ಲಕ್ನೋ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ ಸಿಎಸ್‌ಕೆ – ತವರಿನಲ್ಲೇ ಭರ್ಜರಿ ಆಟದ ನಿರೀಕ್ಷೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್

ಲಕ್ನೋ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ ಸಿಎಸ್‌ಕೆ – ತವರಿನಲ್ಲೇ ಭರ್ಜರಿ ಆಟದ ನಿರೀಕ್ಷೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್

4 ದಿನಗಳ ಹಿಂದಷ್ಟೇ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ ಸೋತಿತ್ತು. ಇವತ್ತು ಸಿಎಸ್‌ಕೆ ಹೋಮ್‌ಗ್ರೌಂಡ್‌ನಲ್ಲಿ ಆಡಲಿದೆ. ಲಕ್ನೋ ವಿರುದ್ಧ ತವರಿನ ಚೆಪಾಕ್‌ ಕ್ರೀಡಾಂಗಣದಲ್ಲಿ ಸೇಡು ತೀರಿಸಿಕೊಳ್ಳುವ ಕಾತರದಲ್ಲಿದೆ.

ಇದನ್ನೂ ಓದಿ: ಅಂಪೈರ್ ವಿರುದ್ಧ ಅಸಮಾಧಾನ ಹೊರಹಾಕಿದ್ದೇ ತಪ್ಪಾಯ್ತು – ವಿರಾಟ್ ಕೊಹ್ಲಿ ವಿರುದ್ಧ ಬಿಸಿಸಿಐ ಕ್ರಮ

ಕನ್ನಡಿಗ ಕೆ.ಎಲ್‌.ರಾಹುಲ್‌ ನಾಯಕತ್ವದ ಲಖನೌ ಹಾಗೂ ಋತುರಾಜ್‌ ಗಾಯಕ್ವಾಡ್‌ ಮುನ್ನಡೆಸುತ್ತಿರುವ ಚೆನ್ನೈ ತಂಡಗಳು ಈ ಬಾರಿ ಟೂರ್ನಿಯಲ್ಲಿ ತಲಾ 7 ಪಂದ್ಯಗಳನ್ನಾಡಿದ್ದು, ತಲಾ 4 ಗೆಲುವು ದಾಖಲಿಸಿವೆ. ಆದರೆ ನೆಟ್ ರನ್‌ ರೇಟ್‌ ಆಧಾರದಲ್ಲಿ ಚೆನ್ನೈ ತಂಡ ಲಖನೌಗಿಂದ ಮೇಲಿದೆ. ಋತುರಾಜ್‌ ಹಾಗೂ ಶಿವಂ ದುಬೆ ಮಾತ್ರ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ರಚಿನ್‌ ರವೀಂದ್ರ ಲಯ ಕಳೆದುಕೊಂಡಿರುವುದು ತಂಡದ ತಲೆನೋವಿಗೆ ಕಾರಣವಾಗಿದೆ. ಜಡೇಜಾ ಆಲ್ರೌಂಡ್‌ ಪ್ರದರ್ಶನ, ಧೋನಿಯ ಸ್ಫೋಟಕ ಬ್ಯಾಟಿಂಗ್‌ ತಂಡದ ಪ್ಲಸ್ ಪಾಯಿಂಟ್‌. ಇನ್ನು, ಬೌಲಿಂಗ್‌ ವಿಭಾಗ ಮೊನಚು ದಾಳಿ ಸಂಘಟಿಸಬೇಕಿದ್ದು, ಮುಸ್ತಾಫಿಜುರ್‌, ಪತಿರನ ಜೊತೆ ದೀಪಕ್‌, ತುಷಾರ್‌ ಲಖನೌ ಬ್ಯಾಟರ್‌ಗಳನ್ನು ಕಟ್ಟಿಹಾಕಬೇಕಿದೆ.

ಮತ್ತೊಂದೆಡೆ, ಕಳೆದ ಪಂದ್ಯದಲ್ಲಿ ಚೆನ್ನೈ ಬೌಲರ್‌ಗಳ ಮೇಲೆ ಸವಾರಿ ಮಾಡಿದ್ದ ಲಖನೌ ಈಗ ಮತ್ತೊಂದು ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದೆ. ಆದರೆ ಚೆನ್ನೈ ಕ್ರೀಡಾಂಗಣದಲ್ಲಿ ಗೆಲ್ಲುವುದು ಎಷ್ಟು ಕಷ್ಟ ಎಂಬುದು ಲಖನೌಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ಸೂಕ್ತ ಯೋಜನೆಯೊಂದಿಗೆ ಕಣಕ್ಕಿಳಿಯಬೇಕಿದೆ. ಲಾಸ್ಟ್ ಮ್ಯಾಚ್‌ನಲ್ಲಿ ಚೆನ್ನೈ ವಿರುದ್ಧ ಲಕ್ನೋ ಕ್ಯಾಪ್ಟನ್ ಕೆ.ಎಲ್ ರಾಹುಲ್ ಹಾಗೂ ಕ್ವಿಂಟನ್ ಡಿ.ಕಾಕ್ ಅಬ್ಬರದ ಬ್ಯಾಟಿಂಗ್ ನಡೆಸಿದ್ದರು. ಲಕ್ನೋ ಟೀಮ್ ಗೆಲ್ಲುವಂತೆ ಮಾಡಿದ್ರು. ಆದ್ರೆ, ಇವತ್ತಿನ ರಿವರ್ಸ್ ಮ್ಯಾಚ್‌ನಲ್ಲಿ ಸಿಎಸ್‌ಕೆ ಸ್ಟ್ರಾಟಜಿಗೆ ಕೌಂಟರ್ ಕೊಡಲೇಬೇಕಾದ ಅನಿವಾರ್ಯತೆ ಲಕ್ನೋಗಿದೆ.

ಒಟ್ಟು ಮುಖಾಮುಖಿ: 04

ಚೆನ್ನೈ: 01

ಲಖನೌ: 02

ಫಲಿತಾಂಶವಿಲ್ಲ: 01

 

Sulekha

Leave a Reply

Your email address will not be published. Required fields are marked *