ಭುವನೇಶ್ವರ್ & ಬೆಥೆಲ್ ಚೆನ್ನೈ ವಿರುದ್ಧ ಕಣಕ್ಕೆ? – ಚೆಪಾಕ್ ಪಿಚ್ ಯಾರಿಗೆ ಪ್ಲಸ್ ಆಗಲಿದೆ?

ಭುವನೇಶ್ವರ್ & ಬೆಥೆಲ್ ಚೆನ್ನೈ ವಿರುದ್ಧ ಕಣಕ್ಕೆ? – ಚೆಪಾಕ್ ಪಿಚ್ ಯಾರಿಗೆ ಪ್ಲಸ್ ಆಗಲಿದೆ?

2025ರ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲೇ ಕೆಕೆಆರ್ ವಿರುದ್ಧ ಗೆದ್ದು ಬೀಗಿರೋ ಬೆಂಗಳೂರ್ ಬಾಯ್ಸ್ ಸೆಕೆಂಡ್ ಫೈಟ್ ಗೆ ರೆಡಿಯಾಗಿದ್ದಾರೆ. ಮತ್ತೊಂದೆಡೆ ಮುಂಬೈ ಇಂಡಿಯನ್ಸ್​ ಎದುರು ಜಯಭೇರಿ ಬಾರಿಸಿರೋ ಚೆನ್ನೈ ಸೂಪರ್ ಕಿಂಗ್ಸ್​ ಕೂಡ ತವರಿನಲ್ಲಿ ಎರಡನೇ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ನಾಳೆ ಚೆನ್ನೈನ ಚೆಪಾಕ್ ಮೈದಾನದಲ್ಲಿ ಸಿಎಸ್ ಕೆ ವಿರುದ್ಧ ರಣರೋಚಕ ಕದನ ನಡೆಯಲಿದೆ. ಚೆನ್ನೈನಲ್ಲಿ ಟೀಂ ಇಂಡಿಯಾ ಕಂಡ ಲೆಜೆಂಡರಿ ಕ್ರಿಕೆಟರ್ ಧೋನಿ ಇದ್ರೆ ಬೆಂಗಳೂರಿನ ವಿಶ್ವಕ್ರಿಕೆಟ್​​ನ ಕಿಂಗ್ ವಿರಾಟ್ ಕೊಹ್ಲಿ ಇರೋದು ಮ್ಯಾಚ್ ಮತ್ತಷ್ಟು ಹೀಟಪ್ ಆಗುವಂತೆ ಮಾಡಿದೆ.

ಇದನ್ನೂ ಓದಿ : ಕ್ವಿಂಟನ್ ಡಿಕಾಕ್ ಸಿಡಿಲಬ್ಬರದ ಬ್ಯಾಟಿಂಗ್! RR ವಿರುದ್ಧ ಗೆದ್ದು ಬೀಗಿದ KKR

ಚೆನ್ನೈ ವಿರುದ್ಧದ ಪಂದ್ಯಕ್ಕೆ ಬೆಂಗಳೂರು ಟೀಮ್​ನಲ್ಲಿ ಎರಡು ಬದಲಾವಣೆಗಳಾಗೋ ಚಾನ್ಸಸ್ ಇದೆ. ಮೊದಲ ಪಂದ್ಯದಿಂದ ಹೊರಗಿದ್ದ ಜೇಕಬ್ ಬೆಥೆಲ್​ ಈ ಪಂದ್ಯದ ಮೂಲಕ ಐಪಿಎಲ್​ಗೆ ಪಾದರ್ಪಣೆ ಮಾಡುವ ಚಾನ್ಸಸ ಇದೆ. ಸದ್ಯ ಮಿಡಲ್​ ಆರ್ಡರ್​ನಲ್ಲಿ ಕೃನಾಲ್​ ಪಾಂಡ್ಯ ಮಾತ್ರವೇ ಏಕೈಕ ಎಡಗೈ ಬ್ಯಾಟರ್​ ಆಗಿದ್ದಾರೆ. ಚೆನ್ನೈ ಮೈದಾನ ಸ್ಪಿನ್​ ಸ್ನೇಹಿ ಆಗಿರುವ ಕಾರಣ ಮಧ್ಯಮ ಕ್ರಮಾಂಕದಲ್ಲಿ ರೈಟ್​ ಮತ್ತು ಲೆಫ್ಟ್​ ಕಾಂಬಿನೆಶನ್​​ನೊಂದಿಗೆ ಕಣಕ್ಕಿಳಿಸಲು ಬೆಂಗಳೂರು ಫ್ರಾಂಚೈಸಿ ಪ್ಲ್ಯಾನ್ ಮಾಡಿದೆ. ಅದ್ರಂತೆ ಬೆಥೆಲ್​ ತಂಡಕ್ಕೆ ಎಂಟ್ರಿ ಕೊಟ್ಟರೆ ಟಿಮ್​ ಡೇವಿಡ್​ ಹೊರಗುಳಿ ಬೇಕಾಗುತ್ತದೆ. ಮತ್ತೊಂದೆಡೆ ಇಂಜುರಿ ಕಾರಣದಿಂದ ಕೆಕೆಆರ್ ವಿರುದ್ಧದ ಪಂದ್ಯದಿಂದ ಹೊರಗಿದ್ದ ಭುವನೇಶ್ವರ್ ಕುಮಾರ್ ಕೂಡ ನಾಳೆಯ ಪಂದ್ಯದಲ್ಲಿ ಆಡುವ ಸಾದ್ಯತೆ ಇದೆ. ಹಾಗೇನಾದ್ರೂ ಭುವಿ ಕಣಕ್ಕಿಳಿದ್ರೆ ರಸಿಕ್ ಸಲಾಂ ಬೆಂಚ್ ಕಾಯಲಿದ್ದಾರೆ.

ಸಿಎಸ್​ಕೆ ವಿರುದ್ಧದ ಪಂದ್ಯದಲ್ಲೂ ಮೊದಲ ಪಂದ್ಯದಂತೆ ವಿರಾಟ್​ ಕೊಹ್ಲಿ ಮತ್ತು ಫಿಲ್​ ಸಾಲ್ಟ್​ ಓಪನಿಂಗ್​ ಮಾಡಲಿದ್ದಾರೆ. 3ನೇ ಕ್ರಮಾಂಕದಲ್ಲಿ ನಾಯಕ ರಜತ್​ ಪಾಟಿದಾರ್​ ಇರಲಿದ್ದಾರೆ. 4 ಮತ್ತು 5ರಲ್ಲಿ ಲಿವಿಂಗ್​ಸ್ಟೋನ್​ ಮತ್ತು ಜೆಕಬ್​ ಬೆಥೆಲ್​ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಫಿನಿಶಿಂಗ್​ ಜವಾಬ್ದಾರಿ ಕೃನಾಲ್​ ಪಾಂಡ್ಯ ನೋಡಿಕೊಳ್ತಾರೆ. ಇನ್ನು ಭುವನೇಶ್ವರ್​ ಕುಮಾರ್ ಈ ಪಂದ್ಯಕ್ಕೆ​ ಎಂಟ್ರಿ ನೀಡಬಹುದು. ಇವ್ರಿಗೆ ಜೋಶ್​ ಹೆಜೆಲ್​ವುಡ್​, ಯಶ್​ ದಯಾಳ್​ ವೇಗದ ಬೌಲರ್​ ಆಗಿ ಸಾಥ್​ ನೀಡಲಿದ್ದಾರೆ. ಸುಯೇಶ್​ ಶರ್ಮಾ ಪ್ರಮುಖ ಸ್ಪಿನ್ನರ್​ ಆಗಿದ್ದರೆ, ಆಲ್​ರೌಂಡರ್​ಗಳಾದ ಕೃನಾಲ್​ ಪಾಂಡ್ಯ, ಲಿವಿಂಗ್​ಸ್ಟೋನ್ ಮತ್ತು ಜೆಕಬ್​ ಬೆಥೆಲ್​ ಇರ್ತಾರೆ.

ಕೊಲ್ಕತ್ತಾದ ಈಡನ್ ಗಾರ್ಡನ್ಸ್​ನಲ್ಲಿ ಈಸಿಯಾಗಿ ಗೆದ್ದ ರಾಯಲ್ ಚಾಲೆಂಜರ್ಸ್​ಗೆ, ಚೆನ್ನೈನ ಚೆಪಾಕ್​ನಲ್ಲಿ ಸ್ಪಿನ್​ ಸವಾಲು ಎದುರಾಗಲಿದೆ. ಯಾಕಂದ್ರೆ. ಚೆಪಾಕ್​ನ ಸ್ಲೋ & ಲೋ ಟ್ರ್ಯಾಕ್​​ ಸ್ಪಿನ್ನರ್​ಗಳಿಗೆ ಹೆಚ್ಚು ನೆರವಾಗಲಿದೆ. ಇಲ್ಲಿ ಸ್ಪಿನ್ನರ್​ಗಳೇ ಗೇಮ್ ಚೇಂಜರ್ಸ್ ಌಂಡ್ ಮ್ಯಾಚ್ ಡಿಸೈಡರ್ಸ್ ಆಗ್ತಾರೆ. ಬೆಂಗಳೂರು ಟೀಂನಲ್ಲಿ ಈ ಸಲ ಬ್ಯಾಟಿಂಗ್ ಲೈನಪ್ ಚೆನ್ನಾಗಿದ್ರೂ ಕೂಡ ಈ ಪಿಚ್ ಅಗ್ನಿಪರೀಕ್ಷೆಯ ಕಣವಾಗಿದೆ. ಯಾಕಂದ್ರೆ, ಚೆನ್ನೈ ಬತ್ತಳಿಕೆಯಲ್ಲಿ ಸ್ಪಿನ್ ಬ್ರಹ್ಮಾಸ್ತ್ರಗಳಿವೆ. ಚೆನ್ನೈ ತಂಡದಲ್ಲಿ ಅನುಭವಿ ಸ್ಪಿನ್ನರ್​ಗಳ ದಂಡೇ ಇದೆ. ಆಫ್ ಸ್ಪಿನ್ನರ್​ ಆರ್.ಅಶ್ವಿನ್, ಲೆಫ್ಟ್​ ಆರ್ಮ್​ ಸ್ಪಿನ್ನರ್​​ ರವೀಂದ್ರ ಜಡೇಜಾ, ವ್ರಿಸ್ಟ್​ ಸ್ಪಿನ್ನರ್ ನೂರ್ ಅಹ್ಮದ್​​​ ಪ್ರಮಖ ಅಸ್ತ್ರಗಳಾಗಿದ್ದಾರೆ. ಇವ್ರಿಗೆ ಕಿವೀಸ್​ನ ಅಲ್​ರೌಂಡರ್ ರಚಿನ್ ರವೀಂದ್ರ ಸಾಥ್​ ಇದೆ. ಈಗಾಗಲೇ ಮೊದಲ ಪಂದ್ಯ ಮುಂಬೈ ಎದುರು ಇವ್ರು ಮ್ಯಾಜಿಕ್​​ ಮಾಡಿದ್ದಾಗಿದೆ. ಈಗ ಮುಂದಿನ ಟಾರ್ಗೆಟ್​ ಆರ್​​ಸಿಬಿ. ಈ ಸ್ಪಿನ್ನರ್ಸ್​ನ ಚೆಪಾಕ್​ನಲ್ಲಿ ಎದುರಿಸುವುದು ಆರ್​ಸಿಬಿ ಬ್ಯಾಟರ್ಸ್​ಗೆ ಸವಾಲಾಗಲಿದೆ. ಚೆಪಾಕ್​ನಲ್ಲಿ 209 ಇನ್ನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿರುವ ಅಶ್ವಿನ್, 181 ವಿಕೆಟ್ ಪಡೆದಿದ್ದಾರೆ. 7.12 ಏಕಾನಮಿ ಕಾಯ್ದುಕೊಂಡಿದ್ದಾರೆ. ಆಲ್​​ರೌಂಡರ್ ಜಡೇಜಾ, 212 ಇನ್ನಿಂಗ್ಸ್​ಗಳಿಂದ 160 ವಿಕೆಟ್ ಉರುಳಿಸಿ 7.61ರ ಏಕಾನಮಿಯಲ್ಲಿ ರನ್ ನೀಡಿದ್ದಾರೆ. ಈ ಪಿಚ್​ನ ಮರ್ಮವನ್ನ ಚೆನ್ನಾಗಿ ಅರಿತಿರುವ ಈ ಜೋಡಿ, ಆರ್​ಸಿಬಿಗೆ ಡೇಂಜರಸ್ ಆಗಿ ಕಾಡಲಿದೆ. ಹಾಗೇ ಅಫ್ಘಾನ್​​​​ನ ನೂರ್ ಅಹ್ಮದ್ ಕೂಡ ಬಿಗ್ ಥ್ರೆಟ್ ಆಗಬಲ್ಲರು. ಇತರೆ ಬೌಲರ್​ಗಳಿಗೆ ಹೋಲಿಸಿದ್ರೆ, ಯುನಿಕ್ ಬೌಲಿಂಗ್ ಸ್ಟೈಲ್ ಹೊಂದಿದ್ದಾರೆ.

ರನ್ ಮಷಿನ್ ಅಂತಾನೇ ಕರೆಸಿಕೊಳ್ಳೋ ಕಿಂಗ್ ವಿರಾಟ್ ಕೊಹ್ಲಿ ಕೂಡ ಸ್ಪಿನ್ ಬೌಲಿಂಗ್‌ನಲ್ಲಿ ಹಲವು ಬಾರಿ ವಿಕೆಟ್ ಕಳೆದುಕೊಂಡಿದ್ದಾರೆ. ಅಷ್ಟೊಂದು ಸುಲಭವಾಗಿ ವಿರಾಟ್ ಕೊಹ್ಲಿ ಸ್ಪಿನ್ ಬೌಲಿಂಗ್‌ನಲ್ಲಿ ರನ್ ಗಳಿಸಲು ಸಾಧ್ಯವಾಗಿಲ್ಲ. ಅಷ್ಟೇ ಅಲ್ದೇ ಆರ್​​ಸಿಬಿ ಕ್ಯಾಂಪ್​ನಲ್ಲಿ ಸ್ಪಿನ್​ ಅಂದ್ರೆ ತಡಬಡಾಯಿಸೋ ಬ್ಯಾಟರ್​ಗಳೇ ಇರೋದು. ಬಿಗ್​ ಪ್ಲೇಯರ್​ಗಳಾದ ಫಿಲ್​ ಸಾಲ್ಟ್​, ಲಯಾಮ್​ ಲಿವಿಂಗ್​ಸ್ಟೋನ್​ ಕೂಡ ಸ್ಪಿನ್ ಅಸ್ತ್ರಕ್ಕೆ ಬೇಗ ಶರಣಾಗ್ತಾರೆ. ಜೇಕಬ್​ ಬೆತೆಲ್​ ಕೂಡ  ಇಂಡೋ-ಇಂಗ್ಲೆಂಡ್​ ಸರಣಿಯಲ್ಲಿ ಸ್ಪಿನ್ನರ್ಸ್ ಎದುರೇ ಮಂಕಾಗಿದ್ರು. ಮುಂಬೈ ವಿರುದ್ಧ ಚೆನ್ನೈನ ಸ್ಪಿನ್ ತಂತ್ರವೇ ವರ್ಕೌಟ್ ಆಗಿತ್ತು. ಇದೇ ಪ್ರಯೋಗವನ್ನ ಆರ್​ಸಿಬಿ ಮೇಲೆಯೂ ಮಾಡೋಕೆ ಕಾಯ್ತಿದ್ದಾರೆ.

ಐಪಿಎಲ್​ನಲ್ಲಿ ಆರ್​ಸಿಬಿ ವರ್ಸಸ್ ಸಿಎಸ್​ಕೆ ಮ್ಯಾಚ್ ಅಂದ್ರೆ ಮೋಸ್ಟ್​ ಎಕ್ಸೈಟಿಂಗ್​ ಫೈಟ್. ಈ ಪಂದ್ಯಕ್ಕಿರುವ ಕ್ರೇಜ್​​​, ಮತ್ಯಾವ ಪಂದ್ಯಕ್ಕೂ ಇಲ್ಲ. ಫ್ಯಾನ್ಸ್ ಪಾಲಿಗಂತೂ ಇದು ಮೆಗಾ ಬ್ಯಾಟಲ್. ಐಪಿಎಲ್​ನಲ್ಲಿ ಆರ್​ಸಿಬಿ ಮತ್ತು ಸಿಎಸ್​ಕೆ ಈವರೆಗೆ 33 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಸಿಎಸ್​ಕೆ ಪ್ರಾಬಲ್ಯ ಸಾಧಿಸಿದೆ. ಎರಡೂ ತಂಡಗಳ ಜಿದ್ದಾಜಿದ್ದಿನಲ್ಲಿ ಚೆನ್ನೈ ಒಟ್ಟು 21 ಬಾರಿ ಗೆದ್ದಿದೆ. ಆರ್​ಸಿಬಿ 11 ಪಂದ್ಯಗಳಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಗಿದೆ. ಒಂದು ಪಂದ್ಯ ಫಲಿತಾಂಶ ಕಾಣದೆ ರದ್ದಾಗಿದೆ. ಇದೀಗ 34ನೇ ಪಂದ್ಯದಲ್ಲಿ ಮತ್ತೆ ಉಭಯ ತಂಡಗಳು ಎದುರು ಬದುರಾಗ್ತಿದ್ದು, ಬಾರೀ ಕುತೂಹಲ ಮೂಡಿಸಿದೆ.

Shantha Kumari

Leave a Reply

Your email address will not be published. Required fields are marked *