ಕೃಷ್ಣಾ ನದಿಯಲ್ಲಿ ಕುರಿಗಾಹಿ ಮೇಲೆ ಮೊಸಳೆ ಅಟ್ಯಾಕ್!‌ – ಅಯ್ಯೋ.. ವ್ಯಕ್ತಿಯ ಬಲಗೈ ಕಟ್!

ಕೃಷ್ಣಾ ನದಿಯಲ್ಲಿ ಕುರಿಗಾಹಿ ಮೇಲೆ ಮೊಸಳೆ ಅಟ್ಯಾಕ್!‌ – ಅಯ್ಯೋ.. ವ್ಯಕ್ತಿಯ ಬಲಗೈ ಕಟ್!

ಕೃಷ್ಣಾ ನದಿಯಲ್ಲಿ ಕುರಿಗಾಹಿ ಮೇಲೆ ಮೊಸಳೆಯೊಂದು ದಾಳಿ ನಡೆಸಿದೆ. ಪರಿಣಾಮ ಕುರಿಗಾಹಿಯ ಬಲಗೈ ಕಟ್‌ ಆಗಿದೆ.

ಇದನ್ನೂ ಓದಿ: ಸುಡು ಬಿಸಿಲಿನಲ್ಲಿ ಮನೆ ಗೇಟ್‌ಗೆ ಮೊಮ್ಮಗಳನ್ನ ಕಟ್ಟಿ ಹಾಕಿ ಚಿತ್ರ ಹಿಂಸೆ ನೀಡಿದ ಅಜ್ಜಿ!

ದೇವದುರ್ಗ ತಾಲೂಕಿನ ಹಿರೇರಾಯಕುಂಪಿ ಬಳಿ ಕೃಷ್ಣಾ ನದಿಯಲ್ಲಿ ಕುರಿಗಾಹಿ ಹೊನ್ನಗುಡೆಪ್ಪ ಎಂಬುವವರು ಕುರಿ ಮರಿಗಳಿಗೆ ನೀರು ತರಲು ಹೋದಾಗ ಮೊಸಳೆ ದಾಳಿ ನಡೆದಿದೆ. ಮೊಸಳೆ ದಾಳಿಯಿಂದಾಗಿ ಕುರಿಗಾಹಿ ಬಲಗೈ ತುಂಡಾಗಿದೆ. ಸದ್ಯ ಹೊನ್ನಗುಡೆಪ್ಪ ಅವರನ್ನು ರಾಯಚೂರಿನ ಓಪೆಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು,  ಚಿಕಿತ್ಸೆ ನೀಡಲಾಗುತ್ತಿದೆ.

ಅಷ್ಟಕ್ಕೂ ಆಗಿದ್ದೇನು?

ಕೃಷ್ಣಾ ನದಿಯಲ್ಲಿ ಕುರಿ ಮರಿಗಳಿಗೆ ನೀರು ತರಲು ಹೋದಾಗ ಮೊಸಳೆ ದಾಳಿ ನಡೆದಿದೆ. ಏಕಾಏಕಿ ದಾಳಿ ಮಾಡಿ ಕೈ ಕಚ್ಚಿ ನದಿಯಲ್ಲಿ ಎಳೆದುಕೊಂಡು ಹೋಗಿದ್ದ ಮೊಸಳೆ ಹೊನ್ನಗುಡೆಪ್ಪನನ್ನ ನೀರಿನಲ್ಲಿ ಮುಳುಗಿಸಿದೆ. ನೀರಿನಲ್ಲಿ ಎಳೆದೊಯ್ದರು ಹೋರಾಡಿ ಹೊರಗೆ ಬಂದ ಹೊನ್ನಗುಂಡಪ್ಪ ಮೊಸಳೆಯಿಂದ ತಪ್ಪಿಸಿಕೊಳ್ಳಲು ಕೈ ಎಳೆದುಕೊಂಡಾಗ ಬಲಗೈ ತುಂಡಾಗಿದೆ.

ಕೃಷ್ಣಾ ನದಿ ಪಾತ್ರದಲ್ಲಿ ಮೊಸಳೆಗಳ ಸಂಖ್ಯೆ ಹೆಚ್ಚಾಗಿದ್ದು, ಸ್ಪಲ್ಪ ಮೈಮರೆತರು ಮೊಸಳೆ ದಾಳಿಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಹೀಗಾಗಿ ಅರಣ್ಯ ಇಲಾಖೆ ಮೊಸಳೆಗಳ ನಿಯಂತ್ರಣ ಮಾಡಬೇಕು ಹಾಗೂ ದಾಳಿಗೊಳಗಾದ ಕುರಿಗಾಹಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Shwetha M