ಸಿಎಸ್‌ಕೆಗೆ ಈಗ ಸಿಕ್ಕಿದೆ ಹೊಸ ಬೌಲಿಂಗ್ ಅಸ್ತ್ರ – ಲಸಿತ್ ಮಲಿಂಗಾ ಸ್ಟೈಲ್‌ನಲ್ಲಿ ಬೌಲಿಂಗ್ ಮಾಡುವ ಆ ಆಟಗಾರ ಯಾರು?

ಸಿಎಸ್‌ಕೆಗೆ ಈಗ ಸಿಕ್ಕಿದೆ ಹೊಸ ಬೌಲಿಂಗ್ ಅಸ್ತ್ರ – ಲಸಿತ್ ಮಲಿಂಗಾ ಸ್ಟೈಲ್‌ನಲ್ಲಿ ಬೌಲಿಂಗ್ ಮಾಡುವ ಆ ಆಟಗಾರ ಯಾರು?

ಐಪಿಎಲ್​ ಇತಿಹಾಸದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ವನ್​ ಆಪ್​ ದಿ ಮೋಸ್ಟ್ ಸಕ್ಸಸ್​ಫುಲ್ ಫ್ರಾಂಚೈಸಿ. ಇದುವರೆಗೆ ಒಟ್ಟು ಐದು ಬಾರಿ ಸಿಎಸ್​ಕೆ ಚಾಂಪಿಯನ್ ಆಗಿದೆ. ಚೆನ್ನೈನ ಸಕ್ಸಸ್​ನಲ್ಲಿ ಧೋನಿಯ ರೋಲ್ ತುಂಬಾ ದೊಡ್ಡದಿದೆ. ಅದ್ರಲ್ಲಿ ಎರಡು ಮಾತಿಲ್ಲ. ಅದ್ರಲ್ಲೂ 2023ರಲ್ಲಿ ಚಾಂಪಿಯನ್ ಆಗಿದ್ದಾಗ ಸಿಎಸ್​ಕೆಯ ಬೌಲಿಂಗ್ ಲೈನ್ ಅಪ್​ ಅಷ್ಟಕ್ಕಷ್ಟೇ ಇತ್ತು. ಯಂಗ್​ ಬೌಲರ್ಸ್​ಗಳನ್ನಿಟ್ಟುಕೊಂಡೇ ಚೆನ್ನೈ ಟೂರ್ನಿಯನ್ನ ಗೆದ್ದಿತ್ತು. ಅದು ಧೋನಿ ಕ್ಯಾಪ್ಟನ್ಸಿಯ ಕೆಪಾಟಿಸಿ. ಈ ಬಾರಿಯೂ ಅಷ್ಟೇ ಚೆನ್ನೈ ಸೂಪರ್​​ ಕಿಂಗ್ಸ್​ ಫುಲ್​ ಫ್ಲೆಡ್ಜ್, ಸ್ಟ್ರಾಂಗ್​ ಬೌಲಿಂಗ್​ ಸ್ಕ್ವಾಡ್​​ನ್ನ ಹೊಂದಿದೆ ಅಂತಾ ಅನ್ನಿಸ್ತಾ ಇಲ್ಲ. ಆದ್ರೆ ಸಿಎಸ್​ಕೆ ಈಗ ಹೊಸ ಅಸ್ತ್ರವೊಂದನ್ನ ಫೈಂಡ್​​ಔಟ್ ಮಾಡಿದೆ. ಲಸಿತ್ ಮಲಿಂಗಾ ಸ್ಟೈಲ್​​ನಲ್ಲಿ ಬೌಲಿಂಗ್ ಮಾಡೋ ಮತ್ತೊಬ್ಬ ಟ್ಯಾಲೆಂಟ್​ ಸಿಎಸ್​ಕೆಯನ್ನ ಜಾಯಿನ್ ಆಗ್ತಾ ಇದ್ದಾನೆ. ಆ ಬೌಲರ್ ಯಾರು? ಸಡನ್ ಆಗಿ ಆತನನ್ನ ಟೀಮ್​ಗೆ ಸೇರಿಸಿಕೊಂಡಿರೋದ್ಯಾಕೆ? ಇವೆಲ್ಲದರ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: 10 ಟೀಮ್‌ಗಳ ಗಳ ಪೇಸ್ ಬೌಲಿಂಗ್ ಯುನಿಟ್ ಹೇಗಿದೆ? – ಎಷ್ಟು ಮಂದಿ ಫಾಸ್ಟ್ ಬೌಲರ್ಸ್‌ಗಳಿದ್ದಾರೆ?

ಲಸಿತ್ ಮಲಿಂಗಾ ಎಂಥಾ ಡೇಂಜರಸ್ ಬೌಲರ್ ಆಗಿದ್ರು ಅನ್ನೋದು ನಿಮಗೆ ಗೊತ್ತೇ ಇದೆ. ಅದ್ರಲ್ಲೂ ಮಲಿಂಗಾ ಎಸೀತಾ ಇದ್ದಂತಾ ಯಾರ್ಕರ್​​ಗಳಂತೂ ಅನ್​​ಪ್ಲೇಯಬಲ್ ಆಗಿದ್ವು. ಬ್ಯಾಟ್​​ ಮಿಸ್ ಆಯ್ತು ಅಂದ್ರೆ ವಿಕೆಟ್​ಗಳು ಪಲ್ಟಿ ಹೊಡೀತಾ ಇದ್ವು. ಲಸಿತ್ ಮಲಿಂಗಾ ಬೌಲಿಂಗ್ ಶೈಲಿಯೇ ಬ್ಯಾಟ್ಸ್​​ಮನ್​ಗಳಿಗೆ ದೊಡ್ಡ ಚಾಲೆಂಜ್ ಆಗಿತ್ತು. ಆದ್ರೀಗ ಮಲಿಂಗಾ ಅಂತಾರಾಷ್ಟ್ರೀಯ ಕ್ರಿಕೆಟ್ ಆಗಲಿ, ಐಪಿಎಲ್​​ನಲ್ಲಾಗಲಿ ಆಡ್ತಾ ಇಲ್ಲ. ರಿಟೈರ್ಡ್ ಆಗಿದ್ದಾರೆ. ಆದ್ರೆ ಶ್ರೀಲಂಕಾದಲ್ಲಿ ಇನ್ನಷ್ಟು ಮರಿ ಮಾಲಿಂಗಾಗಳು ಇದ್ದಾರೆ. ಲಸಿತ್ ಮಾಲಿಂಗಾರಿಂದ ಇನ್​ಸ್ಪೈರ್ ಆಗಿ ಅವರದ್ದೇ ಶೈಲಿಯಲ್ಲಿ ಬೌಲಿಂಗ್ ಪ್ರಾಕ್ಟೀಸ್ ಮಾಡಿ ಈಗ ಶ್ರೀಲಂಕಾ ಪರ ಅಂತಾರಾಷ್ಟ್ರೀಯ ಮ್ಯಾಚ್​​ಗಳನ್ನಾಡೋ ಮಟ್ಟಕ್ಕೆ ಬೆಳೆದಿದ್ದಾರೆ. ಐಪಿಎಲ್​​ಗೂ ಎಂಟ್ರಿಯಾಗಿದ್ದಾರೆ. ಈ ಪೈಕಿ ಮತೀಶ ಪತಿರಾಣ ಕೂಡ ಒಬ್ಬರು. ಚೆನ್ನೈ ಸೂಪರ್​​ ಕಿಂಗ್ಸ್ ಪರ ಆಡ್ತಿರೋ ಮತೀಶ ಪತಿರಾಣ ಕಳೆದ ಐಪಿಎಲ್​​​ನಲ್ಲಿ ಫುಲ್ ಶೈನ್ ಆಗಿದ್ರು. 2023ರ ಸೀಸನ್​ನಲ್ಲಿ ಮತೀಶ ಪತಿರಾಣ ಒಟ್ಟು 19 ವಿಕೆಟ್​ಗಳನ್ನ ಪಡೆದಿದ್ರು. ಅಸಲಿಗೆ ಲಾಕ್​ಡೌನ್​ ಟೈಮ್​ನಲ್ಲಿ ಎಂ.ಎಸ್.ಧೋನಿ ಮತೀಶ ಪತಿರಾಣರನ್ನ ಫೈಂಡ್​ಔಟ್ ಮಾಡ್ತಾರೆ. ಮತೀಶ ಪತಿರಾಣ ಬೌಲಿಂಗ್ ವಿಡಿಯೋ ಒಂದು ವೈರಲ್ ಆಗಿತ್ತು. ಆಗ ಪತಿರಾಣ ಶ್ರೀಲಂಕಾದಲ್ಲಿ ಇನ್ನೂ ಸ್ಕೂಲ್ ಕ್ರಿಕೆಟ್ ಆಡ್ತಾ ಇದ್ರು. ಆ ವೈರಲ್ ವಿಡಿಯೋ ನೋಡಿ ಎಂ.ಎಸ್.ಧೋನಿ ಲಂಕಾ ಯಂಗ್​​ಸ್ಟರ್ನ್​​ನನ್ನ ಚೆನ್ನೈ ಸೂಪರ್​ ಕಿಂಗ್ಸ್​​ಗೆ ಸೇರಿಸಿಕೊಳ್ಳೋಕೆ ನಿರ್ಧರಿಸ್ತಾರೆ. ಸಿಎಸ್​ಕೆ ಪಾಲಿಗೆ ಪತಿರಾಣ ಈಗ ಮೇನ್ ವೆಪನ್ ಆಗಿದ್ದಾರೆ. ಆದ್ರೆ ಈ ಬಾರಿಯ ಐಪಿಎಲ್​ನಲ್ಲಿ ಆರಂಭಿಕ ಕೆಲ ಮ್ಯಾಚ್​ಗಳನ್ನ ಪತಿರಾಣ ಆಡೋದು ಅನುಮಾನವಾಗಿದೆ. ಬಾಂಗ್ಲಾದೇಶ VS ಶ್ರೀಲಂಕಾ ಮ್ಯಾಚ್ ವೇಳೆ ಪತಿರಾಣ ಹಾರ್ಮ್​ಸ್ಟ್ರಿಂಗ್ ಇಂಜ್ಯೂರಿಗೆ ಒಳಗಾಗಿದ್ದು ಇನ್ನೂ ಕೂಡ ಕಂಪ್ಲೀಟ್ ರಿಕವರಿ ಆಗಿಲ್ಲ. ಮತ್ತೊಂದೆಡೆ ಡೆವೋನ್ ಕಾನ್ವೆ ಕೂಡ ಈ ಬಾರಿಯ ಐಪಿಎಲ್​​ನಲ್ಲಿ ಆಡೋದಿಲ್ಲ. ಹೀಗಾಗಿ ಸಿಎಸ್​ಕೆ ಇಂಜ್ಯೂರಿಯಾಗಿರೋ ಪ್ಲೇಯರ್ಸ್​ಗಳ ರಿಪ್ಲೇಸ್​ಮೆಂಟ್​ ಮಾಡಲೇಬೇಕಿದೆ. ಇದೀಗ ಚೆನ್ನೈ ಸೂಪರ್​​ ಕಿಂಗ್ಸ್​​ ಪತಿರಾಣ ಶೈಲಿಯಲ್ಲೇ ಬೌಲಿಂಗ್ ಮಾಡೋ ಮತ್ತೊಬ್ಬ ಬೌಲರ್​​ನ್ನ ಫೈಂಡ್​ಔಟ್ ಮಾಡಿದೆ. ಶ್ರೀಲಂಕಾದವರೇ ಆದ ಜಾಫ್ನಾ ಮೂಲದ 17 ವರ್ಷದ ಕುಗಾದಾಸ್ ಮತುಲಾನ್​​​ರನ್ನ ಸಿಎಸ್​​ಕೆ ತನ್ನ ನೆಟ್​​ ಬೌಲರ್​ ಆಗಿ ಸೆಲೆಕ್ಟ್ ಮಾಡಿದೆ. ಮತುಲಾನ ಬೌಲಿಂಗ್​​ನ್ನ ಧೋನಿ ನೋಟ್​ ಮಾಡಿಕೊಂಡಿದ್ದು ಬಳಿಕ ಸಿಎಸ್​​ಕೆಗೆ ಕರೆಸಿಕೊಂಡಿದ್ದಾರೆ. ಕುಗಾದಾಸ್ ಮತುಲಾನ್​ರ ಬೌಲಿಂಗ್​ ವಿಡಿಯೋಗಳನ್ನ ಅಬ್ಸರ್ವ್ ಮಾಡಿಯೇ ಧೋನಿ ಸಿಎಸ್​​ಕೆಗೆ ಕರೆಸಿಕೊಳ್ಳೋ ತೀರ್ಮಾನ ಕೈಗೊಂಡಿದ್ದಾರೆ. ಅದ್ರಲ್ಲೂ ಒಂದು ವಿಡಿಯೋ ಅಂತೂ ಫುಲ್ ವೈರಲ್ ಆಗ್ತಿದ್ದು, ಅದ್ರಲ್ಲಿ ಕುಗಾದಾಸ್ ಮತುಲಾನ್ ಎಸೆದ ಪರ್ಫೆಕ್ಟ್ ಯಾರ್ಕರ್​​ಗೆ ಮಿಡ್ಲ್ ವಿಕೆಟ್ ಎಗರಿ ಬೀಳುತ್ತೆ.

ಇನ್ನು ಈಗಾಗ್ಲೇ ಕುಗಾದಾಸ್ ಮತುಲಾನ್ ಚೆನ್ನೈಗೆ ಬಂದಿದ್ದು, ಧೋನಿಯನ್ನ ಕೂಡ ಭೇಟಿಯಾಗಿದ್ದಾರೆ. ಹಾಗೆಯೇ ಸಿಎಸ್​ಕೆ ಬ್ಯಾಟ್ಸ್​ಮನ್​ಗಳಿಗೆ ನೆಟ್ಸ್​ನಲ್ಲಿ ಬೌಲಿಂಗ್ ಮಾಡ್ತಾ ಇದ್ದಾರೆ. ಶ್ರೀಲಂಕಾದ ಈ ಯಂಗ್ ಬೌಲರ್​ ಸದ್ಯ ನೆಟ್ಸ್​​ನಲ್ಲಷ್ಟೇ ಬೌಲಿಂಗ್ ಮಾಡ್ತಾ ಇದ್ದಾರೆ. ಅಫೀಶಿಯಲ್ ಆಗಿ ಇನ್ನೂ ಕೂಡ ಅವರನ್ನ ಚೆನ್ನೈ ಸೂಪರ್​​ ಕಿಂಗ್ಸ್​ ಟೀಮ್​ಗೆ ಜಾಯಿನ್ ಮಾಡಿಲ್ಲ. ಆದ್ರೆ ಮುಂದಿನ ದಿನಗಳಲ್ಲಿ ಮತುಲಾನ್​ರನ್ನ ಸಿಎಸ್​ಕೆಗೆ ಸೇರಿಸಿದ್ರೂ ಆಶ್ಚರ್ಯ ಇಲ್ಲ. ಯಾಕಂದ್ರೆ ಸದ್ಯ ಚೆನ್ನೈ ಸೂಪರ್​ ಕಿಂಗ್ಸ್​ನ ಫಾಸ್ಟ್ ಬೌಲಿಂಗ್​ ಲೈನ್​ಅಪ್ ಅಷ್ಟೊಂದು ಸ್ಟ್ರಾಂಗ್ ಆಗಿಲ್ಲ. ದೀಪಕ್ ಚಹರ್, ಶಾರ್ದುಲ್ ಠಾಕುರ್, ಸಿಮರ್ಜೀತ್ ಸಿಂಗ್, ತುಷಾರ್ ದೇಶಪಾಂಡೆ, ಮುಕೇಶ್ ಚೌಧರಿ, ರಾಜ್ಯವರ್ಧನ್ ಹಂಗರ್ಗೇಕರ್ ಮತ್ತು ಮುಸ್ತಫಿಜುರ್ ರೆಹ್ಮಾನ್ ಒಟ್ಟು ಏಳು ಮಂದಿ ಫಾಸ್ಟ್ ಬೌಲರ್ಸ್ ಈಗ ಸಿಎಸ್​​ಕೆನಲ್ಲಿದ್ದಾರೆ. ಈ ಪೈಕಿ ದೀಪಕ್ ಚಹಾರ್, ಶಾರ್ದುಲ್ ಠಾಕೂರ್, ಟಿ.ದೇಶಪಾಂಡೆ ಮತ್ತು ಪತಿರ ಮೇನ್ ಬೌಲರ್ಸ್. ಆದ್ರೆ ಸಿಎಸ್​ಕೆ ಫಾಸ್ಟ್ ಬೌಲಿಂಗ್​ ಲೈನ್​ಅಪ್​​ನಲ್ಲಿ ಎಕ್ಸ್​​ಪೀರಿಯನ್ಸ್ ಬೌಲರ್ಸ್​ಗಳ ಕೊರತೆ ಎದ್ದು ಕಾಣ್ತಿದೆ. ಪತಿರಾಣ ಬೇರೆ ಇಂಜ್ಯೂರಿಗೊಳಗಾಗಿರೋದು ಚೆನ್ನೈ ಫಾಸ್ಟ್​ ಬೌಲಿಂಗ್ ಲೈನ್​ಅಪ್​ಗೆ ಒಂದಷ್ಟು ಡ್ಯಾಮೇಜ್ ಮಾಡಿದೆ. ಹೀಗಾಗಿ ಮಲಿಂಗಾ, ಪತಿರಾಣ ಸ್ಟೈಲ್​​ನಲ್ಲೇ ಬೌಲಿಂಗ್ ಮಾಡೋ ಕುಗಾದಾಸ್ ಮತುಲಾನ್​ಗೆ ಸಿಎಸ್​​ಕೆ ಪರ ಆಡೋಕೆ ಚಾನ್ಸ್​ ಸಿಕ್ಕಿದ್ರೂ ಆಶ್ಚರ್ಯ ಇಲ್ಲ.

ಇಲ್ಲಿ ಇನ್ನೊಂದು ಸಂಗತಿಯನ್ನ ಹೇಳಲೇಬೇಕು. ಬ್ಯಾಟ್ಸ್​ಮನ್​ಗಳೇ ಇರ್ಲಿ, ಬೌಲರ್ಸ್​ಗಳೇ ಇರ್ಲಿ.. ಯಂಗ್​ ಟ್ಯಾಲೆಂಟೆಡ್ ಕ್ರಿಕೆಟರ್ಸ್​​ಗಳನ್ನ ಪಿಕ್ ಮಾಡೋದ್ರಲ್ಲಿ ಧೋನಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್​​ ಫ್ರಾಂಚೈಸಿ ಎಕ್ಸ್​ಪರ್ಟ್ ಆಗಿದೆ. ಯಂಗ್​ಸ್ಟರ್ಸ್​ಗಳನ್ನ ಹೇಗೆ ಶಾರ್ಪ್ ಮಾಡಬೇಕು, ಯಾರನ್ನ, ಯಾವ ಸ್ವಿಚ್ಯುವೇಶನ್​ನಲ್ಲಿ ಹೇಗೆ ಬಳಸಿಕೊಳ್ಳಬೇಕು ಅನ್ನೋದು ಧೋನಿಗೆ ಚೆನ್ನಾಗಿಯೇ ಗೊತ್ತಿದೆ. ಆಗಲೇ ಹೇಳಿದ ಹಾಗೆ 2023ರ ಐಪಿಎಲ್​ ವೇಳೆಯೂ ಚೆನ್ನೈ ಸೂಪರ್​​ ಕಿಂಗ್ಸ್​​ನಲ್ಲಿ ಟಾಪ್ ಕ್ಲಾಸ್, ಸ್ಟಾರ್ ಬೌಲರ್​ಗಳು ಅಂತಾ ಯಾರೂ ಇರಲಿಲ್ಲ. ಆದ್ರೂ ಸಿಎಸ್​ಕೆ ಚಾಂಪಿಯನ್ ಆಗಿತ್ತು. ಇನ್​​​ಎಕ್ಸ್​ಪೀರಿಯನ್ಸ್ಡ್, ಯಂಗ್​​ಸ್ಟರ್ಸ್​​ಗಳನ್ನಿಟ್ಟುಕೊಂಡೇ ಧೋನಿ ಟೂರ್ನಿಯನ್ನ ಗೆಲ್ಲಿಸಿದ್ರು. ಚೆನ್ನೈ ಸೂಪರ್ ಕಿಂಗ್ಸ್​ನಲ್ಲಿ ಧೋನಿ ಗರಡಿಯಲ್ಲಿ ಯಂಗ್​ಸ್ಟರ್ಸ್​ಗಳೆಲ್ಲಾ ತಮ್ಮ ತಮ್ಮ ಪರ್ಫಾಮೆನ್ಸ್​​ನ್ನ ಸಾಕಷ್ಟು ಇಂಪ್ರೂವ್ ಮಾಡಿಕೊಳ್ತಾ ಇದ್ದಾರೆ. ಐಪಿಎಲ್​​ನಲ್ಲಿ ಆಡೋಕೆ ಬಯಸೋ ಆಲ್​​ಮೋಸ್ಟ್​ ಎಲ್ಲಾ ಯಂಗ್ ಕ್ರಿಕೆಟರ್ಸ್​ಗಳು ಕೂಡ ಚೆನ್ನೈ ಸೂಪರ್​​​ ಕಿಂಗ್ಸ್​ ಜಾಯಿನ್ ಆಗೋಕೆ ಬಯಸ್ತಾರೆ. ಅದಕ್ಕೆ ಕಾರಣ ಎಂ.ಎಸ್.ಧೋನಿ. ಮಾಹಿ ಆ ರೀತಿ ಟ್ರೈನ್ ಮಾಡ್ತಾರೆ. ಟಿಪ್ಸ್​ಗಳನ್ನ ನೀಡ್ತಾರೆ. ತಂಡದ ಪ್ರತಿಯೊಬ್ಬ ಆಟಗಾರನ ಜೊತೆಗೂ ಸಪರೇಟ್ ಆಗಿ ಡಿಸ್ಕಸ್ ಮಾಡ್ತಾರೆ. ಅವರ ವೀಕ್​ನೆಸ್​​ಗಳನ್ನ ಐಡೆಂಟಿಫೈ ಮಾಡಿ ಅದ್ರ ಮೇಲೆ ವರ್ಕೌಟ್ ಮಾಡೋಕೆ ಬೇಕಾದ ಸಲಹೆಗಳನ್ನ ನೀಡ್ತಾರೆ. ಇದೇ ಕಾರಣಕ್ಕೆ ಚೆನ್ನೈ ಸೂಪರ್​ ಕಿಂಗ್ಸ್​​ನಲ್ಲಿ ಯಂಗ್​ಸ್ಟರ್ಸ್​​ಗಳೇ ಹೆಚ್ಚಿರೋದು. ಧೋನಿ ಕೂಡ ಟೀಮ್​ನಲ್ಲಿ ಯುವ ಕ್ರಿಕೆಟಿಗರಿಗೆ ಹೆಚ್ಚಿನ ಪ್ರಿಫರೆನ್ಸ್ ನೀಡ್ತಾ ಇರೋದು. ನೋ ಡೌಟ್ ಆಫ್ಟರ್ ಕ್ಯಾಪ್ಟನ್ಸಿ, ನಾಯಕತ್ವದಿಂದ ಕೆಳಗಿಳಿದ ಮೇಲೆ ಧೋನಿ ಚೆನ್ನೈ ಸೂಪರ್ ಕಿಂಗ್ಸ್​​ನ ಮೆಂಟರ್ ಅಥವಾ ಹೆಡ್ ಕೋಚ್ ಆಗುವ ಸಾಧ್ಯತೆಯೇ ಹೆಚ್ಚಿದೆ.

ಇನ್ನು ಶ್ರೀಲಂಕಾದಲ್ಲಿ ಹುಟ್ಟಿಕೊಳ್ತಾ ಇರೋ ಈ ಮರಿ ಮಾಲಿಂಗಾಗಳ ಬಗ್ಗೆ ಒಂದಷ್ಟು ಹೇಳಲೇಬೇಕು. ಮತೀಶ ಪತಿರಾಣ, ಕುಗಾದಾಸ್ ಮತುಲಾನ್ ಅಸಲಿಗೆ ಇವರ ಹಿಂದಿರೋದೆ ಲಸಿತ್ ಮಾಲಿಂಗ. ಕೇವಲ ಇನ್​ಸ್ಪಿರೇಷನ್ ಆಗಿಯಷ್ಟೇ ಅಲ್ಲ. ಮಲಿಂಗಾರನ್ನ ನೋಡಿ ಆ ಶೈಲಿಯಲ್ಲಿ ಈ ಯಂಗ್​ಸ್ಟರ್ಸ್​​ಗಳು ಬೌಲಿಂಗ್ ಪ್ರಾಸ್ಟೀಸ್ ಮಾಡಿರೋದಷ್ಟೇ ಅಲ್ಲ, ಖುದ್ದು ಲಸಿತ್ ಮಲಿಂಗಾ ಇವ್ರನ್ನ ಟ್ರೈನ್ ಮಾಡಿದ್ದಾರೆ. ತಮ್ಮ ಶೈಲಿಯಲ್ಲೇ ಬೌಲಿಂಗ್​ ಮಾಡಬೇಕು ಅಂತಾ ಬಯಸೋ ಯಂಗ್​​ಸ್ಟರ್ಸ್​ಗಳಿಗೆ ಲಸಿತ್ ಮಲಿಂಗಾ ಶ್ರೀಲಂಕಾದಲ್ಲಿ ಟ್ರೈನಿಂಗ್ ಕೊಡ್ತಾ ಇದ್ದಾರೆ. ತಮ್ಮದೇ ಒಂದು ಬೌಲಿಂಗ್ ಅಕಾಡೆಮಿಯನ್ನ ಓಪನ್ ಮಾಡಿದ್ದಾರೆ. ಮತೀಶ ಪತಿರಾಣ, ಕುಗಾದಾಸ್ ಮತುಲಾನ್ ಕೂಡ ಲಸಿತ್ ಮಲಿಂಗಾ ಅಂಡರ್​ನಲ್ಲೇ ಪ್ರಾಕ್ಟೀಸ್ ಮಾಡಿದ್ದಾರೆ. ಈ ಸ್ಲಿಂಗಾ ಸ್ಟೈಲ್​ನಲ್ಲಿ ಬೌಲಿಂಗ್ ಮಾಡುವಂಥಾ ಸಾಕಷ್ಟು ಯಂಗ್​ಸ್ಟರ್ಸ್​ಗಳು ಶ್ರೀಲಂಕಾದಲ್ಲಿ ಬೆಳೀತಾ ಇದ್ದಾರೆ. ಹೀಗಾಗಿ ಲಸಿತ್ ಮಲಿಂಗಾ ಕೂಡ ತಮ್ಮ ಲೀಗಸಿಯನ್ನ ನೆಕ್ಸ್ಟ್ ಜನರೇಷನ್ ಬೌಲರ್ಸ್​ಗಳು ಕಂಟಿನ್ಯೂ ಮಾಡಲಿ ಅಂತಾ ಸಾಕಷ್ಟು ಎಫರ್ಟ್ ಹಾಕ್ತಿದ್ದಾರೆ. ಈ ಪೈಕಿ ಇಬ್ಬರನ್ನ ಈಗಾಗ್ಲೇ ಎಂ.ಎಸ್.ಧೋನಿ ತಮ್ಮ ತೆಕ್ಕೆಗೆ ಸೇರಿಸಿಕೊಂಡಿದ್ದಾರೆ. ​

Sulekha