ವಿಶ್ವ ದಾಖಲೆ ನಿರ್ಮಿಸಿದ ಕ್ರಿಸ್ಟಿಯಾನೊ ರೊನಾಲ್ಡೊ – ಪೋರ್ಚುಗಲ್ ಪರ ವಿಶ್ವಕಪ್‌ನಲ್ಲಿ ಅತ್ಯಧಿಕ ಗೋಲು ಬಾರಿಸಿ ದಾಖಲೆ

ಫುಟ್ಬಾಲ್ ದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವದಾಖಲೆ ಮಾಡಿದ್ದಾರೆ. ಫಿಫಾ ವಿಶ್ವಕಪ್ನ 45ನೇ ಪಂದ್ಯದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಚರಿತ್ರೆ ಸೃಷ್ಟಿಸಿದ್ದಾರೆ. ಜೊತೆಗೆ ಪೋರ್ಚುಗಲ್ ಪಡೆ 5 ಗೋಲುಗಳಿಸುವ ಮೂಲಕ ಭರ್ಜರಿ ಜಯ ಸಾಧಿಸಿದೆ.
ಇದನ್ನೂ ಓದಿ:ಫಿಫಾ ವಿಶ್ವಕಪ್‌ನಲ್ಲಿ ಮೆಸ್ಸಿ ಚರಿತ್ರೆ – ಗೋಲ್ಡನ್ ಬೂಟ್ ಈ ಸಲ ಮೆಸ್ಸಿಗೆ ಫಿಕ್ಸ್..
ಫುಟ್‌ಬಾಲ್ ಸಾಮ್ರಾಜ್ಯದ ಅಧಿಪತಿ, ದಾಖಲೆಗಳ ಸರದಾರ ಕ್ರಿಸ್ಟಿಯಾನೊ ರೊನಾಲ್ಡೊ ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅಪರೂಪದ ವಿಶ್ವ ದಾಖಲೆ ಮಾಡಿದ್ದಾರೆ. ಕ್ರಿಸ್ಟಿಯಾನೊ ರೊನಾಲ್ಡೊ ಒಂದೇ ಮ್ಯಾಚ್ನಲ್ಲಿ ಎರಡು ಗೋಲು ಬಾರಿಸಿ ಮಿಂಚಿದ್ದಾರೆ. ಹೂಸ್ಟನ್‌ನ ಎನ್‌ಆರ್‌ಜಿ ಸ್ಟೇಡಿಯಂನಲ್ಲಿ ನಡೆದ ಉಜ್ಬೇಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಕ್ರಿಸ್ಟಿಯಾನೊ 2 ಗೋಲು ಬಾರಿಸುವ ಮೂಲಕ ವಿಶ್ವದಾಖಲೆ ಬರೆದರು. ಪಂದ್ಯ ಆರಂಭವಾದ 6ನೇ ನಿಮಿಷದಲ್ಲೇ ಮೊದಲು ಗೋಲು ಬಾರಿಸಿದ ರೊನಾಲ್ಡೋ, ನಂತರ 39ನೇ ನಿಮಿಷದಲ್ಲಿ ಎರಡನೇ ಗೋಲು ಬಾರಿಸಿದರು. ಈ ಎರಡು ಗೋಲುಗಳೊಂದಿಗೆ ಕ್ರಿಸ್ಟಿಯಾನೊ ಪೋರ್ಚುಗಲ್ ಪರ ವಿಶ್ವಕಪ್‌ನಲ್ಲಿ ಅತ್ಯಧಿಕ ಗೋಲು ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ವಿಶ್ವಕಪ್ ಇತಿಹಾಸದಲ್ಲೇ ಸತತ 6 ಆವೃತ್ತಿಗಳಲ್ಲಿ ಗೋಲು ಬಾರಿಸಿದ ವಿಶ್ವದ ಏಕೈಕ ಕಾಲ್ಚೆಂಡು ಚತುರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅಂದರೆ ರೊನಾಲ್ಡೊ ಅವರನ್ನು ಹೊರತುಪಡಿಸಿ ವಿಶ್ವದ ಯಾವುದೇ ಆಟಗಾರ ಸತತ 6 ವಿಶ್ವಕಪ್‌ನಲ್ಲಿ ಗೋಲು ಬಾರಿಸಿಲ್ಲ.
ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಈವರೆಗೆ 6 ಫಿಫಾ ವಿಶ್ವಕಪ್ ಆಡಿದ್ದರೂ, ಅವರು 2010ರ ವಿಶ್ವಕಪ್‌ನಲ್ಲಿ ಯಾವುದೇ ಗೋಲು ದಾಖಲಿಸಿರಲಿಲ್ಲ. ಇದೀಗ ಮೆಸ್ಸಿಗೆ ಸಾಧ್ಯವಾಗದ ಅಪರೂಪದ ವಿಶ್ವ ದಾಖಲೆಯನ್ನು ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮದಾಗಿಸಿಕೊಂಡಿದ್ದಾರೆ.

ನೋಡಿರಿ

