LSG ವಿರುದ್ಧ ಗೆದ್ದು ಪ್ಲೇಆಪ್ಗೆ ಮತ್ತಷ್ಟು ಹತ್ತಿರವಾದ CSK – ಟೂರ್ನಿಯಿಂದ ಹೊರಬಿದ್ದ ಮೊದಲ ತಂಡ ಲಕ್ನೋ ಸೂಪರ್ ಜೈಂಟ್ಸ್

ಚೆಪಾಕ್ನಲ್ಲಿ ಮಹತ್ವದ ಪಂದ್ಯ ಗೆದ್ದು ಬೀಗಿದೆ ಚೆನ್ನೈ ಸೂಪರ್ ಕಿಂಗ್ಸ್. ಗೆಲ್ಲಲೇಬೇಕಾದ ಪಂದ್ಯದಲ್ಲಿ ಲಕ್ನೋ ತಂಡವನ್ನು ಸೋಲಿಸಿದ ಚೆನ್ನೈ ತಂಡ ಪ್ಲೇಆಪ್ಗೆ ಮತ್ತಷ್ಟು ಹತ್ತಿರವಾಗಿದೆ.
ಇದನ್ನೂ ಓದಿ:ಭುವಿ ಮ್ಯಾಜಿಕ್.. ಆರ್ಸಿಬಿಗೆ 2 ವಿಕೆಟ್ಗಳ ರೋಚಕ ಜಯ- ಪ್ಲೇ ಆಫ್ ರೇಸ್ನಿಂದ ಮುಂಬೈಗೆ ಗೇಟ್ಪಾಸ್!
ಚೆಪಾಕ್ನಲ್ಲಿ ಭಾನುವಾರ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಿದ್ದವು. ಚೆ್ನ್ನೈಗೆ ಇದು ಗೆಲ್ಲಲೇಬೇಕಾದ ಪಂದ್ಯವಾಗಿತ್ತು. ಹೀಗಾಗಿ ಲಕ್ನೋ ವಿರುದ್ಧ ಸಂಘಟಿತ ದಾಳಿ ಮಾಡಿದ ಸಿಎಸ್ಕೆ ತಂಡ 5 ವಿಕೆಟ್ಗಳ ರೋಚಕ ಜಯ ಸಾಧಿಸಿದೆ. ಇದು ಐಪಿಎಲ್ನಲ್ಲಿ 6ನೇ ಜಯವಾಗಿದ್ದು, ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಈ ಗೆಲುವಿನ ಮೂಲಕ ಸಿಎಸ್ಕೆ ಪ್ಲೇ ಆಫ್ ಸ್ಥಾನವನ್ನ ಮತ್ತಷ್ಟು ಬಲಪಡಿಸಿಕೊಂಡಿದೆ. ಲಕ್ನೋ ತಂಡ ಟೂರ್ನಿಯಿಂದ ಹೊರಬಿದ್ದಿದೆ.
ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಸೂಪರ್ ಜೈಂಟ್ಸ್ ಕೂಡ ಉತ್ತಮ ಆರಂಭ ಪಡೆದಿತ್ತು. ಆದರೆ ಮಧ್ಯಮ ಕ್ರಮಾಂಕದ ವೈಫಲ್ಯದಿಂದ 230-240 ರನ್ಗಳಿಸುವ ಅವಕಾಶ ಕಳೆದುಕೊಂಡಿತು. ಜೋಶ್ ಇಂಗ್ಲಿಸ್ 33 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್ ಸೇರಿ 85 ರನ್ಗಳಿಸಿದ್ದರು. ಶಹ್ಬಾಜ್ ಅಹ್ಮದ್ 25 ಎಸೆತಗಳಲ್ಲಿ ತಲಾ 3 ಬೌಂಡರಿ, 3 ಸಿಕ್ಸರ್ಗಳ ಸಹಿತ 43 ರನ್ಗಳಿದರು. ಇವರಿಬ್ಬರನ್ನ ಬಿಟ್ಟರೆ, ಉಳಿದ ಯಾವ ಬ್ಯಾಟರ್ 20 ರನ್ಗಳ ಗಡಿ ದಾಟಿಲಿಲ್ಲ. ಮಿಚೆಲ್ ಮಾರ್ಷ್ 10, ಪಂತ್ 15, ಪೂರನ್ 1, ಐಡೆನ್ ಮಾರ್ಕ್ರಮ್ 6, ಅಕ್ಷತ್ ರಘುವಂಶಿ 18, ಹಿಮ್ಮತ್ ಸಿಂಗ್ 17 ರನ್ಗಳಿಸಿದರು. ಲಖನೌ ತಂಡ ಈ ಸೋಲಿನ ಬಳಿಕ ಇನ್ನೂ 3 ಪಂದ್ಯಗಳಿರುವಂತೆ ಟೂರ್ನಿಯಿಂದ ಹೊರಬಿದ್ದಿತು. 2026ರ ಐಪಿಎಲ್ ಪ್ಲೇ ಆಫ್ ರೇಸ್ನಿಂದ ಹೊರಬಿದ್ದ ಮೊದಲ ತಂಡ ಎನಿಸಿಕೊಂಡಿತು.
ಲಕ್ನೋ ಸೂಪರ್ ಜೈಂಟ್ಸ್ ಮೊದಲು ಬ್ಯಾಟಿಂಗ್ ಮಾಡಿ 203 ರನ್ಗಳ ಗುರಿ ನೀಡಿತು. ಬ್ಯಾಟಿಂಗ್ ಗೆ ಬಂದ ಸಿಎಸ್ಕೆ ಉತ್ತಮ ಆರಂಭ ಪಡೆದುಕೊಂಡಿತು. 3.4 ಓವರ್ಗಳಲ್ಲಿ 45 ರನ್ಗಳಿಸಿತು. ಸಂಜು ಸ್ಯಾಮ್ಸನ್ 14 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಹಿತ 28 ರನ್ಗಳಿಸಿ ದಿಗ್ವೇಶ್ ರಾಠಿ ಬೌಲಿಂಗ್ನಲ್ಲಿ ಔಟ್ ಆದರು. ಸಂಜು ವಿಕೆಟ್ ನಂತರ ಬಂದ ಉರ್ವಿಲ್ ಪಟೇಲ್ ವಿಧ್ವಂಸ ಸೃಷ್ಟಿಸಿದರು. ಕೇವಲ 13 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಅವರು 23 ಎಸೆತಗಳಲ್ಲಿ 2 ಬೌಂಡರಿ, 8 ಸಿಕ್ಸರ್ಗಳ ಸಹಿತ 65 ರನ್ಗಳಿಸಿದರು. 2ನೇ ವಿಕೆಟ್ ಜೊತೆಯಾಟದಲ್ಲಿ 34 ಎಸೆತಗಳಲ್ಲಿ 81 ರನ್ ಸೇರಿಸಿದರು. ಗಾಯಕ್ವಾಡ್ 28 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ಗಳ ಸಹಿತ 42 ರನ್ಗಳಿಸಿ ನೂರ್ ಅಹ್ಮದ್ ಬೌಲಿಂಗ್ನಲ್ಲಿ ಬೌಲ್ಡ್ ಆದರು. ಗಾಯಕ್ವಾಡ್ ವಿಕೆಟ್ ನಂತರ ಸಿಎಸ್ಕೆ ಬ್ಯಾಟಿಂಗ್ ನಿಧಾನವಾಯಿತು. ರನ್ಗಳಿಸಲು ಪರದಾಡಿದರು. ಉರ್ವಿಲ್ ಕ್ರೀಸ್ನಲ್ಲಿರುವವರೆಗೂ ಈ ಗುರಿಯನ್ನ 15 ಓವರ್ಗಳಲ್ಲಿ ಮುಗಿಸಬಹುದು ಎನ್ನುವ ಸ್ಥಿತಿಯಲ್ಲಿತ್ತು. ಆದರೆ ಲಖನೌ ತಂಡ ಅದ್ಭುತವಾಗಿ ಕಮ್ಬ್ಯಾಕ್ ಮಾಡಿ ಕೊನೆಯ ಓವರ್ವರೆಗೆ ಕೊಂಡೊಯ್ಯಿತು. ಕಾರ್ತಿಕ್ ಶರ್ಮಾ 20 ಎಸೆತಗಳಲ್ಲಿ 20 ರನ್, ಡೆವಾಲ್ಡ್ ಬ್ರೆವಿಸ್ 12 ಎಸೆತಗಳಲ್ಲಿ 1 ಬೌಂಡರಿ, 10 ರನ್ಗಳಿಸಿದರು. ಆದರೆ ಶಿವಂ ದುಬೆ 7 ಎಸೆತಗಳಲ್ಲಿ 2 ಸಿಕ್ಸರ್ಗಳ ಸಹಿತ 15, ಪ್ರಶಾಂತ್ ವೀರ್ 12 ಎಸೆತಗಳಲ್ಲಿ 2 ಸಿಕ್ಸರ್ಗಳ ಸಹಿತ ಅಜೇಯ 17 ರನ್ಗಳಿಸಿ ತಂಡವನ್ನ ಗೆಲುವಿನ ಗಡಿ ದಾಟಿಸಿದರು. 7 ವರ್ಷಗಳ ನಂತರ 200 ರನ್ಗಳನ್ನ ಚೇಸ್ ಮಾಡಿ ಗೆದ್ದ ಸಿಎಸ್ಕೆ ಚೆನ್ನೈ ಸೂಪರ್ ಕಿಂಗ್ಸ್ 2019ರ ಬಳಿಕ 180ಕ್ಕಿಂತ ಹೆಚ್ಚು ಮೊತ್ತವನ್ನ ಚೇಸ್ ಮಾಡಿರಲಿಲ್ಲ. ಬರೋಬ್ಬರಿ 7 ವರ್ಷಗಳ ಬಳಿಕ 180+ ಹಾಗೂ 8 ವರ್ಷಗಳ ಬಳಿಕ 200+ ಸ್ಕೋರ್ ಚೇಸ್ ಮಾಡಿ ಗೆದ್ದಂತಾಗಿದೆ.

ನೋಡಿರಿ

