿಎಲ್ ನಲ್ಲಿ ಲಕ್ನೋ ಸೂಪರ್ ಜೇಂಟ್ಸ್ ಕಳಪೆ ಪ್ರದರ್ಶನಕ್ಕೆ ಕೆಎಲ್ ರಾಹುಲ್ ಹೊಣೆ ಹೊರಬೇಕಾಗಿತ್ತು. ಸಂಜೀವ್ ಗೊಯೆಂಕಾ ಮೈದಾನದಲ್ಲೇ ಅವಮಾನ ಮಾಡಿದ್ದಲ್ಲದೆ, ಕೊನೆಗೆ ತಂಡದಿಂದಲೂ ಕೈ ಬಿಟ್ಟಿದ್ದರು. ಇದೀಗ ರಾಹುಲ್ ಡೆಲ್ಲಿ ತಂಡದ ಪಾಲಾಗಿದ್ದಾರೆ. ಇತ್ತ ಸಂಜೀವ್ ಗೊಯೆಂಕಾ, ರಿಷಭ್ ಪಂತ್ ರನ್ನು ದುಬಾರಿ ಮೊತ್ತಕ್ಕೆ ಖರೀದಿಸಿ ಏನೋ ಸಾಧಿಸಿದವರಂತೆ ಬೀಗಿದ್ದರು. ಆದರೆ ರಿಷಭ್ ಬ್ಯಾಟ್ ಇದುವರೆಗೆ ಸಿಡಿದೇ ಇಲ್ಲ. ನಾಲ್ಕು ಪಂದ್ಯಗಳನ್ನ ಆಡಿ 19 ರನ್ ಕಲೆ ಹಾಕಿದ್ದಾರೆ. ಗೋಯೆಂಕಾ ಕೂಡ ಅಷ್ಟೊಂದು ಹಣ ಸುರಿದು ಕಣ್ ಕಣ್ ಬಿಡ್ತಿದ್ದಾರೆ. ಹೀಗಾಗಿ ಕೆಎಲ್ ರಾಹುಲ್ ಅಭಿಮಾನಿಗಳು ಸಂಜೀವ್ ಗೊಯೆಂಕಾರನ್ನು ಇನ್ನಿಲ್ಲದಂತೆ ಟ್ರೋಲ್ ಮಾಡುತ್ತಿದ್ದಾರೆ. ರಾಹುಲ್ ಗೆ ಅವಮಾನ ಮಾಡಿದ್ದಕ್ಕೆ ನಿಮಗೆ ತಕ್ಕ ಶಾಸ್ತಿಯಾಗಿದೆ. ಆದ್ರೆ ರಾಹುಲ್ ಮಾತ್ರ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಈ ಐಪಿಎಲ್ನಲ್ಲಿ ತಮ್ಮ 2.0 ಅವತಾರ ತಾಳಿದ್ದಾರೆ.
ಇದನ್ನೂ ಓದಿ : ₹27 ಕೋಟಿ.. 4 ಪಂದ್ಯ.. 19 ರನ್ – ಪಂತ್ ಗೆ ದುಬಾರಿ ಹಣವೇ ಮುಳುವಾಯ್ತಾ?
ಐಪಿಎಲ್ ಮೆಗಾ ಹರಾಜಿನಲ್ಲಿ 14 ಕೋಟಿ ರೂಪಾಯಿಗೆ ಡೆಲ್ಲಿ ತಂಡ ಸೇರಿದ್ದ ರಾಹುಲ್ ಕ್ಯಾಪ್ಟನ್ಸಿಯನ್ನ ನಿರಾಕರಿಸಿದ್ರು. ಹೀಗಾಗಿ ಅಕ್ಷರ್ ಪಟೇಲ್ ತಂಡವನ್ನ ಮುನ್ನಡೆಸ್ತಾ ಇದ್ದಾರೆ. ಪತ್ನಿ ಆತಿಯಾ ಶೆಟ್ಟಿ ಮತ್ತು ರಾಹುಲ್ ಮೊದಲ ಮಗುವಿನ ಕಾರಣ ಡೆಲ್ಲಿ ಪರ ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. 2ನೇ ಪಂದ್ಯಕ್ಕೆ ಕಣಕ್ಕಿಳಿದ ರಾಹುಲ್ ಎಸ್ಆರ್ಹೆಚ್ ವಿರುದ್ಧ 15 ರನ್ ಗಳಿಸಿದ್ರು. ಬಟ್ ಮೂರನೇ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ. ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಕೆಎಲ್ ರಾಹುಲ್ ರಾಹುಲ್ ಅರ್ಧಶತಕ ಸಿಡಿಸುವ ಮೂಲಕ ಡೆಲ್ಲಿ 150 ರನ್‌ಗಳ ಗಡಿ ದಾಟುವಲ್ಲಿ ಪ್ರಮುಖ ಪಾತ್ರವಹಿಸಿದರು. 51 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 77 ರನ್‌ಗಳನ್ನು ಕಲೆ ಹಾಕಿ ವಿಕೆಟ್ ಕಳೆದುಕೊಂಡರು. ಈ ಮೂಲಕ ತಾನೆಂಥ ಕ್ವಾಲಿಟಿ ಪ್ಲೇಯರ್ ಅನ್ನೋದನ್ನ ತೋರಿಸಿದ್ರು. ಸೋ ತಾವು ಆಡಿರೋ ಎರಡೇ ಪಂದ್ಯಗಳಲ್ಲೇ ತನ್ನನ್ನ ಟೀಕಿಸಿದ್ದವ್ರಿಗೆ ಸರಿಯಾಗೇ ತಿರುಗೇಟು ಕೊಟ್ಟಿದ್ದಾರೆ.