ಡಿಯಾಗೋ ದುರಂತ ಅಂತ್ಯಕ್ಕೆ ಕಾರಣವಾಯ್ತಾ ಲ್ಯಾಂಬೋರ್ಗಿನಿ – ಸಾವಲ್ಲೂ ಒಂದಾದ ಅಣ್ಣ, ತಮ್ಮ!

ಡಿಯಾಗೋ ದುರಂತ ಅಂತ್ಯಕ್ಕೆ ಕಾರಣವಾಯ್ತಾ ಲ್ಯಾಂಬೋರ್ಗಿನಿ – ಸಾವಲ್ಲೂ ಒಂದಾದ ಅಣ್ಣ, ತಮ್ಮ!

10 ದಿನಗಳ ಹಿಂದೆ ಮದುವೆಯಾಗಿದ್ದ ಲಿವರ್‌ಪೂಲ್ ಫುಟ್‌ಬಾಲ್ ಆಟಗಾರ ದುರಂತ ಅಂತ್ಯ ಕಂಡಿದ್ದಾರೆ.  ಲಿವರ್‌ಪೂಲ್ ಫುಟ್‌ಬಾಲ್  ಆಟಗಾರ ಡಿಯೋಗೊ ಜೋಟಾ ಜುಲೈ 3ರಂದು ಸ್ಪೇನ್‌ನಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ.

ಇದನ್ನೂ ಓದಿ: ಪ್ರತಿ ಬಾಲ್‌ಗೂ ಹ್ಯಾರಿ ಬ್ರೂಕ್ ಬ್ರೇಕ್ – ಸಿಡಿದೆದ್ದ ರಿಷಭ್ ಪಂತ್, ರವೀಂದ್ರ ಜಡೇಜಾ ವಾರ್ನಿಂಗ್

ಈ ಘಟನೆ ಪೋರ್ಚುಗಲ್‌ನ ಝಮೊರಾ ಪ್ರಾಂತ್ಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಡಿಯಾಗೊ ಜೋಟಾ (28) ತಮ್ಮ ಸಹೋದರ ಆ್ಯಂಡ್ರೆ ಸಿಲ್ವಾ (25) ಅವರೊಂದಿಗೆ ಪ್ರಯಾಣಿಸುತ್ತಿದ್ದರು. ಈ ಅಪಘಾತದಲ್ಲಿ ಲ್ಯಾಂಬೋರ್ಗಿನಿ ಕಾರು ನಿಯಂತ್ರಣ ತಪ್ಪಿ ಬೆಂಕಿಗೆ ಆಹುತಿಯಾಯಿತು. ಅವರ ನಿಧನವು ಪೋರ್ಚುಗೀಸ್ ಫುಟ್‌ಬಾಲ್ ಜಗತ್ತಿಗೆ ಆಘಾತವನ್ನುಂಟು ಮಾಡಿದೆ. ಅವರು ಎಫ್‌ಎ ಕಪ್ ಮತ್ತು ಲೀಗ್ ಕಪ್ ಕೂಡ ಗೆದ್ದಿದ್ದಾರೆ.

ಕಾರು ಇನ್ನೊಂದು ವಾಹನವನ್ನು ಓವರ್‌ಟೇಕ್ ಮಾಡುವಾಗ ಟೈರ್ ಸಿಡಿದಿರಬಹುದು. ಇದೀಗ ಈ ದುರಂತಕ್ಕೆ ಕಾರಣ ಎಂದು ಹೇಳಲಾಗ್ತಿದೆ. ಆದರೆ, ಕಾರು ಚಲಾಯಿಸುತ್ತಿದ್ದವರು ಯಾರು ಎಂದು ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಡಿಯೋಗೊ ಜೋಟಾ ಕಳೆದ ಜೂನ್​ ಅಲ್ಲಿ ತನ್ನ 10 ವರ್ಷದ ಗೆಳತಿಯನ್ನು ಮದುವೆಯಾಗಿದ್ದರು. ಇವರಿಗೆ ಮೂವರು ಮಕ್ಕಳಿದ್ದಾರೆ. ಮದುವೆ ದಿನದಂದು ಅವರ ಹೆಂಡತಿ ರೂಟ್ ಕಾರ್ಡೋಸೊ ನನ್ನ ಕನಸು ನನಸಾಯಿತು ಎಂದು ಇನ್​ಸ್ಟಾದಲ್ಲಿ ಬರೆದು ಪೋಸ್ಟ್ ಹಂಚಿಕೊಂಡಿದ್ದರು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಹೆಂಡತಿ ಹಾಗೂ ಮೂವರು ಮಕ್ಕಳನ್ನ ಡಿಯೋಗೊ ಜೋಟಾ ಅಗಲಿದ್ದಾರೆ.

ಪೋರ್ಚುಗೀಸ್​ನ ಪೋರ್ಟೋ ನಗರದಲ್ಲಿ ಡಿಯೋಗೊ ಜೋಟಾ ಜನಿಸಿದ್ದರು. 2016 ರಲ್ಲಿ ಅಟ್ಲೆಟಿಕೊ ಮ್ಯಾಡ್ರಿಡ್‌ಗೆ ತೆರಳುವ ಮೊದಲು ಪ್ಯಾಕೋಸ್ ಡಿ ಫೆರೀರಾ ಅವರ ಯೂತ್ ಶ್ರೇಣಿಯ ಮೂಲಕ ತನ್ನ ಫುಟ್ಬಾಲ್ ಪ್ರಯಾಣ ಪ್ರಾರಂಭಿಸಿದ್ದರು. ಸಣ್ಣ ವಯಸ್ಸಿನಲ್ಲೇ ಫುಟ್​ಬಾಲ್​ನಲ್ಲಿ ಅಚ್ಚರಿಯ ರೀತಿ ಬೆಳವಣಿಗೆ ಕಂಡಿದ್ದರು. ಲಿವರ್‌ಪೂಲ್‌ ಟೀಮ್​ನಲ್ಲಿ ತನ್ನ ಕ್ಲಬ್ ವೃತ್ತಿಜೀವನದ ಉತ್ತುಂಗವನ್ನು ಜೋಟಾ ತಲುಪಿದ್ದರು.

ಲಿವರ್‌ಪೂಲ್ ತಂಡದ ಹೊಸ ಮ್ಯಾನೇಜರ್ ಆರ್ನೆ ಸ್ಲಾಟ್ ಅವರ ಅಡಿ 2024/25ರ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಎತ್ತಿ ಹಿಡಿಯುವಲ್ಲಿ ಲಿವರ್‌ಪೂಲ್ ಯಶಸ್ವಿಯಾಗಿತ್ತು. ಈ ಟೂರ್ನಿಯಲ್ಲಿ ಡಿಯೋಗೊ ಜೋಟಾ ಅವರು ಅತ್ಯುನ್ನತ ಪ್ರದರ್ಶನ ನೀಡಿದ್ದರು. ಇದರಿಂದ ಅತಾರಾಷ್ಟ್ರೀಯ ಮಟ್ಟದಲ್ಲೂ ಜೋಟಾ ಉತ್ತಮ ಸಾಧನೆ ಮಾಡಿದರು. 2019 ಮತ್ತು 2025ರ UEFA ನೇಷನ್ಸ್ ಲೀಗ್‌ನಲ್ಲಿ ಪೋರ್ಚುಗಲ್‌ನ ವಿಜಯಶಾಲಿ ತಂಡಗಳಲ್ಲಿ ಡಿಯೋಗೊ ಜೋಟಾ ಭಾಗವಹಿಸಿ ಒಳ್ಳೆಯ ಆಟ ಆಡಿದ್ದರು.

Shwetha M