ಕೈ ನಾಯಕನ ಕಾರಿನಲ್ಲಿ ಕೋಟಿ ಕೋಟಿ ಹಣ– ಕಾರು ಸಮೇತ ಹಣ ಸೀಜ್
ಎಲೆಕ್ಷನ್ ಹೊತ್ತಲ್ಲೇ ರಾಜ್ಯದಲ್ಲಿ ಝಣ ಝಣ ಕಾಂಚಾಣ ಭಾರಿ ಸದ್ದು ಮಾಡುತ್ತಿದೆ. ಅಧಿಕಾರಿಗಳು ಭರ್ಜರಿಯಾಗಿ ಬೇಟೆಯಾಡುತ್ತಿದ್ದಾರೆ. ಇದೀಗ ಕಲಬುರಗಿಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿ ‘ಕೈ’ನಾಯಕರಿಗೆ ಸೇರಿದ ಕಾರಿನಲ್ಲಿ ಪತ್ತೆಯಾದ 2 ಕೋಟಿಗೂ ಅಧಿಕ ಹಣವನ್ನು ಸೀಜ್ ಮಾಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ತವರಿನಲ್ಲೇ KKR ಢಮಾರ್ – ತಿರಸ್ಕರಿಸಿದ್ದ ಶಶಾಂಕ್ ಪಂಜಾಬ್ HERO
ಬೇರೆ ರಾಜ್ಯದಿಂದ ರೈಲು ಮೂಲಕ ಕಲಬುರಗಿ ರೈಲು ನಿಲ್ದಾಣಕ್ಕೆ ಹಣ ಬಂದಿತ್ತು. ಈ ಬಗ್ಗೆ ಸುಳಿವು ಸಿಗುತ್ತಿದ್ದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಕಲಬುರಗಿ ರೈಲ್ವೆ ನಿಲ್ದಾಣದಿಂದ ಹಣ ಸಾಗಾಟ ಮಾಡುತ್ತಿದ್ದ ವೇಳೆ ಆದಾಯ ತೆರಿಗೆ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇನ್ನೋವಾ ಕಾರಿನಲ್ಲಿ ಹಣ ಸಾಗಾಟಕ್ಕೆ ಯತ್ನಿಸಿದ ಸಂದರ್ಭ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಕಾರು ಸಮೇತ ಹಣವನ್ನು ಸೀಜ್ ಮಾಡಿದ್ದು, ಕಲಬುರಗಿಯ ಖರ್ಗೆ ಸರ್ಕಲ್ ಬಳಿ ಇರುವ ಆದಾಯ ತೆರಿಗೆ ಇಲಾಖೆಯ ಕಚೇರಿಯಲ್ಲಿ ಹಣದ ಸಮೇತ ವಾಹನ ಸೀಜ್ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ.