5 ಮಕ್ಕಳಾದ್ಮೇಲೆ ರೊನಾಲ್ಡೊ ಮ್ಯಾರೇಜ್ – 25 ಕೋಟಿ ರೂ. ಉಂಗುರದಲ್ಲಿ ಏನಿದೆ?
ಸೇಲ್ಸ್ಗರ್ಲ್ ಮೇಲೆ ಕ್ರಿಸ್ಟಿಯಾನೊ LOVE

ಕ್ರಿಸ್ಟಿಯಾನೊ ರೊನಾಲ್ಡೊ ವೈಯಕ್ತಿಕ ಜೀವನದ ಜೊತೆಗೆ ತಮ್ಮ ಆಟದ ಬಗ್ಗೆಯೂ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಈಗ ತಮ್ಮ ಪ್ರೇಯಸಿಗೆ 25 ಕೋಟಿಯ ಉಂಗುರ ಹಾಕಿ ಸಖತ್ ಟ್ರೆಂಡಿಗ್‌ನಲ್ಲಿದ್ದಾರೆ.. ಈ ಸುದ್ದಿ ಕೇಳಿದ ಸಾಕಷ್ಟು ಜನಕ್ಕೆ ಒಂದು ಪ್ರಶ್ನೆ ಹುಟ್ಟಿಕೊಳ್ಳುತ್ತೆ.. ಅಯ್ಯೋ ರೊನಾಲ್ಡೊ ಈಗ ಮತ್ತೆ ಮದುವೆ ಆಗ್ತಿದ್ದಾರಾ? ಮೊದಲ ಹೆಂಡತಿ ಕಥೆಯೇನು? ಐದು ಮಕ್ಕಳ ಕಥೆಯೇನು ಅನ್ನೋ ಪ್ರಶ್ನೆ ಕಾಡುತ್ತೆ.. ಬಟ್ ವಿಷ್ಯ ಏನಪ್ಪ ಅಂದ್ರೆ ಐದು ಮಕ್ಕಳ ತಂದೆಯಾದರೂ, ರೊನಾಲ್ಡೊ ಇಲ್ಲಿಯವರೆಗೆ ಮದುವೆನೇ ಆಗಿರಲಿಲ್ಲ. ಆದ್ರೆ ಈಗ ರೊನಾಲ್ಡೊ ತಮ್ಮ ಸಂಗಾತಿ ಜಾರ್ಜಿನಾ ರೊಡ್ರಿಗಸ್ ಜೊತೆ ಎಂಗೇಜ್‌ಮೆಂಟ್ ಆಗಿದ್ದು, ಶೀಘ್ರದಲ್ಲೇ ಇವರನ್ನು ಮದುವೆಯಾಗಲಿದ್ದಾರೆ.
ರೊನಾಲ್ಡೊ ಹಾಕಿರೋ ಉಂಗುರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಜಾರ್ಜಿನಾ ಹಂಚಿಕೊಂಡಿದ್ದಾರೆ. ಈ ಉಂಗುರದ ಬೆಲೆ ನೋಡಿ ಜನ ಶಾಕ್ ಆಗಿದ್ದಾರೆ. ಇದೊಂದು ಮೊಟ್ಟೆಯಾಕಾರದ, ಬೆಲೆಬಾಳುವ ವಜ್ರಗಳುಳ್ಳ ಉಂಗುರವಾಗಿದೆ. ಐದು ಸೆಂಟಿಮೀಟರ್ ನಷ್ಟು ದೊಡ್ಡದಾದ ಈ ಉಂಗುರದ ಮಧ್ಯಭಾಗದಲ್ಲಿ ದೊಡ್ಡದೊಂದು ವಜ್ರವನ್ನು ಕೂರಿಸಲಾಗಿದೆ ಇದರ ಬೆಲೆಯನ್ನು ಲೆಕ್ಕಹಾಕಿದವರಲ್ಲಿ ವಜ್ರಾಭರಣದ ತಜ್ಞರಾದ ಬ್ರಯೋನಿ ರೇಮಂಡ್ ಕೂಡ ಒಬ್ಬರು. ಉಂಗುರದ ಮಧ್ಯಭಾಗದಲ್ಲಿರುವ ದೊಡ್ಡ ವಜ್ರವು 25ರಿಂದ 30 ಕ್ಯಾರಟ್ ಇದ್ದು, ಅದರ ಸುತ್ತಲೂ ಕೂರಿಸಲಾಗಿರುವ ವಜ್ರಗಳು 15 ಕ್ಯಾರಟ್ ನದ್ದು ಎಂದು ಅವರು ತಿಳಿಸಿದ್ದಾರೆ. ಇದರ ಅಂದಾಜು ಬೆಲೆ 2ರಿಂದ 5 ಮಿಲಿಯನ್ ಡಾಲರ್ ಆಗಿರುತ್ತದೆ ಎಂದು ತಿಳಿಸಿದ್ದಾರೆ. ಭಾರತೀಯ ರೂಪಾಯಿಗಳಲ್ಲಿ 16ರಿಂದ 42 ಕೋಟಿ ರೂ. ಎಂದು ಹೇಳಿದ್ದಾರೆ. ಲೋರಿಯಲ್ ಡೈಮಂಡ್ಸ್ ಸಂಸ್ಥೆಯ ಲಾರಾ ಟೇಲರ್ ಅವರ ಪ್ರಕಾರ, ಇದರ ಬೆಲೆ 16 ಕೋಟಿ ರೂ. ಇನ್ನು, ಭಾರತದ ಮೂಲದ ರೇರ್ ಕ್ಯಾಟರ್ ವಜ್ರಾಭರಣ ಕಂಪನಿಯ ಸಿಇಒ ಅಜಯ್ ಆನಂದ್ ಅವರ ಪ್ರಕಾರ ಈ ಉಂಗುರದ ಬೆಲೆ 42 ಕೋಟಿ ರೂ. ಆಗಿದೆ.
ವಾರ್ಷಿಕವಾಗಿ ರೊನೊಲ್ಡೊ ಅವರು ಗಳಿಸುವ ಆದಾಯಕ್ಕೆ ಲೆಕ್ಕ ಹಾಕಿದರೆ ಈಗ ಕೊಟ್ಟಿರುವ ರಿಂಗ್ ಏನೂ ಅಲ್ಲ. ಯಾಕಂದರೆ, ಕೆಲವು ಮೂಲಗಳ ಪ್ರಕಾರ ರೊನಾಲ್ಡೊ ಅವರ ವಾರ್ಷಿಕ ಆದಾಯ 2,282.5 ಕೋಟಿ ರೂ. ಇದಕ್ಕೆ ಹೋಲಿಸಿದರೆ 42 ಕೋಟಿ ರೂ. ರಿಂಗ್ ಕೊಟ್ಟಿರುವುದು ದೊಜ್ಜ ವಿಚಾರವೇನಲ್ಲ. ಇವರ ಲವ್ ಸ್ಟೋರಿ ಸಖತ್ ಇಂಟ್ರೆಸ್ಟಿಂಗ್ ಆಗಿದೆ.
ಪೋರ್ಚುಗಲ್ ಫುಟ್ಬಾಲ್ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಮಾಡೆಲ್ ಜಾರ್ಜಿನಾ ರೊಡ್ರಿಗಸ್ 8 ವರ್ಷಗಳಿಂದ ಒಟ್ಟಿಗೆ ಇದ್ದಾರೆ. ಇವರಿಬ್ಬರು 2016ರಲ್ಲಿ ಸ್ಪೇನ್‌ನಲ್ಲಿ ಭೇಟಿಯಾಗ್ತಾರೆ.. ಆ ಟೈಂನಲ್ಲಿ ಜಾರ್ಜಿನಾ ಅಂಗಡಿಯಲ್ಲಿ ಸೇಲ್ಸ್‌ಗರ್ಲ್ ಆಗಿ ಕೆಲಸ ಮಾಡುತ್ತಿದ್ದರು. ಆ ಮೇಲೆ ಇವರಿಬ್ಬರ ನಡುವೆ ಸ್ನೇಹ ಪ್ರಾರಂಭವಾಗಿ ಈ ಸ್ನೇಹ 2017ರಲ್ಲಿ ಪ್ರೀತಿಗೆ ತಿರುಗಿತು. ಆಮೇಲೆ ಇಬ್ಬರೂ ಲಿವಿಂಗ್ ಟೂಗೆದರ್‌ನಲ್ಲಿ ಇರೋಕೆ ಶುರು ಮಾಡ್ತಾರೆ..
5 ಮಕ್ಕಳ ತಂದೆ ರೊನಾಲ್ಡೊ
ರೊನಾಲ್ಡೋ ಬದುಕೇ ಒಂದು ಇಂಟ್ರೆಸ್ಟಿಂಗ್ ಸ್ಟೋರಿ. ಫುಟ್‌ಬಾಲ್ ಸ್ಟಾರ್ ಆಗಿ ಹೊರಹೊಮ್ಮಿದ್ದ ರೊನಾಲ್ಡೋ ಕ್ರಿಸ್ಟಿಯಾನೋ ಜೂನಿಯರ್‌ಗೆ 2010ರಲ್ಲಿ ತಂದೆಯಾಗಿದ್ದರು. ಆದರೆ, ಮೊದಲೇ ಮಗುವಿನ ತಾಯಿಯ ಗೌಪ್ಯತೆ ಹೊರ ಬಾರದಂತೆ ಅಗ್ರಿಮೆಂಟ್ ಅನ್ನು ಮಾಡಿಕೊಳ್ಳಲಾಗಿತ್ತು. ಹೀಗಾಗಿ ಆ ವಿಷ್ಯ ಹೊರ ಬಾರಲೇ ಇಲ್ಲ.. ಇದಾದ ಬಳಿಕ ರಷ್ಯಾ ಮೂಲದ ಮಾಡಲ್ ಜೊತೆ ಐದು ರಿಲೇಷನ್‌ಶಿಪ್‌ನಲ್ಲಿದ್ದರು. ಆದರೆ, ಅದು 2017ರಲ್ಲಿ ಕೊನೆಗೊಂಡಿತ್ತು. ಆಗ ಮತ್ತೆ ಬಾಡಿಗೆ ತಾಯಿಯ ಮೂಲಕ ಅವಳಿ ಮಕ್ಕಳನ್ನು ಪಡೆದರು. ಆನಂತರ ಜಾರ್ಜಿನಾ ರೋಡ್ರಿಗಸ್ ಅವರೊಂದಿಗೆ ಲಿವ್ ಇನ್‌ನಲ್ಲಿದ್ದರು. ಇಬ್ಬರೂ ಸಂಬಂಧ ಬೆಳೆದ ಐದು ತಿಂಗಳಲ್ಲಿಯೇ ರೋಡ್ರಿಗಸ್ ಅಲಾನ್ ಮಾರ್ಟಿನ್‌ಗೆ ಜನ್ಮ ನೀಡಿದರು. ಅಂದ್ರೆ 2017ರಲ್ಲೇ ಅಲಾನ್ ಹುಟ್ಟುತ್ತಾಳೆ.. 2022ರ ಏಪ್ರಿಲ್‌ನಲ್ಲಿ ರೋಡ್ರಿಗಸ್ ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದರು. ಆದರೆ, ಹೆರಿಗೆ ಸಮಯದಲ್ಲಿ ಬೆಲ್ಲಾ ಅನ್ನೋ ಹೆಣ್ಣು ಮಗು ಹುಟ್ಟಿದ್ರೆ, ಗಂಡು ಮಗು ಮೃತಪಟ್ಟಿತ್ತು. ಸದ್ಯ ಈಗ ಇರೋ 5 ಮಗುವನ್ನೂ ರೊನಾಲ್ಡೋ ಹಾಗೂ ಜಾರ್ಜಿನಾ ರೊಡ್ರಿಗಸ್ ನೋಡಿಕೊಳ್ಳುತ್ತಿದ್ದಾರೆ.

ನೋಡಿರಿ

