ಕಾಲಡಿಯಲ್ಲಿ ರಾಶಿ ರಾಶಿ ಮೊಸಳೆಗಳು – ಏಣಿ ಏರಿ ನಿಂತವನ ಕಥೆ ಏನಾಯ್ತು..!?

ಕಾಲಡಿಯಲ್ಲಿ ರಾಶಿ ರಾಶಿ ಮೊಸಳೆಗಳು – ಏಣಿ ಏರಿ ನಿಂತವನ ಕಥೆ ಏನಾಯ್ತು..!?

ಸೋಶಿಯಲ್ ಮೀಡಿಯಾದಲ್ಲಿ ಕೆಲ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗಿ ಬಿಡುತ್ತವೆ. ಮತ್ತೆ ಕೆಲ ವಿಡಿಯೋಗಳು ನೋಡುಗರಿಗೆ ಅಚ್ಚರಿ ಮೂಡಿಸುತ್ತವೆ. ಸದ್ಯ ಇಂಥಾದ್ದೇ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.

ಇದನ್ನೂ ಓದಿ : ಉಳಿತಾಯದ ನೆಪವೊಡ್ಡಿ 7 ಸಾವಿರ ಸಿಬ್ಬಂದಿ ವಜಾಗೆ ನಿರ್ಧಾರ – ಟೆಕ್ ಸಂಸ್ಥೆಗಳಲ್ಲಿ ಇದೆಂಥಾ ಬೆಳವಣಿಗೆ..!?

ಮೊಸಳೆ ಅಂದ್ರೆ ಯಾರಿಗೆ ತಾನೆ ಭಯ ಆಗಲ್ಲ ಹೇಳಿ. ನದಿಯಲ್ಲೋ, ಕೆರೆಯಲ್ಲೋ, ದೂರದಲ್ಲೆಲ್ಲೋ ಮೊಸಳೆ ಕಂಡ್ರೆ ಜನ ನಿಂತಲ್ಲೇ ಭಯ ಬೀಳ್ತಾರೆ. ಅಂಥಾದ್ರಲ್ಲಿ ತಮ್ಮ ಕಾಲಡಿಯಲ್ಲೇ ರಾಶಿ ರಾಶಿ ಮೊಸಳೆ ಇವೆ ಅಂದ್ರೆ ಹೇಗಾಗ್ಬೇಡ ಹೇಳಿ. ಸದ್ಯ ಟ್ವಿಟರ್​ನಲ್ಲಿ ವೈರಲ್ ಆಗುತ್ತಿರೋ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಏಣಿ ಏರಿ ನಿಂತಿದ್ದಾರೆ. ಆತನ ಸುತ್ತಮುತ್ತ ನೆಲದಲ್ಲಿ ಹತ್ತಾರು ಮೊಸಳೆಗಳಿವೆ. ಆತ ಮರವನ್ನ ಹಿಡಿದುಕೊಂಡು ಭಯದಲ್ಲಿರುವಂತೆ ಅಲುಗಾಡುತ್ತಿದ್ದಾನೆ.

9 ಸೆಕೆಂಡ್​ಗಳ ಇದೇ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಕೆಲವರು ಇದೊಂದು ಮೊಸಳೆಗಳ ಪಾರ್ಕ್​ ನಂತೆ ಕಾಣುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವ್ರು ಏಣಿ ಏರಿ ನೇತಾಡುತ್ತಿರುವವನು ಪ್ರಾಣಿಪಾಲಕನಿರಬೇಕು. ಅಲ್ಲೇನೋ ಕೆಲಸದಲ್ಲಿ ನಿರತನಾಗಿದ್ದಾನೆ. ಆಹಾರಕ್ಕಾಗಿ ಮೊಸಳೆಗಳೆಲ್ಲಾ ಅವನಿಗೆ ಮುತ್ತಿಗೆ ಹಾಕಿರಬೇಕು ಎಂದು ರೀಟ್ವೀಟ್ ಮಾಡಿದ್ದಾರೆ. ಈ ವಿಡಿಯೋವನ್ನ 2 ಲಕ್ಷಕ್ಕಿಂತಲೂ ಹೆಚ್ಚು ಜನ ನೋಡಿದ್ದಾರೆ. 1,600ಕ್ಕಿಂತಲೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ. ಕೆಲವರು ತಮಾಷೆಯಾಗಿ ಪ್ರತಿಕ್ರಿಯಿಸಿದ್ರೆ ಇನ್ನೂ ಕೆಲವರು ಗಾಬರಿಯಾಗಿದ್ದಾರೆ.

suddiyaana