ಗಂಗಾನದಿ ನೀರಿನ ಜೊತೆ ಗ್ರಾಮಕ್ಕೆ ನುಗ್ಗಿದ ಮೊಸಳೆಗಳು – ಹರಿದ್ವಾರದಲ್ಲಿ ಜನರಿಗೆ ಜೀವಭಯ..!

ಗಂಗಾನದಿ ನೀರಿನ ಜೊತೆ ಗ್ರಾಮಕ್ಕೆ ನುಗ್ಗಿದ ಮೊಸಳೆಗಳು – ಹರಿದ್ವಾರದಲ್ಲಿ ಜನರಿಗೆ ಜೀವಭಯ..!

ಉತ್ತರಾಖಂಡ್‌ನ ಹರಿದ್ವಾರ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಲಕ್ಸರ್ ಮತ್ತು ಖಾನ್ಪುರ್ ಪ್ರದೇಶದ ಜನರಿಗೆ ಪ್ರವಾಹದ ಭಯದ ಜೊತೆಗೆ ಮತ್ತೊಂದು ಭೀತಿ ಎದುರಾಗಿದೆ. ಗಂಗಾ ಮತ್ತು ಅದರ ಉಪನದಿಗಳಿಂದ ಪ್ರವಾಹ ಉಂಟಾಗಿದ್ದು, ಇದರ ಜೊತೆಗೆ ಮೊಸಳೆಗಳು ವಸತಿ ಪ್ರದೇಶಗಳಿಗೆ ನುಗ್ಗುತ್ತಿವೆ. ಇದರಿಂದ ಜನ ಕಂಗಾಲಾಗಿದ್ದಾರೆ.

ಇದನ್ನೂ ಓದಿ: ಬಿಎಂಟಿಸಿ ಎಸಿ ಬಸ್‌ನಲ್ಲಿ ಸೊಳ್ಳೆ ಕಾಟ! – ʼಸೊಳ್ಳೆಗೆ ಮುಕ್ತಿ ಕೊಡಿಸಿ ಎಂದ ಪ್ರಯಾಣಿಕ

ಗಂಗಾನದಿ ಮತ್ತು ಅದರ ಉಪನದಿಗಳಾದ ಬಾನ್ ಗಂಗಾ ಮತ್ತು ಸೋನಾಲಿ ನದಿಗಳ ಪ್ರವಾಹದೊಂದಿಗೆ ಮೊಸಳೆಗಳು ಕೂಡಾ ವಸತಿ ಪ್ರದೇಶಗಳಿಗೆ ನುಗ್ಗುತ್ತಿವೆ. ಅರಣ್ಯ ಇಲಾಖೆ ಸಿಬ್ಬಂದಿ ಮೊಸಳೆ ಹಿಡಿಯುವ ಕಾರ್ಯಾಚರಣೆಯಲ್ಲಿ ಮಗ್ನರಾಗಿದ್ದಾರೆ. ಮುಖ್ಯ ನದಿಗಳ ಉದ್ದಕ್ಕೂ ಇರುವ ಜನವಸತಿ ಪ್ರದೇಶಗಳಿಂದ ಇಲ್ಲಿಯವರೆಗೆ ಸುಮಾರು ಹನ್ನೆರಡು ಮೊಸಳೆಗಳನ್ನು ಸೆರೆಹಿಡಿಯಲಾಗಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೆಚ್ಚುವರಿಯಾಗಿ, ಮೊಸಳೆಗಳನ್ನು ಹಿಡಿಯಲು ಇಲಾಖೆಯು 25 ಉದ್ಯೋಗಿಗಳ ತಂಡವನ್ನು ಲಕ್ಸಾರ್ ಮತ್ತು ಖಾನ್ಪುರ ಪ್ರದೇಶಗಳಲ್ಲಿ ನಿಯೋಜಿಸಿದೆ. ಕಳೆದ ವಾರ ಸುರಿದ ಭಾರೀ ಮಳೆಯಿಂದಾಗಿ ಗಂಗಾನದಿಯ ನೀರಿನ ಮಟ್ಟ ಏರಿಕೆಯಾಗಿದ್ದು, ಲಕ್ಸಾರ್ ಮತ್ತು ಖಾನ್ಪುರ ಪ್ರದೇಶಗಳಿಗೆ ನೀರು ನುಗ್ಗಿದೆ. ಸೋನಾಲಿ ನದಿಯ ಅಣೆಕಟ್ಟು ಒಡೆದು ಪ್ರವಾಹ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ.

suddiyaana